ಆರ್.ಎಸ್.ಎಸ್. ಏನು ಮಾಡುತ್ತಿದೆ? ಬಂಗಾರಪ್ಪ, ಮಹೇಂದ್ರಕುಮಾರರ ದೃಷ್ಟಾಂತಗಳೊಂದಿಗೆ ವಾಸ್ತವದ ನಿಕಶ

ನಿನ್ನೆ ನಮ್ಮ ಧ್ವನಿ ಸಂಸ್ಥಾಪಕ, ಪ್ರಗತಿಪರ ಚಿಂತಕ ಮಹೇಂದ್ರಕುಮಾರ್ ನಮ್ಮನ್ನಗಲಿದರು.
ಅವರ ಸಾವಿನ ಸುದ್ದಿ ತಿಳಿದದ್ದೇ ಏನೋ ಕಳವಳ ಶುರುವಾಯಿತು. ಸ್ನೇಹಿತರಾದ ಲೋಹಿತ್, ಮಹೇಶ್ ಸೇರಿದ ಅನೇಕರು ಸಂದೇಶ ಕಳುಹಿಸಿದ್ದರು. ವಾರ್ತೆ ತಿಳಿದ ನನ್ನ ಮನಸ್ಸು ದೇಹ ಕೆಲಕಾಲ ಸ್ತಂಬ್ಧವಾದಂತಾಯಿತು. ಮಹೇಂದ್ರಕುಮಾರ ನಮಗೆ ವಿಚಾರ,ಕೃತಿಗಳಿಂದ ಇಷ್ಟವಾದ ನಾಯಕ. ಹಿಂದೆ ಅವರು ವಾಶಿಷ್ಠ ವಂಶದ ಕೆಲವು ಪರಿವಾರದ ಸಂಘಟನೆಯಲ್ಲಿದ್ದು ಅಲ್ಲಿಯ ಅವತಾರಗಳನ್ನು ನೋಡಿದವರು. ಉಳ್ಳವರು,ಮತಾಂಧರ ಪರ ಧ್ವನಿ ಮಾಡುವ ಇವರ ಜೊತೆಗಿದ್ದ ಕಟೀಲು ಸಂಸದರಾದರು,ಬಿ.ಜೆ.ಪಿ.ರಾಜ್ಯಾಧ್ಯಕ್ಷರಾದರು. ಈ ಮಹೇಂದ್ರರಂತೆಯೇ ಹೃದಯದ ಭಾಷೆಯಲ್ಲಿ ಮಾತನಾಡುವ ಸತ್ಯಜಿತ್ ಸುರತ್ಕಲ್‍ರ ಕೆಲಸದ ಲಾಭ ಪಡೆದು ಶಿರಸಿಯ ಅನಂತಕುಮಾರ ಹೆಗಡೆ ಸಂಸದರಾದರು,ಸಚಿವರಾದರು. ಆದರೆ ಸುರತ್ಕಲ್ ಅಲ್ಲಿಯೇ ಇದ್ದೂ ,ಮಹೇಂದ್ರಕುಮಾರ್ ಹೊರನಡೆದು ಈ ರೀತಿ ಅಧಿಕಾರದ ಏಣಿ ಏರಲಿಲ್ಲ. ಸುರತ್ಕಲ್ ವಿಚಾರವಿರಲಿ, ಮಹೇಂದ್ರಕುಮಾರ್ ವಿಚಾರವಿರಲಿ ಅಥವಾ ಇತರ ವೈದಿಕೇತರ ನಾಯಕರು ಪರಿವಾರದ ಪರಿಚಾರಿಕೆಯಲ್ಲಿ ಕಳೆದುಹೋಗುತ್ತಾರೆ ಅಥವಾ ಹೊರಗೆ ನಾಶವಾಗುತ್ತಾರೆ. ಯಾಕೆ ಹೀಗೆ ಎಂದು ಗೃಹಿಸಿದರೆ.
ಸುರತ್ಕಲ್, ಮಹೇಂದ್ರಕುಮಾರ ತರಹದವರಿಗೆ ಪರಿವಾರದ ಪ್ರಮುಖರ ನೆರವಿರುವುದಿಲ್ಲ. ಯಾಕೆಂದರೆ ಪರಿವಾರ ಹೇಳಿದ್ದನ್ನು ಉಪಾಯದಿಂದಲೋ, ಹುಂಬತನದಿಂದಲೋ ಶಿರಸಾವಹಿಸಿ ಪಾಲಿಸಲು ಹ್ರದಯಭಾಷೆಯ ಮಹೇಂದ್ರಕುಮಾರ ಥರಹದವರಿಗೆ ಸಾಧ್ಯವಾಗುವುದಿಲ್ಲ. ಸುರತ್ಕಲ್, ಮಹೇಂದ್ರ ಥರಹದವರು ಪರಿವಾರದ ಭಾಷೆಯನ್ನು ಹೃದಯದಿಂದ ಪರೀಕ್ಷಿಸುತ್ತಾರೆ. ಆಗ ಅವರಿಗೆ ಅದು ಸರಿ ಕಾಣುವುದಿಲ್ಲ.
ಇಂಥ ಪರಿವಾರದ ತೆಕ್ಕೆಗೆ ಸಿಕ್ಕ ನಂತರ ಅವರಿಂದ ಬಿಡಿಸಿಕೊಂಡ ಅಸಂಖ್ಯ ಜನರು ಈ ರಾಜ್ಯ ಜಿಲ್ಲೆಯಲ್ಲಿದ್ದಾರೆ. ಅವರಲ್ಲಿ ಕೆಲವರು ತಮ್ಮ ಶಕ್ತಿ-ಯುಕ್ತಿಯಿಂದ ಬೆಳೆಯುವುದಿದೆ. ಆದರೆ ಬಹಳಷ್ಟು ಜನ ಆ ಮತಾಂಧತೆಯ ಕುರೂಪಕ್ಕೆ ಬಿದ್ದವರು ಎದ್ದು ಬಂದಿದ್ದೇ ಇಲ್ಲ. ಆಗ ಅವರ ಧ್ವನಿ ಕ್ಷೀಣವಾಗುತ್ತದೆ.
ಇಂಥ ಪರಿವಾರದ ಕೂಪದಿಂದ ಹೊರಬಂದು ಸೋಲು-ನೋವು-ಸಾವು ಕಂಡವರು ಅನೇಕ. ಗೆದ್ದವರು, ಗೆಲ್ಲುವ ದಾರಿಯಲ್ಲಿ ಕಳೆದುಹೋದವರು ಕೆಲವರು. ಅಂಥವರಲ್ಲಿ ಕ್ರಮವಾಗಿ ದ್ವಾರಕನಾಥ ಮಹೇಂದ್ರಕುಮಾರ,ಸೇರಿದ ಅನೇಕರನ್ನು ಹೆಸರಿಸಬಹುದು.
ಮಹೇಂದ್ರಕುಮಾರ ಕೊಪ್ಪ ಚಿಕ್ಕಮಗಳೂರುಗಳಿಂದ ಪ್ರಾರಂಭಿಸಿ ಬೆಂಗಳೂರಿಗೆ ಪ್ರಯಾಣಿಸುವ ಅವಧಿಯಲ್ಲಿ ಅನೇಕ ಸಂದರ್ಭಗಳಿಗೆ ಮೂಖಾಮುಖಿ ಯಾಗಿದ್ದವರು. ಪರಿವಾರದ ಷಡ್ಯಂತ್ರ, ಅನುಕೂಲಸಿಂಧುತ್ವಗಳ ತಂತ್ರಗಳನ್ನು ಕಣ್ಣಾರೆ ಕಂಡವರು. ಭಜರಂಗದಳದಲ್ಲಿದ್ದಾಗಲೂ ನಾನು ಮಾನವೀಯತೆಯನ್ನು ಮರೆತಿರಲಿಲ್ಲ ಎನ್ನುವ ಮಹೇಂದ್ರಕುಮಾರ ಮಾತಿನಲ್ಲಿ. ಮತಾಂಧ ಷಡ್ಯಂತ್ರಿಗಳಿಂದ ಹೊಡೆಸಿಕೊಂಡ ಹಿಂದುಳಿದವರ ನಾಯಕ ಎಸ್ ಬಂಗಾರಪ್ಪ ಹೇಳುತಿದ್ದ ‘ಬಂಗಾರಪ್ಪ ಕಾಂಗ್ರೆಸ್ ನಲ್ಲಿರಲಿ, ಬಿ.ಜೆ.ಪಿ.ಯಲ್ಲಿರಲಿ ಬಂಗಾರಪ್ಪ, ಬಂಗಾರಪ್ಪನೇ ಎನ್ನುವ ದಾಷ್ಟ್ಯ, ಪ್ರಾಮಾಣಿಕತೆ ಎದ್ದು ಕಾಣುತ್ತದೆ.
ಸ್ವಭಾವತ:,ನಿಷ್ಟೂರಿಯೂ,ಧೈರ್ಯವಂತರೂ,ಪ್ರಾಮಾಣಿಕ ಬದ್ಧತೆಯ ವ್ಯಕ್ತಿಯಾಗಿದ್ದ ಬಂಗಾರಪ್ಪ ತನ್ನ ಪ್ರತಿಷ್ಠೆ,ಸ್ವಾಭಿಮಾನದ ಕಾರಣಕ್ಕೆ ಅನಿವಾರ್ಯ ಎಂದು ಪರಿವಾರದ ತೆಕ್ಕೆಗೆ ಸಿಕ್ಕು ಅಷ್ಟೇ ಶೀಘ್ರ ಅಲ್ಲಿಂದ ಹೊರಬಂದರು.
ಬಿ.ಜೆ.ಪಿ.ಯಲ್ಲಿದ್ದಾಗ ಕೂಡಾ ಗಫಾರ್, ಫಕೀರಪ್ಪ ಗೊತ್ತಲ್ಲ ನಾನು ಎಲ್ಲಿದ್ದರೂ ಜಾತ್ಯಾತೀತ. ಆ ಬದ್ಧತೆಗೆ ಧಕ್ಕೆ ಬಂದರೆ ಸಾರಿ ಮಿಸ್ಟರ್ ಅಡ್ವಾನಿ ಆಯ್ ಎಮ್ ಗೋಯಿಂಗ್ ಎಂದು ತಮ್ಮದೇ ಶೈಲಿಯಲ್ಲಿ ಹೇಳುತಿದ್ದ ಬಂಗಾರಪ್ಪನವರ ಖ್ಯಾತಿ- ಜನಬೆಂಬಲ ಬಿ.ಜೆ.ಪಿ.ಗೆ ಬೇಕಿತ್ತೇ ಹೊರತು ಅವರ ಸಿದ್ಧಾಂತ-ಬದ್ಧತೆಯಾಗಿರಲಿಲ್ಲ. ಹಾಗಾಗಿ ಬಂಗಾರಪ್ಪ ಬಿ.ಜೆ.ಪಿ.ಗೆ ಬಂದಷ್ಟೇ ವೇಗವಾಗಿ ಹೊರನಡೆದುಬಿಟ್ಟರು.
ಬಿ.ಜೆ.ಪಿ.ಯಿಂದ ಸಮಾಜವಾದಿ ಪಕ್ಷಕ್ಕ್ಕೆ ಬಂದ ಅವರು ಬಿ.ಜೆ.ಪಿ. ಅವರ ಪರಿವಾರದ ಬಗ್ಗೆ ‘ಬಿ.ಜೆ.ಪಿ. ಸಂಘ-ಪರಿವಾರ ಶನಿಸಂತಾನ ಅವರನ್ನು ಊರೊಳಗೆ ಬಿಟ್ಟುಕೊಳ್ಳಬೇಡಿ’ ಎಂದು ಎಚ್ಚರಿಸಿದ್ದರು.
ಹೀಗೆ ಭಾರತದ ಸಂಘ ಪರಿವಾರ ಮಹೇಂದ್ರಕುಮಾರ, ಬಂಗಾರಪ್ಪ ಸೇರಿದ ಅನೇಕರನ್ನು ಬಲಿಪಡೆದಿದೆ.
ಈ ಪರಿವಾರದ ಕೆಲವರು ಹಿಂದೆ ಬಂಗಾರಪ್ಪ,ಈಗ ಮಹೇಂದ್ರ ಕುಮಾರ, ಪ್ರೋ. ಪನ್ಸಾರೆ, ಪ್ರೊ.ಕಲಬುರ್ಗಿ, ಗೌರಿ ಲಂಕೇಶ್ ಸೇರಿದಂತೆ ಅನೇಕರ ಸಾವನ್ನು ಸಂಬ್ರಮಿಸಿದ್ದನ್ನು ಕಂಡಿದ್ದೇವೆ. ಇದೇ ಪರಿವಾರ ಹರಿಬಿಟ್ಟ ಮುಸ್ಲಿಂ ನಿಷೇಧ, ಮುಸ್ಲಿಂರೊಂದಿಗಿನ ಸ್ನೇಹ, ಸಂಬಂಧ ವ್ಯಾಪಾರ ನಿಷೇಧಿಸಬೇಕೆಂದು ಕೂಗುಹಾಕುವುದನ್ನು ಕೇಳುತಿದ್ದೇವೆ. ಇದೇ ಪರಿವಾರ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿಸಿರಲಿಲ್ಲ, ಭಾರತದ ಮೀಸಲಾತಿ ವ್ಯಸ್ಥೆಯನ್ನೇ ವಿರೋಧಿಸಿತ್ತು. ಸ್ವತಂತ್ರಪೂರ್ವ, ಸ್ವಾತಂತ್ರ್ಯಾ ನಂತರದ ಕಾರ್ಮಿಕ ಹೋರಾಟ, ರೈತಹೋರಾಟ, ಸೇರಿದಂತೆ ಭಾರತದ ಬಹುಸಂಖ್ಯಾತ ಮೂಲನಿವಾಸಿ ಅಹಿಂದ ಪರವಾಗಿನ ಯಾವ ಹೋರಾಟವನ್ನೂ ಬಿ.ಜೆ.ಪಿ.,ಜನಸಂಘದ ಮತ್ತೊಂದು ಮುಖವಾದ ಪರಿವಾರ ಬೆಂಬಲಿಸಿದ ಉದಾಹರಣೆಗಳಿಲ್ಲ.ಪರಿವಾರದಲ್ಲಿ ಪಟ್ಟಭದ್ರರ ಹಿತಾಸಕ್ತಿ, ಅವರ ವೈದಿಕ ಶ್ರೇಷ್ಠತೆಯ ವ್ಯಸನಕ್ಕೆ ಸಹಕರಿಸದ ಅವರೊಳಗಿನ ವ್ಯಕ್ತಿಗಳೂ ಬೆಳೆದ ಇತಿಹಾಸವಿಲ್ಲ.
ಹೀಗೆ ಅಧಿಕಾರ, ಉಪಯೋಗ, ಅವಕಾಶ, ಅನುಕೂಲಗಳಿಗಾಗಿ ದೇವರು-ಧರ್ಮವನ್ನು ಉತ್ತೇಜಿಸಿ ಲಾಭ ಪಡೆಯುವ ಸಂಘ ಪರಿವಾರ ವಿಕೃತರನ್ನು ತಯಾರಿಸುವ ಕಾರ್ಖಾನೆಯಾಗಿರುವುದಕ್ಕೆ ಸಹಸ್ರ ದೃಷ್ಟಾಂತಗಳಿವೆ. ಈಗ ಇದೇ ಪರಿವಾರ ಕರೋನಾವಿದ್ಯಮಾನದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೊಂದಿಗೆ ವ್ಯವಹರಿಸುವುದಿಲ್ಲ ಎನ್ನುವ ದೂಷಣೆಯನ್ನು ಘೋಷಣೆಯಾಗಿ ಪರಿವರ್ತಿಸಿ ಈ ಸಂಕಷ್ಟದಲ್ಲೂ ಧಾರ್ಮಿಕದ್ವೇಶ ಬೆಳೆಸಿ ರಾಜಕೀಯ ಲಾಭದ ತನ್ನ ಲಾಗಾಯ್ತಿನ ಕುಟಿಲತೆಯನ್ನು ವ್ಯವಸ್ಥಿತವಾಗಿ ಮುಂದುವರಿಸುತ್ತಿದೆ.
ಇದೇ ಪರಿವಾರ ಜನರ ಸಂಕಷ್ಟಗಳಿಗೆ ಸ್ಫಂದಿಸದ ತಮ್ಮ ವಾಶಿಷ್ಟ ಪರಂಪರೆಯ ಜನದ್ರೋಹಿತನವನ್ನು ಪ್ರಶ್ನಿಸುತ್ತಿಲ್ಲ. ಸಾಂದರ್ಭಿಕ ಅನಿವಾರ್ಯತೆಯ ತೆಕ್ಕೆಗೆ ಸಿಕ್ಕು ಪರಿವಾರದ ಒಳಹೊಕ್ಕು ಅಲ್ಲಿಯ ಜನವಿರೋಧಿ ನೀತಿಯನ್ನು ಬಹಿರಂಗಪಡಿಸಿದ ಬಂಗಾರಪ್ಪ, ಮಹೇಂದ್ರಕುಮಾರ,
ಕಲಬುರಗಿ,ಪನ್ಸಾರೆ,ಗೌರಿಲಂಕೇಶ್ ರಂತೆ ನೇರ ಗುಂಡಿಗೆ ಬಲಿಯಾಗದಿರಬಹುದು ಆದರೆ ಈ ದೇಶದ ಮೂಲನಿವಾಸಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಂತೆ ಈ ನಾಯಕರು ಪರೋಕ್ಷ ಧರ್ಮಾಂಧತೆ,ಪುರೋಹಿತಶಾಹಿತನದ ಕುಟಿಲತೆಗೆ ಬಲಿಯಾಗಿದ್ದಾರೆ. ಈ ದೇಶ ನಿಜದ ನೇರಕೆ ನಡೆಯುವ ಬಂಗಾರಪ್ಪ,ರವೀಂದ್ರಕುಮಾರರಂಥ ಅನೇಕರನ್ನು ಕಳೆದುಕೊಂಡ ಹಾನಿಯನ್ನು ತುಂಬಿಕೊಳ್ಳಲೂ ಸಾಧ್ಯವಿಲ್ಲ ಎನ್ನುವ ಸತ್ಯ ಅರಿಯದೆ ನಾಶವಾದಿರಲಿ ಎಂದು ಎಚ್ಚರಿಸಲು ಇದು ಸಕಾಲ ಎನ್ನಬಹುದೇನೋ? ವಸುದೈವ ಕುಟುಂಬಕಂ ಎನ್ನುವವರು ಬೆಳೆಸುತ್ತಿರುವ ಪರಿವಾರ ಮಾಡುತ್ತಿರುವ ಮನುಷ್ಯವಿರೋಧಿತನ ಅರಿಯಲೂ ಇದು ಕಾಲವೆ.

                ಕೊನೆಗುಳಿಗೆ-

ಕರೋನಾ ಲಾಕೌಟ್,ಮಹೇಂದ್ರಕುಮಾರ ಸಾವಿನ ಸಂದರ್ಭಗಳಲ್ಲಿ ಕಿವಿ-ಕಣ್ಣು-ಮೂಗು ಬಿಚ್ಚಿಕೊಂಡು ಓಡಾಡಿದ ನನಗೆ ಕೆಲವೆಡೆ ಕರೋನಾ ಸಮಯವನ್ನು ಬಳಸಿಕೊಂಡು ಮುಸ್ಲಿಂರೊಂದಿಗಿನ ವ್ಯಾಪಾರ ನಿಷೇಧದ ಬಗ್ಗೆ ಮಾತನಾಡುವವರು,ಮಹೇಂದ್ರರ ಸಾವನ್ನು ಸಂಭ್ರಮಿಸಿದವರು ಕಂಡುಬಂದರು. ಅವರಿಗೆ ನನ್ನ ಉತ್ತರ. ಮುಸ್ಲಿಂ ವ್ಯಾಪಾರಿಗಳಿಂದ ಖರೀದಿಸಬಾರದೆಂದರೆ…ಬುದ್ದಿಗೇಡಿ ಶೂದ್ರರಿಂದ ಪರಿವಾರದ ಅಪದ್ಧ ಹೇಳಿಸುವ ವಾಶಿಷ್ಠ ಗೋತ್ರದವರೇ ಅವರಂತೆ ನಮ್ಮ ಊರು, ಮನೆಬಾಗಿಲಿಗೆ ಹಣ್ಣು, ಮೀನು,ಮಾಂಸವನ್ನು ತಲುಪಿಸಬೇಕು. ಮಹೇಂದ್ರಕುಮಾರರ ಸಾವು ಸಂಭ್ರಮಿಸುವ ಮತಾಂಧ ದುಷ್ಟರ ಮನೆಯಲ್ಲೂ ಮಹೇಂದ್ರರಿಗೆ ಬಂದ ಅಕಾಲಿಕ ಸಾವು ಬರಬಾರದು,
ಈ ಸಂದರ್ಭಗಳಲ್ಲಿ ಕೂಡಾ ಧರ್ಮ,ದೇವರು, ಭಕ್ತಿ, ಶಾಸ್ತ್ರ-ಸಂಪ್ರದಾಯ ಎಂದು ಕಾಸು ಮಾಡುವ ಕುಲ ನಾಶವಾಗಬೇಕು ಎಂಬುದಷ್ಟೇ ನಮ್ಮ ನಿರೀಕ್ಷೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *