

ಆಳುವವರ ಬೇಜವಾಬ್ಧಾರಿ, ವಿಳಂಬನೀತಿಯಿಂದ ಇಂಡಿಯಾ ಬಾಧಿಸುತ್ತಿರುವ ಕೋವಿಡ್ 19 ಗೆ ಸೆಡ್ಡು ಹೊಡೆಯುತ್ತಿರುವ ಭಾರತೀಯರು ಸಂಘಟಿತರಾಗಿ ಕೋವಿಡ್ 19 ವಿರುದ್ಧ ಸಮರ ಸಾರಿದ್ದಾರೆ. ಇದರ ಅಂಗವಾಗಿ ಶಿರಸಿಯ ಉಪೆಂದ್ರ ಪೈ ತಮ್ಮ ಉಪೇಂದ್ರಪೈ ಟ್ರಸ್ಟ್ ನಿಂದ ಕರ್ತವ್ಯನಿರತ ಪೊಲೀಸರು ಮತ್ತು ಹೆಸ್ಕಾಂ ಸಿಬ್ಬಂದಿಗಳಿಗೆ ಕುಡಿಯುವ ನೀರು ಪೂರೈಸುತಿದ್ದಾರೆ.
ಕೋವಿಡ್ 19 ವಿರುದ್ಧ ಸಂಘಟಿತ ಹೋರಾಟದ ಅಂಗವಾಗಿ ಕೆ.ಪಿ.ಸಿ.ಸಿ.ಪ್ರತಿ ಜಿಲ್ಲೆಯಲ್ಲಿ ಟಾಸ್ಕ್ ಫೋರ್ಸ್ ಪ್ರಾರಂಭಿಸಿದೆ. ಈ ಟಾಸ್ಕ್ ಫೋರ್ಸ್‍ನ ಉತ್ತರ ಕನ್ನಡ ಜಿಲ್ಲಾ ಮುಖ್ಯಸ್ಥರಾಗಿ ಮಾಜಿ ಶಾಸಕ ಸತೀಶ್ ಸೈಲ್ ನೇಮಕವಾಗಿದ್ದಾರೆ. ಡಿ.ಸಿ.ಸಿ. ಅಧ್ಯಕ್ಷ ಭೀಮಣ್ಣ ನಾಯ್ಕರ ನೇತೃತ್ವದಲ್ಲಿ ಈ ಟಾಸ್ಕ್ ಫೋರ್ಸ್ ನಿಂದ ಇಂದು ಕರ್ತವ್ಯನಿರತ ಆಶಾ ಕಾರ್ಯಕರ್ತೆಯರು ಮತ್ತು ಪೊಲೀಸರಿಗೆ ಹಣ್ಣು-ನೀರು, ಬಿಸ್ಕತ್ ಗಳ ಕಿಟ್ ವಿತರಿಸಲಾಯಿತು.


ದುರ್ಬಲ ನಾಯಕತ್ವದ ಅವಿವೇಕ ಪ್ರತಿಬಿಂಬ
ಕರೋನಾ ಭಯದಿಂದ ಜನ ಮನೆ ಸೇರಿದರು, ಮುಖ್ಯಸ್ಥ ಜಾಗಟೆ ಹೊಡೆಯಲು ಅವರನ್ನು ರಸ್ತೆಗೆ ಕರೆದ.
ಜನ ಭಯ, ಆತಂಕ, ಹಸಿವೆ, ರಗಳೆಗಳಿಂದ ಮನೆಯಲ್ಲಿ ನೋಯುತಿದ್ದಾರೆ ಮುಖ್ಯಸ್ಥ ಲೈಟ್‍ಬಂದ್ ಮಾಡಿ ಅಂಧಕಾರ ತೊಲಗಿಸಿ ಎಂದ.
ಇಂಥ ವರ್ತನೆ, ನಡವಳಿಕೆ, ನಾಟಕ ಸಹಜಮನುಷ್ಯರನ್ನು ಕೆರಳಿಸದೆ ಇರಲಾರದು.
ದೇಶದ ಅನುಕೂಲ, ಸಂಪತ್ತು, ಜನರ ತೆರಿಗೆ ಹಣದಲ್ಲಿ ಕಲಿತು, ಬೆಳೆದು ವಿದೇಶಕ್ಕೆ ಹಾರಿದವರು ಕರೋನಾಕ್ಕೆ ಹೆದರಿ ಸ್ವದೇಶಕ್ಕೆ ಮರಳತೊಡಗಿದರು ಆ ಸಮಯದಲ್ಲಿ ಮಧ್ಯಪ್ರದೇಶದ ಶಾಸಕರ ಖರೀದಿಯಲ್ಲಿ ತೊಡಗಿದ್ದ ಸಂಬಂಧಿಸಿದ ವ್ಯಕ್ತಿಗಳು ಸ್ವಾರ್ಥ, ಲಾಭಕ್ಕಾಗಿ ವಿಮಾನಗಳನ್ನು ನಿಲ್ಲಿಸದೆ ಕರೋನಾ ಪಸರಿಸಲು ಕಾರಣರಾದರು.

