

ಕರೋನಾ ಹಿನ್ನೆಲೆಯಲ್ಲಿ ಮೇ 17 ರ ವರೆಗೆ ಲಾಕ್‍ಡೌನ್ ವಿಸ್ತರಣೆಯಾಗಿರುವುದರಿಂದ ಅಲ್ಲಿವರೆಗೆ ಅಥವಾ ಮುಂದಿನ ಆದೇಶದ ವರೆಗೆ ಭಟ್ಕಳ ಹೊರತುಪಡಿಸಿ ಜಿಲ್ಲೆಯಾದ್ಯಂತ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನಗರದಲ್ಲಿ ಅಗತ್ಯ ಸೇವೆ ಒದಗಿಸಬಹುದು, ಮದ್ಯದಂಗಡಿಗಳು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರ ವರೆಗೆ ಹಾಗೂ ಗ್ರಾಮೀಣ ಭಾಗಗಳಲ್ಲಿ ಈ ಸೇವೆಗಳನ್ನು ಬೆಳಿಗ್ಗೆ 7 ರಿಂದ ಸಂಜೆ 7 ರ ವರೆಗೆ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಪ್ರಕಟಿಸಿದರು.
ಕಾರವಾರದಲ್ಲಿ ಮಾಧ್ಯಮಪ್ರತಿನಿಧಿಗಳಿಗೆ ಈ ಮಾಹಿತಿ ನೀಡಿದ ಅವರು ಕರೋನಾ ಭಯ, ಲಾಕ್‍ಡೌನ್ ನಿಯಮಗಳಿಂದ ಮುಕ್ತವಾಗುವುದು ಕಷ್ಟ ಪರಿಸ್ಥಿತಿ ಜನರ ಅನುಕೂಲತೆ, ಎಲ್ಲಾ ಅಂಶಗಳನ್ನು ಪರಿಗಣಿಸಿ ಕೆಲವು ರಿಯಾಯತಿ, ವಿನಾಯಿತಿಗಳನ್ನು ನೀಡಿದ್ದೇವೆ ಅವಕ್ಕೂ ನಿಯಮ,ನಿಬಂಧನೆಗಳ ಕಡಿವಾಣ ಇದ್ದೇ ಇದೆ ಎಂದರು. ಅಗತ್ಯ, ಅನಿವಾರ್ಯವಾದವರಿಗೆ ಜಿಲ್ಲಾಡಳಿತ ವಿನಾಯಿತಿ ನೀಡಲಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಸೇರಿದಂತೆ ಅನೇಕ ನಿಯಮ-ನಿಬಂಧನೆಗಳಿಗೊಳಪಟ್ಟು ಅವಕಾಶ, ಅನುಕೂಲಗಳನ್ನು ಪಡೆಯಬೇಕು ಎಂದು ವಿನಂತಿಸಿದರು.

ಮದ್ಯಮಾರಾಟದೊಂದಿಗೆ ಎಲ್ಲವೂ ಮುಕ್ತವಾಗಿಲ್ಲ, ಮದ್ಯ,ಪಡಿತರಕ್ಕಾಗಿ ಬಂದು ಹೊಡೆತ ತಿಂದರು!
ರಾಜ್ಯದಾದ್ಯಂತ ಮದ್ಯ ಮಾರಾಟಕ್ಕೆ ಮುಕ್ತ ಅವಕಾಶ ನೀಡಿದ್ದನ್ನೇ ಪರವಾನಗಿ ಎಂದು ಭಾವಿಸಿ ಫಜೀತಿ ಮಾಡಿಕೊಂಡ ವಿದ್ಯಮಾನ ರಾಜ್ಯದ ಕೆಲವೆಡೆ ನಡೆದಿದೆ.
ಮದ್ಯ ಖರೀದಿಗಾಗಿ ಸಾರ್ವಜನಿಕರು ಮುಗಿಬಿದ್ದು ಶಾಂತಿ-ಸುವ್ಯವಸ್ಥೆಗೆ ಅಡ್ಡಿಯಾಗುವಂತಾಗಿದ್ದು ಇಂದಿನ ಮಾದ್ಯಮದ ಪ್ರಮುಖ ಸುದ್ದಿ ಇದರೊಂದಿಗೆ ರೇಷನ್ ಗಾಗಿ ಜನರು ಮುಗಿಬಿದ್ದು ಪೊಲೀಸರಿಗೆ ಫಜೀತಿ ಉಂಟುಮಾಡಿರುವುದೂ ಕೆಲವೆಡೆ ಸುದ್ದಿಯಾಗಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಮದ್ಯ ಖರೀದಿಗೆ ಅಂತಾ ನೂಗುನುಗ್ಗಲು ಉಂಟಾಗದಿದ್ದರೂ ಪಡಿತರ ಖರೀದಿ, ಬ್ಯಾಂಕ್ ಕೆಲಸ, ಇತರ ಅಗತ್ಯಗಳಿಗಾಗಿ ನಗರಕ್ಕೆ ಬರುತ್ತಿರುವ ಸಾರ್ವಜನಿಕರು ಕರೋನಾ ಭಯಮುಕ್ತರಾದಂತೆ ವರ್ತಿಸುತಿದ್ದಾರೆ. ಶಿರಸಿ-ಸಿದ್ಧಾಪುರಗಳಲ್ಲಿ ಜನ ಒಂದು ತಿಂಗಳ ನಂತರ ನಗರಕ್ಕೆ ಧಾವಿಸಿದ್ದು ವೈಯಕ್ತಿಕ ಅಂತರದಲ್ಲಿ ಖರೀದಿ ಭರಾಟೆ ನಡೆದಿದೆ. ಪಡಿತರ ಪಡೆಯುವ ಸಾರ್ವಜನಿಕರು ಮುಂಜಾನೆಯಿಂದಲೇ ತಮ್ಮ ವಸ್ತುಗಳ ಕ್ಯೂ ಹಿಡಿದಿದ್ದಾರೆ. ಮದ್ಯ ಮಾರಾಟ ಮುಕ್ತ ಮಾಡಿರುವುದರಿಂದ ಜನರು ಷರತ್ತು-ನಿಯಮ ಹಿಂಪಡೆದಿದ್ದಾರೆಂದು ಭಾವಿಸಿ ನಗರಕ್ಕೆ ಬರುತಿದ್ದಾರೆ. ಅನಗತ್ಯ ಓಡಾಟಕ್ಕೆ ಬಂದವರು ಹೊಡೆತ ತಿಂದು ಮರಳುತಿದ್ದಾರೆ ಎಂದು ಸರ್ಕಾರಿ ಮೂಲಗಳೇ ಮಾಹಿತಿ ನೀಡಿವೆ. ಉತ್ತರಕನ್ನಡ ಜಿಲ್ಲೆ ಸೇರಿದಂತೆ ಕೆಲವೆಡೆ ಮಾರ್ಗಸೂಚಿ ಪ್ರಕಟಿಸದೆ ಆಗಿರುವ ಈ ಗೊಂದಲದಿಂದಾಗಿ ಸಾರ್ವಜನಿಕರು, ಅಧಿಕಾರಿ ವರ್ಗಕ್ಕೂ ಕಿರಿಕಿರಿಯಾಗಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
