

ಭಾರತದಾದ್ಯಂತ ಎಲ್ಲೆಡೆ ಕೊರೊನಾ ಕೊವಿಡ್ -೧೯ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ರೋಗತಡೆಗಟ್ಟುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಕಲಂ ೧೪೪ ಸಿ.ಆರ್.ಪಿ.ಸಿ ಅಡಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಸಹ ಲಾಕ್ ಡೌನ್ ಆದೇಶ ಉಲ್ಲಂಘಿಸಿ ಇಂದು ಶಿರಸಿ ನಗರದ ಕನವಳ್ಳಿ ಗಲ್ಲಿಯ ಖೂಬಾ ಮಸೀದಿಯಲ್ಲಿ ಸಾಮೂಹಿಕವಾಗಿ ನಮಾಜ್ ಸಲ್ಲಿಸಲು ಪ್ರಯತ್ನಿಸಿದ ಯುವಕರ ಗುಂಪನ್ನು ಡ್ರೋಣ್ ಕ್ಯಾಮೇರಾ ಸಹಾಯದಿಂದ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗಿದೆ.

ಡಿ.ಎಸ್.ಪಿ.ಗೊಪಾಲಕೃಷ್ಣ ನಾಯಕ ನೇತೃತ್ವದ ಸಿ.ಪಿ.ಐ ಪ್ರದೀಪ್ ಬಿ.ಯು ಮಾರುಕಟ್ಟೆ ಪಿ.ಎಸ್.ಐ.ನಾಗಪ್ಪ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಸ್ಥಳಕ್ಕೆ ಧಾವಿಸಿ ಮಸೀದಿಯ ಹತ್ತಿರ ಗುಂಪು ಕೂಡಿ ನಮಾಜ್ ಮಾಡಲು ಪ್ರಯತ್ನಿಸುತ್ತಿದ್ದ ೧) ಖಲಂದರ್/ಮಹ್ಮದ್ ಯೂಸುಫ್ ಕಲ್ಲಂಗಡಿ ೨)ರೀಯಾಜ್ /ಇಬ್ರಾಹಿಂ ಕಲ್ಲಂಗಡಿ ೩) ಇಬ್ರಾಹಿಂ/ ಚಮನ್ ಸಾಬ್ ಕಲಂಗಡಿ ಸಾ/ಎಲ್ಲರೂ ನೆಹರೂನಗರ ರನ್ನು ವಶಕ್ಕೆ ಪಡೆದಿದ್ದು ಇತರರೂ ಅಲ್ಲಿಂದ ಪರಾರಿಯಾಗಿದ್ದಾರೆ. ಅವರ ಬಂಧನಕ್ಕೆ ಮಾರುಕಟ್ಟೆ ಪೊಲೀಸರು ಜಾಲ ಬೀಸಿದ್ದು ಈ ಬಗ್ಗೆ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂ ೩೮/೨೦೨೦ ಕಲಂ ೨೬೯,೨೭೦,೨೭೧,೩೩೬,೧೪೩ ಸಹಿತ ೧೪೯ ಐ.ಪಿ.ಸಿ. ಅಡಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
ರಸ್ತೆಮೇಲೆ ನಮಾಜು ಗೊಂದಲಶುಕ್ರವಾರದ ನಮಾಜ್ ಹಿನ್ನೆಲೆಯಲ್ಲಿ ಮುಸ್ಲಿಂರು ರಸ್ತೆ ಮೇಲೇ ನಮಾಜ್ ಮಾಡಲು ಪ್ರಯತ್ನಿಸಿ, ಗೊಂದಲಕ್ಕೆ ಕಾರಣವಾದ ಪ್ರಕರಣಗಳು ನಡೆದಿವೆ. ಉತ್ತರಕನ್ನಡ ಜಿಲ್ಲೆ ಮುಂಡಗೋಡು ಮತ್ತು ಹುಬ್ಬಳ್ಳಿಗಳಲ್ಲಿ ಇಂಥ ಗೊಂದಲಗಳಾಗಿದ್ದು ಮುಂಡಗೋಡಿನ ಗ್ರಾಮೀಣ ಭಾಗದ 15 ಜನ ಮುಸ್ಲಿಂ ರಲ್ಲಿ 12 ಜನರನ್ನು ಬಂಧಿಸಲಾಗಿದೆ. ಹುಬ್ಬಳ್ಳಿಯಲ್ಲಿ ಇಂಥದ್ದೇ ಗೊಂದಲಗಳಾಗಿದ್ದು ಅಲ್ಲಿ ಕೂಡಾ ಗೊಂದಲ, ಗಲಾಟಗೆ ಕಾರಣರಾದ ಕೆಲವರನ್ನು ಬಂಧಿಸಿದ ವರ್ತಮಾನ ವರದಿಯಾಗಿದೆ.
