ಉ.ಕ. ಚಿಂತಾಜನಕ, ಜನಪ್ರತಿನಿಧಿಗಳ ಡೊಂಬರಾಟ!

ಉತ್ತರಕನ್ನಡ ಜಿಲ್ಲೆಯಲ್ಲಿ ಗುಣಮುಖರಾದ 11 ಕರೋನಾ ರೋಗಿಗಳನ್ನು ಸೇರಿ ಈವರೆಗೆ ಸೋಂಕಿತರ ಸಂಖ್ಯೆ 31 ದಾಟಿದೆ. ಈ 31 ಸೋಂಕಿತರು ತಾಂತ್ರಿಕವಾಗಿ ಉತ್ತರಕನ್ನಡದವರಾದರೂ ವಾಸ್ತವದಲ್ಲಿ ಈ ಎಲ್ಲಾ ಸೋಂಕಿತರೂ ಭಟ್ಕಳದವರೇ.
ಕೇಂದ್ರ ಸರ್ಕಾರದ ನಿರ್ಲಕ್ಷ, ಮಧ್ಯಪ್ರದೇಶದ ಅಧಿಕಾರದ ಕಾರಣದ ಲಾಕ್ಡೌನ್ ವಿಳಂಬಗಳ ಹಿನ್ನೆಲೆಯಲ್ಲಿ ವಿದೇಶಗಳಿಂದ ಭಟ್ಕಳಕ್ಕೆ ಬಂದ ಜನರು ಇಂದು ಭಟ್ಕಳವನ್ನು ಕರೋನಾ ಕೇಂದ್ರವಾಗಿಸುವ ಮೂಲಕ ಉತ್ತರಕನ್ನಡಕ್ಕೆ ಆತಂಕ ಉಂಟುಮಾಡಿದ್ದಾರೆ. ಕರೋನಾ ವಿಷಯವಿರಲಿ, ಇತರ ಸಂದರ್ಭಗಳಿರಲಿ ಉತ್ತರಕನ್ನಡ ಜಿಲ್ಲಾಡಳಿತ ವಹಿಸಿದ ಮುತುವರ್ಜಿ, ಪ್ರಾಮಾಣಿಕ ಕೆಲಸದ ಬಗ್ಗೆ ಯಾರ ತಕರಾರುಗಳೂ ಇಲ್ಲ. ಆದರೆ
ಉತ್ತರಕನ್ನಡದಲ್ಲಿ ಉತ್ತಮ ಕೆಲಸಮಾಡುವ ಜಿಲ್ಲಾಡಳಿತಕ್ಕೆ ರಾಜಕಾರಣಿಗಳೇ ತಲೆನೋವಾಗಿದ್ದಾರೆ. ಇದೇ ವಾರ ಅಡ್ಡಕಸುಬಿ ಸಂಸದ ಅನಂತ ಹೆಗಡೆ ಭಟ್ಕಳದಲ್ಲಿ 45 ದಿವಸಗಳಲ್ಲಾದ 22 ಸಾವುಗಳು ಯಾವ ಕಾರಣಕ್ಕೆ ಆದ ಸಾವುಗಳು ಎಂದು ಪ್ರಶ್ನಿಸಿ, ಅಧಿಕಾರಿಗಳ ಸಭೆ ಕರೆದು ಕೊನೆಗೆ ಪತ್ರಕರ್ತರಿಗೆ ಬೆನ್ನುತೋರಿಸಿ ಉತ್ತರಕುಮಾರರಾದ ಪ್ರಸಂಗ ಈ ವಾರದ ಪ್ರಮುಖ ವಿದ್ಯಮಾನ.

ಇದರ ನಂತರ ಇಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅಧಿಕಾರಿಗಳ ಕಠಿಣ ಆದೇಶ, ಕರೋನಾ ಕಾರ್ಯಾಚರಣೆಗೆ ವಿರುದ್ಧವಾಗಿ ಗೋಕರ್ಣ ಮತ್ತು ಬನವಾಸಿ ಗ್ರಾಮೀಣ ಪ್ರದೇಶಗಳಾಗಿರುವುದರಿಂದ ಅಲ್ಲಿ ಬೆಳಿಗ್ಗೆ 7 ರಿಂದ ಸಾಯಂಕಾಲ 7 ರ ವರೆಗೆ ವಿನಾಯಿತಿ ನೀಡಬೇಕು ಎಂದು ಹೊಸ ಆದೇಶ ಹೊರಡಿಸಿದ್ದಾರೆ.
ಈ ಆದೇಶ ಹೊರಬಿದ್ದ ಸಮಯದಲ್ಲೇ ಸಿದ್ದಾಪುರದ ಕೋಲಶಿರ್ಸಿ ಕ್ರಾಸ್ ನಲ್ಲಿ ಅಂಗಡಿ ಮುಚ್ಚಿಲ್ಲ ಎಂದು ಪೊಲೀಸರು ಅಮಾಯಕರಿಗೆ ಹೊಡೆದಿದ್ದು ಸುದ್ದಿಯಾಗಿದೆ.

ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರ ಕ್ಷೇತ್ರ, ಸಂಸದರ ಊರು, ಶಾಸಕರ ತಾಲೂಕುಗಳು ಎನ್ನುವ ವ್ಯತ್ಯಾಸಗಳಿವೆಯೇ? ಇಂಥ ವ್ಯತ್ಯಾಸವಿದ್ದರೆ ಭಟ್ಕಳದ ಕಾರಣಕ್ಕೆ ಇಡೀ ಜಿಲ್ಲೆಯನ್ನು ಲಾಕ್‍ಡೌನ್ ಮಾಡುವುದು ಎಷ್ಟು ಸರಿ?

ಗೋಕರ್ಣ, ಬನವಾಸಿಗಳು ಗ್ರಾಮೀಣ ಪ್ರದೇಶಗಳೆಂದು ವಿನಾಯಿತಿ ನೀಡುವುದಾದರೆ ಅಂಗೈ ಅಗಲದ ಸಿದ್ದಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸರ ಅಟ್ಟಹಾಸಕ್ಕೆ ಅನುಮತಿ ನೀಡಿದವರ್ಯಾರು? ಈ ಹಿಂದೆ ಕೂಡಾ ಆರಂಭಿಕ ಲಾಕ್ಡೌನ್ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಆದೇಶಕ್ಕೆ ವ್ಯತಿರಿಕ್ತವಾಗಿ ರಾಜಕಾರಣಿಗಳು ಮಾತನಾಡಿ ಗೊಂದಲ ಹುಟ್ಟಿಸಿದ್ದಿದೆ. ಜಿಲ್ಲೆಯಲ್ಲಿ ಹೊರ ಜಿಲ್ಲೆ, ಹೊರ ದೇಶಗಳಿಂದ ಬಂದ ಜನರಿಗೆ ಕಡ್ಡಾಯ ಕ್ವಾರಂಟೈನ್ ಮಾಡಲಾಗಿದೆ. ಅನಧೀಕೃತವಾಗಿ, ಸುಳ್ಳುದಾಖಲೆಗಳ ಮೂಲಕ ತಾಲೂಕು, ಜಿಲ್ಲೆ ಪ್ರವೇಶಿಸಿದವರ ಮೇಲೆ ಜಿಲ್ಲಾಡಳಿತ ನಿಗಾ ಇಡದಿರುವ ಬಗ್ಗೆ ಜಿಲ್ಲೆಯಾದ್ಯಂತ ಆಕ್ಷೇಪ ವ್ಯಕ್ತವಾಗಿದೆ.

ಜನತಾ ಕಫ್ರ್ಯೂ ನಂತರ 2-3 ದಿವಸ ಓಡಾಟ, ಸ್ವಪ್ರದೇಶಕ್ಕೆ ಹಿಂದಿರುಗಲು ಅವಕಾಶ ಕೊಡದ ಪ್ರಭುತ್ವ ಈಗ ಹೊರ ದೇಶ, ಹೊರ ಜಿಲ್ಲೆಗಳಿಂದ ಬರುವವರಿಗೆ ಅವಕಾಶ ನೀಡುತ್ತಿದೆ. ತಾಲೂಕುಗಳು, ಜಿಲ್ಲೆಯಿಂದ ಹೊರಪ್ರದೇಶ, ನಗರಗಳಿಗೆ ಹೋಗುವವರು ಅನಾಯಾಸ ಪಾಸ್ ಪಡೆದು ಪ್ರಯಾಣಿಸುತ್ತಿರುವ ವಿದ್ಯಮಾನಗಳ ಬಗ್ಗೆ ಸಾರ್ವಜನಿಕರ ಆಕ್ಷೇಪ ವ್ಯಕ್ತವಾಗಿದೆ.
ಉಳ್ಳವರು, ನಕಲಿ ಕಾರಣ ,ದಾಖಲೆ ಒದಗಿಸುವವರಿಗೆ ಅನಾಯಾಸ ಪಾಸ್ ದೊರೆಯುವ ವ್ಯವಸ್ಥೆಯಾದರೆ ಅವರಿಂದ ಎರಡೂ ತುದಿಗಳ ಅಮಾಯಕರಿಗೆ ಅನ್ಯಾಯವಾಗುವುದಿಲ್ಲವೆ? ಪ್ರಜಾಪ್ರಭುತ್ವದಲ್ಲಿ ಅಧಿಕಾರಶಾಹಿ ತಪ್ಪು ಮಾಡಿದರೆ ಜನಪ್ರತಿನಿಧಿಗಳು ನಿಯಂತ್ರಿಸಬೇಕು. ಇಲ್ಲಿ ತಪ್ಪುಗಳು ಕೆಲವು ರಾಜಕಾರಣಿಗಳು,ಅಧಿಕಾರಿಗಳಿಂದಲೂ ಆಗುತ್ತಿವೆ. ಈ ಪ್ರಮಾದಕ್ಕೆ ಯಾರು ಹೊಣೆ?

ಉತ್ತರಕನ್ನಡದ ಜನ ಹೊರ ಜಿಲ್ಲೆ- ಹೊರ ದೇಶಗಳಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ. ಅವರು ತವರಿಗೆ ಮರಳುವ ಅಪೇಕ್ಷೆ ಹೊಂದಿರುವುದರಲ್ಲಿ ದುರುದ್ದೇಶವಿರದಿರಬಹುದು ಆದರೆ ಇವರಿಂದ ಸ್ಥಳಿಯರಿಗೆ, ಸ್ಥಳಿಯ ಆಡಳಿತಕ್ಕೆ ತೊಂದರೆಯಾಗಬಾರದಲ್ಲವೆ? ಜನತೆ ಸಂಕಷ್ಟ,ರಗಳೆ ಅರಿತು ಸಹಕರಿಸುತಿದ್ದಾರೆ. ಈ ಸಹಕಾರ, ಸಹನೆ, ತಾಳ್ಮೆ ಸ್ಪೋಟಿಸದಂತೆ ಪಾರದರ್ಶಕವಾಗಿ ಉತ್ತರದಾಯಿಗಳಾಗಬೇಕಾದ ಜವಾಬ್ಧಾರಿ ಅಧಿಕಾರಿಗಳು, ರಾಜಕಾರಣಿಗಳು, ಪ್ರಭುತ್ವದ ಮೇಲಿದೆ. ಉತ್ತರಕನ್ನಡದಲ್ಲಿ ಅಲ್ಪಸಂಖ್ಯಾತ ಉಳ್ಳವರು ಬಹುಸಂಖ್ಯಾತ ಇಲ್ಲದವರ ಮೇಲೆ ಮಾಡುತ್ತಿರುವ ಸವಾರಿ ಹುಲಿಸವಾರಿಯಾದಂತಾಗಿದೆ. ಈ ಹುಲಿಸವಾರಿ ಜಿಲ್ಲೆಯ ಶಾಂತಿ-ಸುವ್ಯವಸ್ಥೆಗಳನ್ನು ಕಾಪಾಡುವಂತೆ ಕಾಣದ ಸ್ಥಿತಿಗೆ ಪ್ರಭುತ್ವವೇ ಕಾರಣವಾಗುತ್ತಿದೆ.

ರಾಷ್ಟ್ರೀಯತೆ, ದೇಶಪ್ರೇಮದ ನಾಟಕಕಾರರು ಈಗ ಜಿಲ್ಲೆಯ ಬಹುಸಂಖ್ಯಾತರ ತಾಳ್ಮೆ ಪರೀಕ್ಷಿಸುವಂತಿದೆ ಸ್ಥಿತಿ. ಸಾರ್ವಜನಿಕರು ಬಂಡೇಳದಂತೆ ಸೂಕ್ಷ್ಮವಾಗಿ ವರ್ತಿಸಬೇಕಾದ ಪ್ರಭುತ್ವ ಕೆಲವು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ದಾಳವಾದರೆ ಭವಿಷ್ಯ ಭೀಕರವಾಗಲೂ ಅವಕಾಶಮಾಡಿಕೊಟ್ಟಂತೆ. ಭಟ್ಕಳ ಹೊರತು ಪಡಿಸಿ ಜಿಲ್ಲೆಯ ಇತರ ತಾಲೂಕುಗಳ ಜನರ ನಡುವೆ ತಾರತಮ್ಯ ಎಸಗಿದರೆ ಅದರ ಪರಿಣಾಮಕ್ಕೆ ರಾಜಕಾರಣಿಗಳು, ಅಧಿಕಾರಿಗಳೇ ಬೆಲೆತೆರಬೇಕಾಗುತ್ತದೆ.

(related)

ಇಂದು ಈ ನಾಡು- ಜನಸಾಮಾನ್ಯರೇ ದೇಶದ ಸ್ವತ್ತು ಎಂಬುದನ್ನು ಮರೆಯದಿರೋಣ
ಕರೋನಾ ಆರ್ಭಟ ಮುಂದುವರಿದಿದೆ. ರಾಜ್ಯದಲ್ಲಿ ಈ ವರೆಗಿನ ಕರೊನಾ ಸೋಂಕಿತರೊಂದಿಗೆ
ಇಂದಿನ ಹೊಸ 45 ಪ್ರಕರಣಗಳು ಸೇರಿ ಒಟ್ಟೂ ಕೋವಿಡ್ ಸೋಕಿತರ ಸಂಖ್ಯೆ 750 ದಾಟಿದೆ.
ಉತ್ತರಕನ್ನಡದಲ್ಲಿ ಭಟ್ಕಳದ 12 ಜನರಲ್ಲಿ ಇಂದು ದೃಢಪಟ್ಟ ಕೋವಿಡ್ ಸೋಕಿತ 12 ಜನರಿಂದ ಭಟ್ಕಳ ಮತ್ತು ಉತ್ತರ ಕನ್ನಡದ ಸ್ಥಿತಿಯೇ ಬದಲಾಗಿದೆ. ಭಟ್ಕಳದಲ್ಲಿ ಪ್ರಾರಂಭದಲ್ಲಿ ಆಕಸ್ಮಿಕವಾಗಿ ಪತ್ತೆಯಾದ 12 ಕರೋನಾ ಪ್ರಕರಣಗಳಿಗೂ ಇಂದು ಮತ್ತೆ ದೃಢ ಪಟ್ಟ 12 ಪ್ರಕರಣಗಳಿಗೂ ವ್ಯತ್ಯಾಸವಿದೆ. ಜಿಲ್ಲೆಯಲ್ಲಿ ಕೆಲವು ಪ್ರಮುಖ ರಾಜಕಾರಣಿಗಳ ಬೇಜವಾಬ್ಧಾರಿ, ಉಡಾಫೆಗಳ ನಡುವೆ ಇಲ್ಲಿಯ ಹಿರಿಯ ಕ್ರೀಯಾಶೀಲ ಅಧಿಕಾರಿಗಳ ನೇತೃತ್ವದಲ್ಲಿ ಉತ್ತರಕನ್ನಡ ಜಿಲ್ಲೆ ಕೋವಿಡ್ ನಿಯಂತ್ರಣದಲ್ಲಿ ಯಶಸ್ವಿಯಾಗಿತ್ತು. ಆದರೆ ಜಿಲ್ಲೆಯ ಸ್ಥಿತಿ ಇಡೀ ಬಿಳಿಯನ್ನು ಕಪ್ಪು ಚುಕ್ಕೆ ಮರೆಸಿತು ಎನ್ನುವಂತೆ ಭಟ್ಕಳ ತಾಲೂಕಿನ ಕರೋನಾ ಪ್ರಕರಣಗಳ ಹೆಚ್ಚಳ ಉತ್ತರಕನ್ನಡ ಜಿಲ್ಲೆ, ಜಿಲ್ಲಾಡಳಿತದ ಶ್ರೇಯಸ್ಸಿಗೆ ಮಸಿ ಬಳಿದಂತಾಗಿದೆ.

ಉ.ಕ. ದ ಭಟ್ಕಳ ಸೇರಿದಂತೆ ಎಲ್ಲಾ ತಾಲೂಕುಗಳಿಂದ ಹೊರಹೋಗುವವರು, ಜಿಲ್ಲೆ- ತಾಲೂಕುಗಳಿಗೆ ಬರುವವರ ಓಡಾಟ ಕಡಿಮೆಯೇನಲ್ಲ. ಅಧಿಕಾರಿಗಳಿಂದ ಪಾಸ್ ಪಡೆದೆ ಪ್ರವಾಸ ಮಾಡುತ್ತಿರುವ ಜಿಲ್ಲೆಯ ಜನರ ಪ್ರಮಾಣ ಇತರರನ್ನು ಧೈರ್ಯಗೆಡಿಸುವಂತಿದೆ. ಪ್ರತಿದಿನ ಪ್ರತಿ ತಾಲೂಕುಗಳಿಂದ ಬೆಂಗಳೂರಿಗೆ ಪ್ರಯಾಣಿಸುವವರು, ಅಲ್ಲಿಂದ ಸ್ವತಾಲೂಕು,ಜಿಲ್ಲೆಗೆ ಮರಳುವವರ ಸಂಖ್ಯೆ ಜಿಲ್ಲೆಯ ನೆಮ್ಮದಿಗೆ ಭಂಗ ತರುವಂತಿದೆ. ಉತ್ತರ ಕನ್ನಡ ಸೇರಿದಂತೆ ರಾಜ್ಯದಲ್ಲಿ ಏರುತ್ತಿರುವ ಕರೋನಾ ಸೋಂಕಿತರ ಸಂಖ್ಯೆ ಕೋವಿಡ್ 19 ನ ಭೀಕರತೆಯನ್ನು ಪರಿಚಯಿಸುವಂತಿದೆ. ಭಟ್ಕಳ ಸೇರಿದಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ಜಿಲ್ಲಾಡಳಿತ, ಅಧಿಕಾರಿಗಳ ಅವಿರತ ಶ್ರಮದಿಂದಾಗಿ ಶಾಂತಿ-ಸುವ್ಯವಸ್ಥೆ, ವಾತಾವರಣ ಸಮತೋಲನದಲ್ಲಿದೆ. ಆದರೆ ಅನಾಗರಿಕರಂತೆ ಮಾತನಾಡುವ ರಾಜಕಾರಣಿಗಳು, ಪರಿಸ್ಥಿತಿಯ ಅಪಾಯ ಅರಿಯದ ಜನರಿಂದ ಜಿಲ್ಲೆ ಬೆಲೆತೆರಬೇಕಾದ ಅಪಾಯದ ಮುನ್ಸೂಚನೆ ನಿಚ್ಚಳವಾಗಿದೆ. ಬರಲಿರುವ ಮಳೆಗಾಲ ಗಾಯದ ಮೇಲೆ ಬರೆ ಏಳೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಉ.ಕ. ಮಲೆನಾಡು, ಕರಾವಳಿಯ ಈಗಿನ ಸ್ಥಿತಿ ಬಾಣಲೆಯಲ್ಲಿ ಬೇಯುತ್ತಿರುವ ವಸ್ತುವಿನಂತಾಗಿದೆ. ಬಾಣಲೆ ತಣ್ಣಗಾಗಬೇಕೆಂದರೆ ಸಾರ್ವಜನಿಕರ ಸಹಕಾರ ಅಗತ್ಯ. ಬಾಣಲೆಯಿಂದ ಬೆಂಕಿಗೆ ಬೀಳುವ ಸ್ಥಿತಿಯ ಗಂಭೀರತೆ ಅರಿತ ಜಿಲ್ಲಾಡಳಿತ ಕಠಿಣ ಕ್ರಮಗಳಿಗೆ ಸಿದ್ಧರಾಗಬೇಕಾದ ಅನಿವಾರ್ಯತೆಯನ್ನು ಸೂಕ್ಷ್ಮವಾಗಿ ಇಂದೇ ಪ್ರಸ್ಥಾಪಿಸಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *