

ಕರೋನಾ ಹಬ್ಬಲು ಮುಸ್ಲಿಂ ರು ಕಾರಣ ಎಂದು ಮಾತು ಮತ್ತು ಬರಹಗಳಲ್ಲಿ ಆರೋಪಿಸಿದ್ದ ಸಂಸದ ಅನಂತಹೆಗಡೆ ಮತ್ತು ಇಬ್ಬರು ಶಾಸಕರ ವಿರುದ್ಧ ಕೆ.ಪಿ.ಸಿ.ಸಿ.ಪೊಲೀಸ್ ದೂರು ನೀಡಿದೆ.
ಸಂಸದ ಅನಂತ ಹೆಗಡೆ ಮತ್ತು ಇಬ್ಬರು ಶಾಸಕರು ಕೋಮುಪ್ರಚೋದನೆ ಮಾಡುವ ಮೂಲಕ ಅಲ್ಫಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುವ ಜೊತೆಗೆ ಶಾಂತಿ-ಸುವ್ಯವಸ್ಥೆ ಕದಡುವ ಸಂಚು ನಡೆಸಿದ್ದಾರೆ. ಈ ಮೂವರ ಮೇಲೆ ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಬೇಕು ಎಂದು ಡಿ.ಕೆ.ಶಿವಕುಮಾರ ಪರವಾಗಿ ಕೆ.ಪಿ.ಸಿ.ಸಿ. ನಿಯೋಗ ಮನವಿ ಮಾಡಿದೆ.

