

ರಾಜ್ಯದಲ್ಲಿ ಮೊಟ್ಟಮೊದಲ ಬಾರಿ ಅತಿಹೆಚ್ಚು ಕರೋನಾ ಸೋಂಕಿತರು ಇಂದು ಪತ್ತೆಯಾಗಿದ್ದಾರೆ.







ಒಂದೇ ದಿವಸ 36 ಜನರಲ್ಲಿ ಕೋವಿಡ್19 ಸೋಂಕು ಪತ್ತೆಯಾಗಿದೆ. ಈ ಕರೋನಾ ಬಾಧಿತರ ಚಿಕಿತ್ಸೆಗೆ ರಾಜ್ಯ, ದೇಶದಲ್ಲಿ ಅಪಾರ ನೆರವು ಹರಿದು ಬರುತ್ತಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ 11 ಕ್ಕೇರಿದರೂ ಅವರಲ್ಲಿ ಮೊದಲಿನ 9 ಜನರು ಗುಣಮುಖರಾಗಿದ್ದು ವಿಶೇಷ. ಈ ಕರೋನಾ ಭೀತಿ ಹಿನ್ನೆಲೆಯಲ್ಲಿ ಲಾಕ್‍ಡೌನ್‍ನಿಂದಾಗಿ ಬಡವರು, ದಿನಗೂಲಿ ಕೆಲಸದ ಜನರ ಜೀವನ ಕಷ್ಟಕರವಾಗಿದ್ದು ಇಂಥವರಿಗೆ ಸಿದ್ದಾಪುರದಲ್ಲಿ ಹೊಸೂರಿನ ಜನತಾ ಕಾಲನಿಯ ಕೆಲವು ಜನರಿಗೆ ಸ್ಥಳಿಯ ವಿನಾಯಕ ಸೌಹಾರ್ದ ಸಹಕಾರಿ ದಿನಬಳಕೆಯ ವಸ್ತುಗಳನ್ನು ವಿತರಿಸಿದೆ.
ಸಿದ್ದಾಪುರ ಎಂ.ಜಿ.ಸಿ. ಕಾಲೇಜಿನಲ್ಲಿ ರೆಡ್‍ಕ್ರಾಸ್, ಎನ್.ಎಸ್.ಎಸ್. ಗಳ ಸಹಯೋಗದಲ್ಲಿ 50 ಜನರಿಗೆ ದಿನಸಿ ವಿತರಿಸಿ, ಅಂಬೇಡ್ಕರ್ ಜಯಂತಿ ಆಚರಿಸಲಾಗಿದೆ.
ಶಿರಸಿ ವರದಿ-
ಶಿರಸಿಯ ಸ್ಕೋಡ್‍ವೇಸ್ ಸಂಸ್ಥೆ ಬಡ, ಗ್ರಾಮೀಣ ಜನರಿಗೆ ವಿತರಿಸುವ ಔಷಧ ಸಾಮಗ್ರಿಗಳ ವಿತರಣಾ ಜಾಥಾ ಕ್ಕೆ ವಿಧಾನಸಭೆಯ ಸ್ಫೀಕರ್ ವಿಶ್ವೇಶ್ವರ ಹೆಗಡೆ ಚಾಲನೆ ನೀಡಿದರು.
ಮಲೆನಾಡಿನ ಕಾಡುಪ್ರವೇಶ ನಿರ್ಬಂಧಕ್ಕೆ ಸರ್ಕಾರಕ್ಕೆ ಮನವಿ
ಮಂಗನಕಾಯಿಲೆಗೆ ಸಂಬಂಧಿಸಿದ 71 ಅತಿಸೂಕ್ಷ್ಮ ಪ್ರದೇಶಗಳಲ್ಲಿ ಕಡ್ಡಾಯವಾಗಿ ಚುಚ್ಚುಮದ್ದು ನೀಡಿಕೆ ಮತ್ತು ಮನೆಯಿಂದ ಕಾಡು ಪ್ರವೇಶಿಸುವುದನ್ನು ನಿರ್ಬಂಧಿಸುವಂತೆ ಸರ್ಕಾರದಿಂದ ಆದೇಶ ಮಾಡಲು ನಿರ್ಧರಿಸಲಾಗಿದೆ.
ಈ ಬಗ್ಗೆ ಇಂದು ಸಿದ್ದಾಪುರದಲ್ಲಿ ನಡೆದ ರಾಜ್ಯ ಜೀವವೈವಿಧ್ಯತಾ ಮಂಡಳಿ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದ ರಾ.ಜೀ.ಮಂ. ಅಧ್ಯಕ್ಷ ಅನಂತಹೆಗಡೆ ಆಶೀಸರ ಈ ಬಗ್ಗೆ ಸರ್ಕಾರದಿಂದ ಆದೇಶಮಾಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು. ಈ ಸಭೆಯಲ್ಲಿ ಅಧಿಕಾರಿಗಳು, ಸ್ಥಳಿಯ ಪತ್ರಕರ್ತರಿಂದ ಮಾಹಿತಿ ಪಡೆದ ಅನಂತ ಹೆಗಡೆ ಮಂಗನಕಾಯಿಲೆ ಪೀಡಿತರಿಗೆ ಉಚಿತ ಚಿಕಿತ್ಸೆ,ಸಿದ್ಧಾಪುರಕ್ಕೆ ಕೆ.ಎಫ್.ಡಿ. ಕ್ಲಿನಿಕ್ ಮಂಜೂರಿ,ರಾಜ್ಯದಾದ್ಯಂತ ಕೆ.ಎಫ್.ಡಿ. ರೋಗಿಗಳಿಗೆ ಏಕರೂಪದ ಅನುಕೂಲ,ಪರಿಹಾರಗಳ ಬಗ್ಗೆ ಸಲಹೆ ಬಂದಿದೆ. ಈ ಬಗ್ಗೆ ಸರ್ಕಾರಕ್ಕೆ ಮನವಿಮಾಡಿ ಸೂಕ್ತಕ್ರಮಕ್ಕೆ ಆಗ್ರಹಿಸುತ್ತೇವೆ. ಮಂಗನಕಾಯಿಲೆ ತೊಂದರೆ, ಅದರ ಪರಿಹಾರಗಳ ಬಗ್ಗೆ ಸಂಶೋಧನೆ ಮಾಡಿ ಶಿಘ್ರ ಪರಿಹಾರಕ್ಕೆ ಅಗತ್ಯ ವ್ಯವಸ್ಥೆಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದರು.
ವೈದ್ಯೋನಾರಾಯಣಹರಿ ಎಂದು ಕೈಮುಗಿದ ಸಚಿವ ಹೆಬ್ಬಾರ್!
ಜಗತ್ತು ಕರೋನಾ ಸಂಕಷ್ಟದಲ್ಲಿರುವ ಸಮಯದಲ್ಲಿ ಖಾಸಗಿ ವೈದ್ಯರು ತಮ್ಮ ಆಸ್ಫತ್ರೆ, ಕ್ಲಿನಿಕ್ ಗಳ ಬಾಗಿಲುಮುಚ್ಚಿರುವುದು ವೃತ್ತಿ ಧರ್ಮವಲ್ಲ ಎಂದು ಹೇಳಿರುವ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಉತ್ತರಕನ್ನಡದಲ್ಲಿ ಕರೋನಾ ಸಮಯದಲ್ಲಿ ಬಾಗಿಲು ಹಾಕಿರುವ ಖಾಸಗಿ ಆಸ್ಫತ್ರೆಗಳ ಬಾಗಿಲು ತೆರೆದು ಸಹಕರಿಸಲು ಕೈಮುಗಿದು ವಿನಂತಿಸಿದರು.
ಸಿದ್ದಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹೆಬ್ಬಾರ್ ಆಸ್ಫತ್ರೆ,ವೈದ್ಯರು, ಆರೋಗ್ಯ ವ್ಯವಸ್ಥೆಗಾಗಿ ಸರ್ಕಾರ ಉದಾರವಾಗಿ ನೆರವು ನೀಡಲಿದೆ. ಆದರೆ ಉತ್ತರಕನ್ನಡ ಜಿಲ್ಲೆ ಸೇರಿ ಕೆಲವೆಡೆ ಖಾಸಗಿ ಆಸ್ಫತ್ರೆಗಳು ಬಾಗಿಲು ಮುಚ್ಚಿವೆ. ಜನರ ಮನೆವೈದ್ಯರಾದ ಇವರೆಲ್ಲಾ ಬಾಗಿಲು ಮುಚ್ಚಿ ತಮ್ಮ ರೋಗಿಗಳು,ಆಪ್ತರಿಗೆ ಅನ್ಯಾಯಮಾಡಿದಂತಾಗುವುದಿಲ್ಲವೆ? ಎಂದು ಪ್ರಶ್ನಿಸಿದ ಸಚಿವರು ‘ದಯಮಾಡಿ ವೈದ್ಯರು ತಮ್ಮ ವೃತ್ತಿಧರ್ಮ ಪಾಲಿಸಬೇಕು. ಸಚಿವನಾಗಿ ನಾನು ಜನರ ಪರವಾಗಿ ಅವರಿಗೆ ಕೈ ಮುಗಿದು ವಿನಂತಿಸುತ್ತೇನೆ. ವೈದ್ಯರು ಕೆಲಸಮಾಡಿ,ಆಸ್ಫತ್ರೆಗಳನ್ನು ತೆರೆದಿಡಿ,ನಮ್ಮ ನೆರವು ಬೇಕಾದರೆ ಕೇಳಿ, ಆದರೆ ಈ ಸಂಕಷ್ಟದ ಸಮಯದಲ್ಲಿ ಆಸ್ಫತ್ರೆ ಬಾಗಿಲುಮುಚ್ಚಿ ಜನರಿಗೆ ಅನ್ಯಾಯ ಮಾಡಬೇಡಿ ಎಂದು ವಿನಂತಿಸಿದರು.
