ಕರೋನಾ ಸಮಯದಲ್ಲಿ ಕಾಶಿಂ ಸಾಬರ ನೆನಪು

ಕಾಶಿಂ ಮತ್ತು ನನ್ನ ರೋಲ್ ನಂಬರ್ ಹಿಂದೆ-ಮುಂದೆ ಇದ್ದುದರಿಂದ ಕಾಶಿಂ ತನಗೆ ನಾನು ಪರೀಕ್ಷೆಯಲ್ಲಿ (ಕಾಪಿ) ನನ್ನ ಉತ್ತರಪತ್ರಿಕೆ ನೋಡಿ ಬರೆಯಲು ಬಿಟ್ಟರೆ ಮಾತ್ರ ಉರ್ದು ಕಲಿಸುವುದಾಗಿ ಭರವಸೆ ನೀಡಿದ್ದ!
ಈ ಉರ್ದು ಕಲಿಯುವ ಆಸಕ್ತಿ ಹಿಂದೆ ಆಗತಾನೆ ಕಾರವಾರಕ್ಕೆ ತೆರಳಿದ್ದ ನನಗೆ ಹಿಂದಿ,ಇಂಗ್ಲೀಷ್, ಮರಾಠಿ,ಕೊಂಕಣಿ ಬಾರದ ಬಾಷಾವೈಕಲ್ಯವೇ ಪ್ರಬಲಕಾರಣವಾಗಿತ್ತು.

ಕಾಶಿಂ ಕಾರವಾರದ ಒಬ್ಬ ಮೆಕ್ಯಾನಿಕ್‍ರ ಮಗ ಅವನಿಗೆ ಉರ್ದು,ಕೊಂಕಣಿ, ಮರಾಠಿ ನೀರುಕುಡಿದಷ್ಟು ಸುಲಭವಿತ್ತು. ಈ ಕಾಶಿಂ ಮತ್ತು ರೋಹಿದಾಸ, ನಾಗೇಶ್ ರೆಲ್ಲಾ ನನಗೆ ಬಹುಶೃದ್ಧೆ ಯಿಂದಲೇ ಕೊಂಕಣಿ, ಮರಾಠಿ,ಹಿಂದಿಗಳ ಅವಾಚ್ಯ(ವಾಕ್ಯ)ಭಾಷೆ ಕಲಿಸಿದ್ದರು!
ನಾನೋ ಸಿದ್ಧಾಪುರದ ಪಕ್ಕಾ ಹಳ್ಳಿಯ ಕನ್ನಡಪ್ಪ. ಕಾರವಾರದಲ್ಲಿ ನಾನು ಉಳಿಯಬೇಕೆಂದರೆ…ನನಗೆ ಈ ಹಿಂದಿ,ಉರ್ದು,ಮರಾಠಿ,ಕೊಂಕಣಿ ಕಲಿಕೆ ಅನಿವಾರ್ಯವಾಗಿತ್ತು. ಕ್ರೀಡೆಗಳ ಬಗ್ಗೆ ಅಷ್ಟೆನೂ ಆಸಕ್ತಿಇಲ್ಲದ ನನಗೆ ವಾರದ ಪಿ.ಇ. ಪೀರಿಯಡ್ ಗಳು ಆಟದ ಮೈದಾನದ ಮರಳಿನಲ್ಲಿ ಕನ್ನಡ ಅಕ್ಷರಗಳಲ್ಲಿ ಕೊಂಕಣೆ,ಮರಾಠಿ ಬರೆಯುತ್ತಾ ಭಾಷೆ ಕಲಿಯುವ ಅವಕಾಶದಂತಾಗಿತ್ತು.
ಅಂತೂ ಇಂತೂ ಆಗತಾನೆ ಭಾಷೆ ಮೊಳಕೆಯೊಡೆಯಲು ಪ್ರಾರಂಭಿಸಿರಬೇಕು ಆಗಲೇ ಒಂದು ಕಿರು ಪರೀಕ್ಷೆ ವಕ್ಕರಿಸಿಬಿಟ್ಟಿತ್ತು. ಎಂದಿನಂತೆ ನಾನು ಉತ್ಸಾಹದಿಂದ ಬರೆದೆ. ಕಾಶಿಂ ನನ್ನ ಉತ್ತರಗಳನ್ನು ಕಾಪಿ ಮಾಡಲು ಪ್ರಯತ್ನಿಸಿ ವಿಫಲನಾದ, ಅಲ್ಲಿಂದ ಕಾಶಿಂನ ಉಚಿತ ಉರ್ದು ಪಾಠ ನಿಂತೇ ಬಿಟ್ಟಿತು.
ಕಾಪಿ ಹೊಡೆಯಲು ಅವಕಾಶವಾಗದ ಕಾರಣಕ್ಕೆ ನನ್ನಂಥ ಹಳ್ಳಿಹುಡುಗನಿಗೆ ಉರ್ದು ಕಲಿಸಲು ಬೆನ್ನತೋರಿದ ಕಾಶಿಂ ನನ್ನ ಪಾಲಿಗೆ ಒಂಥರಾ ಭಯೋತ್ಪಾದಕ! ಎನಿಸಿಬಿಟ್ಟಿದ್ದ, ಇದರೊಂದಿಗೆ ಶಾಲೆಯಲ್ಲಿ ನಮಗೆಲ್ಲಾ ಹಸಿವು ಕಾಡಿಸಲು ಪ್ರಾರಂಭಿಸುತಿದ್ದ ಸಮಯದಲ್ಲೇ ಮಧ್ಯಾಹ್ನ 12-30 ಗಂಟೆಯ ವೇಳೆಗೆ ಪಕ್ಕದ ಮುಸ್ಲಿಂರ ಮನೆಯಿಂದ ಹೊರಡುತಿದ್ದ ಬಿರ್ಯಾನಿ ಮಸಾಲೆವಾಸನೆ ನಮ್ಮ ಮೂಗಿಗೆ ಇರಿದು ಕಾಶಿಂ ಬಗ್ಗೆ ಇದ್ದ ನಮ್ಮ ವಿರೋಧ, ಉಪೇಕ್ಷೆ ಮತ್ತಷ್ಟು ಹೆಚ್ಚುತಿತ್ತು.
ಹೀಗೆ ಶಾಲೆಯಲ್ಲಿ ವಿನಾಕಾರಣ ನಮಗೆ ವಿರೋಧಿಯಾದ ಕಾಶಿಂ. ಇತ್ತೀಚಿನ 25 ವರ್ಷಗಳಲ್ಲಿ ಕಣ್ಣಿಗೆ ಬೀಳುವುದಿರಲಿ,ಫೇಸ್ ಬುಕ್, ಫೋನ್, ಮೊಬೈಲ್ಗಳಲ್ಲೂ ಕಾಣಸಿಕ್ಕಿಲ್ಲ.
ಈ ಅನುಭವಕ್ಕಿಂತ ಮೊದಲೇ ನಮ್ಮಪ್ಪ ಮನೆಯಲ್ಲಿ ಆಗೀಗ ಹೇಳುತಿದ್ದ ಮುಸ್ಲಿಂರು ಸತ್ತಾಗ ನಗುತ್ತಾರೆ, ಹುಟ್ಟಿದಾಗ ಅಳುತ್ತಾರೆ, ಉಲ್ಟಾಪುಲ್ಟಾ ಓದುತ್ತಾರೆ,ಎನ್ನುವ ತಪ್ಪುಗೃಹಿಕೆಯ ಮಾತು ಮುಸ್ಲಿಂರಲ್ಲಿ ನಮಗೆ ನಮಗರಿವಿಲ್ಲದೆ ವಿರೋಧದ ಭಾವನೆ ಹುರಿಗಟ್ಟುವಂತೆ ಮಾಡಿತ್ತು.
ಇಂಥ ಅನಾವಶ್ಯಕ ವಿಚಾರಗಳು ನಮ್ಮ ಮನಸ್ಸು ಕಲುಷಿತಗೊಳಿಸಲು ಕಾರಣ. ಬಾಲ್ಯದಲ್ಲಿ ಔಷಧಿಗೂನಮ್ಮೂರಲ್ಲಿಲ್ಲದ ಮುಸ್ಲಿಂ ರ ಬಗ್ಗೆ ನಮಗೆ ಯಾವುದೇ ಹಿತ-ಅಹಿತಗಳ ಅನುಭವವೇ ಇರಲಿಲ್ಲ.

ಆದರೆ ಕೆಲವರ ತಪ್ಪು ಗೃಹಿಕೆ, ಉದ್ದೇಶಿತ ಮುಸ್ಲಿಂ ಆಪಾದನೆಗಳೇ ಸತ್ಯ ಎಂದು ಹುಬೇ ಹುಬೇ ಎಂದು ನಂಬಿ ನಡೆಯುತಿದ್ದ ದಿನಗಳವು. ಕಾರವಾರದಲ್ಲಿ ನನ್ನ ಹತ್ತು ವರ್ಷಗಳ ಅನುಭವದಲ್ಲಿ ಎಲ್ಲಿಯೂ ಜಾತಿ-ಧರ್ಮಗಳ ವ್ಯತ್ಯಾಸ, ಕಹಿಅನುಭವಗಳೇ ತಟ್ಟಲಿಲ್ಲ. ಆದರೆ ಶಿರಸಿಯಲ್ಲಿ ಮುಸ್ಲಿಂಗಲ್ಲಿ ಡೇಂಜರ್, ಭಟ್ಕಳದಲ್ಲಿ ಚಿನ್ನದ ಪಳ್ಳಿ ಏರಿಯಾ ಭಯಾನಕ,ಹುಬ್ಬಳ್ಳಿಯಲ್ಲಿ ಕಮರಿಪೇಟೆ, ಬೆಂಗಳೂರಿನ ಶಿವಾಜಿನಗರ,ಆಜಾದ್ ನಗರ ಡೇಂಜರ್ ಎನ್ನುವ ನಮ್ಮವರ ಆರೋಪದ ಮಾತುಗಳಿದ್ದವಲ್ಲ ಅವು ಈ ಪ್ರದೇಶಗಳಲ್ಲೆಲ್ಲಾ ಭಯದಿಂದಲೇ ಓಡಾಡಿದ ಅಬ್ಬೇಪಾರಿಗಳಾದ ನಮ್ಮ ಅನುಭವಕ್ಕೇ ತಟ್ಟಲಿಲ್ಲ.
ಅಲ್ಲಿಂದ ಶಿರಸಿಗೆ ಬಂದ ದಿನಗಳಲ್ಲಿ ಅಲ್ಲಿಯ ಜಾತೀಯತೆ,ಮುಸ್ಲಿಂ ವಿರೋಧ ನನ್ನನ್ನು ಕಾಡದೆ ಇರಲಿಲ್ಲ. ಇಂಥ ಪೂರ್ವಾಗ್ರಹಗಳಿಂದ ವಾಹಿನಿಯೊಂದರ ಜಿಲ್ಲಾ ವರದಿಗಾರನಾದ ನನಗೆ ಎಲ್ಲರಂತೆ ಮುಸ್ಲಿಂ, ಕ್ರೈಸ್ತರ ಸ್ನೇಹ-ಸಂಪರ್ಕಗಳೂ ಆದವು.
ಕಾರವಾರದ ಕಾಶಿಂ ನಿಂದ ಪ್ರಾರಂಭಿಸಿ ಸಿದ್ದಾಪುರದ ಮುನಾವರ್, ಕುಮಟಾದ ಬೋಟ್ ಮೀನು ತರುತ್ತಿದ್ದ ದಾಹೂದ್,ಇಲಿಯಾಸ್,ನಾಶಿರ್,ಹಮೀದ್,ರಹಮತ್, ರೆಹಮಾನ್,ಸಹಪಾಠಿ ನಝೀರ್ ವರೆಗೆ ಅನೇಕ ಮುಸ್ಲೀಂರ ಸ್ನೇಹ-ಸಂಪರ್ಕಗಳಾಗಿವೆ. ಆದರೆ ಅವರ ಬಗ್ಗೆ ಸಾರ್ವಜನಿಕರು ಹೊಂದಿರುವ ಕಹಿಧೋರಣೆಗಳು, ತಪ್ಪುಗೃಹಿಕೆಗಳು ಯಾವುದೇ ಸಂದರ್ಭದಲ್ಲಿ ನನ್ನನ್ನು ಬಾಧಿಸಿಲ್ಲ.
ಇಂಥ ಕಹಿಸಮಾಜದೆದುರು ಹಾಸ್ಟೆಲ್ ವಿದ್ಯಾರ್ಥಿಗಳಾಗಿದ್ದ ನಮಗೆ ತಮ್ಮ ಹಬ್ಬಗಳಲ್ಲಿ ಮನೆಯಿಂದ ಕಟ್ಟಿತಂದು ಕೊಡುತಿದ್ದ ಸಿಹಿಪಾಯಸ, ಬಿರ್ಯಾನಿ ರುಚಿ ನೋಡಲು ಉದಾರವಾಗಿ ದಾನಮಾಡಿ ಸಂಬ್ರಮಿಸುತಿದ್ದ ನಮ್ಮ ಸಹಪಾಠಿಗಳಾದ ಮೊಬಿನಾ,ಪರ್ಜಾನರ ಮಾನವೀಯ ಅಂತ:ಕರಣ ನೆನಪಾಗುತ್ತದೆ.
ಹಬ್ಬದ ದಿವಸ ಕರೆದು ಊಟಹಾಕಿ ಖುಷಿಪಡುವ ಇಲಿಯಾಸ್, ಮುಜೀಬ್, ಅಜೀಜ್,ಸಲ್ಮಾನ್, ರಿಜ್ವಾನ್ ಎಲ್ಲಾ ನೆನಪಗುತ್ತಾರೆ.

ಮುಸ್ಲಿಂ ವಿಚಾರದಲ್ಲಿ ನಮಗೆ ಕೆಟ್ಟ ಅನುಭವಗಳು ಕಡಿಮೆ ಆದರೆ ನಮ್ಮ ಜೊತೆಯವರು, ನೆರೆ-ಹೊರೆಯವರು ಸಕಾರಣವೋ? ಅಕಾರಣವೋ? ವಿನಾಕಾರಣವೋ ಬೆಳೆಸಿಕೊಂಡ ಧಾರ್ಮಿಕದ್ವೇಶ ನಮ್ಮನ್ನು ಕಾಡುತ್ತದೆ.
ಬದುಕಿನಲ್ಲಿ,ಸಂದಿಗ್ಧ,ತೊಂದರೆ,ಅಪಾಯದ ಸಂದರ್ಭಗಳಲ್ಲೆಲ್ಲೂ ನಮಗೆ ದ್ರೋಹ ಬಗೆಯದ ಮುಸ್ಲಿಂ ರ ಬಗ್ಗೆ ವಿನಾಕಾರಣ ಕಹಿಭಾವನೆ ಹುಟ್ಟಿಹಾಕುವ ವ್ಯವಸ್ಥೆ ಎದುರು ಅಪಾರ ಪೂರ್ವಗ್ರಹಗಳನ್ನಿಟ್ಟುಕೊಂಡೇ ಕಾರವಾರದ ಕೆಲವು ಸ್ನೇಹಿತರು, ಭಟ್ಕಳದ ಇನಾಯತ್, ಸೈಯದ್ ಬರ್ಮಾವರ, ಅಂಕೋಲಾದ ಅಬ್ದುಲ್ ಖರೀಮ್, ಶಿರಸಿಯ ಅಬ್ದುಲ್ ಸೇರದಂತೆ ಅನೇಕ ಸಹೃದಯಿಗಳ ಮನೆಯ ಉಪ್ಪು ಉಂಡು, ಅವರಲ್ಲಿಲ್ಲದ ದೋಷ ಹುಡುಕುವುದುಹ್ಯಾಗೆ?
ಹುಬ್ಬಳ್ಳಿ-ಭಟ್ಕಳ,ಶಿವಮೊಗ್ಗ ಸೇರಿದ ಕರ್ನಾಟಕ, ಭಾರತದ ಅನೇಕ ಕಡೆ ಧಾರ್ಮಿಕ ಸಹಿಷ್ಣುಗಳಾದ ನಮ್ಮ ಮೂಲನಿವಾಸಿ ಮತಾಂತರಿ ಮುಸ್ಲಿಂರ ಬಗ್ಗೆ ಯಾರದೋ ಕಾರಣಕ್ಕೆ, ತಬ್ಲಘಿ ಅಥವಾ ಮತ್ಯ್ಯಾವುದೋ ಪಾದರಾಯಣಪುರದ ಕೆಲವು ಪುಂಡರ ಕಾರಣಕ್ಕೆ, ಅವರನ್ನು ವಿರೋಧಿಸುವ ಕೆಲವು ರಾಜಕೀಯ ಹಿತಾಸಕ್ತ, ಲಾಭಕೋರ ವಂಚಕ ಮತಾಂಧರ ದುರ್ಭೋದೆಗೆ ಸಿಕ್ಕು ಚಿನ್ನದಂಥ ಮನಸ್ಸಿನ ನಮ್ಮದೇ ಊರು,ಸರೀಕರ ಸ್ನೇಹ, ವಿಶ್ವಾಸ ಕಳೆದುಕೊಳ್ಳಬೇಕೆ?
ಮುಸ್ಲಿಂರು ನಮ್ಮ ದಲಿತರಂತೆ, ಅನೇಕ ಹಿಂದುಳಿದ ವರ್ಗಗಳ ಅವಿದ್ಯಾವಂತರಂತೆ ವಿಚಿತ್ರ ಹುಂಬರಿರಬಹುದು ಆದರೆ ಎದುರು ನಯವಾಗಿ ಮಾತನಾಡಿ ಹಿಂದಿನಿಂದ ಇರಿಯುವ,ಆಡುವ ಸೋಕಾಲ್ಡ್ ಸಂಪನ್ನರಂತೆ ನಮ್ಮವರಾಗಿ ನಮ್ಮವರಾಗದ ನಮ್ಮವರ ನಡುವೆ ನಮ್ಮವರು, ಪರರು, ಅವರಿವರೆನ್ನದ ಅನೇಕ ಮುಸ್ಲಿಂ ಸಹೋದರರೇ ನಮ್ಮವರಲ್ಲ ಎಂದು ನಾನ್ಹ್ಯಾಗೆ ದೂರಲಿ. ಇಂಥ ತಲ್ಲಣಗಳ ನಡುವೆ ನನ್ನದೊಂದು ಕವಿತೆಯನ್ನೂ ಓದಿ ಬಿಡಿ.

     ಅಪೇಕ್ಷೆ-

ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ
ಕರೋನಾ ಎನ್ನುವ ಖಾಯಿಲೆಗೆ ಸಿಕ್ಕು ಒದ್ದಾಡುತ್ತಿರುವ ಜನರನ್ನು ವಾಮಾಚಾರದಿಂದಾದರೂ
ವಾಸಿ ಮಾಡುವ ಮಾಂತ್ರಿಕರು ಬೇಕಾಗಿದ್ದಾರೆ.
ಹಸುಗೂಸು,ಎಳೆಶಿಸು, ಸಾಯುವ ಮುದುಕ, ಕಾಯುವ ವಾಚ್ಮನ್
ಎಲ್ಲರನ್ನೂ ಕಾಪಾಡುವ ದೇವರು ಬೇಕಾಗಿದ್ದಾರೆ.
ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ
ಕೋಟ್ಯಾಂತರ ಮುಖಗವಸು,ವೆಂಟಿಲೇಟರ್, ಔಷಧಿ,ತಯಾರಿಸಿ ಆರೈಕೆ ಮಾಡಿ
ವಿಶ್ವಗುರುವಾಗುವ ಒಬ್ಬನೇ ಒಬ್ಬ ಪ್ರಧಾನಿ ಬೇಕಾಗಿದ್ದಾರೆ.
ಎಲ್ಲರನ್ನೂ ನಡುಗಿಸಿ, ಎಲ್ಲರನ್ನೂ ಕರೋನಾದಿಂದ ರಕ್ಷಿಸುವ ಜಗತ್ತಿನ ದೊಡ್ಡಣ್ಣ ಒಬ್ಬ ಬೇಕಾಗಿದ್ದಾರೆ.
ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ.
ಹೋಮ,ಹವನ, ಜಪ,ತಪ, ಸಹಸ್ರನಾಮ, ಕೋಟಿ,ಕೋಟಿ ಮಂತ್ರ-ತಂತ್ರ,ಸಹಸ್ರನಾಮಾರ್ಚನೆ
ಎಲ್ಲವನ್ನೂ ಮಾಡಿ ಕರೋನಾದಿಂದ ಜಗತ್ತನ್ನು ಬಚಾವುಮಾಡುವ ಶುದ್ಧ ಧಾರ್ಮಿಕ ಪುರೋಹಿತರು ಬೇಕಾಗಿದ್ದಾರೆ.
ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ
ಉಚ್ಚೆಬೆಚ್ಚಗಾದರೆ, ಕನಸುಒಡೆದು ನಿದ್ದೆ ಹೋದರೆ..
ಭಸ್ಮ ಕೊಟ್ಟು ಎಲ್ಲವನ್ನೂ ಸರಿಮಾಡುವ ಗಾಡಿಗರೊಬ್ಬರು ಬೇಕಾಗಿದ್ದಾರೆ.
ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ.
ಸ್ನೇಹಕ್ಕೆ ಬದ್ಧ,ಸಮರಕ್ಕೆ ಸಿದ್ಧ ಎನ್ನುವ ಧಾರ್ಮಿಕ ಕಟ್ಟಾಳುಗಳು,ದೇವರು,ಧರ್ಮವೇ ನಿಜ ಎನ್ನುವ ನಿಜ ಧಾರ್ಮಿಕರು ಕರೋನಾ ವಿರುದ್ಧದ ಸಮರಕ್ಕೆ ಬೇಕಾಗಿದ್ದಾರೆ.
ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ.
ಮನೆ.ಮಠ,ಆಹಾರ,ವಿಹಾರ ಬಿಟ್ಟು ವೈದ್ಯೋ ನಾರಾಯಣ ಹರಿ ಎನಿಸಿಕೊಂಡವರಿಗೆ
ಸುಖ,ನೆಮ್ಮದಿ,ಸಂತೋಷಕ್ಕೆ ಒದ್ದು ರೋಗಿಗಳ ಕಣ್ಣಿರು ಒರೆಸುತಿದ್ದವರಿಗೆ ಕರ್ತವ್ಯವೇ ದೇವರು ಎಂದು ಬಗೆದು ಲಾಠಿಹಿಡಿದು, ಬೂಟು ತೊಟ್ಟು ಸಮಾಜಸಂತೈಸುತ್ತಿರುವವರಿಗೆ
ಶಕ್ತ ಕೊಡುವ ದೇವರು ಬೇಕಾಗಿದ್ದಾರೆ.
ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ.
ದಾನಧರ್ಮ ಮಾಡಿ ಪೋಟೋ ಹೊಡೆಸಿಕೊಳ್ಳದವರು, ಬಡವರು, ದುರ್ಬಲರಿಗೆ ನೆರವು ನೀಡಿ ಮಾಧ್ಯಮಪ್ರಚಾರ ಬಯಸದವರು ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ.
-ಸಮಾಜಮುಖಿ ಕನ್ನೇಶ್, ಕೋಲಶಿರ್ಸಿ,
8277517164

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಹಾವಿನ ಸೇಡು ಹೆಣ್ಣಿನ ಮೋಸಗಳಿಗೆ ಬಹಳ ವರ್ಷಗಳ ಆಯುಷ್ಯಂತೆ! A ಉಪೇಂದ್ರ & B ಕೂಡಾ ಉಪೇಂದ್ರ!

ಶ್‌ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ಉಪೇಂದ್ರರ ಮುಂದಿನ ಚಿತ್ರ ಯಾವುದು? ಎನ್ನುವ ಕುತೂಹಲದ ಪ್ರಶ್ನೆಗೆ ಉಪೇಂದ್ರ ಎ ಎಂದು ಉತ್ತರ ಕೊಟ್ಟಿದ್ದರು. ಎ.ಸಿನೆಮಾ...

ಕಶಿಗೆಯಲ್ಲಿ ಸಂಸ್ಕೃತಿ ಚಿಂತನ

ಸಿದ್ದಾಪುರತಾಲೂಕಿನ ಕಶಿಗೆಯ ಶ್ರೀ ಕೇಶವನಾರಾಯಣ ದೇವಾಲಯದ ಗಣೇಶಹೆಗಡೆ ದೊಡ್ಮನೆ ಸಭಾಭವನದಲ್ಲಿ ಮೇ.೧೭ರಂದು ಹಿರಿಯ ಪತ್ರಕರ್ತ ಜಿ.ಕೆ.ಭಟ್ಟ ಕಶಿಗೆ ಅವರ ಕುರಿತಾದ ಸಂಸ್ಕೃತಿ ಚಿಂತನ ಕಾರ್ಯಕ್ರಮ...

ಶಿರಸಿ ಪ್ರೀತಮ್‌ ಪಾಲನಕರ್‌ ಸಾವಿನ ಹಿಂದಿನ ಕಾರಣ ಏನು? ಇಲ್ಲಿದೆ ಕ್ಲೂ!

ಪ್ರೀತಮ್‌ ಪಾಲನಕರ್‌ ಆತ್ಮಹತ್ಯೆಗೆ ಕಾರಣ ಮೊಬೈಲ್‌ ಕರೆಯೆ? ಶಿರಸಿ ನಗರದ ಕಾಮಧೇನು ಜ್ಯುವೆಲ್ಲರ್ಸ್‌ ನ ಮಾಲಿಕ ಪ್ರಕಾಶ್‌ ಪಾಲನಕರ್‌ ರ ಹಿರಿಯ ಪುತ್ರ ಪ್ರೀತಮ್‌...

ಕಬೀರ್‌ ಸಾಬ್‌ ರಿಗೂ ಕಾಂಗ್ರೆಸ್‌ ಗೂ ಎತ್ತಣಿದೆತ್ತ ಸಂಬಂಧವಯ್ಯ…..

ಕಬೀರ್‌ ನಿಲ್ಕುಂದ ಎಂಬ ಫೇಸ್‌ ಬುಕ್‌ ಖಾತೆಯಿಂದ ಸಿದ್ಧಾಪುರ ಕಾಂಗ್ರೆಸ್‌ ವಿಚಾರವಾಗಿ ಪ್ರಕಟವಾದ ಸಂದೇಶಗಳು ಹಲವು ಚರ್ಚೆಗೆ ಗ್ರಾಸ ಒದಗಿಸಿವೆ. ಕಬೀರ್‌ ಎನ್ನುವ ಪಕ್ಕಾ...

ನಾಣಿಕಟ್ಟದಲ್ಲಿ‌ ವಸಂತ ಸಂಭ್ರಮ; ಸನ್ಮಾನ

ಸಿದ್ದಾಪುರ: ವಿಶ್ವಶಾಂತಿ‌ ಸೇವಾ ಟ್ರಸ್ಟ್ ಸಂಸ್ಥೆಯು‌ ನಾಣಿಕಟ್ಟದಲ್ಲಿ ತ್ಯಾಗಲಿ ಸೊಸೈಟಿಯ ಸಹಕಾರದೊಂದಿಗೆ ಮೇ.೧೮ರ ಸಂಜೆ ೫:೪೦ಕ್ಕೆ ವಸಂತ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ.ನಾಣಿಕಟ್ಟದ ಸೊಸೈಟಿಯ ಶತಮಾನೋತ್ಸವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *