

ಏ.20 ರ ನಂತರ ಕಠಿಣ ನಿಯಮಗಳ ಸಡಿಲಿಕೆ ಆಗಿ ಲಾಕ್ಡೌನ್ ಮತ್ತು ನಿಶೇಧಾಜ್ಞೆ ತನ್ನ ಕಸುವು ಕಳೆದುಕೊಳ್ಳಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ.



ಕೋವಿಡ್19 ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಮೇ 03ರ ವರೆಗೆ ಲಾಕ್ಡೌನ್ ವಿಸ್ತರಿಸಲಾಗಿದೆ. ಈ ಲಾಕ್ ಡೌನ್ ನಿಯಮ,ಕಟ್ಟುಪಾಡು ಏ.20 ರ ನಂತರ ಸಡಿಲವಾಗಬಹುದು ಎಂದು ನಿರೀಕ್ಷೆ ಇತ್ತು. ಆದರೆ ಇಂದು ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಮೇ03 ರ ವರೆಗೆ ಲಾಕ್ ಡೌನ್ ಮತ್ತಷ್ಟು ಬಿಗಿಗೊಳಿಸುತ್ತೇವೆ ಎಂದು ಪ್ರಕಟಿಸಿದ್ದಾರೆ.
ಉ.ಕ. ವರದಿ-
ಉತ್ತರಕನ್ನಡ ಜಿಲ್ಲೆಯಲ್ಲಿ 11 ಜನರಲ್ಲಿ ದೃಢಪಟ್ಟ ಕರೋನಾ ಸೋಂಕು ಚಿಕಿತ್ಸೆಯ ನಂತರ ಬಹುತೇಕ ಎಲ್ಲರಲ್ಲೂ ನಾಶವಾಗಿದೆ. ಈ 11 ಜನರೂ ಗುಣಮುಖರಾಗಿದ್ದು ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಾಗಿದೆ.
ಈ ಬಗ್ಗೆ ಇಂದು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಹರೀಶ್ಕುಮಾರ್ ಕೆ. ಜಿಲ್ಲೆಯ 11 ಕೋವಿಡ್ ಸೋಂಕಿತರು ಗುಣಮುಖರಾಗಿದ್ದಾರೆ. ಸುರಕ್ಷತೆ, ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮೇ 03 ರ ವರೆಗೆ ಲಾಕ್ಡೌನ್ ಮುಂದುವರಿದಿದ್ದು ನಿಯಮ-ನಿಬಂಧನೆಗಳನ್ನೂ ಬಿಗುಮಾಡಲಾಗಿದೆ ಎಂದಿದ್ದಾರೆ.
