

ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ
ಕರೋನಾ ಎನ್ನುವ ಖಾಯಿಲೆಗೆ ಸಿಕ್ಕು ಒದ್ದಾಡುತ್ತಿರುವ ಜನರನ್ನು ವಾಮಾಚಾರದಿಂದಾದರೂ
ವಾಸಿ ಮಾಡುವ ಮಾಂತ್ರಿಕರು ಬೇಕಾಗಿದ್ದಾರೆ.
ಹಸುಗೂಸು,ಎಳೆಶಿಸು, ಸಾಯುವ ಮುದುಕ, ಕಾಯುವ ವಾಚ್ಮನ್
ಎಲ್ಲರನ್ನೂ ಕಾಪಾಡುವ ದೇವರು ಬೇಕಾಗಿದ್ದಾರೆ.
ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ.
ಕೋಟ್ಯಾಂತರ ಮುಖಗವಸು,ವೆಂಟಿಲೇಟರ್, ಔಷಧಿ,ತಯಾರಿಸಿ ಆರೈಕೆ ಮಾಡಿ
ವಿಶ್ವಗುರುವಾಗುವ ಒಬ್ಬನೇ ಒಬ್ಬ ಪ್ರಧಾನಿ ಬೇಕಾಗಿದ್ದಾರೆ.
ಎಲ್ಲರನ್ನೂ ನಡುಗಿಸಿ, ಎಲ್ಲರನ್ನೂ ಕರೋನಾದಿಂದ ರಕ್ಷಿಸುವ ಜಗತ್ತಿನ ದೊಡ್ಡಣ್ಣ ಒಬ್ಬ ಬೇಕಾಗಿದ್ದಾರೆ.
ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ.
ಹೋಮ,ಹವನ, ಜಪ,ತಪ, ಸಹಸ್ರನಾಮ, ಕೋಟಿ,ಕೋಟಿ ಮಂತ್ರ-ತಂತ್ರ,ಸಹಸ್ರನಾಮಾರ್ಚನೆ
ಎಲ್ಲವನ್ನೂ ಮಾಡಿ ಕರೋನಾದಿಂದ ಜಗತ್ತನ್ನು ಬಚಾವುಮಾಡುವ ಶುದ್ಧ ಧಾರ್ಮಿಕ ಪುರೋಹಿತರು ಬೇಕಾಗಿದ್ದಾರೆ.
ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ.
ಉಚ್ಚೆಬೆಚ್ಚಗಾದರೆ, ಕನಸುಒಡೆದು ನಿದ್ದೆ ಹೋದರೆ..
ಭಸ್ಮ ಕೊಟ್ಟು ಎಲ್ಲವನ್ನೂ ಸರಿಮಾಡುವ ಗಾಡಿಗರೊಬ್ಬರು ಬೇಕಾಗಿದ್ದಾರೆ.
ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ.
ಸ್ನೇಹಕ್ಕೆ ಬದ್ಧ,ಸಮರಕ್ಕೆ ಸಿದ್ಧ ಎನ್ನುವ ಧಾರ್ಮಿಕ ಕಟ್ಟಾಳುಗಳು,ದೇವರು,ಧರ್ಮವೇ ನಿಜ ಎನ್ನುವ ನಿಜ ಧಾರ್ಮಿಕರು ಕರೋನಾ ವಿರುದ್ಧದ ಸಮರಕ್ಕೆ ಬೇಕಾಗಿದ್ದಾರೆ.
ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ.
ಮನೆ.ಮಠ,ಆಹಾರ,ವಿಹಾರ ಬಿಟ್ಟು ವೈದ್ಯೋ ನಾರಾಯಣ ಹರಿ ಎನಿಸಿಕೊಂಡವರಿಗೆ
ಸುಖ,ನೆಮ್ಮದಿ,ಸಂತೋಷಕ್ಕೆ ಒದ್ದು ರೋಗಿಗಳ ಕಣ್ಣಿರು ಒರೆಸುತಿದ್ದವರಿಗೆ, ಕರ್ತವ್ಯವೇ ದೇವರು ಎಂದು ಬಗೆದು ಲಾಠಿಹಿಡಿದು, ಬೂಟು ತೊಟ್ಟು ಸಮಾಜ ಸಂತೈಸುತ್ತಿರುವವರಿಗೆ
ಶಕ್ತ ಕೊಡುವ ದೇವರು ಬೇಕಾಗಿದ್ದಾರೆ.
ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ.
ದಾನಧರ್ಮ ಮಾಡಿ ಪೋಟೋ ಹೊಡೆಸಿಕೊಳ್ಳದವರು, ಬಡವರು, ದುರ್ಬಲರಿಗೆ ನೆರವು ನೀಡಿ ಮಾಧ್ಯಮಪ್ರಚಾರ ಬಯಸದವರು, ಹೊಟ್ಟೆ ತುಂಬಿದ ಮೇಲಾದರೂ ಹಸಿದವರಿಗೆ ಕೊಡುವ ದಾನಿಗಳು ಬೇಕಾಗಿದ್ದಾರೆ.

ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ.
-ಸಮಾಜಮುಖಿ ಕನ್ನೇಶ್, ಕೋಲಶಿರ್ಸಿ,
8277517164

👌👍