ಕೊರೋನಾ ವೈರಸ್ ತಡೆಗೆ ಮೌಢ್ಯ ಆವರಿಸಿದ್ದು, ವ್ಯಕ್ತಿಯೋರ್ವ ತನ್ನ ನಾಲಿಗೆಯನ್ನು ಕತ್ತರಿಸಿಕೊಂಡಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಕೊರೋನಾ ವೈರಸ್ ತಡೆಗೆ ಮೌಢ್ಯ ಆವರಿಸಿದ್ದು, ವ್ಯಕ್ತಿಯೋರ್ವ ತನ್ನ ನಾಲಿಗೆಯನ್ನು ಕತ್ತರಿಸಿಕೊಂಡಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ. ಮಧ್ಯಪ್ರದೇಶ ಮೂಲದ ವ್ಯಕ್ತಿ ರವೀಂದರ್ ಶರ್ಮಾ, ನಾಲಿಗೆ ಕತ್ತರಿಸಿಕೊಂಡಿರುವವರಾಗಿದ್ದು, ಗುಜರಾತ್ ನ ಭವಾನಿ ಮಾತಾ ದೇವಾಲಯದಲ್ಲಿ 15 ತಿಂಗಳಿನಿಂದ ಕೆಲಸ ಮಾಡುತ್ತಿದ್ದರು.
ರವಿಂದರ್ ಶರ್ಮಾಗೆ ದೇವಿ ಕನಸಿನಲ್ಲಿ ಬಂದು ತಮ್ಮ ನಾಲಿಗೆ ಕತ್ತರಿಸಿಕೊಂಡರೆ ಕೊರೋನಾ ವೈರಸ್ ತೊಲಗಲಿದೆ ಎಂದು ಹೇಳಿದ್ದಳಂತೆ, ಇದನ್ನೇ ನಿಜವೆಂದು ಭಾವಿಸಿ ನಾಂದೇಶ್ವರಿ ಮಾತಾ ದೇವಾಲಯಕ್ಕೆ ತೆರಳಿದ ವ್ಯಕ್ತಿ ಬ್ಲೇಡ್ ನಿಂದ ತನ್ನ ನಾಲಿಗೆ ಕೊಯ್ದುಕೊಂಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಕುಸಿದುಬಿದ್ದಿದ್ದು, ಬಿಎಸ್ಎಫ್ ಯೋಧರು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈರೀತಿಯ ಮೌಢ್ಯಗಳಿಗೆ ಶರಣಾಗದಂತೆ ಬಿಎಸ್ ಎಫ್ ಪತ್ರಿಕಾ ಪ್ರಕಟಣೆ ಮೂಲಕ ಸ್ಥಳೀಯರಲ್ಲಿ ಮನವಿ ಮಾಡಿದ್ದು, ಕೋವಿಡ್-19 ತಡೆಗೆ ಸರ್ಕಾರಿ ನಿಯಮಗಳು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ಸಧ್ಯಕ್ಕೆ ಇರುವ ಪರಿಹಾರವೆಂದು ಹೇಳಿದೆ. (source-kp)