ಇಂದು ಈ ನಾಡು- ಜನಸಾಮಾನ್ಯರೇ ದೇಶದ ಸ್ವತ್ತು ಎಂಬುದನ್ನು ಮರೆಯದಿರೋಣ

ಕರೋನಾ ಆರ್ಭಟ ಮುಂದುವರಿದಿದೆ. ರಾಜ್ಯದಲ್ಲಿ ಈ ವರೆಗಿನ ಕರೊನಾ ಸೋಂಕಿತರೊಂದಿಗೆ
ಇಂದಿನ ಹೊಸ 45 ಪ್ರಕರಣಗಳು ಸೇರಿ ಒಟ್ಟೂ ಕೋವಿಡ್ ಸೋಂಕಿತರ ಸಂಖ್ಯೆ 750 ದಾಟಿದೆ.
ಉತ್ತರಕನ್ನಡದಲ್ಲಿ ಭಟ್ಕಳದ 12 ಜನರಲ್ಲಿ ಇಂದು ದೃಢಪಟ್ಟ ಕೋವಿಡ್ ಸೋಂಕಿತ 12 ಜನರಿಂದ ಭಟ್ಕಳ ಮತ್ತು ಉತ್ತರ ಕನ್ನಡದ ಸ್ಥಿತಿಯೇ ಬದಲಾಗಿದೆ. ಭಟ್ಕಳದಲ್ಲಿ ಪ್ರಾರಂಭದಲ್ಲಿ ಆಕಸ್ಮಿಕವಾಗಿ ಪತ್ತೆಯಾದ 12 ಕರೋನಾ ಪ್ರಕರಣಗಳಿಗೂ ಇಂದು ಮತ್ತೆ ದೃಢ ಪಟ್ಟ 12 ಪ್ರಕರಣಗಳಿಗೂ ವ್ಯತ್ಯಾಸವಿದೆ.

ಜಿಲ್ಲೆಯಲ್ಲಿ ಕೆಲವು ಪ್ರಮುಖ ರಾಜಕಾರಣಿಗಳ ಬೇಜವಾಬ್ಧಾರಿ, ಉಡಾಫೆಗಳ ನಡುವೆ ಇಲ್ಲಿಯ ಹಿರಿಯ ಕ್ರೀಯಾಶೀಲ ಅಧಿಕಾರಿಗಳ ನೇತೃತ್ವದಲ್ಲಿ ಉತ್ತರಕನ್ನಡ ಜಿಲ್ಲೆ ಕೋವಿಡ್ ನಿಯಂತ್ರಣದಲ್ಲಿ ಯಶಸ್ವಿಯಾಗಿತ್ತು. ಆದರೆ ಜಿಲ್ಲೆಯ ಸ್ಥಿತಿ ಇಡೀ ಬಿಳಿಯನ್ನು ಕಪ್ಪು ಚುಕ್ಕೆ ಮರೆಸಿತು ಎನ್ನುವಂತೆ ಭಟ್ಕಳ ತಾಲೂಕಿನ ಕರೋನಾ ಪ್ರಕರಣಗಳ ಹೆಚ್ಚಳ ಉತ್ತರಕನ್ನಡ ಜಿಲ್ಲೆ, ಜಿಲ್ಲಾಡಳಿತದ ಶ್ರೇಯಸ್ಸಿಗೆ ಮಸಿ ಬಳಿದಂತಾಗಿದೆ. ಉ.ಕ. ದ ಭಟ್ಕಳ ಸೇರಿದಂತೆ ಎಲ್ಲಾ ತಾಲೂಕುಗಳಿಂದ ಹೊರಹೋಗುವವರು, ಜಿಲ್ಲೆ- ತಾಲೂಕುಗಳಿಗೆ ಬರುವವರ ಓಡಾಟ ಕಡಿಮೆಯೇನಲ್ಲ. ಅಧಿಕಾರಿಗಳಿಂದ ಪಾಸ್ ಪಡೆದೇ ಪ್ರವಾಸ ಮಾಡುತ್ತಿರುವ ಜಿಲ್ಲೆಯ ಜನರ ಪ್ರಮಾಣ ಇತರರನ್ನು ಧೈರ್ಯಗೆಡಿಸುವಂತಿದೆ. ಪ್ರತಿದಿನ ಪ್ರತಿ ತಾಲೂಕುಗಳಿಂದ ಬೆಂಗಳೂರಿಗೆ ಪ್ರಯಾಣಿಸುವವರು, ಅಲ್ಲಿಂದ ಸ್ವತಾಲೂಕು,ಜಿಲ್ಲೆಗೆ ಮರಳುವವರ ಸಂಖ್ಯೆ ಜಿಲ್ಲೆಯ ನೆಮ್ಮದಿಗೆ ಭಂಗ ತರುವಂತಿದೆ.

ಉತ್ತರ ಕನ್ನಡ ಸೇರಿದಂತೆ ರಾಜ್ಯದಲ್ಲಿ ಏರುತ್ತಿರುವ ಕರೋನಾ ಸೋಂಕಿತರ ಸಂಖ್ಯೆ ಕೋವಿಡ್ 19 ನ ಭೀಕರತೆಯನ್ನು ಪರಿಚಯಿಸುವಂತಿದೆ. ಭಟ್ಕಳ ಸೇರಿದಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ಜಿಲ್ಲಾಡಳಿತ, ಅಧಿಕಾರಿಗಳ ಅವಿರತ ಶ್ರಮದಿಂದಾಗಿ ಶಾಂತಿ-ಸುವ್ಯವಸ್ಥೆ, ವಾತಾವರಣ ಸಮತೋಲನದಲ್ಲಿದೆ. ಆದರೆ ಅನಾಗರಿಕರಂತೆ ಮಾತನಾಡುವ ರಾಜಕಾರಣಿಗಳು, ಪರಿಸ್ಥಿತಿಯ ಅಪಾಯ ಅರಿಯದ ಜನರಿಂದ ಜಿಲ್ಲೆ ಬೆಲೆತೆರಬೇಕಾದ ಅಪಾಯದ ಮುನ್ಸೂಚನೆ ನಿಚ್ಚಳವಾಗಿದೆ. ಬರಲಿರುವ ಮಳೆಗಾಲ ಗಾಯದ ಮೇಲೆ ಬರೆ ಏಳೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಉ.ಕ. ಮಲೆನಾಡು, ಕರಾವಳಿಯ ಈಗಿನ ಸ್ಥಿತಿ ಬಾಣಲೆಯಲ್ಲಿ ಬೇಯುತ್ತಿರುವ ವಸ್ತುವಿನಂತಾಗಿದೆ. ಬಾಣಲೆ ತಣ್ಣಗಾಗಬೇಕೆಂದರೆ ಸಾರ್ವಜನಿಕರ ಸಹಕಾರ ಅಗತ್ಯ. ಬಾಣಲೆಯಿಂದ ಬೆಂಕಿಗೆ ಬೀಳುವ ಸ್ಥಿತಿಯ ಗಂಭೀರತೆ ಅರಿತ ಜಿಲ್ಲಾಡಳಿತ ಕಠಿಣ ಕ್ರಮಗಳಿಗೆ ಸಿದ್ಧರಾಗಬೇಕಾದ ಅನಿವಾರ್ಯತೆಯನ್ನು ಸೂಕ್ಷ್ಮವಾಗಿ ಇಂದೇ ಪ್ರಸ್ಥಾಪಿಸಿದೆ.
ಭಟ್ಕಳ ಮತ್ತು ಭಟ್ಕಳದ ಪ್ರಕರಣಗಳಿಂದ ಜಿಲ್ಲೆ ಕೆಂಪು ವಲಯವಾಗುವುದನ್ನು ತಪ್ಪಿಸುವುದು ಕಷ್ಟ. ಶ್ರೀಮಂತರು, ದಾನಿಗಳು, ಸ್ವಯಂ ಸೇವಕರು, ಅಧಿಕಾರಿಗಳು ತಮ್ಮ ಮಿತಿಯಲ್ಲಿ ಸೇವೆ ಸಲ್ಲಿಸುತ್ತಿರುವುದು ಉತ್ತರ ಕನ್ನಡ ಜಿಲ್ಲೆಯ ಸೊಬಗು. ಕಾನೂನು-ಸುವ್ಯವಸ್ಥೆ ಪಾಲಿಸುವ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಜನರ ಸ್ಫಂದನ ಪ್ರಶಂಸನಾರ್ಹ. ಆದರೆ ಈಗಿನ ಕೆಟ್ಟ ದಿನಗಳು ಬಡವರಿಗೆ ಬಲುಕಷ್ಟದ ಸಂಕಷ್ಟದ ದಿನಗಳು. ಮನುಷ್ಯ ನಿಯಂತ್ರಣ ತಪ್ಪಬಹುದಾದ ಸಹನೆ-ಸ್ಪಂದನ ನಿರೀಕ್ಷಿಸುವುದು ತಪ್ಪು. ಆದರೆ ಭಾರತ ಮೇಲಿಂದ ಕೆಳಗಿನ ವರೆಗೆ ತಪ್ಪು ಮಾಡಿ ಸರಿಪಡಿಸಲು ಹೆಣಗುತ್ತಿರುವ ವಿದ್ಯಮಾನ ಈಗಿನ ವರ್ತಮಾನ. ಮಾರ್ಚ್‍ನಲ್ಲಿ ಸ್ವದೇಶಕ್ಕೆ ಬರಲು ಆನಿವಾಸಿ ಭಾರತೀಯರಿಗೆ ಬಿಡಲೇಬಾರದಿತ್ತೆನ್ನುವ ಸತ್ಯ ಮಾತನಾಡುತ್ತಿರುವ ಜನರು ಈಗ ಹೆಚ್ಚುತ್ತಿರುವ ದ್ವಿಮುಖ ವಲಸೆ ಬಗ್ಗೆ ಮಾತನಾಡದಿರಲು ಕಾರಣ ವಾಸ್ತವದ ಚಿತ್ರ ದೊರೆಯದ ಕೊರತೆ ಎನ್ನಬಹುದು.

ಭಾರತೀಯರು ಈಗ ದೇಶಕ್ಕೆ ಸಹಕರಿಸಲು ಸಕಾಲ. ದೇಶದಲ್ಲಿ ಪ್ರಧಾನಮಂತ್ರಿ ಕ್ಯಾರ್ಸ್ ಅವರ ಈ ಹಿಂದಿನ ಉಳ್ಳವರ ಓಲೈಕೆ, ಶ್ರೀಮಂತರು, ಮೇಲ್ವರ್ಗದ ಪೊಷಣೆಯಂತಾದರೆ ಜನ ಕೇಳಲು ಸಿದ್ಧರಿಲ್ಲ. ರಾಜ್ಯದಲ್ಲಿ ಸೌಲಭ್ಯ, ಸಹಾಯಧನ ಪಡೆಯುವವರ ಬೇಡಿಕೆ ವಿಸ್ತರಿಸುತ್ತಿದೆ. ಈ ಎಲ್ಲಾ ನ್ಯೂನ್ಯತೆಗಳ ನಡುವೆ ಸರ್ಕಾರ, ರಾಜಕೀಯ ನಾಯಕರಿಗಿಂತ ಅಧಿಕಾರಿ ವರ್ಗದ ಕೆಲಸ ಬಿಕ್ಕಟ್ಟಿನ ಸವಾಲಿಗೆ ದೃಷ್ಟಾಂಂತ ಒದಗಿಸಿದಂತಾಗಿದೆ. ಈಗ ಜನರ ಪ್ರಾಣದ ಜೊತೆಗೆ ಭವಿಷ್ಯದ ಬಗ್ಗೆ ಯೋಚಿಸಲೂ ಸಕಾಲ. ಆಡಳಿತಗಾರರು, ಜನಸಾಮಾನ್ಯರ ವಿಚಾರಗಳಲ್ಲೂ ಕೆಲವರಿಂದ ಹಲವರಿಗಾಗುತ್ತಿರುವ ತೊಂದರೆ ತಪ್ಪಿಸಿ, ದೇಶವಾಸಿಗಳನ್ನು ಉಜ್ವಲ ಭವಿಷ್ಯಕ್ಕೆ ಅಣಿಗೊಳಿಸುವ ಮಧ್ಯೆ ಅವರ ಹಸಿವಿನ ಪ್ರಶ್ನೆ ಬೃಹದಾಕಾರ ಪಡೆಯುವುದನ್ನು ಅರ್ಥಮಾಡಿಕೊಳ್ಳದ ನಾಯಕತ್ವ ಸೋಲುತ್ತದೆ. ನಾಯಕತ್ವದ ಸೋಲು ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಅನುಮಾನಗಳಿಲ್ಲ.

ದೇಶ ಕಷ್ಟದಲ್ಲಿರುವಾಗ ಕೆಟ್ಟ ಹಿತಾಸಕ್ತಿಗಳು ಗರಿಗೆದರುತ್ತವೆ. ಕೆಟ್ಟ ನಾಯಕತ್ವವನ್ನು ಸಮರ್ಥಿಸುವ ದುರುದ್ಧೇಶದ ಹಿತಾಸಕ್ತಿಗಳು ಎಂದಿನಂತೆ ಈಗಲೂ ತಮ್ಮ ದುರುದ್ದೇಶ ಬೆಂಬಲಿಸುವ ನಾಯಕನ ಭಟ್ಟಂಗಿತನ ಮಾಡುತ್ತಾ ವಾಸ್ತವಕ್ಕೆ ಬೆನ್ನು ಮಾಡುತಿದ್ದಾರೆ. ಈ ಬಿಕ್ಕಟ್ಟಿನ ಸಮಯದಲ್ಲೂ ಪ್ರಾಣ-ದೇಶ ಉಳಿಸಿಕೊಳ್ಳುವ ಜವಾಬ್ಧಾರಿ ಜನಸಾಮಾನ್ಯರ ಮೇಲೇ ಇರುವ ಸತ್ಯವನ್ನು ಮರೆಯದಿರೋಣ.

ಲಾಕ್‍ಡೌನ್ ಸಡಿಲಿಕೆ-
ಏನಂತಾರೆ ಜನ ಭಾಗ-01
ಮಿಶ್ರ ಪ್ರತಿಕ್ರೀಯೆ-

ಸರಿಸುಮಾರು 2 ತಿಂಗಳುಗಳ ಕಾಲಾವಧಿಯ ಕರೋನಾ ಲಾಕ್ ಡೌನ್ ನಂತರ ಉತ್ತರಕನ್ನಡ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಗೊಳಿಸಿ ಬೆಳಿಗ್ಗೆ 7 ರಿಂದ ಸಾಯಂಕಾಲ 7, ನಗರ ಮಧ್ಯಾಹ್ನ 1, ಮದ್ಯದಂಗಡಿಗಳಿಗೆ ಅಪರಾಹ್ನ 3 ಗಂಟೆಯವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಈ ಲಾಕ್ಡೌನ್ ಸಡಿಲಿಕೆ ಬಗ್ಗೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರೀಯೆ ವ್ಯಕ್ತವಾಗಿದೆ. ಏನಂತಾರೆ ಜನ ಎನ್ನುವ ಕುತೂಹಲಕ್ಕೆ ಇಲ್ಲಿವೆ ಉತ್ತರ-
ಲಾಕ್ ಡೌನ್ ಮಾತ್ರ ಪರಿಹಾರವಲ್ಲ- ಶಶಿಭೂಷಣ
ಲಾಕ್ ಡೌನ್ ನಿಂದಲೇ ಕರೋನಾದಿಂದ ಬಚಾವಾಗಬೇಕೆಂದರೆ ಕನಿಷ್ಟ 2 ವರ್ಷ ಲಾಕ್ ಡೌನ್ ಮಾಡಬೇಕು. ಅದು ಸಾಧ್ಯವೆ? ಪ್ರಧಾನಮಂತ್ರಿ ಮೋದಿ ಇಟಲಿಯಲ್ಲಿ ಚಪ್ಪಾಳೆ ಹೊಡೆದರೆಂದು ಇಲ್ಲಿ ಚಪ್ಪಾಳೆ ಹೊಡೆಸುವ, ಹೂ ಸುರಿಸುವ ಅರ್ಥವಿಲ್ಲದೆ ಕಾಪಿ ಮಾಡುತಿದ್ದಾರೆ. ರೈತರ ಬೆಳೆಗಳಿಗೆ ಮಾರುಕಟ್ಟೆ ಮೌಲ್ಯವಿಲ್ಲದೆ ರೈತರು ಹತಾಶರಾಗಿದ್ದಾರೆ. ಜನರಿಂದ ದೀಪ ಹಚ್ಚಿಸಿ, ಚಪ್ಪಾಳೆ ಹೊಡೆಸಿ, ನೆರೆಹೊರೆಯವರನ್ನು ನೋಡಿಕೊಳ್ಳಲು ಹೇಳಿ, ದೇಣಿಗೆ-ದಾನ ಕೇಳಿದರೆ ಮುಗಿಯಿತೆ? ಅವರಿಂದ ಘೋಷಣೆಯಾಗಿರುವುದೇನು? ಸಣ್ಣ-ಮಧ್ಯಮ ಉದ್ದಿಮೆಗಳ ಉದ್ಯಮಿಗಳಿಗೆ ಸಾಲದ ಕಂತು ಕಟ್ಟುವ ಸಮಯಾವಕಾಶ, ವಿದ್ಯುತ್ ಬಿಲ್ಲ ಮನ್ನಾ, ಸಮಯಾವಕಾಶ, ಏನು ನೀಡಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ಸುಧಾರಣಾ ಕ್ರಮಗಳು ನಮ್ಮಲ್ಲ್ಯಾಕಿಲ್ಲ. ಜಿಲ್ಲಾ ಹಂತಗಳಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತ, ಕರೋನಾ ಕಾರ್ಯಕರ್ತರು ಉತ್ತಮ ಕೆಲಸ ಮಾಡಿದ್ದಾರೆ. ಸರ್ಕಾರದಿಂದ ಜನರಿಗೆ,ಉದ್ಯಮಿಗಳಿಗೆ ರೈತರಿಗೆ ಯಾವ ಯೋಜನೆಗಳನ್ನು ಪ್ರಕಟಿಸಲಾಗಿದೆ. ತಲಾ 500 ರೂ. ಬಿಟ್ಟರೆ ಸಾರ್ವಜನಿಕರಿಗೆ ನೇರ ನೆರವು, ಅನುದಾನಗಳಿಲ್ಲ. ಲಾಕ್ ಔಟ್ ತೆರವುಗೊಳಿಸಿ ತೀವ್ರ ಶಿಸ್ತಿನ ಆರೋಗ್ಯ, ಆರ್ಥಿಕ ಕ್ರಮಗಳ ಮೂಲಕ ಸಮತೋಲನ ಕಾಪಾಡಬೇಕಿದೆ. ಲಾಕ್ ಔಟ್, ಕರೋನಾ ನಿಷೇಧಾಜ್ಞೆ, ನಿರ್ಬಂಧಗಳನ್ನು ಹೇರಿ ನಂತರ ಚೇತರಿಸಿಕೊಳ್ಳುವುದು ಹ್ಯಾಗೆ? ಕರೋನಾ ದಿಂದ ಬಚಾವಾದ ನಂತರ ದೇಶದ ಸ್ಥಿತಿ-ಗತಿಗಳ ಮುಂದಾಲೋಚನೆ, ಅಭಿವೃದ್ಧಿ ಕ್ರಮಗಳ ಬಗ್ಗೆ ಸರ್ಕಾರ, ಸರ್ಕಾರಗಳ ಮುಖ್ಯಸ್ಥರು ಮಾತನಾಡಿದ್ದಾರೆಯೆ? ಕರೋನಾ ನಂತರದ ಅವಧಿ ಭೀಕರವಾಗುವುದನ್ನು ತಡೆಯುವ ಸುಧಾರಣಾ ಕ್ರಮಗಳನ್ನು ಪ್ರಕಟಿಸದೆ ಅನಾಹುತಕ್ಕೆ ದಾರಿಮಾಡಿಕೊಟ್ಟಂತಾಗುವುದಿಲ್ಲವೆ? ಈ ಬಗ್ಗೆ ಸರ್ಕಾರದ ಒಳ ಹೊರಗೆ ಮಾತನಾಡುವವರಿಲ್ಲ. ಜೀಹುಜೂರ್ ನಡವಳಿಕೆ ಈ ದೇಶಕ್ಕೆ ಅಪಾಯ ತಂದಿಡುವಂತಿದೆ. ಮುಂಜಾಗೃತೆ, ಮುಂದಾಲೋಚನೆಯಿಲ್ಲದ ಸರ್ಕಾರ, ನಾಯಕತ್ವ ಈ ದೇಶಕ್ಕೆ ಒಳ್ಳೆಯದನ್ನು ಮಾಡಬಹುದು ಎಂದು ನಂಬುವುದಾದರೂ ಹೇಗೆ? ರಾಹುಲ್ ಗಾಂಧಿ ಫೆ. 12 ರಂದು ಟ್ವೀಟ್ ಮಾಡಿದ ಮೇಲೆ ಎಚ್ಚೆತ್ತುಕೊಳ್ಳದ ಸರ್ಕಾರ ಮಾರ್ಚ್‍ನಲ್ಲಿ ದೆಹಲಿಯಲ್ಲಿ ಕಾರ್ಯಕ್ರಮ ಮಾಡಲು ವೈದ್ಯಕೀಯ ತುರ್ತುಸ್ಥಿತಿ ಇಲ್ಲ ಎಂದು ಘೋಶಿಸುತ್ತದೆ. ನಂತರ ಏನಾಯ್ತು. ಸರ್ಕಾರ ನಡೆಸುವವರಿಗೆ ಜವಾಬ್ಧಾರಿಗಳಿದ್ದರೆ ಈ ಅನಾಹುತ ಆಗುತ್ತಿರಲಿಲ್ಲ. ಈಗಲೂ ಇದೇ ಉಡಾಫೆ, ವಿಳಂಬಿತ ಅಂತಿಮ ನಿರ್ಧಾರಗಳಿಂದ ಕರೋನಾ ನಂತರದ ಸ್ಥಿತಿಯನ್ನು ಮತ್ತಷ್ಟು ಭೀಕರಗೊಳಿಸುವಂತಿವೆ ಸರ್ಕಾರದ ನಿರ್ಧಾರಗಳು. ಯಾರದೋ ತಪ್ಪಿಗೆ ದೇಶ, ಜನ ಬೆಲೆತೆರುವಂತಾದರೆ ರಕ್ಷಿಸುವವರ್ಯಾರು? ಲಾಕ್ಡೌನ್ ಯೋಚನೆ ಬಿಟ್ಟು ವೈಜ್ಞಾನಿಕ, ಪ್ರಾಯೋಗಿಕ ಉಪಕ್ರಮಗಳ ಮೂಲಕ ಕರೋನಾ ಹಿಮ್ಮೆಟ್ಟಿಸುವ ಕೆಲಸವಾಗಬೇಕು.
-ಡಾ. ಶಶಿಭೂಷಣ ಹೆಗಡೆ, ಶಿಕ್ಷಣತಜ್ಞ,
ಒಂದು ತಿಂಗಳು ಮುಂದುವರಿಸಬೇಕಿತ್ತು -ನಾಗರಾಜ್ ಕೆ.ಜಿ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ‌ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ೨೪ ಗಂಟೆಗಳಲ್ಲಿ ನಿರಂತರ ಮಳೆಯಾಗಿದೆ. ಇದರ ಪರಿಣಾಮ ಶಿರಸಿ-ಅಂಕೋಲಾ ಮಾರ್ಗದ ಮಧ್ಯೆ ಗುಡ್ಡ...

Recommended For You

About the Author: Kanneshwar Naik

Leave a Reply

Your email address will not be published. Required fields are marked *