

ಕರೋನಾ ಗಲಾಟೆ, ಈ ಕರೋನಾ ಮುಂದಿಟ್ಟುಕೊಂಡು ಮತೀಯ ಕಲಹ ತಂದಿಡುತ್ತಿರುವ ಉಳ್ಳವರ ಅಟ್ಟಹಾಸದ ನಡುವೆ ಬಡವರು, ಜನಸಾಮಾನ್ಯರು ತಮ್ಮ ಅಗತ್ಯ,ಅವಶ್ಯ,ಅನಿವಾರ್ಯ ಕೆಲಸಗಳೂ ಆಗದೆ ಜನತೆ ಗೋಳಾಡುತಿದ್ದಾರೆ. ಇಂಥ ಸ್ಥಿತಿಯಲ್ಲಿ ಅಲ್ಲಲ್ಲಿ ತಮ್ಮ ಆಸೆ, ನಿರೀಕ್ಷೆಗಳನ್ನು ನಿರ್ಲಕ್ಷಿಸಿ ಜನಸಾಮಾನ್ಯರು ತಮ್ಮ ಅನಿವಾರ್ಯ ಕಾರ್ಯಕ್ರಮಗಳನ್ನು ನಡೆಸುತಿದ್ದಾರೆ.

ಇಂದು ಸಿದ್ಧಾಪುರದಲ್ಲಿ ಕೇವಲ 10-15 ಜನರು ಸೇರಿ ಸರಳವಾಗಿ ಮದುವೆ ನೆರವೇರಿಸುವ ಮೂಲಕ ಕರೋನಾ ಕಾರಣದಿಂದ ಸರಳಮದುವೆಗೆ ಸಹಕರಿಸಿದರು. ಸಿದ್ದಾಪುರದ ಚನಮಾವಿನ ಪ್ರಶಾಂತ ಮತ್ತು ಪಲ್ಲವಿ ಇಂದು ಹಸೆಮಣೆ ಏರಿದ ಜೋಡಿ.
ಕರೋನಾ ಕಾರಣದಿಂದ ಸಂಬಂಧಿಗಳು, ಗ್ರಾಮಸ್ಥರು ದೂರದಿಂದಲೇ ಈ ನವ ಜೋಡಿಗೆ ಆಶೀರ್ವದಿಸಿದರು. ಸರಳಮದುವೆ,ವೆಚ್ಚವಿಲ್ಲದ ಕಾರ್ಯಕ್ರಮಗಳನ್ನು ಮಾಡುವ ರೂಢಿ-ಅಭ್ಯಾಸವಿಲ್ಲದ ಮಲೆನಾಡಿನ ಜನತೆ ಕರೋನಾ ಕಾರಣದಿಂದ ಸರಳವಾಗಿ ಮದುವೆ,ಕಾರ್ಯಕ್ರಮ,ಮುಂಜಿ ಮುಂತಾದ ಕಾರ್ಯಕ್ರಮ ಮಾಡುತಿದ್ದಾರೆ. ಮಂತ್ರಮಾಂಗಲ್ಯ,ಸರಳ ವಿವಾಹ ಪ್ರತಿಪಾದಿಸುವ ಸಮಾಜಮುಖಿ ಈ ನವಜೋಡಿಗೆ, ಇಂಥ ಸರಳಮದುವೆ,ಸಭೆ-ಸಮಾರಂಭ ಮಾಡುವವರನ್ನೂ ಅಭಿನಂದಿಸುತ್ತದೆ.
ಪ್ರಶಾಂತ-ಪಲ್ಲವಿಯಂಥ ಸರಳ ವಿವಾಹದ ಜೋಡಿಗಳ ಸಂಖ್ಯೆ ಸಹಸ್ರವಾಗಲಿ,ಅಂಥವರೆಲ್ಲರಿಗೂ ಶುಭವಾಗಲಿ.
