

ಕೊರೋನಾವೈರಸ್ ವಿರುದ್ಧ ಹೋರಾಟದಲ್ಲಿ ತೊಡಗಿರುವ ರಾಜ್ಯದ ಪೋಲೀಸರಿಗೆ ಜೀವವಿಮೆ ಹಾಗೂ ತುಟ್ಟಿಭತ್ಯೆ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಕರ್ನಾಟಕದ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.
ಕರೋನಾ ರಗಳೆಯಲ್ಲಿ ಕೆಲವು ಸರ್ಕಾರಿ ನೌಕರರಿಗೆ ಕೆಲಸವೂ ಇಲ್ಲ ವೇತನವೂ ಇಲ್ಲ ಎನ್ನುವಂತಾಗಿದೆ.ಜನಸಾಮಾನ್ಯರು, ಸಣ್ಣ-ಪುಟ್ಟ ಕೆಲಸ, ಉದ್ದಿಮೆಗಳ ಜನರಿಗೆ ಕೆಲಸವೂ ಇಲ್ಲ, ಆದಾಯವೂ ಇಲ್ಲ ಎನ್ನುವಂತಾಗಿದೆ. ಕರೋನಾ ನೆಪದಲ್ಲಿ ಬಹುತೇಕ ಸರ್ಕಾರಿ ನೌಕರರು ರಜೆ, ವಿಶ್ರಾಂತಿ ಪಡೆಯುತ್ತಾ ಪುಕ್ಕಟ್ಟೆ ವೇತನ ಎಣಿಸುತಿದ್ದರೆ, ಹೋಮ್ ಗಾರ್ಡ್ ಸೇವೆಯಲ್ಲಿದ್ದು ಪೊಲೀಸ್ ಕೆಲಸ ಮಾಡುವ ಸಿಬ್ಬಂದಿಗಳಿಗೆ ವಿಪರೀತ ಕೆಲಸ, ವೇತನ ಇಲ್ಲ ಎನ್ನುವ ದುಸ್ಥಿತಿ ಇದೆ.
ರಾಜ್ಯದಲ್ಲಿ ಲಕ್ಷಾಂತರ ಜನರು ಹೋಮ್ ಗಾರ್ಡ್ ಸೆವೆಯಲ್ಲಿದ್ದವರು ಕಳೆದ ಕೆಲವು ವರ್ಷಗಳಿಂದ ಪೊಲೀಸ್ ಕಾರ್ಯ ನಿರ್ವಹಿಸುತಿದ್ದಾರೆ. ಮಾಡುವ ಕೆಲಸ ಒಂದೇ ಆದರೆ ಅನುಕೂಲ ಮಲತಾಯಿ ಧೋರಣೆ ಎನ್ನುವಂತಾಗಿರುವ ಈ ಸೇವಕರಿಗೆ ಕಳೆದ ಕೆಲವು ತಿಂಗಳುಗಳಿಂದ ವೇತನ ನೀಡಿಲ್ಲ.
ವರ್ಷವಿಡೀ ಕೆಲಸಮಾಡಿ ವರ್ಷಕ್ಕೆ ಎರಡ್ಮೂರು ಬಾರಿ ಕನಿಷ್ಟ ವೇತನ ಪಡೆಯುವ ಈ ಹೋಂಗಾರ್ಡ್ ಗಳ ಸ್ಥಿತಿ ಕರೋನಾ ಸಮಯದಲ್ಲಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಸರ್ಕಾರ, ಹಿರಿಯ ಅಧಿಕಾರಿಗಳು ಅನುಕೂಲ,ಸೌಲಭ್ಯ ಪ್ರಕಟಿಸುತಿದ್ದಾರಾದರೂ ಇವು ನಿಗದಿತ ಸಮಯಕ್ಕೆ ದೊರೆಯುತ್ತಿವೆಯಾ ಎನ್ನುವುದು ಯಾರಿಗೂ ಬೇಡದ, ತಿಳಿಯದ ವಿಷಯವಾಗಿದೆ.
ಕರೋನಾ ಸೇವೆಯಲ್ಲಿ ಪೊಲೀಸರಷ್ಟೇ ನಿಷ್ಠೆಯಿಂದ ದುಡಿದ ಹೋಮ್ಗಾರ್ಡ್ ಗಳ ಸ್ಥಿತಿ ಈಗ ಚಿಂತಾಜನಕ ಈ ಬಡಪಾಯಿಗಳನ್ನು ಇಲಾಖೆಯವರೂ ಕೇಳುವುದಿಲ್ಲ, ಕುಟುಂಬಸ್ಥರೂ ನಂಬುವುದಿಲ್ಲ ಎನ್ನುವಂತಾಗಿದ್ದು ಈ ಜನರ ಬವಣೆ ಬಗ್ಗೆ ಕೇಳಿ ಶೀಘ್ರ ಅನುಕೂಲ ಕಲ್ಫಿಸಲು ಅನೇಕ ನಾಗರಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಮಾಜಮುಖಿಗೆ ಮಾಹಿತಿ ನೀಡಿದ ಜಾ,ದಳದ ಉತ್ತರ ಕನ್ನಡ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಲಿಯಾಸ್ ಶೇಕ್ ಹಾಳದಕಟ್ಟಾ ‘ ಕತ್ತೆಯಂತೆ ದುಡಿಸಿ, ವೇತನ, ಅನುಕೂಲ ಕಲ್ಪಿಸದ ಸರ್ಕಾರದ ನೀತಿ ಸರಿಯಲ್ಲ, ಅಮಾಯಕ ಸೇವಕರಾದ ಹೋಮ್ ಗಾರ್ಡ್ ಗಳ ವಿಚಾರದಲ್ಲಿ ಅಮಾನವೀಯತೆಯಿಂದ ವರ್ತಿಸುವ ಸರ್ಕಾರ, ಸಮಾಜ ನಾಗರಿಕ ಸಮಾಜವೆನ್ನಲು ನಮಗೇ ನಾಚಿಕೆ’ ಎಂದಿದ್ದಾರೆ. ಕರೋನಾ ಮತ್ತಿತರ ಸಂದರ್ಭಗಳಲ್ಲಿ ನಿರಂತರವಾಗಿ ಸೇವಾಮನೋಭಾವದಿಂದ ದುಡಿಯುವ ಹೋಮ್ ಗಾರ್ಡ್ ಗಳಿಗೆ ನ್ಯಾಯ ಒದಗಿಸಬೇಕೆಂಬುದು ಸಮಾಜಮುಖಿಯ ಆಗ್ರಹ ಕೂಡಾ.
ಕೊರೋನಾ ವಿರುದ್ಧ ಹೋರಾಡುವ ಪೋಲೀಸರಿಗೆ ವಿಮೆ, ತುಟ್ಟಿಭತ್ಯೆ: ಡಿಜಿಪಿ ಪ್ರವೀಣ್ ಸೂದ್
ಬೆಂಗಳೂರು: ಕೊರೋನಾವೈರಸ್ ವಿರುದ್ಧ ಹೋರಾಟದಲ್ಲಿ ತೊಡಗಿರುವ ರಾಜ್ಯದ ಪೋಲೀಸರಿಗೆ ಜೀವವಿಮೆ ಹಾಗೂ ತುಟ್ಟಿಭತ್ಯೆ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಕರ್ನಾಟಕದ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.
ಕೋವಿಡ್ ವಿರುದ್ಧ ಹಗಲು ರಾತ್ರಿ ಶ್ರಮಿಸುತ್ತಿರುವ ಪೋಲೀಸರಿಗೆ 30 ಲಕ್ಷ ರೂ. ಜೀವ ವಿಮೆ ಸೌಲಭ್ಯವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದರು.
ಇದೀಗ ಪೊಲೀಸರು, ಹೋಂ ಗಾರ್ಡ್ಸ್, ಅಗ್ನಿಶಾಮಕ ಸಿಬ್ಬಂದಿ, ಸಿವಿಲ್ ಡಿಫೆನ್ಸ್, ಕಾರಾಗೃಹ ಸಿಬ್ಬಂದಿಗಳಿಗೆ ವಿಮಾ ಸೌಲಭ್ಯ ಹಾಗೂ ತುಟ್ಟಿಭತ್ಯೆ ಸಿಗ;ಲಿದೆ ಎಂದು ಪ್ರವೀಣ್ ಸೂದ್ ಟ್ವೀಟ್ ಮೂಲಕ ಸಿಹಿ ಸುದ್ದಿ ಕೊಟ್ಟಿದ್ದಾರೆ.
ಉ.ಕ. ಭಟ್ಕಳ ಹೊರತು ಪಡಿಸಿ ನಗರ 7 ರಿಂದ 1 (3) ಗ್ರಾಮೀಣ 7 ರಿಂದ 7 ಅಗತ್ಯ ಸೇವೆ -ಶಿವರಾಮ್ ಹೆಬ್ಬಾರ್ ಪ್ರಕಟಣೆ
ಕರೋನಾ ಹಿನ್ನೆಲೆಯಲ್ಲಿ ಮೇ 17 ರ ವರೆಗೆ ಲಾಕ್‍ಡೌನ್ ವಿಸ್ತರಣೆಯಾಗಿರುವುದರಿಂದ ಅಲ್ಲಿವರೆಗೆ ಅಥವಾ ಮುಂದಿನ ಆದೇಶದ ವರೆಗೆ ಭಟ್ಕಳ ಹೊರತುಪಡಿಸಿ ಜಿಲ್ಲೆಯಾದ್ಯಂತ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನಗರದಲ್ಲಿ ಅಗತ್ಯ ಸೇವೆ ಒದಗಿಸಬಹುದು, ಮದ್ಯದಂಗಡಿಗಳು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರ ವರೆಗೆ ಹಾಗೂ ಗ್ರಾಮೀಣ ಭಾಗಗಳಲ್ಲಿ ಈ ಸೇವೆಗಳನ್ನು ಬೆಳಿಗ್ಗೆ 7 ರಿಂದ ಸಂಜೆ 7 ರ ವರೆಗೆ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಶಿವರಾಮ್ ಹೆಬ್ಬಾರ್ ಪ್ರಕಟಿಸಿದರು.

