news of the week- ಈ ವಾರ ಉತ್ತರಕನ್ನಡ


ಕೆ.ಜಿ.ನಾಯ್ಕ ಅಭಿಮಾನಿ ಬಳಗ-
ಜಿಲ್ಲೆಯಲ್ಲಿ ಬಡವರಿಗೆ, ಕೋವಿಡ್ ಕಾರ್ಯಕರ್ತರಿಗೆ ಕಾಂಗ್ರೆಸ್ ನಿಂದ ಕಿಟ್ ವಿತರಿಸಿರುವ ಶಿರಸಿಯ ಉದ್ಯಮಿ ರಾಜಕಾರಣಿ ಭೀಮಣ್ಣ ನಾಯ್ಕ ತಮ್ಮ ಹೆಸರಿನಲ್ಲಿ ಅಭಿಮಾನಿ ಬಳಗದ ಫೇಸ್ ಬುಕ್ ಖಾತೆ ಇರುವುದೇ ತಮಗೆ ತಿಳಿದಿಲ್ಲ ಎಂದು ಹೇಳುವ ಮೂಲಕ ಕುತೂಹಲ ಹುಟ್ಟಿಸಿದ್ದಾರೆ.
ಇದೇ ರೀತಿ ಹೊಸದಾಗಿ ಅಭಿಮಾನಿ ಬಳಗ ಪ್ರಾರಂಭಿಸಿರುವ ಬಿ.ಜೆ.ಪಿ. ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಸಿದ್ಧಾಪುರದ ಮಂಗನಕಾಯಿಲೆ ಬಾಧಿತ ಪ್ರದೇಶಗಳಲ್ಲಿ ದಿನಬಳಕೆ ವಸ್ತುಗಳನ್ನು ವಿತರಿಸಿದ್ದಾರೆ. ಬಿ.ಜೆ.ಪಿ.ಯ ಕಾಲುಶತಮಾನಗಳ ಜನಪ್ರತಿನಿಧಿಗಳಾದ ಸಂಸದ ಅನಂತಕುಮಾರ ಹೆಗಡೆ ಮತ್ತು ಸ್ಫೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಾಪತ್ತೆಯಾಗಿರುವ ಸಮಯದಲ್ಲಿ ಪಕ್ಷೇತರವಾಗಿ ದಾನ-ಧರ್ಮ ಮಾಡಿರುವ ಕೆ.ಜಿ.ನಾಯ್ಕ ಕೆಲಸ ಪುಕ್ಕಟ್ಟೆಮಾತಿನ ಹಿಂದುತ್ವವಾದಿ ರಾಜಕಾರಣಿಗಳಿಗೆ ಕೊಟ್ಟ ಮೊದಲ ಏಟು ಎಂದು ವಿಶ್ಲೇಶಿಸಲಾಗುತ್ತಿದೆ.

ಮಂಗನಕಾಯಿಲೆ- ಕರೋನಾ ವಿಶ್ವವನ್ನೇ ನಡುಗಿಸುತಿದ್ದರೆ ಕರೋನಾದೊಂದಿಗೆ ಮಂಗನಕಾಯಿಲೆ ಉತ್ತರಕನ್ನಡವನ್ನು ವಿಚಲಿತಗೊಳಿಸಿದೆ. 2020ರಲ್ಲಿ ಈವರೆಗೆ 42 ಜನರಿಗೆ ಮಂಗನಕಾಯಿಲೆ ಬಾಧಿಸಿದ್ದು ಇವರಲ್ಲಿ ಒಬ್ಬ ಹಿರಿಯರು ಮೃತಪಟ್ಟಿದ್ದಾರೆ. 2 ಜನ ಮಕ್ಕಳಿಗೂ ಮಂಗನಕಾಯಿಲೆ ಬಾಧಿಸಿದ್ದು ದುರಂತ. ಈ ಬಗ್ಗೆ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅಲ್ಲಲ್ಲಿ ಸಭೆಗಳನ್ನು ನಡೆಸಿ, ಮಂಗನಕಾಯಿಲೆ ಬಾಧಿತ ಸಿದ್ಧಾಪುರಕ್ಕೆ ವೆಂಟಿಲೇಟರ್ ಇರುವ ಎಂಬುಲೆನ್ಸ್ ಮಂಜೂರಿಮಾಡಿಸಿದ್ದಾರೆ.
ಇದೇ ಸಚಿವರ ಸಭೆಗಳಲ್ಲಿ ಅಧಿಕಾರಿಗಳು,ಸಾರ್ವಜನಿಕರು ವೈಯಕ್ತಿಕ ಅಂತರ ಕಾಪಾಡದ ಬಗ್ಗೆ ಸಾರ್ವಜನಿಕರ ವಿರೋಧ ವ್ಯಕ್ತವಾಗಿದೆ.

ಮನುವಿಕಾಸ-

ಶಿರಸಿ-ಸಿದ್ದಾಪುರ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮನುವಿಕಾಸ ಸ್ವಯಂ ಸೇವಾಸಂಸ್ಥೆ ಮುಂಡಗೋಡು,ಸಿದ್ಧಾಪುರ ಶಿರಸಿಗಳಲ್ಲಿ ಫುಡ್ ಕಿಟ್ ವಿತರಿಸಿದೆ.ಇಂದು ಸಿದ್ದಾಪುರದ ಪೌರಕಾರ್ಮಿಕರಿಗೆ ಈ ಆಹಾರ ಕಿಟ್ ಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಿರಿಯ ಸಿವಿಲ್ ನ್ಯಾಯಾಧೀಶ ಸಿದ್ಧರಾಮ ಎಸ್. ವೈದ್ಯಕೀಯ ತುರ್ತಿನ ಸಮಯದಲ್ಲಿ ಸರ್ಕಾರದ ಆದೇಶಗಳಿಗೆ ಜನತೆ ತಲೆಬಾಗಬೇಕು. ನಿಯಮ-ಕಾನೂನು ಉಲ್ಲಂಘಿಸಿದರೆ ಅದಕ್ಕೆ ತಕ್ಕ ಶಿಕ್ಷೆ ವಿಧಿಸುವ ಅವಕಾಶವಿದೆ ಎಂದರು.

ಉಪೇಂದ್ರ ಪೈ ಕೊಡುಗೆ- ಕರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಶಿರಸಿಯ ಉದ್ಯಮಿ ಉಪೇಂದ್ರ ಪೈ ಶಿರಸಿ-ಸಿದ್ಧಾಪುರಗಳ ಬಡವರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿದ್ದಾರೆ.

ಉಚಿತ ಆಹಾರ ಸಾಮಗ್ರಿಗಳ ವಿತರಣೆ :-
ಬಿ.ಎಚ್ ಮಿಸೋರಿಯರ್ ಕ್ರಾಸ್ ಸಂಸ್ಥೆ ಬೆಂಗಳೂರು, ಕೆ.ಡಿ.ಡಿ.ಸಿ ಸಂಸ್ಥೆ ಕಾರವಾರ, ಜ್ಯೋತಿ ತಾಲೂಕಾ ಒಕ್ಕೂಟ ಸಿದ್ದಾಪುರ ಇವರುಗಳ ಸಂಯೋಗ ಆಶ್ರಯದಲ್ಲಿ ದಿನಾಂಕ 20-04-2020 ರಂದು ಉಚಿತವಾಗಿ ಆಹಾರ ಸಾಮಗ್ರಿಗಳನ್ನು ಹೆಗ್ಗರಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಮಾಸ್ತಿಬೈಲ್ ಮಜರೆಯಲ್ಲಿರುವ ಪರಿಶಿಷ್ಟ ಜಾತಿಯ ಎಲ್ಲಾ ಬಡ ಕುಟುಂಬಗಳಿಗೆ ವಿತರಿಸಲಾಯಿತು.
ಆಯ್ದ ಇತರ ಜನರಿಗೆ ಹೆಗ್ಗರಣಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಸುಮನಾ ಮಂಜುನಾಥ ಭಟ್ಟ ಹಾಗೂ ಆ ಭಾಗದ ವಾರ್ಡ್ ಸದಸ್ಯೆಯಾದ ಗಂಗೆ ಚೆನ್ನಯ್ಯ ಇವರುಗಳ ಮೂಲಕ ವಿತರಿಸಲಾಯಿತು. ಈ ವಿತರಣೆಯನ್ನು ಸಿದ್ದಾಪುರ ತಾಲ್ಲೂಕಿನ ಮಾನ್ಯ ದಂಡಾಧಿಕಾರಿಗಳಾದ ಮಂಜುಳಾ ಶಂಕರ ಭಜಂತ್ರಿ ಮಾರ್ಗದರ್ಶನ ಮತ್ತು ಸಲಹೆಯಂತೆ 1 ಮೀಟರ್ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಮಾಸ್ಕ್ ಎಲ್ಲರೂ ಧರಿಸುವುದು ಹಾಗೂ ಸೆನಿಟೈಸರ್ ಬಳಸುವುದರ ಮೂಲಕ ಶಿಸ್ತು ಬದ್ದವಾಗಿ ವಿತರಣೆ ಮಾಡಲಾ ಮಾಡಲಾಯಿತು. ಈ ಸಾಮಗ್ರಿಗಳನ್ನು ವಿತರಿಸಲು ಪ್ರಾಯೋಜಿಸಿದ ಎಲ್ಲಾ ಸಂಸ್ಥೆಗೆ ಗ್ರಾಮ ಪಂಚಾಯತ ಪರವಾಗಿ ಅಧ್ಯಕ್ಷರಾದ ಸುಮನಾ ಮಂಜುನಾಥ ಭಟ್ಟ ಮನದಾಳದ ಧನ್ಯವಾದಗಳನ್ನು ತಿಳಿಸಿದರು. ಈ ಸಂದಂರ್ಭಲ್ಲಿ ಕೆ.ಡಿ.ಡಿ.ಸಿ ಸಂಸ್ಥೆಯ ಕಾರ್ಯಕರ್ತರಾದ ಟೋನಿ ಡಿಸೋಜಾರವರು ಉಪಸ್ಥಿತರಿದ್ದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ,ಸಿದ್ದಾಪುರ(ಉ.ಕ)
ದಿನಾಂಕ : 21-04-2020ರ ಸಿದ್ದಾಪುರ ಪೇಟೆ ಧಾರಣೆ
ಅ.ನಂ. ಹುಟ್ಟುವಳಿಯ ಹೆಸರು ಧಾರಣೆಗಳು (ಪ್ರತಿ ಕ್ವಿಂಟಲ್ಲಿಗೆ)
ಕನಿಷ್ಠ ಗರಿಷ್ಠ ಮಾದರಿ
1 ರಾಶಿ 34299 35499 35259
2 ತಟ್ಟಿಬೆಟ್ಟೆ 18209 26089 23289
3 ಕೆಂಪಗೋಟು 19369 21069 20809
4 ಬಿಳಿಗೋಟು 13869 19119 17539
5 ಚಾಲಿ 24299 26059 25899
7 ಕೋಕಾ 12612 19369 16289
8 ಕಾಳುಮೆಣಸು 30699 30699 30699

ಸಿದ್ದಾಪುರ
ಇತ್ತೀಚೆಗೆ ನಿಧನ ಹೊಂದಿದ ತಾಲೂಕಿನ ಹೊಸಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಹಾಗೂ ಕಲ್ಯಾಣ ಸಂಘದ ಸದಸ್ಯರಾಗಿದ್ದ ಹನುಮಂತ ಈರಾ ನಾಯ್ಕ ಹೊಸಳ್ಳಿ ಅವರಿಗೆ ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದಿಂದ ಮಂಜೂರಿಯಾದ 10ಸಾವಿರ ರೂಗಳನ್ನು ಅವರ ಪತ್ನಿ ಲಕ್ಷ್ಮೀ ಹನುಮಂತ ನಾಯ್ಕ ಅವರಿಗೆ ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ ಬೇಡ್ಕಣಿ ವಿತರಿಸಿದರು.
ಸಂಘದ ಅಧ್ಯಕ್ಷ ನಾಗಪತಿ ದ್ಯಾವಾ ನಾಯ್ಕ, ಧಾರವಾಡ ಹಾಲು ಒಕ್ಕೂಟದ ತಾಲೂಕು ವಿಸ್ತರಣಾಧಿಕಾರಿ ಪ್ರಕಾಶ, ಸಂಘದ ಮುಖ್ಯ ಕಾರ್ಯನಿರ್ವಾಹಕ ಗಂಗಾಧರ ರಾಮ ನಾಯ್ಕ ಹಾಗೂ ಸದಸ್ಯರಿದ್ದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *