

ಲಾಕ್ ಡೌನ್ ಸಡಿಲಗೊಂಡ ನಂತರ ಬೆಳಿಗ್ಗೆ ಸಮಯದಲ್ಲಿ ವಾಹನಗಳ ಓಡಾಟ ಪ್ರಾರಂಭವಾಗಿದ್ದರೂ ಮಧ್ಯಾಹ್ನದ ನಂತರ ಉತ್ತರ ಕನ್ನಡ ಸ್ತಬ್ಧವಾಗುತ್ತಿದೆ. ಜನಜಂಗುಳಿ, ವಾಹನಗಳ ಓಡಾಟವಿಲ್ಲದ ಉತ್ತರಕನ್ನಡದಲ್ಲಿ ಕಾಡುಪ್ರಾಣಿಗಳು ಅಂಜಿಕೆ ಇಲ್ಲದೆ ಸಂಚರಿಸುತ್ತಿರುವ ವಿದ್ಯಮಾನ ವರದಿಯಾಗಿದೆ.
ಸಿದ್ಧಾಪುರದ ಕಾನಸೂರು,ಹೇರೂರು ಭಾಗದಲ್ಲಿ ಹುಲಿಯೊಂದು ಸಂಚರಿಸಿದ ಹೆಜ್ಜೆಗುರುತು ಕಂಡಿರುವ ಬಗ್ಗೆ ಸ್ಥಳಿಯರು ಸಮಾಜಮುಖಿಗೆ ಮಾಹಿತಿ ನೀಡಿದ್ದಾರೆ. ಇದು ಹುಲಿಹೆಜ್ಜೆ ಕತೆಯಾದರೆ, ಜೋಗರಸ್ತೆಯ ಮಿಣಸಿ ಬಳಿ ಸಾಯಂಕಾಲದ ಸಮಯದಲ್ಲಿ ಕಾಡುಹಂದಿಗಳ ಹಿಂಡೊಂದು ಪ್ರತ್ಯಕ್ಷವಾಗಿ ದ್ವಿಚಕ್ರವಾಹನದಲ್ಲಿ ಬರುತಿದ್ದ ಪೊಲೀಸ್ ಹವಾಲ್ಧಾರರೊಬ್ಬರನ್ನು ವಾಹನದಿಂದ ಕೆಡವಿ ಗಾಯಾಳುಮಾಡಿದ ಘಟನೆ ನಡೆದಿದೆ. ಪಡವನಬೈಲ್ ಬಳಿ ನಡೆದ ಈ ಘಟನೆಯಲ್ಲಿ ಹವಾಲ್ಧಾರ ಯಲ್ಲಪ್ಪ ಕಾಗವಾಡ ಗಾಯಗೊಂಡಿದ್ದಾರೆ.






ಕರೋನಾ ವರದಿ-
ಕರೋನಾ ಕಾರಣದಿಂದ ಜನಸಾಮಾನ್ಯರು ಧರಿಸಬೇಕಾದ ಮಾಸ್ಕ್ ಗಳನ್ನು ತಯಾರಿಸಿ, ಉಚಿತವಾಗಿ ಹಂಚುವ ಮೂಲಕ ರಾಜ್ಯ ರಣಧೀರ ಪಡೆ ತಾಲೂಕಾಧ್ಯಕ್ಷ ಹೇಮಂತ್ ನಾಯ್ಕ ಸಹಕರಿಸಿದ್ದಾರೆ. ತಾ.ಪಂ. ಸದಸ್ಯ ನಾಶಿರ್ ಖಾನ್ ತಾಲೂಕಿನ ಕೆಲವೆಡೆ ಜನರಿಗೆ ತರಕಾರಿಗಳ ಕಿಟ್ ವಿತರಿಸುವ ಮೂಲಕ ದುರ್ಬಲರ ನೆರವಿಗೆ ಬಂದಿದ್ದಾರೆ.
ಸಿದ್ಧಾಪುರ ಬಾನ್ಕುಳಿ ಗ್ರಾಮದಲ್ಲಿ ಮಠದ ವಿಪರೀತ ಅರಣ್ಯ ಅತಿಕ್ರಮಣ ನೋಡಿ ಸುಮ್ಮನಿರುವ ಅರಣ್ಯ ಇಲಾಖೆ ಬಡ ರೈತರ ಮನೆ ಧ್ವಂಸ ಮಾಡಿದ ಬಗ್ಗೆ ಸಾರ್ವಜನಿಕರ ತಕರಾರೆದ್ದಿದೆ. ಈ ಘಟನೆ ನಡೆದ ಭಾನ್ಕುಳಿ ಗ್ರಾಮಕ್ಕೆ ಜಿಲ್ಲಾ ಕಾಂಗ್ರೆಸ್ ಸಮೀತಿ ಭೇಟಿ ನೀಡಿ ಸಾಂತ್ವನ ಹೇಳುವಲ್ಲಿ ಯಶಸ್ವಿಯಾಗಿದೆ.
ಜಿಲ್ಲೆಯ ಕರೋನಾ ರಗಳೆಗಳ ನಡುವೆ ಸಂಸದ ಅನಂತಕುಮಾರ ತೆರೆಮರೆಯಲ್ಲಿ ಕುಳಿತಿದ್ದು ಈಗ ಮತ್ತೊಂದು ವಿವಾದಾತ್ಮಕ ವಿಷಯದ ಮೂಲಕ ತಮ್ಮ ಇರುವನ್ನು ಸಾಬೀತು ಮಾಡಿದ್ದಾರೆ. ಅನಂತಕುಮಾರ ಹೆಗಡೆಯವರ ಈ ವರ್ತನೆ ವಿರುದ್ಧ ಎಸ್.ಡಿ.ಪಿ.ಆಯ್. ಆಕ್ಷೇಪ ವ್ಯಕ್ತಪಡಿಸಿದೆ.
