ಸಿದ್ಧಾಪುರ ತಾಲೂಕಿನಲ್ಲಿ ಏ.10 ರ ಶುಕ್ರವಾರ ಬಿದ್ದ ಮಳೆ ಮತ್ತು ಗಾಳಿಗೆ ಅಪಾರ ಹಾನಿಯಾಗಿದೆ. ಗ್ರಾಮೀಣ ಭಾಗದಲ್ಲಿ ಕೆಲವು ಮನೆಗಳಿಗೆ ಹಾನಿಯಾಗಿದ್ದರೆ 36 ವಿದ್ಯುತ್ ಕಂಬಗಳು ಧರೆಗುರುಳಿ ಹಾನಿಯಾಗಿದೆ. ತಾಲೂಕಿನ ಪೂರ್ವಭಾಗದಲ್ಲಿ ಮಳೆಯಾಗದೆ, ಪಶ್ಚಿಮಭಾಗದಲ್ಲಿ ಗಾಳಿಯೊಂದಿಗೆ ಮಳೆ ಸುರಿದು ಹಾನಿ ಮಾಡಿದೆ. ಹೆಸ್ಕಾಂ ಸಿಬ್ಬಂದಿಗಳು ಈ ತೊಂದರೆ ಸರಿಪಡಿಸಲು ದಿನವಿಡೀ ಶ್ರಮಿಸಿದರು.
ನೂರು ದಿವಸದಲ್ಲಿ ಲಕ್ಷ ಜನರನ್ನು ಬಲಿ ಪಡೆದ ಕರೋನಾ, ನಾನೇನೂ ಕಡಮೆ ಇಲ್ಲ ಅನ್ತು ಕ್ಯಾಸನೂರು ಅರಣ್ಯ ಕಾಯಿಲೆ!
ವಿಶ್ವದಲ್ಲಿ ಅಜಮಾಸು 1 ಲಕ್ಷ ಜನರನ್ನು ಬಲಿ ತೆಗೆದುಕೊಂಡ ಕರೋನಾ ಇಂದಿಗೆ ನೂರು ದಿವಸಗಳನ್ನು ಪೂರೈಸಿದೆ. ಈ ಕೋವಿಡ್19 ದುಷ್ಪರಿಣಾಮಗಳಿಂದಾಗಿ ರಾಜ್ಯದಲ್ಲಿ ಲಾಕ್ಡೌನ್ ಅವಧಿ ಏ.30 ರ ವರೆಗೆ ವಿಸ್ತರಣೆಯಾಗಿದೆ. ರಾಜ್ಯದಲ್ಲಿ ಈ ವರೆಗೆ 219 ಜನರು ಕರೋನಾ ಸೋಂಕು ಪೀಡಿತರಾಗಿದ್ದರೆ, 39 ಜನರು ಗುಣಮುಖರಾಗಿದ್ದಾರೆ.