

ಜಗತ್ತು ಕರೋನಾ ಸಂಕಷ್ಟದಲ್ಲಿರುವ ಸಮಯದಲ್ಲಿ ಖಾಸಗಿ ವೈದ್ಯರು ತಮ್ಮ ಆಸ್ಫತ್ರೆ, ಕ್ಲಿನಿಕ್ ಗಳ ಬಾಗಿಲುಮುಚ್ಚಿರುವುದು ವೃತ್ತಿ ಧರ್ಮವಲ್ಲ ಎಂದು ಹೇಳಿರುವ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಉತ್ತರಕನ್ನಡದಲ್ಲಿ ಕರೋನಾ ಸಮಯದಲ್ಲಿ ಬಾಗಿಲು ಹಾಕಿರುವ ಖಾಸಗಿ ಆಸ್ಫತ್ರೆಗಳ ಬಾಗಿಲು ತೆರೆದು ಸಹಕರಿಸಲು ಕೈಮುಗಿದು ವಿನಂತಿಸಿದರು.
ಸಿದ್ದಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹೆಬ್ಬಾರ್ ಆಸ್ಫತ್ರೆ,ವೈದ್ಯರು, ಆರೋಗ್ಯ ವ್ಯವಸ್ಥೆಗಾಗಿ ಸರ್ಕಾರ ಉದಾರವಾಗಿ ನೆರವು ನೀಡಲಿದೆ. ಆದರೆ ಉತ್ತರಕನ್ನಡ ಜಿಲ್ಲೆ ಸೇರಿ ಕೆಲವೆಡೆ ಖಾಸಗಿ ಆಸ್ಫತ್ರೆಗಳು ಬಾಗಿಲು ಮುಚ್ಚಿವೆ. ಜನರ ಮನೆವೈದ್ಯರಾದ ಇವರೆಲ್ಲಾ ಬಾಗಿಲು ಮುಚ್ಚಿ ತಮ್ಮ ರೋಗಿಗಳು,ಆಪ್ತರಿಗೆ ಅನ್ಯಾಯಮಾಡಿದಂತಾಗುವುದಿಲ್ಲವೆ? ಎಂದು ಪ್ರಶ್ನಿಸಿದ ಸಚಿವರು ‘ದಯಮಾಡಿ ವೈದ್ಯರು ತಮ್ಮ ವೃತ್ತಿಧರ್ಮ ಪಾಲಿಸಬೇಕು. ಸಚಿವನಾಗಿ ನಾನು ಜನರ ಪರವಾಗಿ ಅವರಿಗೆ ಕೈ ಮುಗಿದು ವಿನಂತಿಸುತ್ತೇನೆ. ವೈದ್ಯರು ಕೆಲಸಮಾಡಿ,ಆಸ್ಫತ್ರೆಗಳನ್ನು ತೆರೆದಿಡಿ,ನಮ್ಮ ನೆರವು ಬೇಕಾದರೆ ಕೇಳಿ, ಆದರೆ ಈ ಸಂಕಷ್ಟದ ಸಮಯದಲ್ಲಿ ಆಸ್ಫತ್ರೆ ಬಾಗಿಲುಮುಚ್ಚಿ ಜನರಿಗೆ ಅನ್ಯಾಯ ಮಾಡಬೇಡಿ ಎಂದು ವಿನಂತಿಸಿದರು.


ನಿಜ ಒಳ್ಳೆಯ ಸಂದೇಶ ಸಾರಿದ್ದಾರೆ ಮಾನ್ಯ ಉಸ್ತುವಾರಿ ಸಚಿವರಿಗೆ ಧನ್ಯವಾದಗಳು🙏