

ರವಿವಾರ ಧಾರವಾಡದಲ್ಲಿ ನಿಧನರಾದ ಉತ್ತರಕನ್ನಡ ಜಿಲ್ಲೆ ಹೊನ್ನಾವರದ ಸಂಶೋಧನಾ ವಿದ್ಯಾರ್ಥಿ ಸುದೀಪ್ ಕೈರನ್ ಮಂಗನಕಾಯಿಲೆಯಿಂದ ಮೃತರಾದರೆ ಎನ್ನುವ ಸಂಶಯ ಮೂಡಿದೆ.
ಮಲೆನಾಡಿನಲ್ಲಿ ಮಂಗನಕಾಯಿಲೆ ವಿಪರೀತವಾದ ಸಂದರ್ಭದಲ್ಲಿ ಧಾರವಾಡದಲ್ಲಿ ಮಂಗನಿಂದ ಕಚ್ಚಿಸಿಕೊಂಡಿದ್ದ ಸುದೀಪ್ ಮೃತರಾದದ್ದು ಆಕಸ್ಮಿಕ ಎಂದು ಅವರ ಕುಟುಂಬದ ಮೂಲಗಳು ಸ್ಪಸ್ಟಪಡಿಸಿವೆ.
ಹೊನ್ನಾವರದ ರಾಷ್ಟ್ರಪ್ರಶಸ್ತಿ ಪುರಸ್ಕೃ ತ ಉಪನ್ಯಾಸಕ,ವಾಗ್ಮಿ ಕೈರನ್ ರ ಏಕೈಕ ಪುತ್ರರಾಗಿದ್ದ ಸುದೀಪ್ ನಿನ್ನೆ ಧಾರವಾಡದಲ್ಲಿ ಮೃತರಾಗಿದ್ದು ಅವರ ಕೋಣೆಯಲ್ಲಿ ಸೆನಿಟೈಸರ್ ಮತ್ತು ಕಫ ಸಿರಪ್ ಬಾಟಲ್ ಗಳಿದ್ದವೆಂದು ಮಾದ್ಯಮಗಳು ವರದಿ ಮಾಡಿದ್ದು ಮದ್ಯದ ಬದಲು ಸೆನಿಟೈಸರ್ ಮತ್ತು ಸಿರಪ್ ಕುಡಿದು ಅನಾಹುತ ಮಾಡಿಕೊಂಡಿರಬಹುದೆಂದು ಸಂಶಯಿಸಿವೆ.
ಸಂಶೋಧನಾ ವಿದ್ಯಾರ್ಥಿಯ ಈ ಅಕಾಲಿಕ ಸಾವು ಅನೇಕರ ದಿಗ್ಭ್ರಮೆಗೆ ಕಾರಣವಾಗಿದೆ. ಕಠಿಣ ಲಾಕ್‍ಔಟ್ ನಿಯಮದಿಂದಾಗಿ ಕುಟುಂಬದಿಂದ ದೂರ ಉಳಿದಿದ್ದ ಈ ವಿದ್ಯಾರ್ಥಿಯ ಸಾವಿಗೆ ಸರ್ಕಾರದ ಅಜಾಗರೂಕತೆ,ದಿಢೀರ್ ಲಾಕ್‍ಔಟ್ ಕಾರಣ ಎನ್ನುವ ಆರೋಪಗಳೂ ವ್ಯಕ್ತವಾಗಿವೆ.
ಸುದ್ದಿಯಾಗದ ಸುದ್ದಿಗಳ
ಪತ್ರಕರ್ತರಿಗೆ ಕೋವಿಡ್-
ಶನಿವಾರ ದೃಢಪಟ್ಟ ವಾಹಿನಿಯೊಂದರ ಕ್ಯಾಮರಾಮನ್‍ನ ಕರೋನಾ ಸೋಂಕು ಪ್ರಕರಣದ ನಂತರ ಅವರ ಸಂಪರ್ಕಕ್ಕೆ ಬಂದ 40 ಕ್ಕೂ ಹೆಚ್ಚು ಜನರನ್ನು ಬೆಂಗಳೂರಿನಲ್ಲಿ ಕ್ವಾರಂಟೈನ್ ಮಾಡಿರುವ ವಿಚಾರ ಈಗ ಚರ್ಚೆಯ ವಿಷಯವಾಗಿದೆ. ಒಬ್ಬಕ್ಯಾಮರಾಮನ್ ಜೊತೆಗೆ ಕೆಲವು ಪತ್ರಕರ್ತರು ಸೇರಿ ಸುಮಾರು 40 ಜನರ ಕ್ವಾರಂಟೈನ್ ವಿಚಾರ ಮಾಧ್ಯಮಗಳಲ್ಲೂ ಸುದ್ದಿಯಾಗದಿರುವುದು ಆಶ್ಚರ್ಯವನ್ನುಂಟುಮಾಡಿದೆ. ಟಿ.ಆರ್.ಪಿ., ಹಣ,ಕೀರ್ತಿಗಾಗಿ ಸುದ್ದಿಮಾಡಿ ಗೆದ್ದ ಪತ್ರಕರ್ತರು ಕೋವಿಡ್ ವಿಚಾರದಲ್ಲಿ ಸೋತಂತಾಗಿದೆ.ಈ ವಿಚಾರ ಸುದ್ದಿಮಾಡುವ ವಿಷಯದಲ್ಲಿ ಕೂಡಾ ಸೋತಿರುವ ಪತ್ರಕರ್ತರು ಮಾಧ್ಯಮ ಸಂಹಿತೆ ಉಲ್ಲಂಘಿಸಿದಂತಾಗಿದೆ.
ಶಿರಸಿಯಲ್ಲಿ ಕಾಳಜಿಯಿಂದ ಗಮನ ಸೆಳೆದ ವೈದ್ಯೆ- ಕರೋನಾ ವಿಚಾರದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದವರಲ್ಲಿ ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದ್ದಾರೆ. ಅವರಿಗೆ ಸರ್ಕಾರ ಅಗತ್ಯ ವಸ್ತುಗಳನ್ನು ಪೂರೈಸಿಲ್ಲ ಎನ್ನುವ ಆರೋಪದ ನಡುವೆ ಶಿರಸಿಯ ಆಯುಷ್ ವೈದ್ಯೆ ಡಾ.ಪೂರ್ಣಿಮಾ ತಮ್ಮ ಹಣದಲ್ಲಿ ತಾಲೂಕಿನ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಛತ್ರಿ ಮತ್ತು ದಿನಬಳಕೆ ವಸ್ತುಗಳನ್ನು ಕೊಡುವ ಮೂಲಕ ಪ್ರಶಂಸನೀಯ ಕೆಲಸಮಾಡಿದ್ದಾರೆ.

