ರಾಜ್ಯದಾದ್ಯಂತ ಮದ್ಯ ಮಾರಾಟಕ್ಕೆ ಮುಕ್ತ ಅವಕಾಶ ನೀಡಿದ್ದನ್ನೇ ಪರವಾನಗಿ ಎಂದು ಭಾವಿಸಿ ಫಜೀತಿ ಮಾಡಿಕೊಂಡ ವಿದ್ಯಮಾನ ರಾಜ್ಯದ ಕೆಲವೆಡೆ ನಡೆದಿದೆ.
ಮದ್ಯ ಖರೀದಿಗಾಗಿ ಸಾರ್ವಜನಿಕರು ಮುಗಿಬಿದ್ದು ಶಾಂತಿ-ಸುವ್ಯವಸ್ಥೆಗೆ ಅಡ್ಡಿಯಾಗುವಂತಾಗಿದ್ದು ಇಂದಿನ ಮಾದ್ಯಮದ ಪ್ರಮುಖ ಸುದ್ದಿ ಇದರೊಂದಿಗೆ ರೇಷನ್ ಗಾಗಿ ಜನರು ಮುಗಿಬಿದ್ದು ಪೊಲೀಸರಿಗೆ ಫಜೀತಿ ಉಂಟುಮಾಡಿರುವುದೂ ಕೆಲವೆಡೆ ಸುದ್ದಿಯಾಗಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಮದ್ಯ ಖರೀದಿಗೆ ಅಂತಹ ನೂಕು ನುಗ್ಗಲು ಉಂಟಾಗದಿದ್ದರೂ ಪಡಿತರ ಖರೀದಿ, ಬ್ಯಾಂಕ್ ಕೆಲಸ, ಇತರ ಅಗತ್ಯಗಳಿಗಾಗಿ ನಗರಕ್ಕೆ ಬರುತ್ತಿರುವ ಸಾರ್ವಜನಿಕರು ಕರೋನಾ ಭಯಮುಕ್ತರಾದಂತೆ ವರ್ತಿಸುತಿದ್ದಾರೆ.
ಶಿರಸಿ-ಸಿದ್ಧಾಪುರಗಳಲ್ಲಿ ಜನ ಒಂದು ತಿಂಗಳ ನಂತರ ನಗರಕ್ಕೆ ಧಾವಿಸಿದ್ದು ವೈಯಕ್ತಿಕ ಅಂತರದಲ್ಲಿ ಖರೀದಿ ಭರಾಟೆ ನಡೆದಿದೆ. ಪಡಿತರ ಪಡೆಯುವ ಸಾರ್ವಜನಿಕರು ಮುಂಜಾನೆಯಿಂದಲೇ ತಮ್ಮ ವಸ್ತುಗಳ ಕ್ಯೂ ಹಿಡಿದಿದ್ದಾರೆ. ಮದ್ಯ ಮಾರಾಟ ಮುಕ್ತ ಮಾಡಿರುವುದರಿಂದ ಜನರು ಷರತ್ತು-ನಿಯಮ ಹಿಂಪಡೆದಿದ್ದಾರೆಂದು ಭಾವಿಸಿ ನಗರಕ್ಕೆ ಬರುತಿದ್ದಾರೆ. ಅನಗತ್ಯ ಓಡಾಟಕ್ಕೆ ಬಂದವರು ಹೊಡೆತ ತಿಂದು ಮರಳುತಿದ್ದಾರೆ ಎಂದು ಸರ್ಕಾರಿ ಮೂಲಗಳೇ ಮಾಹಿತಿ ನೀಡಿವೆ. ಉತ್ತರಕನ್ನಡ ಜಿಲ್ಲೆ ಸೇರಿದಂತೆ ಕೆಲವೆಡೆ ಮಾರ್ಗಸೂಚಿ ಪ್ರಕಟಿಸದೆ ಆಗಿರುವ ಈ ಗೊಂದಲದಿಂದಾಗಿ ಸಾರ್ವಜನಿಕರು, ಅಧಿಕಾರಿ ವರ್ಗಕ್ಕೂ ಕಿರಿಕಿರಿಯಾಗಿದೆ.
ಈ ವಾರ ಉತ್ತರಕನ್ನಡ,
ಹಲಸಿನ ಕಾಯಿ ವಿವಾದ ಕಾಂಗ್ರೆಸ್ ಮುಖಂಡನಿಂದ ಕೊಲೆ ಯತ್ನ, ಯೋಜನಾ ಕಾರ್ಯಕರ್ತರ ಹಕ್ಕುಗಳ ರಕ್ಷಣೆಗೆ ಮೇ ಡೆ ಆಚರಣೆ
ಉತ್ತರಕನ್ನಡ ಜಿಲ್ಲೆಯಲ್ಲಿ ಕರೋನಾ ಭೀತಿ, ಮಂಗನಕಾಯಿಲೆ ಆತಂಕಗಳ ನಡುವೆ ಮೇ ಡೆ ನಡೆದು ಮಳೆಯಿಂದ ಇಳೆ ತಂಪು ಮಾಡಿದೆ.
ಕರೋನಾ ಸಂತೃಸ್ತರಿಗೆ ನೆರವು ನೀಡುವ ವಿಚಾರದಲ್ಲಿ ಪ್ರಮುಖ ಜನಪ್ರತಿನಿಧಿಗಳು,ಹಳೆಯ ರಾಜಕಾರಣಿಗಳು ಸ್ಫಂದಿಸಲಿಲ್ಲ ಎನ್ನುವ ಆರೋಪದ ನಡುವೆ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ತಮ್ಮ ಕ್ಷೇತ್ರ ಮುಂಡಗೋಡು, ಯಲ್ಲಾಪುರಗಳಲ್ಲಿ ಫುಡ್‍ಕಿಟ್ ವಿತರಿಸಿದ್ದಾರೆ.
ಮೇ ಡೆ ಆಚರಣೆ-
ಜಿಲ್ಲೆಯ ಅಂಕೋಲಾ, ಸಿದ್ಧಾಪುರ ಸೇರಿದಂತೆ ಕೆಲವೆಡೆ ಮೇ1 ರ ಮೇ ಡೆ ಆಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಅಂಕೋಲಾ ಅಗಸೂರಿನಲ್ಲಿ ಶಾಂತಾರಾಮ ನಾಯಕರ ನೇತೃತ್ವದಲ್ಲಿ ಕೆಲವೇ ಜನರು ಸೇರಿ ಮೇ ಡೆ ಆಚರಣೆ ಮಾಡಿ ತಮ್ಮ ಬೇಡಿಕೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದರು.
ಸಿದ್ಧಾಪುರದಲ್ಲಿ ಯಮುನಾ ಗಾಂವ್ಕರ್ ಮೇ ಡೆ ಆಚರಣೆ ಅಂಗವಾಗಿ ಕಾರ್ಮಿಕರ ಬೇಡಿಕೆಗಳನ್ನು ತಿಳಿಸಿದರು, ಕಾರ್ಮಿಕರಿಗೆ ದಿನದ 12 ತಾಸುಗಳ ಕೆಲಸಗಳೊಂದಿಗೆ ಅನೇಕ ಯೋಜನಾ ಕಾರ್ಯಕರ್ತರು, ಗುತ್ತಿಗೆ ಕಾರ್ಮಿಕರ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಮಾನವೀಯವಾಗಿ ವರ್ತಿಸುತ್ತಿರುವ ಬಗ್ಗೆ ದಾಖಲೆ, ಅಂಕಿಸಂಖ್ಯೆಗಳೊಂದಿಗೆ ವಿವರಿಸಿದರು.