
(ಮಕ್ಕಳಿಗಾಗಿ ಕವಿತಾ ವಾಚನ)
ಈ ಕೊರೋನ ಲಾಕ್ ಡೌನ್ ಸಮಯದಲ್ಲಿ ಸಮಯ ಕಳೆಯುವುದೇ ಮಕ್ಕಳಾದಿಯಾಗಿ ಎಲ್ಲರಿಗೂ ಒಂದು ದೊಡ್ಡ ಸವಾಲಾಗಿದೆ. ಶಾಲೆಗೆ ರಜೆ ಸಿಕ್ಕರೆ ಸಾಕು, ಕುಣಿಯುತ್ತಿದ್ದ ಮಕ್ಕಳು ಈಗ ಶಾಲೆ ಯಾವಾಗ ಶುರುವಾಗುತ್ತದೆ ಎನ್ನುವ ಕಾತುರದಲ್ಲಿವೆ.

ಧಾರವಾಡ: ಈ ಕೊರೋನ ಲಾಕ್ ಡೌನ್ ಸಮಯದಲ್ಲಿ ಸಮಯ ಕಳೆಯುವುದೇ ಮಕ್ಕಳಾದಿಯಾಗಿ ಎಲ್ಲರಿಗೂ ಒಂದು ದೊಡ್ಡ ಸವಾಲಾಗಿದೆ. ಶಾಲೆಗೆ ರಜೆ ಸಿಕ್ಕರೆ ಸಾಕು, ಕುಣಿಯುತ್ತಿದ್ದ ಮಕ್ಕಳು ಈಗ ಶಾಲೆ ಯಾವಾಗ ಶುರುವಾಗುತ್ತದೆ ಎನ್ನುವ ಕಾತುರದಲ್ಲಿವೆ. ಇಂಥ ಸಮಯದಲ್ಲಿ ನಮ್ಮ ಕವಿಗಳು ತಾವಿರುವ ಸ್ಥಳದಿಂದಲೇ ತಮ್ಮ ರಚನೆಯ ಮಕ್ಕಳ ಕವಿತೆಗಳನ್ನು ವಾಚನ ಮಾಡಿ ಮಕ್ಕಳ ಮನ ರಂಜಿಸಲು ನೋಡಿದ್ದಾರೆ.
ನವೋದಯ, ನಂತರದ ನಮ್ಮ ಶಿಕ್ಷಕ ಸಮುದಾಯದ ಹಂಬಲದಲ್ಲಿ ಹರಿಯುತ್ತ ಬಂದಿರುವ ಮಕ್ಕಳ ಕಾವ್ಯ ಹೊಸಗಾಲದಲ್ಲಿ ಸಾಕಷ್ಟು ಹೊಸ ತುಡಿತಗಳಿಂದ, ವಿಭಿನ್ನ ದೃಷ್ಟಿಕೋನದ ಹಿನ್ನೆಲೆಯಲ್ಲಿ, ವಿರಳವಾಗಿಯಾದರೂ ಮೂಡಿಬರುತ್ತಲೇ
ಇದೆ. ಅದರ ಒಂದು ಝಲಕು ಕಾಣಿಸುವ ಬಯಕೆಯ ಫಲವೇ ಈ “ಕೂಹೂ ಕೂಹೂ”.
ಇಳಿ ವಯಸ್ಸಿನಲ್ಲಿಯೂ ಉತ್ಸಾಹದಿಂದ ತಮ್ಮ ರಚನೆಯ ಮಕ್ಕಳ ಕವನ ವಾಚನದ ಮೂಲಕ “ಕುಹೂ ಕುಹೂ” ವೀಡಿಯೊ ಸಂಪಾದನೆಯನ್ನು ನಾಡೋಜ ಡಾ.ಚೆನ್ನವೀರ ಕಣವಿ ಅವರು ತಮ್ಮ ಮನೆ ಚೆಂಬೆಳೆಕಿನಲ್ಲಿ ಬಿಡುಗಡೆಗೊಳಿಸಿದರು.
ನಾಡಿನ ವಿವಿಧ ಭಾಗಗಳಿಂದ ಸುಮಾರು ಇಪ್ಪತ್ತೊಂದು ಕವಿಗಳು ಭಾಗಿಯಾಗಿದ್ದು, ಇದರ ಸಂಪಾದನೆಯನ್ನು ಬಾಗಲಕೋಟೆಯ ಬಸವೇಶ್ವರ ಎಂಜಿನೀಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಮತ್ತು ಮಕ್ಕಳ ಕವಿ ರಾಜಶೇಖರ ಕುಕ್ಕುಂದಾ ಅವರು
ಮಾಡಿದ್ದಾರೆ.
ಭಾಗಿಯಾದ ಕವಿಗಳು:
ಎಚ್.ಎಸ್.ವೆಂಕಟೇಶಮೂರ್ತಿ,ಬೆಂಗಳೂರು
ಎನ್. ಶ್ರೀನಿವಾಸ ಉಡುಪ, ಬೆಂಗಳೂರು
ಕೆ.ವಿ.ತಿರುಮಲೇಶ್, ಹೈದ್ರಾಬಾದ್
ಎನ್.ಆರ್.ನಾಯಕ, ಹೊನ್ನಾವರ
ಚಿಂತಾಮಣಿ ಕೊಡ್ಲೆಕೆರೆ, ಬೆಂಗಳೂರು
ಟಿ.ಎಸ್.ನಾಗರಾಜ ಶೆಟ್ಟಿ, ತಿಪಟೂರು
ಎಚ್.ಡುಂಡಿರಾಜ್, ಬೆಂಗಳೂರು
ಆನಂದ ಪಾಟೀಲ, ಧಾರವಾಡ
ರಾಜಶೇಖರ ಕುಕ್ಕುಂದಾ, ಬಾಗಲಕೋಟೆ
ಕೃಷ್ಣಮೂರ್ತಿ ಬಿಳಿಗೆರೆ, ತಿಪಟೂರು
ರಾಧೇಶ ತೋಳ್ಪಾಡಿ ಎಸ್., ಬಂಟ್ವಾಳ
ತಮ್ಮಣ್ಣ ಬೀಗಾರ, ಸಿದ್ದಾಪುರ
ಭಾಗೀರಥಿ ಹೆಗಡೆ, ಶಿರಸಿ
ನಾಗರಾಜ ವಸ್ತಾರೆ, ಬೆಂಗಳೂರು
ಚಂದ್ರಗೌಡ ಕುಲಕರ್ಣಿ, ತಾಳೀಕೋಟೆ
ವಿಜಯಶ್ರೀ ಹಾಲಾಡಿ, ಮೂಡಬಿದ್ರೆ
ವಿನಾಯಕ ರಾ. ಕಮತದ, ಗದಗ
ಛಾಯಾ ಭಗವತಿ, ಬೆಂಗಳೂರು
ಹುಣಸೂರು ಮಾದುಪ್ರಸಾದ್, ಮೈಸೂರು
ಸುರೇಶ ಕಂಬಳಿ, ಕೊಪ್ಪಳ
ಲಲಿತಾ ಕೆ. ಹೊಸಪ್ಯಾಟಿ, ಹುನಗುಂದ
