ಮಂಗನಕಾಯಿಲೆಗೆ ಸಂಬಂಧಿಸಿದ 71 ಅತಿಸೂಕ್ಷ್ಮ ಪ್ರದೇಶಗಳಲ್ಲಿ ಕಡ್ಡಾಯವಾಗಿ ಚುಚ್ಚುಮದ್ದು ನೀಡಿಕೆ ಮತ್ತು ಸ್ಥಳಿಯರು ಮನೆಯಿಂದ ಕಾಡು ಪ್ರವೇಶಿಸುವುದನ್ನು ನಿರ್ಬಂಧಿಸುವಂತೆ ಸರ್ಕಾರದಿಂದ ಆದೇಶ ಮಾಡಲು ನಿರ್ಧರಿಸಲಾಗಿದೆ.
ಈ ಬಗ್ಗೆ ಇಂದು ಸಿದ್ದಾಪುರದಲ್ಲಿ ನಡೆದ ರಾಜ್ಯ ಜೀವವೈವಿಧ್ಯತಾ ಮಂಡಳಿ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದ ರಾ.ಜೀ.ಮಂ. ಅಧ್ಯಕ್ಷ ಅನಂತಹೆಗಡೆ ಆಶೀಸರ ಈ ಬಗ್ಗೆ ಸರ್ಕಾರದಿಂದ ಆದೇಶಮಾಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಭೆಯಲ್ಲಿ ಅಧಿಕಾರಿಗಳು, ಸ್ಥಳಿಯ ಪತ್ರಕರ್ತರಿಂದ ಮಾಹಿತಿ ಪಡೆದ ಅನಂತ ಹೆಗಡೆ ಮಂಗನಕಾಯಿಲೆ ಪೀಡಿತರಿಗೆ ಉಚಿತ ಚಿಕಿತ್ಸೆ,ಸಿದ್ಧಾಪುರಕ್ಕೆ ಕೆ.ಎಫ್.ಡಿ. ಕ್ಲಿನಿಕ್ ಮಂಜೂರಿ,ರಾಜ್ಯದಾದ್ಯಂತ ಕೆ.ಎಫ್.ಡಿ. ರೋಗಿಗಳಿಗೆ ಏಕರೂಪದ ಅನುಕೂಲ,ಪರಿಹಾರಗಳ ಬಗ್ಗೆ ಸಲಹೆ ಬಂದಿದೆ. ಈ ಬಗ್ಗೆ ಸರ್ಕಾರಕ್ಕೆ ಮನವಿಮಾಡಿ ಸೂಕ್ತಕ್ರಮಕ್ಕೆ ಆಗ್ರಹಿಸುತ್ತೇವೆ. ಮಂಗನಕಾಯಿಲೆ ತೊಂದರೆ, ಅದರ ಪರಿಹಾರಗಳ ಬಗ್ಗೆ ಸಂಶೋಧನೆ ಮಾಡಿ ಶಿಘ್ರ ಪರಿಹಾರಕ್ಕೆ ಅಗತ್ಯ ವ್ಯವಸ್ಥೆಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದರು.