

ಮಂಗಳವಾರ ಎರಡು ಜನ ಕರೋನಾ ಸೋಂಕಿತರು
ಸಂಪೂರ್ಣ ಗುಣಮುಖರಾಗಿ ಮನೆ ತಲುಪಿದ ನಂತರ ಇಂದು ಭಟ್ಕಳದ ಗರ್ಭಿಣಿಯೊಬ್ಬರಲ್ಲಿ ಕರೋನಾ ಪತ್ತೆಯಾಗಿ ಕೋವಿಡ್ ಆತಂಕ ಮರೆಯಾಗಿ ನಿರಾಳರಾಗುತಿದ್ದಾರೆ ಎನ್ನುವ ಸಮಯಕ್ಕೆ ಮತ್ತೆ ಆತಂಕ ಒಡಮೂಡಿದಂತಾಗಿದೆ.
ಭಟ್ಕಳದ ದುಬೈನಿಂದ ಹಿಂದಿರುಗಿದ ದಂಪತಿಗಳಲ್ಲಿ ಪತಿಯಲ್ಲಿ ಕರೋನಾ ನೆಗಿಟಿವ್ ವರದಿ ಬಂದರೆ, ಗರ್ಭಿಣಿ ಪತ್ನಿಯಲ್ಲಿ ಕರೋನಾ ಸೋಂಕು ಪತ್ತೆಯಾಗಿ ಮತ್ತೆ ಆತಂಕ ಪ್ರಾರಂಭವಾದಂತಾಗಿದೆ. ಉತ್ತರಕನ್ನಡ ಜಿಲ್ಲೆಯ ಭಟ್ಕಳ ಬಿಟ್ಟು ಬೇರೆ ಕಡೆ ಕರೋನಾ ಸೋಂಕು ಪತ್ತೆಯಾದ ಒಂದೂ ಪ್ರಕರಣಗಳಿಲ್ಲ.
ಕೇಂದ್ರ ಸರ್ಕಾರದ ನಿರ್ಲಕ್ಷ, ಮಧ್ಯಪ್ರದೇಶದ ಬಿ.ಜೆ.ಪಿ. ಸರ್ಕಾರ ಸ್ಥಾಪನೆ ಕಾರಣಕ್ಕೆ ವಿಮಾನಯಾನ ಸ್ಥಗಿತಮಾಡದಿರುವುದು, ವಿದೇಶದಿಂದ ಮರಳಿದ ಜನರಿಗೆ ಕ್ವಾರಂಟೈನ್ ಮಾಡದಿರುವುದೇ ಈ ಎಲ್ಲಾ ಅವಾಂತರಗಳಿಗೆ ಕಾರಣ ಎನ್ನಲಾಗುತ್ತಿದೆ. ಕೇಂದ್ರದ ಉಡಾಫೆಯಿಂದ ಉಂಟಾದ ರಗಳೆ ಯನ್ನು ಒಂದು ಸಮೂದಾಯದ ಮೇಲೆ ಹಾಕಿ ಪಲಾಯನ ಮಾಡುವ ಪರಿವಾರದ ಪ್ರಯತ್ನಕ್ಕೂ ಮುಖ್ಯಮಂತ್ರಿ ಬ್ರೇಕ್ ಹಾಕಿರುವುದು ದುರುದ್ಧೇಶದ ರಾಜಕೀಯ ಹಿತಾಸಕ್ತರ ದುಷ್ಟಕೂಟದ ಪ್ರಯುತ್ನಕ್ಕೆ ಒಡ್ಡಿದ ತಡೆಯಂತಾಗಿದೆ.
