ಕೀಳು ಟೀಕೆಗೆ ಗುರಿಯಾದ ಸೋನಿಯಾರ ಬಗ್ಗೆ ಲಂಕೇಶರು ಹೀಗಂದಿದ್ದರು…

ಸೋನಿಯಾ ಎಂಬ ಸ್ತ್ರೀ ಕಾರಂಜಿ
“ಘಜ್ನಿ ಮಹಮದ್, ತೈಮೂರ್‍ನ ಅನುಯಾಯಿಗಳು ಗಾಂಧೀಜಿಯನ್ನು ಕೊಂದದ್ದು, ಈ ನಾಡಿನ ಮುಸ್ಲಿಂ ಜನಾಂಗದ ದೇವಸ್ಥಾನವನ್ನು ಒಡೆದು ಬೀಳಿಸಿದ್ದು, ಮುಂಬೈನಂಥ ನಗರದಲ್ಲಿ ಅಮಾಯಕ ಅಲ್ಪಸಂಖ್ಯಾತರನ್ನು ಸುತ್ತುವರಿದು ಹಿಂಸಿಸಿ, ಅಂಗಡಿಗಳನ್ನು ಲೂಟಿ ಮಾಡಿದ್ದು ಇವತ್ತು ಐತಿಹಾಸಿಕ ದಾಖಲೆಯಾಗಿದೆ; ಗಲ್ಲಿಗೇರಬೇಕಾದ, ಜೈಲಲ್ಲಿ ಕೊಳೆಯುತ್ತಿರಬೇಕಾದ ಇಂಥವರು ಇವತ್ತು ಈ ರಾಷ್ಟ್ರದ ಆಡಳಿತ ಸೂತ್ರಗಳನ್ನು ಹಿಡಿದುಕೊಳ್ಳುವ ಮಾತಾಡುತ್ತಿರುವುದು ಭಾರತ ತಲುಪಿರುವ ಕರುಣಾಜನಕ ಸ್ಥಿತಿಯನ್ನು ತೋರುತ್ತದೆ. ಕೇಡಿಗಳನ್ನು ಹಿಡಿದು ಶಿಕ್ಷಿಸುವ ಬದಲು ಅವರು ದಿಗ್ವಿಜಯ ಸಾಧಿಸಿದಂತೆ ಆರತಿ ಬೆಳಗುತ್ತಿರುವುದು ವಿಚಿತ್ರವಾಗಿದೆ. ಯಾರೂ ಯಾವ ದೇಶವನ್ನು ನೋಡಕೂಡದು, ಕೋಶವನ್ನು ಓದಕೂಡದು, ಮೌಢ್ಯದಿಂದ ಹೊರಬರಕೂಡದು ಎಂದು ಇವತ್ತಿಗೂ ಹೇಳುತ್ತಿರುವ ಈ ಸಮಾಜದ್ರೋಹಿ, ಜೀವದ್ರೋಹಿಗಳು ಸಾವಿರಾರು ವರ್ಷಗಳಿಂದ ಈ ದೇಶವನ್ನು ಜಾತಿಪದ್ಧತಿಯಲ್ಲಿ ಹೂತುಹಾಕಿದ್ದು ಕಣ್ಣಿದ್ದು ನೋಡಬಲ್ಲವರಿಗೆ ಗೊತ್ತಿದೆ. ಇಂಥ ವಂಚಕರು ಸೋನಿಯಾ ತರಹದ ಮಹಿಳೆಯನ್ನು ವಿದೇಶದವಳೆಂದು ಹೀಯಾಳಿಸುವುದು ಇವರ ಪರಂಪರೆಗೆ ತಕ್ಕಂತಿದೆ.”
“ಈ ದೇಶದಲ್ಲಿಯೇ ಇದ್ದು ಇಲ್ಲಿಯ ಜನಸಮುದಾಯದ ದುರಂತ, ಸೋಲು, ಸಾವು ಎಲ್ಲವನ್ನೂ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡ, ಇಲ್ಲಿಯ ಜನರ ಅಸಹಾಯಕ ಸ್ಥಿತಿಯನ್ನೇ ತಮ್ಮ ಏಳ್ಗೆಗೆ ಉಪಯೋಗಿಸಿಕೊಂಡ ಪೂರ್ಣಯ್ಯಗಳೆಂಬ ದುಷ್ಟರು ನಿಜವಾಗಿಯೂ ಪರದೇಶಿಗಳು; ಇಲ್ಲಿಯ ಒಬ್ಬ ವಿಮಾನ ಚಾಲಕನನ್ನು ವರಿಸಿ ಆತನನ್ನು ರಾಜಕೀಯದಿಂದ ಹೊರಗಿಡಲು ಯತ್ನಿಸಿ ವಿಫಲವಾಗಿ ಸಾವು, ನೋವು, ದುಃಖದಲ್ಲಿ ಬೆಂದು ಹೋಗಿ ಇವತ್ತು ಗಾಂಧೀಜಿಯ ಮಾನವೀಯತೆಯನ್ನು ಸಾರ್ವಜನಿಕ ಜೀವನಕ್ಕೆ ತರಲು ಯತ್ನಿಸುತ್ತಿರುವ ಸೋನಿಯಾ ಈ ನಾಡಿನ ಸೊಸೆ, ಇಲ್ಲಿಯ ಹೆಮ್ಮೆಯ ಹೆಣ್ಣುಮಗಳು. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಈ ಸೋನಿಯಾ ಅತ್ತೆ ಇಂದಿರಾಗಿಂತ, ಪತಿ ರಾಜೀವ್‍ಗಿಂತ ಜಾಣೆ; ಅವರಿಬ್ಬರೂ ಕೆಟ್ಟದಾಗಿ ಅರಚಬಹುದಾಗಿದ್ದ ಸಂದರ್ಭದಲ್ಲಿ ಪಶ್ಚಿಮದ ಖಚಿತತೆ, ಕುಶಲತೆ, ತೀವ್ರತೆ ತೋರುತ್ತಿರುವ ಸೋನಿಯಾ ನಿಜವಾದ ನಾಯಕಿಯಾಗಿ ರೂಪುಗೊಳ್ಳುವ ಸಾಧ್ಯತೆಯಿದೆ. ಈಕೆ ಕೇವಲ ಹತ್ತು ದಿನದಲ್ಲಿ ಭಾರತದ ರಾಜಕೀಯಕ್ಕೆ ಮಿಂಚಿನ ಸಂಚಾರ ಮೂಡಿಸಿರುವುದು ಬಿಜೆಪಿಗಳಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ.”
ಫೆಬ್ರವರಿ 11, 1998

ಪರಕೀಯ ವಾಜಪೇಯಿ ನಮ್ಮ ಹೆಣ್ಣುಮಗಳು ಸೋನಿಯಾ

“ಮಾಸ್ತಿಯವರು ತುಂಬ ಸುಶಿಕ್ಷಿತರಾಗಿದ್ದರು. ಆದರೆ ಅವರಿಗೆ ಭಾರತೀಯ ಸಮಾಜದಲ್ಲಿರುವ ಅನ್ಯಾಯಗಳು, ಶೋಷಣೆ, ಜಾತಿಪದ್ಧತಿ, ಪ್ರಚ್ಛನ್ನ ದಬ್ಬಾಳಿಕೆ- ಯಾವುದೂ ಕಾಣಿಸುತ್ತಿರಲಿಲ್ಲ. ಹಾಗೆಯೇ ಬ್ರಾಹ್ಮಣೇತರರ ಮೌಢ್ಯದ ಸೂಕ್ಷ್ಮಗಳು, ಅಪಾಯಗಳೂ ತಿಳಿಯುತ್ತಿರಲಿಲ್ಲ. ಅವರ ಪ್ರಕಾರ ವಸ್ತುನಿಷ್ಠೆ ಯಾವುದೆಂದರೆ, ಈಗಿರುವ ವ್ಯವಸ್ಥೆಯನ್ನು ಕಿಂಚಿತ್ತೂ ಕೆಡದಂತೆ ಕಾಪಾಡಿಕೊಂಡು ಬರುವುದು. ಮಾಸ್ತಿಯವರ ವಸ್ತುನಿಷ್ಠೆಯ ಸಿದ್ಧಾಂತವನ್ನು ಒಪ್ಪಿಕೊಂಡರೆ ಮಾತ್ರ ಅವರು ಭಗವದ್ಗೀತೆಗೆ ನೀಡುವ ಅರ್ಥವನ್ನು ಒಪ್ಪಬಹುದು. ಅವರ ಪ್ರಕಾರ ಧರ್ಮ, ಸ್ವಧರ್ಮ, ಆತ್ಮ, ಪರಮಾತ್ಮ ಮುಂತಾದವೆಲ್ಲ ಎಂದೂ ಬದಲಾಗದ ವಸ್ತುಗಳು; ಧರ್ಮ ಜಾತಿಯಾಗಿಯೂ ವರ್ಗವಾಗಿಯೂ ಧರ್ಮವಾಗಿಯೂ ಬರುತ್ತದೆ. ಹಾಗಾಗಿಯೇ ಇಲ್ಲಿ ಕಂದಾಚಾರಿಯೊಬ್ಬನನ್ನು ಧರ್ಮವಂತ ಎಂದು ಕರೆಯುವುದು ಸುಲಭವಾಗುತ್ತದೆ.

ಹಾಗೆಯೇ ಸೋನಿಯಾ ಇಟಾಲಿಯನ್ ಹೆಣ್ಣುಮಗಳು ಎಂಬ ಕಾರಣಕ್ಕೆ ನಮ್ಮ ಧರ್ಮಕ್ಕೆ ಸೇರಿದವಳಲ್ಲ, ನಮ್ಮ ಜೀವನಕ್ರಮದಿಂದ ಬಂದವಳಲ್ಲ ಎಂದು ವಾದಿಸುವುದು ಸುಲಭವಾಗುತ್ತದೆ. ಇದು ಶೋಷಕರ ಮಾರ್ಗ, ಸುಳ್ಳರ ದಾರಿ. ಯಾರೂ ಸಮುದ್ರವನ್ನು ದಾಟಿ ಹೊರದೇಶಗಳಿಗೆ ಹೋಗದಿದ್ದರೆ, ಯಾರೂ ಹೊರದೇಶದಿಂದ ಇಲ್ಲಿಗೆ ಬರದಿದ್ದರೆ ಇಲ್ಲಿ ತಾಳೆಗರಿಯ ಮೂಲಕ ವಂಚಿಸುತ್ತಾ ಹೋಗಬಹುದು. ಈ ಪರಕೀಯ ಎಂಬ ಮಾತನ್ನೇ ತೆಗೆದುಕೋ. ನನ್ನ ಪ್ರಕಾರ ಇಲ್ಲಿಯ ಪ್ರಕೃತಿ, ಜನ, ಸಂಪತ್ತು, ಆತ್ಮಗೌರವ ಇವೆಲ್ಲವುಗಳ ಬಗ್ಗೆ ಯಾವುದೇ ಪ್ರೀತಿ, ಗೌರವ ಇಲ್ಲದವನು ಪರಕೀಯ. ಇಂಥ ಪರಕೀಯತೆಗೆ ಉದಾಹರಣೆಯಾಗಿ ನಾನು ದಿವಾನ್ ಪೂರ್ಣಯ್ಯನವರ ಬಗ್ಗೆ ಹೇಳುತ್ತಿರುತ್ತೇನೆ. ಮೈಸೂರು ರಾಜ್ಯದ ಸೋಲು, ಟಿಪ್ಪುವಿನ ಸಾವು, ಇಂಗ್ಲಿಷರ ದಬ್ಬಾಳಿಕೆ ಎಲ್ಲವೂ ಈ ದೇಶದ ಚೈತನ್ಯವನ್ನು ಮುರಿಯುತ್ತಿದ್ದಾಗ ಪೂರ್ಣಯ್ಯನವರು ದಿವಾನ ಸ್ಥಾನದಲ್ಲಿ ನೆಮ್ಮದಿಯಾಗಿದ್ದರು; ಆದರೆ ಫ್ರೆಂಚರ ದೂಬಾಯಿ ಪಾದ್ರಿ ಸಾವಿರಾರು ಜನರಿಗೆ ನೆರವಾದ; ಸಿಡುಬು ಬಂದಾಗ ಲಸಿಕೆ ಹಾಕಿಸಿ ಜೀವ ಉಳಿಸಿದ. ಇಲ್ಲಿಯ ಅನಕ್ಷರತೆ, ಅಸಹಾಯಕತೆಯನ್ನು ತಮ್ಮ ವೈಭವಕ್ಕಾಗಿ ಬಳಸಿಕೊಂಡ ಪೂರ್ಣಯ್ಯ ಈ ದೇಶದವರು, ಇಲ್ಲಿಯ ಜನರನ್ನು ಪ್ರೀತಿಸಿ ಪೊರೆದ ದೂಬಾಯಿ ಪಾದ್ರಿ ಪರಕೀಯ ಎಂದು ನಾನು ನಂಬುವುದಿಲ್ಲ. ಆದ್ದರಿಂದಲೇ ನನ್ನ ದೃಷ್ಟಿಯಲ್ಲಿ ಪೂರ್ಣಯ್ಯ ಪರಕೀಯ, ವಿಶ್ವೇಶ್ವರಯ್ಯ ಸ್ವಕೀಯ, ಅನ್ಯಜಾತಿಯ ದೇವಾಲಯ ಬೀಳಿಸುವ ಅಡ್ವಾಣಿ, ವಾಜಪೇಯಿಗಳು ಪರಕೀಯ, ಸೋನಿಯಾ ಈ ದೇಶದ ಹೆಣ್ಣುಮಗಳು. ನಮ್ಮ ಜನಕ್ಕೆ ಎಲ್ಲ ದೇಶಗಳಿಂದ, ಎಲ್ಲ ಬಗೆಯ ಜನರಿಂದ ಆರ್ಥಿಕ ನೆರವು, ಬೆಚ್ಚನೆಯ ಪ್ರೀತಿ, ವೈಜ್ಞಾನಿಕ ದೃಷ್ಟಿ, ಆಧುನಿಕ ಧೋರಣೆ ಬೇಕಾಗಿದೆ.”
ಮಾರ್ಚ್ 4, 1998 (ಆಧಾರ-ನಾಗೌ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ‌ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ೨೪ ಗಂಟೆಗಳಲ್ಲಿ ನಿರಂತರ ಮಳೆಯಾಗಿದೆ. ಇದರ ಪರಿಣಾಮ ಶಿರಸಿ-ಅಂಕೋಲಾ ಮಾರ್ಗದ ಮಧ್ಯೆ ಗುಡ್ಡ...

Recommended For You

About the Author: Kanneshwar Naik

Leave a Reply

Your email address will not be published. Required fields are marked *