ಕರೋನಾ ಲಾಕ್‍ಡೌನ್ ನಿರ್ಬಂಧವನ್ನು ಹಂತಹಂತವಾಗಿ ಕಡಿತಗೊಳಿಸಲಾಗುತ್ತಿದೆ. ಕೇಂದ್ರಸರ್ಕಾರ ಶುಕ್ರವಾರ ಪ್ರಕಟಿಸಿರುವ ವಿನಾಯಿತಿಗಳಲ್ಲಿ ಗ್ರಾಮೀಣ ಭಾರತದ ಕೃಷಿ-ಸಹಕಾರಿ ಉತ್ಫನ್ನ,ಸಂಸ್ಕರಣೆ,ಮಾರಾಟಕ್ಕೆ ಹೆಚ್ಚಿನ ರಿಯಾಯತಿ ಪ್ರಕಟಿಸಿದೆ. ಕಡಿಮೆ ಮಾನವಸಂಪನ್ಮೂಲ ಬಳಸಿ ಈ ವ್ಯವಸ್ಥೆ ನಿರ್ವಹಿಸಲು ಸೂಚಿಸಲಾಗಿದೆ.
ಪೊಲೀಸ್ ವಾಹನದಲ್ಲಿ ಬಂದ ಆಗಂತುಕರು
ಲಾಕ್‍ಡೌನ್ ವೇಳೆ ಹುಬ್ಬಳ್ಳಿಯಲ್ಲಿ ತಂಗಿದ್ದ ಗೋಕರ್ಣಮೂಲದ ಕೆಲವರು ಪೊಲೀಸ್ ಜೀಪ್ ನಲ್ಲಿ ಊರುಸೇರಲು ವಿಫಲಪ್ರಯತ್ನ ಮಾಡಿದ ಘಟನೆ ಕುಮಟಾ ತಾಲೂಕಿನ ಗೋಕರ್ಣದಲ್ಲಿ ನಡೆದಿದ್ದು, ಹುಬ್ಬಳ್ಳಿಯಿಂದ ಪೊಲೀಸ್ ರಿಗೇ ಚಳ್ಳೆಹಣ್ಣು ತಿನ್ನಿಸಿದ್ದ ಮೂವರು ಈಗ ಗೋಕರ್ಣ ಪೊಲೀಸರ ಅತಿಥಿಯಾಗಿದ್ದಾರೆ. ಗೋಕರ್ಣ ಗ್ರಾ.ಪಂ. ಕರೋನಾ ಟಾಸ್ಕ್ ಫೋರ್ಸ್ ಪ್ರಯತ್ನದಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.
ದಾನ-ದೇಣಿಗೆ-
ಮುಖ್ಯಮಂತ್ರಿ ಕರೋನಾ ಪರಿಹಾರ ನಿಧಿಗೆ ಸಿದ್ಧಾಪುರ ಕೃಷಿ ಉತ್ಫನ್ನ ಮಾರುಕಟ್ಟೆ ಸಮೀತಿಯಿಂದ 15 ಲಕ್ಷ ರೂಪಾಯಿ ದೇಣಿಗೆ ನೀಡಿರುವುದಾಗಿ ಎ.ಪಿ.ಎಂ.ಸಿ. ಅಧ್ಯಕ್ಷ ಕೆ.ಜಿ.ನಾಗರಾಜ್ ಮತ್ತು ಕಾರ್ಯದರ್ಶಿ ಎಂ.ಜಿ.ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿ.ಜೆ.ಪಿ. ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ನೇತೃತ್ವದಲ್ಲಿ ಅವರ ಮನೆಯ ಆವರಣದಲ್ಲಿ ಅಬಲರು,ಬಡವರಿಗೆ ದಿನಬಳಕೆ ಸಾಮಗ್ರಿ ವಿತರಿಸಿದರು.
ಸಿದ್ದಾಪುರ ತಾಲೂಕಿನ ಅಡಿಕೆ ವರ್ತಕರ ಸಂಘ ನೀಡಿದ ಒಂದು ಲಕ್ಷ ರೂಪಾಯಿಗಳ ಮೌಲ್ಯದ ದಿನಬಳಕೆ ವಸ್ತುಗಳ ಸಾಮಗ್ರಿಗಳ ಕಿಟ್ ಅನ್ನು ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಫಲಾನುಭವಿಗಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರ್ಕಾರ ಮತ್ತು ಸಂಘ-ಸಂಸ್ಥೆಗಳು,ದಾನಿಗಳ ನೆರವಿನಿಂದ ಯಾರಿಗೂ ಹಸಿವೆಯಲ್ಲಿರದಂತೆ ವ್ಯವಸ್ಥೆ ಮಾಡುತಿದ್ದೇವೆ ಎಂದರು.
ಜನಸಾಮಾನ್ಯರೊಂದಿಗೆ ಪ್ರಾಂಶುಪಾಲರ ಮೇಲೂ ಕೇಸು ದಾಖಲು!
ಉತ್ತರಕನ್ನಡ ಜಿಲ್ಲೆಯಲ್ಲಿ ಕರೋನಾ ಪ್ರಖರತೆ ಕಡಿಮೆಯಾಗುತ್ತಿರುವಂತೆ ಕರೋನಾ ನಿಯಮ, ನಿಶೇಧಾಜ್ಞೆ ಷರತ್ತುಗಳನ್ನು ಉಲ್ಲಂಘಿಸುವವರ ಪ್ರಮಾಣ ಹೆಚ್ಚುತ್ತಿದೆ. ಸಿದ್ಧಾಪುರದ ಪೊಲೀಸರು ಇಂದು ಒಟ್ಟೂ 4 ಜನರ ಮೇಲೆ ಪ್ರಕರಣ ದಾಖಲಿಸಿದ್ದು 3 ಜನರು ತಮಿಳುನಾಡಿನಿಂದ ಸಿದ್ದಾಪುರಕ್ಕೆ ಬಂದ ತಾಲೂಕಿನ ಶೀಗೇಹಳ್ಳಿಯ ಜನರಾಗಿದ್ದಾರೆ.