ಕೇರಳ ಸಾಧನೆ: ಎರಡು ದಿನಗಳಿಂದ ಯಾವುದೇ ಕೊರೊನಾ ಪ್ರಕರಣವಿಲ್ಲ!!

ಕೇರಳದಲ್ಲಿ ಇದುವರೆಗೂ ಒಟ್ಟು 499 ಕೊರೊನಾ ಪ್ರಕರಣಗಳು ದೃಡಪಟ್ಟಿದ್ದರೂ ಅದರಲ್ಲಿ 401 ರೋಗಿಗಳು ಗುಣಮುಖರಾಗಿದ್ದಾರೆ. ನಾಲ್ವರು ಮರಣ ಹೊಂದಿದ್ದು, 95 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ

ಕೇರಳ ಕೊರೊನಾ ಸೋಂಕಿನ ವಿರುದ್ದ ಹೊಸ ಸಾಧನೆ ಮಾಡಿದೆ. ಕೇರಳದಲ್ಲಿ ಕಳೆದ ಎರಡು ದಿನಗಳಿಂದ ಯಾವುದೇ ಹೊಸ ಕೊರೊನಾ ಪತ್ತೆಯಾಗಿಲ್ಲ. ಆ ಮೂಲಕ ಕೇರಳ ಈ ದಾಖಲೆಯನ್ನು ಎರಡನೇ ಬಾರಿಗೆ ಮಾಡಿದೆ. ಈ ಹಿಂದೆ ಮಾರ್ಚ್ 3 ಕ್ಕೆ ಸಹ ಯಾವುದೇ ಪ್ರಕರಣಗಳು ವರದಿಯಾಗಿರಲಿಲ್ಲ.

ಕೇರಳದಲ್ಲಿ ಭಾನುವಾರ ಯಾವುದೇ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ. ಮಾರ್ಚ್ 3 ರ ನಂತರ ಇದು ಎರಡನೇ ಬಾರಿಯಾಗಿದ್ದು, ಪಥನಂತಿಟ್ಟ ಜಿಲ್ಲೆಗೆ ಇಟಲಿಯಿಂದ ಹಿಂದಿರುಗಿದವರೊಬ್ಬರ ಕುಟುಂಬದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾದ ಮೇ 1 ರ ನಂತರ ಕೇರಳದಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ.

ಕೇರಳದಲ್ಲಿ ಇದುವರೆಗೂ ಒಟ್ಟು 499 ಕೊರೊನಾ ಪ್ರಕರಣಗಳು ದೃಡಪಟ್ಟಿದ್ದರೂ ಅದರಲ್ಲಿ 401 ರೋಗಿಗಳು ಗುಣಮುಖರಾಗಿದ್ದಾರೆ. ನಾಲ್ವರು ಮರಣ ಹೊಂದಿದ್ದು, 95 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಈ ನಿಟ್ಟಿನಲ್ಲಿ ಕೇರಳದ್ದು ದಾಖಲೆ ಎಂದೇ ಹೇಳಬಹುದು. ಅತಿ ಹೆಚ್ಚು ಜನರನ್ನು ಗುಣಮುಖರನ್ನಾಗಿ ಮಾಡಿರುವ ಸಾಧನೆ ಈ ರಾಜ್ಯದ್ದಾಗಿದೆ. ಇದರ ಹಿಂದಿರುವ ಅಲ್ಲಿನ ಮುಖ್ಯಮಂತ್ರಿ ಮತ್ತು ಆರೋಗ್ಯ ಮಂತ್ರಿಯ ಕಾಳಜಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಆದರೂ ಕೇರಳವನ್ನು ಕಾಲೆಳೆಯುವವರ ಸಂಖ್ಯೆಯೇನು ಕಡಿಮೆಯಿಲ್ಲ. ಕರ್ನಾಟಕದ ಮೂಲದ ದೆಹಲಿ ನಿವಾಸಿ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾದ ಬಿ.ಎಲ್‌ ಸಂತೋಷ್‌ರವರು ಏಪ್ರಿಲ್‌ 29 ರಂದು ಟ್ವೀಟ್‌ ಮಾಡಿ “ಕೇರಳ ರೆಡ್‌ ಝೋನ್‌ನತ್ತ ದಾಪುಗಾಲಿಡುತ್ತಿದೆ. ಇಡುಕ್ಕಿ, ಕೊಟ್ಟಾಯಂ ಮತ್ತು ಕೊಲ್ಲಂನಲ್ಲಿ ಹೊಸ ಪ್ರಕರಣಗಳು ದಾಖಲಾಗಿವೆ. 20 ಸಾವಿರ ಕೋಟಿ ಪ್ಯಾಕೇಜ್‌ ಗಾಳಿಗೆ ತೂರಿಹೋಗಿದೆ. ಹಾಗಾಗಿ ಸರ್ಕಾರಿ ನೌಕರರ ಸಂಬಳಕ್ಕೆ ಕತ್ತರಿ ಹಾಕುತ್ತಿರುವ ಮೊದಲ ರಾಜ್ಯ ಎಂದು ಟೀಕಿಸಿದ್ದರು.

ಅವರ ಮತ್ತೊಂದು ಟ್ವೀಟ್‌ನಲ್ಲಿ “ನಾವು ಬಿಲ್ವಾಲ ಮಾದರಿ, ಕೇರಳ ಮಾದರಿ, ಪ್ರಪಂಚದ ಬೆಸ್ಟ್‌ ಸಿಎಂ ಎಂದು ಚರ್ಚಿಸುತ್ತಿರುವಾಗಲೇ ಹಿಮಾಚಲ ಪ್ರದೇಶ ಸಾಧನೆ ಮಾಡಿದೆ. ಕೇವಲ 08 ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ ಎಂದು ಹಿಮಾಚಲ ಪ್ರದೇಶವನ್ನು ಹೊಗಳಿದ್ದರು.

ಆದರೆ ಕೇರಳ ಈಗ ಸತತ ಎರಡು ದಿನದಿಂದ ಒಂದೂ ಪ್ರಕರಣಗಳನ್ನು ದಾಖಲಿಸದೆ ಸಾಧನೆ ಮೆರೆದಿದ್ದರೂ ಬಿ.ಎಲ್ ಸಂತೋಷ್‌ ಯಾವುದೇ ಟ್ವೀಟ್‌ ಮಾಡಿಲ್ಲ.

ಇನ್ನು ಕೇರಳದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ 80 ಹಾಟ್‌ಸ್ಪಾಟ್‌ಗಳ ಪಟ್ಟಿಗೆ ಇನ್ನೂ ನಾಲ್ಕು ಹಾಟ್‌ಸ್ಪಾಟ್‌ಗಳನ್ನು ಸೇರಿಸಲಾಗಿದೆ. ಮನಂತವಾಡಿ ಪುರಸಭೆಯನ್ನು ಹಾಟ್‌ಸ್ಪಾಟ್ ಎಂದು ಹೆಸರಿಸಲಾಗಿದೆ. ಕೇರಳದಲ್ಲಿ ಹಾಟ್‌ಸ್ಪಾಟ್ ಎಂದು ಮೊದಲು ಗುರುತಿಸಿದ ವಯನಾಡ್‌ನಲ್ಲಿ ಸುಮಾರು ಒಂದು ತಿಂಗಳ ನಂತರ ಮೇ 2 ರಂದು ಒಂದು ಕೊರೊನಾ ಪ್ರಕರಣ ದಾಖಲಾಗಿದೆ. ಸಕಾರಾತ್ಮಕ ಪ್ರಕರಣವನ್ನು ಕಂಡಿತು.

ಸದ್ಯಕ್ಕೆ ಯಾವುದೇ ಸಕ್ರಿಯ ಪ್ರಕರಣಗಳಿಲ್ಲದ ಎರ್ನಾಕುಲಂ ಜಿಲ್ಲೆಯ ಎಡಕಟ್ಟುವಾಯಲ್ ಮತ್ತು ಮಂಜಲ್ಲೂರು ಪಂಚಾಯತುಗಳನ್ನು ಹೊಸ ಹಾಟ್‌ಸ್ಪಾಟ್‌ಗಳೆಂದು ಗುರುತಿಸಲಾಗಿದೆ. ಎಡಕ್ಕಟ್ಟುವಾಯಲ್ ಪಂಚಾಯತಿನಲ್ಲಿ ನಾಲ್ವರು ಕೊರೊನಾ ಶಂಕಿತ ವ್ಯಕ್ತಿಗಳು ಭಾನುವಾರ ನೆಗೆಟಿವ್ ಪರೀಕ್ಷೆ ನಡೆಸಿದ್ದರು. ಇವರೆಡು ಪಂಚಾಯತುಗಳು ಇಡುಕ್ಕಿ ಜಿಲ್ಲೆಯ ಗಡಿಯಾಗಿರುವ ಕಾರಣ ಎರಡೂ ಪಂಚಾಯಿತಿಗಳನ್ನು ಹಾಟ್‌ಸ್ಪಾಟ್‌ಗಳಾಗಿ ಗೊತ್ತುಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದೇಶದಲ್ಲಿ ಈಗಾಗಲೇ ಗೋವಾ ಹಾಗೂ ಈಶಾನ್ಯ ಭಾರತದ ಐದು ರಾಜ್ಯಗಳು ಕೊರೊನಾ ಮುಕ್ತ ರಾಜ್ಯಗಳು ಎಂದು ಘೋಷಸಿವೆ. ದೇಶದಲ್ಲಿ ಮೊದಲ ಭಾರಿಗೆ ಕೇರಳಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿ ಅವರು ಗುಣಮುಖರಾಗಿದ್ದರು. ನಂತರದಲ್ಲಿ ಕೇರಳವೂ ಭಾರತದಲ್ಲೇ ಹೆಚ್ಚಿನ ಕೊರೊನಾ ಸೋಂಕಿತರನ್ನು ಹೊಂದಿದ್ದ ರಾಜ್ಯವಾಗಿತ್ತಾದರೂ ಈಗ ಆಶ್ಚರ್ಯಕರ ರೀತಿಯಲ್ಲಿ ಕೊರೊನಾವನ್ನು ನಿಯಂತ್ರಣ ಮಾಡುತ್ತಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

ಪಿ.ಎಂ.ಶ್ರೀ ಎಲ್.ಕೆ.ಜಿ.ಗೆ ಚಾಲನೆ ನೀಡಿದ ಶಾಸಕ ಭೀಮಣ್ಣ

ಸಿದ್ದಾಪುರ: ತಾಲೂಕಿನ ಕೋಲಶಿರ್ಸಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿನಿಂದ ಪ್ರಾರಂಭವಾಗಿರುವ ಪಿ.ಎಮ್.ಶ್ರೀ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಗೆ ಶಿರಸಿ-ಸಿದ್ದಾಪುರ ಕ್ಷೇತ್ರದ...

ಎಚ್ಚರ!: ಒಟಿಪಿ ಬೇಕೇ ಇಲ್ಲ, ಆದರೂ ನಿಮ್ಮ ಖಾತೆಗೆ ಬೀಳುತ್ತೆ ಕನ್ನ!

https://www.youtube.com/watch?v=0hmFtRvXqHc&t=88s ತಂತ್ರಜ್ಞಾನ ಮುಂದುವರೆದಷ್ಟೂ ವಂಚಕರು ವಂಚಿಸುವುದಕ್ಕಾಗಿ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. (ಸಂಗ್ರಹ ಚಿತ್ರ) ತಂತ್ರಜ್ಞಾನ ಮುಂದುವರೆದಷ್ಟೂ ವಂಚಕರು ವಂಚಿಸುವುದಕ್ಕಾಗಿ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಒಟಿಪಿ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *