

ಸಿದ್ಧಾಪುರ, ಉತ್ತರಕನ್ನಡ ಜಿಲ್ಲೆಯಲ್ಲಿ ಯಾರೊಬ್ಬರೂ ಹಸಿವೆಯಿಂದ ಬಳಲಬಾರದೆಂದು ವ್ಯವಸ್ಥೆಮಾಡಲು ಅಧಿಕಾರಿಗಳಿಗೆ ಆದೇಶಿಸಿದ್ದು ಅಗತ್ಯವಿದ್ದರೆ ಸರ್ಕಾರ,ಖಾಸಗಿ ವ್ಯಕ್ತಿಗಳ ನೆರವಿನಿಂದ ಅವಶ್ಯವಿದ್ದರೆ ಆಹಾರದ ವ್ಯವಸ್ಥೆಮಾಡುತ್ತೇವೆ ಎಂದು ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಭರವಸೆ ನೀಡಿದರು.
ಸಿದ್ದಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕರೋನಾ, ಲಾಕ್‍ಡೌನ್ ಹಿನ್ನೆಲೆಯಲ್ಲಿ ಯಾರಿಗೂ ತೊಂದರೆ ಆಗಬಾರದು, ಇದೇ ಸಂದರ್ಭದಲ್ಲಿ ಲಾಕ್‍ಔಟ್, ನಿಷೀಧಾಜ್ಞೆ ಹಿನ್ನೆಲೆಯಲ್ಲಿ ಕಳ್ಳಬಟ್ಟಿ ತಯಾರಿಕೆಯಂಥ ಕಾನೂನು ಬಾಹೀರ ವ್ಯವಹಾರಗಳನ್ನೂ ನಿಯಂತ್ರಿಸಬೇಕು ಎಂದು ಆದೇಶಿಸಿದರು.
ಧನ್ವಂತರಿ ಆಸ್ಫತ್ರೆ, ವೈದ್ಯರ ನೆರವು
ಸಿದ್ಧಾಪುರದ ಧನ್ವಂತರಿ ಆಯುರ್ವೇದ ಆಸ್ಫತ್ರೆಯ ಸಂಪೂರ್ಣ ಕಟ್ಟಡ, ವಿದ್ಯಾರ್ಥಿ ವೈದ್ಯರು ಕೋವಿಡ್ 19 ಸೇವೆಗೆ ಮೀಸಲಾಗಿದೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರು ಕರೋನಾ ಹಿನ್ನೆಲೆಯಲ್ಲಿ ಅಗತ್ಯಬಿದ್ದರೆ ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಅಲ್ಲಿಯ ವಿದ್ಯಾರ್ಥಿ ವೈದ್ಯರನ್ನು ಸಂಪೂರ್ಣ ಸರ್ಕಾರದ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲು ಅನುಮತಿ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಇಂದಿನಿಂದಲೇ ಮಾಸ್ಕ್ ಕಡ್ಡಾಯ,ಆರೋಗ್ಯ ಇಲಾಖೆಯ ಪ್ರಕಟಣೆ
ಕರೋನಾ ಭಯ,ಮುನ್ನೆಚ್ಚರಿಕೆಗಳ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿ ಆರೋಗ್ಯ ಇಲಾಖೆ ಇಂದು ಪ್ರಕಟಣೆ ಹೊರಡಿಸಿದೆ. ಈ ಹಿಂದೆ ಮಾಸ್ಕ್ ಕಡ್ಡಾಯವಲ್ಲ ಎಂದು ಸಾರಿದ್ದ ಇಲಾಖೆ ಇಂದು ಹೊಸ ಪ್ರಕಟಣೆಯಲ್ಲಿ ಮಾಸ್ಕ್
ಕಡ್ಡಾಯ ಎಂದು ಸಾರಿದೆ.
ಅಪರಿಚಿತರರು, ಸಾರ್ವಜನಿಕರೊಂದಿಗೆ ವ್ಯವಹರಿಸುವ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು.ಆದರೆ ಮಾಸ್ಕ್ ಹೀಗೇ ಇರಬೇಕೆಂಬ ನಿಬಂಧನೆ ಇಲ್ಲ ಎಂದಿದೆ. ಸುರಕ್ಷತೆ,ಮುನ್ನೆಚ್ಚರಿಕೆ ಹಿನ್ನೆಲೆಗಳಲ್ಲಿ ಅನಿವಾರ್ಯ ಸೇವೆ, ಓಡಾಟದಲ್ಲಿರುವ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ವ್ಯವಹರಿಸುವುದನ್ನು ಕಡ್ಡಾಯ ಮಾಡಿ ಪ್ರಕಟಣೆ ನೀಡಲಾಗಿದೆ.
ಕರೋನಾ ವಿಶೇಶ – ಲಯನ್ಸ್‍ನಿಂದ ಆರೋಗ್ಯ ಕಿಟ್ ವಿತರಣೆ, ನಾಶಿರ್‍ಖಾನ್ ರಿಂದ ಕರೋನಾ ಯೋಧರಿಗೆ ಕೃತಜ್ಞತೆ
ಕರೋನಾ ಹಿನ್ನೆಲೆಯಲ್ಲಿ ಅವಿರತ ಸೇವೆ ನೀಡುತ್ತಿರುವ ವೈದ್ಯರು, ಆರೋಗ್ಯ ಸಿಬ್ಬಂದಿಗಳಿಗೆ ಸಿದ್ಧಾಪುರದ ಲಯನ್ಸ್‍ಕ್ಲಬ್ ನಿಂದ ಆರೋಗ್ಯಕಿಟ್ ವಿತರಿಸಲಾಯಿತು. ಈ ಕಿಟ್ ವಿತರಿಸಿದ ತಹಸಿಲ್ದಾರ ಮಂಜುಳಾ ಭಜಂತ್ರಿ ಕರೋನಾ ಜಾಗತಿಕ ಸಮಸ್ಯೆಯಾಗಿದ್ದು ಮುಂಜಾಗೃತೆ,ಸಾಮಾಜಿಕ ಅಂತರಗಳಿಂದ ಈ ರೋಗದ ವಿರುದ್ಧ ಗೆಲುವು ಸಾಧಿಸಬಹುದು ಎಂದರು.
ನಾಶಿರ್ ಕೃತಜ್ಷತೆ-
ತಾಲೂಕಿನಲ್ಲಿ ಕರೋನಾ ವಿರುದ್ಧದ ಹೋರಾಟದಲ್ಲಿ ನಿರಂತರ ಸೇವೆ ಮಾಡುತ್ತಿರುವ ಕರೋನಾ ಯೋಧರನ್ನು ತಾ.ಪಂ. ಸದಸ್ಯ ನಾಶಿರ್‍ಖಾನ್ ಅಭಿನಂದಿಸಿದ್ದಾರೆ.



