

11 ಜನ ಕೋವಿಡ್ ಸೋಂಕಿತರನ್ನು ಹೊಂದಿದ್ದ ಉತ್ತರಕನ್ನಡ ಜಿಲ್ಲೆಯ ಕೊನೆಯ ಕರೋನಾ ಸೋಂಕಿತ ಇಂದು ಡಿಸ್ಚಾರ್ಜ್ ಆಗುವ ಮೂಲಕ ಉತ್ತರಕನ್ನಡ ಕರೋನಾ ಮುಕ್ತ ಜಿಲ್ಲೆಯಾಗಿದೆ.

ಉತ್ತರಕನ್ನಡದ 12 ತಾಲೂಕುಗಳಲ್ಲಿ ಭಟ್ಕಳ ಹೊರತು ಪಡಿಸಿ ಉಳಿದ 11 ತಾಲೂಕುಗಳಲ್ಲಿ ಒಂದೂ ಕೋವಿಡ್ ಪ್ರಕರಣಗಳಿರಲಿಲ್ಲ.
11 ರಲ್ಲಿ ಹತ್ತು ಜನರು ಕಳೆದ ವಾರದ ಮೊದಲೇ ಗುಣಮುಖರಾಗಿದ್ದರು. ಜಿಲ್ಲೆಯ 11 ಕೋವಿಡ್ ಸೋಕಿತರೂ ಗುಣಮುಖರಾಗುವ ಮೂಲಕ ಇಂದಿನಿಂದ ಉತ್ತರಕನ್ನಡ ಕರೋನಾ ಮುಕ್ತ ಜಿಲ್ಲೆಯಾಗಿದೆ. ಭಟ್ಕಳದ ಕರೋನಾ ಕೇಸುಗಳ ಪರಿಣಾಮ ವಿಶಾಲ ಉತ್ತರಕನ್ನಡಕ್ಕೆ ತಲೆನೋವಾಗಿತ್ತು. ಲಾಕ್‍ಡೌನ್,ನಿಷೇಧಾಜ್ಞೆಗಳಿದ್ದ ಮೌನಕ್ಕೆ ಜಾರಿದ್ದ ಜಿಲ್ಲೆ ಮೇ1 ರ ಕಾರ್ಮಿಕ ದಿನಾಚರಣೆಯಂದು ಕೋವಿಡ್ ಸೋಂಕುಮುಕ್ತ ಜಿಲ್ಲೆಯಾಗಿ, ಕೂಲಿ ಕಾರ್ಮಿಕರನ್ನು ಮರಳಿಸಿದ ಜಿಲ್ಲೆಯಾಗಿ ಮುಕ್ತ, ಮುಕ್ತ ಎನ್ನುವಂತಾಗಿದೆ.
ಮೇ 1 ರ ಕಾರ್ಮಿಕ ದಿನಾಚರಣೆ ಮೊದಲು ಉತ್ತರಕನ್ನಡದಿಂದ ಉತ್ತರಕರ್ನಾಟಕಕ್ಕೆ ಕಾರ್ಮಿಕರು ಮರಳಿದ್ದಾರೆ. ಕರಾವಳಿಯ ಕೇರಳದಿಂದ ಗೋವಾವರೆಗೆ ಕರಾವಳಿ ಮತ್ತು ಉತ್ತರಕನ್ನಡ ಜಿಲ್ಲೆಯಾದ್ಯಂತ ಉತ್ತರಕರ್ನಾಟಕದ ಕಾರ್ಮಿಕರೇ ಕೆಲಸಗಾರರು. ಕಲ್ಲು-ಮಣ್ಣು, ಸಿಮೆಂಟ್ ಗಳ ಕಠಿಣ ದೈಹಿಕ ಶ್ರಮದ ಕೆಲಸಗಳಿಗೆ ಉತ್ತರಕರ್ನಾಟಕದ ಜನರಿಲ್ಲದೆ ಇಲ್ಲಿಯ ನಿರ್ಮಾಣ ಕಾಮಗಾರಿಗಳು ನಡೆಯುವುದು ಕಷ್ಟ. ಇಂಥ ಕಾರ್ಮಿಕರಾಗಿ ಕರಾವಳಿ-ಮಲೆನಾಡು ಭಾಗದಲ್ಲಿ ದುಡಿಯುವ ಉತ್ತರಕರ್ನಾಟಕದ ಜನರಲ್ಲಿ ಉತ್ತರಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಂದ ಹುಟ್ಟೂರಿಗೆ ಹೋಗುವ ತವರಿನ ಭಾಗ್ಯ ಲಭಿಸಿದೆ. ಕರೋನಾ ಲಾಕ್ ಔಟ್ ಹಿನ್ನೆಲೆಯಲ್ಲಿ ಉತ್ತರಕನ್ನಡ ಉಡುಪಿ, ದಕ್ಷಿಣ ಕನ್ನಡಗಳಿಂದ ಸಾವಿರಾರು ಕಾರ್ಮಿಕರು ಮರಳಿದ್ದಾರೆ. ಅಲ್ಲಿಗೆ ಉ.ಕ. ಕಾರ್ಮಿಕರ ಕರೋನಾ ದಿಗ್ಬಂಧನ ಮುಗಿದಂತಾಗಿದೆ.
(ಸಿದ್ದಾಪುರ,ಮೇ01)
ಕರೊನಾ ಲಾಕ್ ಡೌನ್‍ನಿಂದ ಸಂಕಷ್ಟದಲ್ಲಿರುವ ಕುಟುಂಬದವರಿಗೆ ತಾಲೂಕು ಗ್ರಾಮ ಒಕ್ಕಲಿಗ ಯುವ ಬಳಗದವರಿಂದ ದಿನಸಿ ಸಾಮಗ್ರಿಗಳ ಕಿಟ್ಟ್ ವಿತರಣೆ ಹಾಗೂ ಕರೊನಾ ವೈರಸ್ ಜಾಗೃತಿ ಕುರಿತು ಮಾಹಿತಿ ನೀಡಲಾಯಿತು.
ತಾಲೂಕಿನ ಪದ್ಮನಗದ್ದೆ, ಹರಗಿ,ಕಿಲವಳ್ಳಿ, ಬೇಣದಗುಡ್ಡೆ,ಓಣಿತೋಟ, ಹೇರೂರು ಕಂಚಿಮನೆ ಹಾಗೂ ಬಳೂರಿನ ಬಡ ಕುಟುಂಬದವರಿಗೆ ದಿನಸಿ ಸಾಮಗ್ರಿಗಳ ಕಿಟ್‍ನ್ನು ಶನಿವಾರ ಹಾಗೂ ಭಾನುವಾರ ತಾಲೂಕು ಗ್ರಾಮ ಒಕ್ಕಲಿಗ ಯುವ ಬಳಗದ ಅಧ್ಯಕ್ಷ ವಿ.ಆರ್.ಗೌಡ ಹರಗಿ,ಬಿದ್ರಕಾನ ಗ್ರಾಪಂ ಕಾರ್ಯದರ್ಶಿ ಆರ್.ಬಿ.ಗೌಡ ಹೊಸ್ಕೊಪ್ಪ, ಎಂ.ಟಿ.ಗೌಡ ಕಿಲವಳ್ಳಿ, ಶ್ರೀಕಾಂತ ಗೌಡ ಹರಗಿ, ಜಗನ್ನಾಥ ಗೌಡ ಕಾನಗದ್ದೆ, ದಿನೇಶ ಟಿ ಗೌಡ ಕಿಲವಳ್ಳಿ, ಹೇಮಂತ ಗೌಡ ಗೊಂಟನಾಳ, ಮಹೇಶ ಗೌಡ ಕಾನಗದ್ದೆ ಇತರರ ಉಪಸ್ಥಿತಿಯಲ್ಲಿ ನೀಡಲಾಯಿತು.
