

ಹಿರಿಯ ಸಾಹಿತಿ ಪ್ರೊಪೆಸರ್ ಕೆಎಸ್ ನಿಸಾರ್ ಅಹಮ್ಮದ್ ವಿಧಿವಶರಾಗಿದ್ದಾರೆ.

ಬೆಂಗಳೂರು: ಹಿರಿಯ ಸಾಹಿತಿ ಪ್ರೊಪೆಸರ್ ಕೆಎಸ್ ನಿಸಾರ್ ಅಹಮ್ಮದ್ ವಿಧಿವಶರಾಗಿದ್ದಾರೆ.
ಇತ್ತೀಚೆಗೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾಗಿದ್ದಾರೆ.
84 ವರ್ಷ ವಯಸ್ಸಿನ ನಿಸಾರ್ ಅಹಮ್ಮದ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ 1936ರ ಫೆಬ್ರವರಿ 5ರಂದು ಜನಿಸಿದ್ದರು.
ಮನಸು ಗಾಂಧಿ ಬಜಾರು, ನೆನೆದವರ ಮನದಲ್ಲಿ, ಸುಮಹೂರ್ತ, ಸಂಜೆ ಐದರ ಮಳೆ, ನಾನೆಂಬ ಪರಕೀಯ, ಆಯ್ದ ಕವಿತೆಗಳು, ಸ್ವಯಂ ಸೇವೆಯ ಗಿಳಿಗಳು, ಅನಾಮಿಕ ಆಂಗ್ಲರು, ಬರಿರಂತರ, ಸಮಗ್ರ ಕವಿತೆಗಳು, ನವೋಲ್ಲಾಸ, ಆಕಾಶಕ್ಕೆ ಸರಹದ್ದುಗಳಿಲ್ಲ, ಅರವತ್ತೈದರ ಐಸಿರಿ, ಸಮಗ್ರ ಭಾವಗೀತೆಗಳು, ಪ್ರಾತಿನಿಧಿಕ ಕವನಗಳು, ನಿತ್ಯೋತ್ಸವ ಪ್ರಮುಖ ಕವನಸಂಕಲನಗಳು.
ಪ್ರಶಸ್ತಿ ಪುರಸ್ಕಾರಗಳು!
* ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
* ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
* ಗೊರೂರು ಪ್ರಶಸ್ತಿ
* ಅನಕೃ ಪ್ರಶಸ್ತಿ
* ಕೆಂಪೇಗೌಡ ಪ್ರಶಸ್ತಿ
* ಪಂಪ ಪ್ರಶಸ್ತಿ
* 1981ರ ರಾಜ್ಯೋತ್ಸವ ಪ್ರಶಸ್ತಿ
* 2003ರ ನಾಡೋಜ ಪ್ರಶಸ್ತಿ
* 2006ರ ಅರಸು ಪ್ರಶಸ್ತಿ
* 2006ರ ಮಾಸ್ತಿ ಪ್ರಶಸ್ತಿ
ಕವಿ ಕೆ.ಎಸ್. ನಿಸಾರ್ ಅಹಮದ್ ಅವರ ಲೇಖನಿಯಿಂದ ಹೊಮ್ಮಿದ ಅನೇಕ ಕವಿತೆಗಳು, ಹಾಡುಗಳಾಗಿ ಜನರ ಮನಸೂರೆಗೊಂಡಿವೆ. ಅವರ ಐದು ಪ್ರಸಿದ್ಧ ಕವಿತೆಗಳ ಕೆಲ ಸಾಲುಗಳು ಓದುಗರ ಮುಂದೆ.
ಟಾಪ್-1 ಜೋಗದ ಸಿರಿ ಬೆಳಕಿನಲ್ಲಿ , ತುಂಗೆಯ ತೆನೆ ಬಳುಕಿನಲ್ಲಿ, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ , ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ – ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ…
* ಟಾಪ್-2 ಕುರಿಗಳು, ಸಾರ್-ಕುರಿಗಳು ಸಾಗಿದ್ದೇ ಗುರಿಗಳು ಮಂದೆಯಲ್ಲಿ ಒಂದಾಗಿ, ಸ್ವಂತತೆಯೇ ಬಂದಾಗಿ ಇದರ ಬಾಲ ಅದು ಮತ್ತೆ … *
ಟಾಪ್-3 ರಾಮನ್ ಸತ್ತ ಸುದ್ದಿ ಓದಿದ ಬೆಳಿಗ್ಗೆ ಶಿವಮೊಗ್ಗೆಗೆ ದರಿದ್ರ ಥಂಡಿ; ಅಸ್ತಿತ್ವದ ಅಸ್ಪಷ್ಟ ಜಿಜ್ಞಾಸೆ, ಗುರುತಿಸಲಾಗದ ಕಸಿವಿಸಿ. ಮುಜುಗರ ತಾಳದೆ ವಾಕಿಂಗ್ ಹೊರಟೆ; ಬೀದಿ… *
ಟಾಪ್-4 ಮನೋರಮಾ ಮನೋರಮಾ ಸಾಲದೇನೆ ನಿನ್ನ ಹೆಸರೆ? ಮಲಗೋಬದ ಗಮಗಮ
* ಟಾಪ್-5 ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ ನೀರೆಂದರೆ ಬರಿ ಜಲವಲ್ಲ ಅದು ಪಾವನತೀರ್ಥ
ಕೆ.ಎಸ್.ನಿಸ್ಸಾರ್ ಅಹಮದ್ ಅವರ ಬೆಣ್ಣೆ ಕಳ್ಳ ಕೃಷ್ಣನನ್ನು ಸುಲಭದಲ್ಲಿ ಮರಯಲು ಸಾಧ್ಯವೇ?
ಬೆಣ್ಣೆ ಕದ್ದ ನಮ್ಮ ಕೃಷ್ಣ ಬೆಣ್ಣೆ ಕದ್ದನಮ್ಮ
ಬೆಣ್ಣೆ ಕದ್ದು ಜಾರುತ ಬಿದ್ದು ಮೊಣಕಾಲೂದಿಸಿಕೊಂಡನಮ್ಮ
ಬಿಂದಿಗೆ ಬಿದ್ದು ಸಿಡಿಯಲು ಸದ್ದು
ಬೆಚ್ಚಿದ ಗೋಪಿಯ ಕಂದನಮ್ಮ
ತಾಯಿ ಬಂದಳೋಡಿ, ಕಳ್ಳನ ಕಣ್ಣಿನಲ್ಲಿ ಖೋಡಿ
ಕಣ್ಣಲಿ ತಾಯಿ ಸಿಟ್ಟನು ತಳೆದು ಸೊಂಟಕೆ ಕೈಯಿಟ್ಟು
ಆದಳು ಅರೆಕ್ಷಣ ಭೀಕರ ಕಾಳಿ
ದುರು ದುರು ಕಣ್ಬಿಟ್ಟು
ಹಣೆ ತುಟಿ ಕೆನ್ನೆಗೆ ಬೆಣ್ಣೆ ಮೆತ್ತಿದ ಒರಟನ ನೋಟಕ್ಕೆ
ಇಳಿಯಿತು ಕೋಪ ಅರಳಿತು ಕೆಂದುಟಿ
ತುಂಟನ ಆಟಕ್ಕೆ
ತಪ್ಪಿದ ದಂಡಕೆ ನಿಟ್ಟುಸಿರೆಳೆದ ಬೆಣ್ಣೆಗಳ್ಳ ನೀಲ
ತಟ್ಟನೆ ಅಳುವುದ ನಿಲ್ಲಿಸಿ
ನಕ್ಕ ಬಾಯಗಲಿಸಿ ಬಾಲ
ಅರಳಿದ ಬೆಳದಿಂಗಳ ಜಾಲ
ಅವನ ಅಕುಟಿಲ ಬೆಣ್ಣೆಯಂತ ನಗು
ಕಾಯಲಿ ಜಗದವರ ಸಂತತ ನಗಿಸಲಿ ನಗದವರ
Read more at: https://kannada.oneindia.com/literature/articles/2006/191206nisar-top5.html
