ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ, ಬಿಎಸ್-6 ಎಂಜಿನ್ ಹೊಂದಿದ ಇಗ್ನಿಸ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಲ್ಲದೆ ಕಾರಿನ ಫೇಸ್‍ಲಿಫ್ಟ್ ಅನ್ನು ಬದಲಿಸಲಾಗಿದೆ.
ನವದೆಹಲಿ: ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ, ಬಿಎಸ್-6 ಎಂಜಿನ್ ಹೊಂದಿದ ಇಗ್ನಿಸ್ ಕಾರನ್ನು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಲ್ಲದೆ ಕಾರಿನ ಫೇಸ್‍ಲಿಫ್ಟ್ ಅನ್ನು ಬದಲಿಸಲಾಗಿದೆ.
ಮಾರುತಿ ಸುಜುಕಿ ಕಂಪನಿಯ ಬಹುನಿರೀಕ್ಷಿತ ಇಗ್ನಿಸ್ ಅನ್ನು ಹೊಸ ವಿನ್ಯಾಸ ಮತ್ತು ಹೊಸ ಬಣ್ಣಗಳ ಆಯ್ಕೆಯೊಂದಿಗೆ ಬಿಡುಗಡೆಗೊಳಿಸಿದೆ.
ಹೊಸ ಇಗ್ನಿಸ್ ಕಾರು ಐಎಂ-4 ಕಾನ್ಸೆಪ್ಟ್ ಆಧರಿಸಿದೆ. ಹಳೆಯ ಮಾದರಿಗೆ ಹೋಲಿಸಿದರೆ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಇದರಲ್ಲಿ ಮಾರುತಿ ಸುಜುಕಿ ಇಗ್ನಿಸ್ ಫೇಸ್‍ಲಿಫ್ಟ್ ಕಾರಿನ ಮುಂಭಾಗ ಹೊಸ ಬಂಪರ್ ಮತ್ತು ಮರುವಿನ್ಯಾಸ ಮಾಡಲಾಗಿರುವ ಫ್ರಂಟ್ ಗ್ರಿಲ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಮುಂಭಾಗದಲ್ಲಿ ಫಾಕ್ಸ್ ಪ್ಲೇಟ್‍ಗಳನ್ನು ಕೂಡ ಅಳವಡಿಸಿದೆ. ಇನ್ನು ಕಾರಿನ ಹೆಡ್‍ಲ್ಯಾಂಪ್ ಮತ್ತು ಪ್ರೊಜೆಕ್ಟರ್ ಹಾಗೆಯೇ ಎಲ್ಇಡಿ ಡಿಆರ್‍ಎಲ್‍ಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.
ಹಿಂಭಾಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಇದರಲ್ಲಿ ಹೊಸ ಟೇಲ್‍ಲ್ಯಾಂಪ್, ನವೀಕರಿಸಿದ ಬಂಪರ್ ಮತ್ತು ರೂಫ್ ರೂಫ್ ಮೌಂಟೆಡ್ ಸ್ಪಾಯ್ಲರ್ ಜೊತೆಗೆ ರಿಫ್ಲೆಕ್ಟರ್‌ಗಳಿವೆ.
ಹೊಸ ಇಗ್ನಿಸ್ ಫೇಸ್‍ಲಿಫ್ಟ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.89 ಲಕ್ಷದಿಂದ ರೂ.7.19 ಲಕ್ಷಗಳಾಗಿದೆ.
ಭಾರತದಲ್ಲಿ ಹೊಸದಾಗಿ ಪ್ರಾರಂಭಿಸಿದ ನೆಕ್ಸಾ ಪ್ರೀಮಿಯಂ ಡೀಲರ್‍ಗಳ ಮೂಲಕ ಈ ಕಾರನ್ನು ಮಾರಾಟ ಮಾಡಲಾಗುತ್ತದೆ.