

ಕರೋನಾ ಹಿನ್ನೆಲೆಯಲ್ಲಿ ಅವಿರತ ಸೇವೆ ನೀಡುತ್ತಿರುವ ವೈದ್ಯರು, ಆರೋಗ್ಯ ಸಿಬ್ಬಂದಿಗಳಿಗೆ ಸಿದ್ಧಾಪುರದ ಲಯನ್ಸ್‍ಕ್ಲಬ್ ನಿಂದ ಆರೋಗ್ಯಕಿಟ್ ವಿತರಿಸಲಾಯಿತು. ಈ ಕಿಟ್ ವಿತರಿಸಿದ ತಹಸಿಲ್ದಾರ ಮಂಜುಳಾ ಭಜಂತ್ರಿ ಕರೋನಾ ಜಾಗತಿಕ ಸಮಸ್ಯೆಯಾಗಿದ್ದು ಮುಂಜಾಗೃತೆ,ಸಾಮಾಜಿಕ ಅಂತರಗಳಿಂದ ಈ ರೋಗದ ವಿರುದ್ಧ ಗೆಲುವು ಸಾಧಿಸಬಹುದು ಎಂದರು.

ನಾಶಿರ್ ಕೃತಜ್ಷತೆ-
ತಾಲೂಕಿನಲ್ಲಿ ಕರೋನಾ ವಿರುದ್ಧದ ಹೋರಾಟದಲ್ಲಿ ನಿರಂತರ ಸೇವೆ ಮಾಡುತ್ತಿರುವ ಕರೋನಾ ಯೋಧರನ್ನು ತಾ.ಪಂ. ಸದಸ್ಯ ನಾಶಿರ್‍ಖಾನ್ ಅಭಿನಂದಿಸಿದ್ದಾರೆ.
ಕರೋನಾ ಕ್ಕೆ ಜಾತಿ-ಧರ್ಮಗಳ ಭೇದವಿಲ್ಲ. ಮುಸ್ಲಿಂ ಸೇರಿದಂತೆ ಎಲ್ಲರೂ ಈ ಕಾಲದ ಅನಿವಾರ್ಯ ಕಾನೂನು ಕಟ್ಟಳೆಗಳನ್ನು ಪಾಲಿಸಲೇಬೇಕು. ಕೋವಿಡ್ ಮುಂಜಾಗೃತೆಗಾಗಿ ದುಡಿಯುತ್ತಿರುವ ಎಲ್ಲರನ್ನೂ ಅಭಿನಂದಿಸಬೇಕು, ಗೌರವಿಸಬೇಕು ಆದರೆ ಕೆಲವರು ಆರೋಗ್ಯ ಸಿಬ್ಬಂದಿಗಳು, ಕರ್ತವ್ಯ ನಿರತರ ಮೇಲೆ ಕೈ ಮಾಡುತಿದ್ದಾರೆ. ಅಂಥ ವರ್ತನೆಗಳಿಂದ ಯಾರಿಗೂ ಗೌರವ ಸಿಗುವುದಿಲ್ಲ, ಮುಸ್ಲಿಂ ಬಾಂಧವರೂ ಹಬ್ಬ, ನಮಾಜು ನೆಪದಲ್ಲಿ ಶಿಸ್ತು, ಕಾನೂನು ಉಲ್ಲಂಘಿಸಬಾರದು. ಯಾರೇ ಕಾನೂನು,ಶಿಸ್ತು,ಸಂಯಮ ಉಲ್ಲಂಘಿಸಿದರೆ ಜಿಲ್ಲಾಡಳಿತ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಅಂಥವರ ಪರವಾಗಿ ಯಾರೂ ವಕಾಲತ್ತು ವಹಿಸುವ ಕೆಲಸ ಮಾಡಬಾರದು ಎಂದರು.




