

ಬುಧವಾರದಿಂದಲೇ ಕರಾವಳಿಯಲ್ಲಿ ಮೀನುಗಾರಿಕೆ ಪ್ರಾರಂಭವಾಗಲಿದ್ದು, ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.

ಸಿದ್ಧಾಪುರದಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಲಾಕ್ಡೌ ನ್ ನಿಯಮ, ಸಾಮಾಜಿಕ ಅಂತರದ ನಿಬಂಧನೆಗಳ ನಡುವೆ ಮೀನುಗಾರರ ಹಿತಾಸಕ್ತಿ, ಮೀನುಪ್ರೀಯರ ಅವಶ್ಯಕತೆ ಅನುಲಕ್ಷಿಸಿ ರಾಜ್ಯದ ಕರಾವಳಿಯಲ್ಲಿ ನಾಳೆಯಿಂದಲೇ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ.
ಮೀನುಮಾರಾಟಗಾರರು ಅನುಮತಿ ಪಡೆದ ವಾಹನದಲ್ಲಿ ಮೀನುಗಳನ್ನು ಪ್ರತಿ ಗ್ರಾಮಕ್ಕೆ ತೆರಳಿ ಮಾರಾಟಮಾಡಲಿದ್ದಾರೆ. ಮೀನುಮಾರು ಕಟ್ಟೆಯ ಜನಸಂದಣಿ, ವಾತಾವರಣ ತಪ್ಪಿಸಿ, ಸುರಕ್ಷತೆಯೊಂದಿಗೆ ಮೀನುಗಾರಿಕೆ, ಮಾರಾಟ,ಬಳಕೆಗೆ ಅವಕಾಶ ನೀಡಿದ್ದೇವೆ. ಇದಕ್ಕೆ ಅಗತ್ಯವಿರುವ ಸರ್ಕಾರದ ಸಬ್ಸಿಡಿದರದ ಡೀಜೆಲ್ ಕೂಡಾ ಪೂರೈಕೆ ಮಾಡುತ್ತೇವೆ ಎಂದರು.
