

ಕರೋನಾ ಹಿನ್ನೆಲೆಯ ನಿಷೇಧಾಜ್ಞೆ ,ಕಾನೂನುಕ್ರಮಗಳ ಹಿನ್ನೆಲೆಯಲ್ಲಿ ಕಠಿಣ ನಿರೀಕ್ಷಣೆಗಳ ನಡುವೆ ಶಿರಸಿ ಉಪವಿಭಾಗದಲ್ಲಿ ಈ ವಾರ ಹಲವರನ್ನು ಬಂಧಿಸಲಾಗಿದೆ.
ಸಿದ್ದಾಪುರದಲ್ಲಿ ಭಟ್ಕಳದಿಂದ ಬಂದ ತ್ಯಾಗಲಿ ಮಾವಿನಕೊಪ್ಪದ
ಯುವಕ ಮೊಹದ್ದೀನ್ ಅಬುಸಾಬ್ ಪೊಲೀಸ್ ಕ್ರಮಕ್ಕೊಳಗಾಗಿ ಗೃಹಬಂಧನಕ್ಕೊಳಗಾಗಿದ್ದಾನೆ. ಈತ ಕಾನೂನು, ಸರ್ಕಾರದ ಆದೇಶ ಉಲ್ಲಂಘಿಸಿ ಭಟ್ಕಳದಿಂದ ಸ್ವಂತ ತಾಲೂಕಿಗೆ ಬಂದ ಆಪಾದನೆಯಿದೆ.






ಸಿದ್ಧಾಪುರದ ಹರಗಿಯ ನಾರಾಯಣ ಈರಾ ನಾಯ್ಕ ಎನ್ನುವ ವ್ಯಕ್ತಿ ಬೆಂಗಳೂರಿಗೆ ತೆರಳುವ ಸಂಚಿನಿಂದ ಪೊಲೀಸರ ಅತಿಥಿಯಾಗಿದ್ದು ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗಿದೆ.
ಇಂದು ಬೆಳಿಗ್ಗೆ ಯಲ್ಲಾಪುರದಲ್ಲಿ ಇಂಥದ್ದೇ ಕಾನೂನು ಉಲ್ಲಂಘನೆ ಕಾರಣಕ್ಕೆ ಬಂಧಿತರಾದ ರಿಯಾಜ್ ಮತ್ತು ಶೌಕತ್ ಎನ್ನುವ ಇಬ್ಬರು ಯುವಕರ ಮೇಲೆ ಕಾನೂನುಕ್ರಮ ಜರುಗಿಸಲಾಗಿದೆ. ಈ ಯುವಕರು ಪೆಟ್ರೋಲ್ ಟ್ಯಾಂಕರ್ ನಲ್ಲಿ ಅವಿತು ಕೇರಳಾದಿಂದ ಯಲ್ಲಾಪುರ ತಲುಪಿದ್ದರು.
ಇಂಥ ಕಾನೂನು ಕ್ರಮಗಳ ನಡುವೆ ಶಿರಸಿ ಉಪವಿಭಾಗದ ಕೆಲವೆಡೆ ಜನರು ಮೋಜು-ಮಸ್ತಿಗಾಗಿ ನಗರಕ್ಕೆ ಬರುತ್ತಿರುವ ದೂರುಗಳಿದ್ದು ಅಂಥವರ ಮೇಲೆ ಕಠಿಣಕ್ರಮ ಜರುಗಿಸುವುದಾಗಿ ಶಿರಸಿ ಡಿ.ವೈ.ಎಸ್ಪಿ. ಗೋಪಾಲಕೃಷ್ಣ ನಾಯಕ ಎಚ್ಚರಿಸಿದ್ದಾರೆ.
