ಕರೋನಾ ಲಾಕ್‍ಔಟ್ ನಿಂದ ಮಲೆನಾಡಿನ ರೈತರು ಹಾನಿ ಅನುಭವಿಸುವಂತಾಗಿದ್ದು,ಅವರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾರದೆ ತೊಂದರೆಗೆ ಒಳಗಾಗಿದ್ದಾರೆ. ಕರಾವಳಿ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದ ರೈತರು ತೊಂದರೆಗೆ ಒಳಗಾಗಿದ್ದಾರೆ. ಬನವಾಸಿ, ಸಾಗರ, ಸೊರಬ ಪ್ರದೇಶಗಳಲ್ಲಿ ಅನಾನಸ್, ಪಪ್ಪಾಯಿ ಬೆಳೆ ಹಣ್ಣಾಗಿ ಹಾಳಾಗುತ್ತಿದೆ. ಸಿದ್ದಾಪುರ ಮತ್ತು ಗೋಕರ್ಣ ಭಾಗಗಳಲ್ಲಿ ತರಕಾರಿ ಬೆಳೆದ ರೈತರು ಹಾನಿಯಿಂದ ಕಂಗಾಲಾಗುವಂತಾಗಿದೆ.
ಈ ತೊಂದರೆಗಳ ಹಿನ್ನೆಲೆಯಲ್ಲಿ ಇಂದು ಸಿದ್ಧಾಪುರದ ಗೋಳಗೋಡಿನ ತರಕಾರಿ ಬೆಳೆಗಾರರು ಸ್ಥಳಿಯ ತಹಸಿಲ್ದಾರರಿಗೆ ಮನವಿ ನೀಡಿ ತಾವು ಬೆಳೆದ ತರಕಾರಿ ಸಾಗಾಟ, ಮಾರಾಟಗಳಿಗೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿ ಮನವಿ ನೀಡಿದರು.
ಗೋಳಗೋಡಿನ ತರಕಾರಿ ಗದ್ದೆಗಳಿಗೆ ಭೇಟಿ ನೀಡಿ, ಸ್ಥಳ ಪರಶೀಲನೆ ಮಾಡಿದ ತಹಸಿಲ್ದಾರರು ತಾಲೂಕಿನಲ್ಲಿ ತರಕಾರಿ ಸಾಗಾಟ, ಮಾರಾಟಕ್ಕೆ ಅವಕಾಶ ನೀಡುವ ಭರವಸೆ ನೀಡಿದರು.
ಈ ರೈತರ ಸಂಕಷ್ಟದಿಂದಾಗಿ ದೀಪ ಆರಿಸಿ, ನಾಟಕ ಮಾಡುವ ಪ್ರಭುತ್ವ, ನಾಯಕತ್ವ ರೈತರು, ಜನಸಾಮಾನ್ಯರ ಹಿತ ನಿರ್ಲಕ್ಷಿಸಿ,ಕಪಟ ನಾಟಕದಲ್ಲಿ ತೊಡಗಿರುವ ಜನಪ್ರತಿನಿಧಿಗಳ ಬಗ್ಗೆಯೂ ಜನಸಾಮಾನ್ಯರು ವಿರೋಧಿಸುವಂತಾಗಿದೆ.