

ಭಾರತದ ಬೆಳಕು- ಓ ಬೆಳಕೆ ನೀನಿಲ್ಲದಿದ್ದರೆ? ಇಂದಿಗೂ ನಮ್ಮ ಬದುಕು ಮೂರಾಬಟ್ಟೆಯಾಗಿರುತಿತ್ತು ಅನಾಗರೀಕರ ತುಳಿತಕೆ ಸಿಕ್ಕಿಓ ಬೆಳಕೆ ನೀನಿಲ್ಲದಿದ್ದರೆ ? ಈಗಲೂ ಸೊಂಟಕೆ ಸೋಗೆ ಕಟ್ಟಿ ನಡೆಯಬೇಕಿತ್ತು ಇಟ್ಟ ಹೆಜ್ಜೆಯ ಗುರುತನಳಿಸುತಓ ಬೆಳಕೆ ನೀನಿಲ್ಲದಿದ್ದರೆ? ಉಸಿರಾಟಕು ಹೆದರಬೇಕಿತ್ತು ಆಕಾಶದಿಂದ ಉದುರಿದವರಿಗೆ ತಾಗಿಬಿಟ್ಟರೆ ಗತಿಯೇನೆನುತಓ ಬೆಳಕೆ ನೀನಿಲ್ಲದಿದ್ದರೆ? ಶೋಷಣೆಯ ಶಿಲುಬೆಗೆ ಜೀವಂತವಾಗಿ ಏರಿ ಸಾಯಬೇಕಿತ್ತು ನೋವಿನಿರಿತವೆ ಮೇಲೆನಿಸಿ ಪ್ರತಿಭಟಿಸುವ ದನಿಯಿಲ್ಲದೆಓ ಬೆಳಕೆ ನೀನಿಲ್ಲದಿದ್ದರೆ? ದಬ್ಬಾಳಿಕೆ ದೌರ್ಜನ್ಯದ ಹುರಿಗೆಂಪು ಬೆಂಕಿಯಲಿ ಮುಕಸಾಕ್ಷಿಗಳಾಗಿ ಬೇಯಬೇಕಿತ್ತು ದಿಕ್ಕು ದೆಸೆಯಿಲ್ಲದೆಓ ಬೆಳಕೆ ನೀನಿಲ್ಲದಿದ್ದರೆ? ಉಳ್ಳವರ ಸೊಕ್ಕಿನೆದುರು ನಡುಬಾಗಿ ನಿಲ್ಲಬೇಕಿತ್ತು ಬೆವರ ಅಡವಿಟ್ಟ ಬಿಟ್ಟಿ ಜೀತದಾಳುಗಳಾಗಿಓ ಬೆಳಕೆ ನೀನಿಲ್ಲದಿದ್ದರೆ? ಹತಾಶೆಯ ಅಸ್ಥಿಪಂಜರದಂತೆ ಉಳಿದು ಬಿಡುತಿತ್ತು…. ಒಂದಿಡೀ ಜನಾಂಗವೇ ಅಸ್ಪೃಶ್ಯತೆಯ ಶಾಶ್ವತ ಪಳೆಯುಳಿಕೆಗಳಾಗಿ… ಅಂಬೇಡ್ಕರ್ ಜಯಂತಿಯ ಶುಭಾಶಯಗಳು -ಮನು ಪುರ |

