ಮೋದಿಗೆ ಒಂದೆ ಸಲ ಭಾರೀ ಪ್ರಮಾಣದ ಪ್ರಖ್ಯಾತಿ ಹೇಗೆ ಸಿಕ್ತು ? ಮೋದಿ ಅಲೆ ಹೇಗೆ ಶುರುವಾಯ್ತು ಎಲ್ಲಾ ಮೀಡಿಯಾಗಳು ಮೋದಿ ಜಪ ಶುರು ಮಾಡಿದ್ದು ಯಾಕೆ ? Broad Casting anf Information Ministry ಈಗ ಸರ್ಕಾರದ ಕೈಗೊಂಬೆ ಆಗಿ ಕೆಲಸ ಮಾಡ್ತಿದ್ಯಾ ?
ಇಂತಹದ್ದೊಂದು ಕೆಲಸ ಕೇಂದ್ರದಿಂದ ನಡಿತಿದ್ಯಾ?
IB ministry ಯಲ್ಲಿ ಮೀಡಿಯಾ ಯುನಿಟ್ಸ್ ಮತ್ತು ಅಟೋನೋಮಸ್ ಯುನಿಟ್ ಎಂಬ ಎರಡು ವಿಭಾಗಗಳಿವೆ ಮೊನ್ನೆ ಪಬ್ಲಿಕ್ ಟಿವಿ ಗೆ ನೋಟಿಸ್ ಕೊಟ್ಟ PIB ಮೀಡಿಯಾ ಯುನಿಟ್ ನಲ್ಲಿ ಬರುತ್ತದೆ. Publication division, Bureau of outreach & communication, Office of the register of newspaper of India, Central board of film certification, Film division, Directorate of film festival, Electronic media monitoring centre, National films archive of India, New media wing ಇವಿಷ್ಟು ಮೀಡಿಯಾ ಯುನಿಟ್ ನಲ್ಲಿ ಬರುತ್ತವೆ.
ಇನ್ನು ಅಟಾನಾಮಸ್ ಯುನಿಟ್ ನಲ್ಲಿ ಪ್ರಸಾರ ಭಾರತಿ ಆಲ್ ಇಂಡಿಯಾ ರೇಡಿಯೊ, ದೂರದರ್ಶನ, ಹಾಗೆ ಸ್ಟಾಚ್ಯುಟರಿ ಬಾಡಿ ಬರುತ್ತದೆ ಇನ್ನಿತರೆ.
ಪಬ್ಲಿಕೇಷನ್ ಡಿವಿಷನ್ ಸರ್ಕಾರದ Official publication ನೋಡಿಕೊಳ್ಳುತ್ತದೆ. ಪೇಪರ್ ರೆಜಿಸ್ಟ್ರೇಷನ್ ಹೀಗೆ ಮಾಧ್ಯಮಗಳು ಎಂದು ಯಾವೆಲ್ಲವನ್ನು ಕರೆಯುತ್ತೇವೆಯೊ ಅವೆಲ್ಲದರ ಮೇಲೆ ಈ ಸಚಿವಾಲಯದ ಕಣ್ಣು ಇರುತ್ತದೆ ಮತ್ತು ನಿಯಂತ್ರಣ ಇರುತ್ತದೆ.
ಫಿಲ್ಮ್ಂ ಡಿವಿಷನ್ ನಿಂದ ನರೇಂದ್ರ ಮೋದಿ ಫಿಲ್ಮ್ಂ, ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಮಾಡಿಸಿದ್ದು ಯಾರು ? ಮೋದಿ ಮೇಲಿನ ಪುಸ್ತಕ ಪ್ರಕಟದ ಮೂಲ ಎಲ್ಲಿದೆ ? ನಮ್ಮ ನ್ಯೂಸ್ ಚಾನೆಲ್ ಪ್ರೈಮ್ ಟೈಂ ಅನ್ನು ಮೋದಿ ಕಾರ್ಯಕ್ರಮಕ್ಕೆ ಯಾಕೆ ಮೀಸಲಿಡುತ್ತವೆ ಎಂಬುದಕ್ಕೆ ಉತ್ತರ ಈ ಸಚಿವಾಲಯದತ್ತ ಬೊಟ್ಟು ಮಾಡಬೇಕಾ ? ಎಲೆಕ್ಟ್ರಾನಿಕ್ ಮೀಡಿಯಾ ಮಾನಿಟರಿಂಗ್ ಎಂಬ ಅಂಗ ಇದೆಯಲ್ಲ ಅಲ್ಲಿ ಎಲ್ಲಾ ರಾಜ್ಯದ ಎಲ್ಲಾ ಪ್ರಾದೇಶಿಕ ಭಾಷೆಯ ಉದ್ಯೋಗಿಗಳಿದ್ದಾರೆ ಅಲ್ಲಿನ ಕೆಲಸವೆಲ್ಲ ಗೌಪ್ಯ. ಆ ವಿಭಾಗ ನಮ್ಮ ಚಾನೆಲ್ ಗಳನ್ನು ನಿಯಂತ್ರಿಸುತ್ತಿವೆಯೆ ? ಹೀಗೊಂದು ವರದಿ ಕ್ವಿಂಟ್ ಪ್ರಕಟ ಮಾಡಿದಾಗ ಕೇಂದ್ರ ಸರ್ಕಾರ ಈ ವಿಷಯ ಹೊರ ಜಗತ್ತಿಗೆ ಹೇಗೆ ಗೊತ್ತಾಯಿತು ಎಂದು ಕೇಂದ್ರ ಭಯಗೊಂಡಿತ್ತಾ ? ನಾವು ಮೀಡಿಯಾ ಫಂಡಿಂಗ್ ಅನ್ನುತ್ತೆವಲ್ಲಾ ಅದು ಇಲ್ಲಿಂದ ನಡೆಯುತ್ತಿದೆಯಾ ?
ಇಲ್ಲವಾದರೆ ನಮ್ಮ ಚಾನೆಲ್ ಗಳು ಜನಪರ ಕೆಲಸ ಬಿಟ್ಟು ಮೋದಿ ಹಿಂದೆ ಯಾಕೆ ಬೀಳುತ್ತಿದ್ದರು ? ಮೀಡಿಯಾ ಮಾನಿಟರಿಂಗ್ ನಲ್ಲಿ ಪ್ರೆಸ್ ರೆಗ್ಯೂಲೇಷನ್ ಆಕ್ಟ್ ನಲ್ಲಿ ಯಾವುದೆ ನಿಯಮವನ್ನು ಚಾನೆಲ್ ಉಲ್ಲಂಘಿಸಿದಲ್ಲಿ ಅದನ್ನು ರಿಪೋರ್ಟ್ ಮಾಡಿಕೊಂಡು PIB ಗೆ ನೀಡಿದರೆ ಅದು ಚಾನೆಲ್ ಗೆ ನೋಟಿಸ್ ಕಳುಹಿಸುತ್ತದೆ. ಈ ಮೀಡಿಯಾ ಮಾನಿಟರಿಂಗ್ ಈಗ ಮೋದಿ ಕಾರ್ಯಕ್ರಮಗಳನ್ನು ನಿಯಂತ್ರಿಸುತ್ತಿದೆಯಾ ? ಚಾನೆಲ್ ಗಳು ಸರ್ಕಾರದ ಕೈಗೊಂಬೆಯಾಗಿವೆ. ಕನ್ನಡ ಚಾನೆಲ್ ಗಳನ್ನು ನೋಡುವುದು ನೀವು ಪ್ರಜ್ಞಾವಂತರು ಬಂದ್ ಮಾಡಿದಾಕ್ಷಣ ಯಾವುದೂ ಬದಲಾಗದು. ಅವರ ಟಾರ್ಗೆಟ್ ನಿರಕ್ಷರಸ್ಥ ಮತ್ತು ಯುವ ಹಾಗೂ ಗ್ರಾಮೀಣ ಮತ್ತು ನಗರದ ಮಧ್ಯಮ ವರ್ಗದವರು. ಸದ್ಯ ಯಾವುದೂ ಬದಲಾಗದು. ಕಾಲ ಉತ್ತರ ನೀಡಬೇಕು. ನಾನು ಬರೆದಿದ್ದು ಪತ್ರಕರ್ತರಿಗೆ ಗೊತ್ತಿಲ್ಲದ್ದು ಏನು ಅಲ್ಲ. ಆದರೆ ಇವನ್ನೆಲ್ಲಾ ನೇರವಾಗಿ ಬರೆಯಲಾಗದು. ಜಾಸ್ತಿ ಏನು ಹೇಳಲಾಗದು. ಇನ್ನು ಇದರ ಹೊಸ ಸೋಷಿಯಲ್
ಮೀಡಿಯಾ ವಿಂಗ್ ಇದೆಯಲ್ಲ ಇದರ ಕೆಲಸ ಹೇಳುವುದೇನಿಲ್ಲ ಕಣ್ಣಿಗೆ ಕಾಣುತ್ತಿದೆ.