

ಸಿದ್ಧಾಪುರದ ಅರಣ್ಯ ಇಲಾಖೆಯ ಅಧಿಕಾರಿಗಳು ಬಾನ್ಕುಳಿ ಗ್ರಾಮದ ನೇರಳೆಮನೆಯ ಬಡ ಕೃಷಿಕರ ನಿರ್ಮಾಣ ಹಂತದ ಮನೆಯನ್ನು ಧ್ವಂಸ ಮಾಡಿದ್ದರೂ ಬಾಧಿತರಿಗೆ ನ್ಯಾಯ ಒದಗಿಸುವ ದಿಸೆಯಲ್ಲಿ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಫಲವಾಗಿದ್ದು ಅಧಿಕಾರಿಗಳ ಅಟ್ಟಹಾಸದ ಅಮಾನವೀಯತೆಗೆ ವಿರೋಧಿಸದ ಸ್ಪೀಕರ್ ಕ್ರಮ ಸಾರ್ವಜನಿಕ ವಿರೋಧಕ್ಕೆ ಒಳಗಾಗಿದೆ.
ಹಳೆಯ ಮನೆಯ ಜಾಗದಲ್ಲಿ ಹೊಸ ಮನೆ ನಿರ್ಮಾಣಕ್ಕೆ ಅನುಮತಿ ಪಡೆದಿದ್ದ ನೇರಳೆಮನೆಯ ನಾರಾಯಣ ದುರ್ಗಾ ನಾಯ್ಕರ ಕುಟುಂಬ ವಾಸಕ್ಕೆ ಮನೆ ಇಲ್ಲದೆ ಕೊಟ್ಟಿಗೆಯಲ್ಲಿ ವಾಸ ಮಾಡಿತ್ತು. ಮಳೆಗಾಲದ ಹಿನ್ನೆಲೆಯಲ್ಲಿ ಮನೆ ನಿರ್ಮಾಣಕ್ಕೆ ತೊಡಗಿದ್ದ ಈ ಕುಟುಂಬದ ಮನೆ ಕಾಮಗಾರಿಯ ವಸ್ತುಗಳನ್ನು ಇಂದು ಹೊತ್ತೊಯ್ದ ಅಧಿಕಾರಿಗಳು ತಾಂತ್ರಿಕ ಕಾರಣ ನೀಡಿ ತಮ್ಮ ಮನೆಮುರುಕುತನವನ್ನು ಸಮರ್ಥಿಸಿದರು.
ಈ ಬಗ್ಗೆ ನ್ಯಾಯ ಸಿಗಬಹುದೆಂದು ಶಾಸಕ, ಸ್ಫೀಕರ್ ವಿಶ್ವೇಶ್ವರ ಹೆಗಡೆಯವರು ಸಭೆ ನಡೆಸುತಿದ್ದ ತಾ.ಪಂ. ಆವರಣಕ್ಕೆ ಬಂದ ಬಾಧಿತರು ಶಾಸಕರಿಗೆ ತಮ್ಮ ಅಹವಾಲು ತಿಳಿಸಿದರು. ಆದರೆ ಲಾಕ್‍ಡೌನ್, ನಿಶೇಧಾಜ್ಞೆ ಅವಧಿಯಲ್ಲಿ ಬಡರೈತರ ಮನೆ ಕಿತ್ತ ಅರಣ್ಯ ಅಧಿಕಾರಿಗಳನ್ನು ವಿಚಾರಿಸದ ಸ್ಪೀಕರ್ ಮನೆ ಇಲ್ಲದಿದ್ದರೆ ಅಧಿಕಾರಿಗಳಿಗೆ ತಿಳಿಸಿ ವಾಸಕ್ಕೆ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ತೇಪೆ ಹಚ್ಚಿದರು.


ಶಾಸಕರು, ಸ್ಪೀಕರ್ ಆಗಿರುವ ಸ್ಥಳಿಯ ಜನಪ್ರತಿನಿಧಿ ತೊಂದರೆಗೆ ಒಳಗಾದ ಬಡ ರೈತರಿಗೆ ಸ್ಫಂದಿಸದ ಬಗ್ಗೆ ಸ್ಥಳದಲ್ಲಿದ್ದ ಸ್ಥಳಿಯರು ದೂರಿದರು. ಅಧಿಕಾರಿಗಳು ಕಾನೂನಿನ ಬೆದರಿಕೆ ಒಡ್ಡಿದರೆ, ಜನಪ್ರತಿನಿಧಿಗಳು ಸ್ಥಳಿಯ ವಿರೋಧಿಗಳ ಮೇಲೆ ಗೂಬೆ ಕೂರಿಸಿ ಕೈ ತೊಳೆದುಕೊಳ್ಳುತ್ತಾರೆ. ಉತ್ತರಕನ್ನಡ ಜಿಲ್ಲೆಯ ಹೊರಗೆ ಇರದ ಕಾನೂನು, ಕಟ್ಟಳೆ ಇಲ್ಲ್ಯಾಕೆ ಎಂದು ವಿರೋಧ ವ್ಯಕ್ತಪಡಿಸಿರುವ ಸ್ಥಳಿಯರು. ಜಿಲ್ಲೆಯಲ್ಲಿ ನಿಷೇಧಾಜ್ಞೆ, ಲಾಕ್‍ಔಟ್ ಸಂದರ್ಭದಲ್ಲಿ ಅಧಿಕಾರಿಗಳು ಕಾನೂನು ಬಲ ಪ್ರಯೋಗದ ಅಮಾನವೀಯತೆ ಪ್ರದರ್ಶಿಸುತಿದ್ದಾರೆ. ಇದನ್ನು ನಿಯಂತ್ರಿಸಬೇಕಾದ ಜನಪ್ರತಿನಿಧಿಗಳು ಬೇಜವಾಬ್ಧಾರಿಯಿಂದ ನಡೆದುಕೊಳ್ಳುತಿದ್ದಾರೆ. ಎಂದು ಆರೋಪಿಸಿದರು.
ಅಧಿಕಾರಿಗಳ ಅಟ್ಟಹಾಸ ನಿಯಂತ್ರಿಸದ ಉತ್ತರಕನ್ನಡ ಜಿಲ್ಲೆಯ ಜನಪ್ರತಿನಿಧಿಗಳಿಂದಾಗಿ ಬಹುಸಂಖ್ಯಾತ ಬಡಜನರಿಗೇ ತೊಂದರೆ ಯಾಗುತ್ತಿದೆ, ಅಧಿಕಾರಿಗಳನ್ನು ಜನಪ್ರತಿನಿಧಿಗಳು ದೂರುವುದು, ಜನಪ್ರತಿನಿಧಿಗಳು ಅಧಿಕಾರಿಗಳತ್ತ ಕೈ ತೋರುವ ನಾಟಕದಿಂದಾಗಿ ಬಡಜನರು ಗೋಳಾಡುವಂತಾಗಿದೆ ಎನ್ನುವ ಆರೋಪ ಜಿಲ್ಲೆಯಲ್ಲಿ ವ್ಯಾಪಕವಾಗುತ್ತಿದೆ.. ಈ ಬಗ್ಗೆ ಪ್ರತಿಕ್ರೀಯಿಸಿರುವ ಕರ್ನಾಟಕ ರಣಧೀರ ಪಡೆಯ ತಾಲೂಕಾ ಅಧ್ಯಕ್ಷ ಹೇಮಂತ್ ನಾಯ್ಕ ಮತ್ತು ಕರ್ನಾಟಕ ರಾಷ್ಟ್ರೀಯ ಸಮೀತಿಯ ಜಿಲ್ಲಾ ಅಧ್ಯಕ್ಷ ನಾಗರಾಜ್ ನಾಯ್ಕ ಜಿಲ್ಲೆಯಲ್ಲಿ ಬೇಜವಾಬ್ಧಾರಿ ಜನಪ್ರತಿನಿಧಿಗಳು, ಅಧಿಕಾರಿಗಳಿಂದಾಗಿ ಬಡ ಜನರಿಗೆ ತೊಂದರೆ ಆಗುತ್ತಿದೆ. ಈ ಅವ್ಯವಸ್ಥೆಯನ್ನು ಖಂಡಿಸುತ್ತೇವೆ ಮತ್ತು ಜಿಲ್ಲಾಡಳಿತಕ್ಕೆ ಈ ಜನರ ನೆರವಿಗೆ ಬರಲು ಆಗ್ರಹಿಸುತ್ತೇವೆ ಎಂದು ಹೇಳಿದ್ದಾರೆ.
ಉ.ಕ. ಮುಕ್ತ,ಮುಕ್ತ,ಮುಕ್ತ
11 ಜನ ಕೋವಿಡ್ ಸೋಂಕಿತರನ್ನು ಹೊಂದಿದ್ದ ಉತ್ತರಕನ್ನಡ ಜಿಲ್ಲೆಯ ಕೊನೆಯ ಕರೋನಾ ಸೋಂಕಿತ ಇಂದು ಡಿಸ್ಚಾರ್ಜ್ ಆಗುವ ಮೂಲಕ ಉತ್ತರಕನ್ನಡ ಕರೋನಾ ಮುಕ್ತ ಜಿಲ್ಲೆಯಾಗಿದೆ. ಉತ್ತರಕನ್ನಡದ 12 ತಾಲೂಕುಗಳಲ್ಲಿ ಭಟ್ಕಳ ಹೊರತು ಪಡಿಸಿ ಉಳಿದ 11 ತಾಲೂಕುಗಳಲ್ಲಿ ಒಂದೂ ಕೋವಿಡ್ ಪ್ರಕರಣಗಳಿರಲಿಲ್ಲ.
11 ರಲ್ಲಿ ಹತ್ತು ಜನರು ಕಳೆದ ವಾರದ ಮೊದಲೇ ಗುಣಮುಖರಾಗಿದ್ದರು. ಜಿಲ್ಲೆಯ 11 ಕೋವಿಡ್ ಸೋಕಿತರೂ ಗುಣಮುಖರಾಗುವ ಮೂಲಕ ಇಂದಿನಿಂದ ಉತ್ತರಕನ್ನಡ ಕರೋನಾ ಮುಕ್ತ ಜಿಲ್ಲೆಯಾಗಿದೆ. ಭಟ್ಕಳದ ಕರೋನಾ ಕೇಸುಗಳ ಪರಿಣಾಮ ವಿಶಾಲ ಉತ್ತರಕನ್ನಡಕ್ಕೆ ತಲೆನೋವಾಗಿತ್ತು. ಲಾಕ್‍ಡೌನ್,ನಿಷೇಧಾಜ್ಞೆಗಳಿದ್ದ ಮೌನಕ್ಕೆ ಜಾರಿದ್ದ ಜಿಲ್ಲೆ ಮೇ1 ರ ಕಾರ್ಮಿಕ ದಿನಾಚರಣೆಯಂದು ಕೋವಿಡ್ ಸೋಂಕುಮುಕ್ತ ಜಿಲ್ಲೆಯಾಗಿ, ಕೂಲಿ ಕಾರ್ಮಿಕರನ್ನು ಮರಳಿಸಿದ ಜಿಲ್ಲೆಯಾಗಿ ಮುಕ್ತ, ಮುಕ್ತ ಎನ್ನುವಂತಾಗಿದೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
