

ಕರೋನಾ ರೋಗದಿಂದ ಮೃತರಾದ ಇಬ್ಬರು ವ್ಯಕ್ತಿಗಳ ಶವಸಂಸ್ಕಾರಕ್ಕೆ ಅವರ ಸಂಬಂಧಿಗಳೇ ಭಾಗವಹಿಸದ ಅಮಾನವೀಯ ಘಟನೆಗಳು ಉತ್ತರ ಭಾರತದಲ್ಲಿ ನಡೆದಿವೆ.
ಚಂಡೀಗಡ, ಪಂಜಾಬ್ ಗಳಲ್ಲಿ ಮೃತರಾದ ಪ್ರತ್ಯೇಕ ಇಬ್ಬರು ಪ್ರತ್ಯೇಕ ಕರೋನಾ ರೋಗಿಗಳ ಶವಸಂಸ್ಕಾರವನ್ನು ಅಧಿಕಾರಗಳೇ ನಿರ್ವಹಿಸಿದ್ದಾರೆ.

ಕಾರ್ಮಿಕರ ಬಾಡಿಗೆ ವಸೂಲಿ ಮಾಡದಂತೆ ಉಡುಪಿ ಜಿಲ್ಲಾಧಿಕಾರಿಗಳ ಆದೇಶ
ಕರೋನಾ ಹಿನ್ನೆಲೆಯಲ್ಲಿ ಬಾಡಿಗೆಮನೆ, ಶೆಡ್ ಗಳಲ್ಲಿ ವಾಸಿಸುತ್ತಿರುವ ಕಾರ್ಮಿಕರಿಗೆ ಮಾರ್ಚ್,ಏಪ್ರಿಲ್ ತಿಂಗಳ ಮಾಸಿಕ ಬಾಡಿಗೆ ಆಖರಿಸದಂತೆ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಜಿ. ಆದೇಶಿಸಿದ್ದಾರೆ. ಕಾರ್ಮಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಕಠಿಣ ಆದೇಶ ಮಾಡಿರುವ ಜಿಲ್ಲಾಧಿಕಾರಿಗಳು ಈ ಬಗ್ಗೆ ಶಿಸ್ತುಕ್ರಮಕ್ಕೂ ಅವಕಾಶವಿದೆ ಎಂದು ಎಚ್ಚರಿಸಿದ್ದಾರೆ.
