ಉಳ್ಳವರು,ಪ್ರತಿಷ್ಠಿತರಿಗೊಂದು ನ್ಯಾಯ? ಬಡಭಾರತೀಯನಿಗೊಂದು ನ್ಯಾಯ! ಲಾಕ್‍ಡೌನ್, ನಿಷೇಧಾಜ್ಞೆ ನಡುವೆ ಪರಿಸರ ಲೂಟಿ

ಕರೋನಾ ಭಯ, ಮುನ್ನೆಚ್ಚರಿಕೆಯ ನಿಷೇಧಾಜ್ಞೆ, ಲಾಕ್ ಔಟ್ ಗಳ ನಡುವೆ ಸರ್ಕಾರಿ, ಕಾಮಗಾರಿಗಳು, ಮಳೆಗಾಲದ ನೆಪ ಒಡ್ಡಿ ರಾಜಕೀಯ ಶಿಫಾರಸ್ಸಿನನ್ವಯ
ಪರಿಸರ ವಿರೋಧಿ ಕೆಲಸಮಾಡುತ್ತಿರುವ ವಿದ್ಯಮಾನ ಬೆಳಕಿಗೆ ಬಂದಿದೆ.

ಈ ಬಗ್ಗೆ ದೂರಿರುವ ಕೆಲವು ಸಮಾಜಸೇವಕರು ಸಿದ್ಧಾಪುರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ಅಕ್ರಮ ಗಣಿಗಾರಿಕೆ, ಕಲ್ಲು-ಮರಳು ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದೆ. ಈ ಅಕ್ರಮ ವ್ಯವಹಾರಗಳಿಗೆ ರಾಜಕಾರಣಿಗಳು ಮತ್ತು ಅರಣ್ಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ಜಾಣ ಮೌನದ ಸಹಕಾರವೂ ಕಾರಣ ಎನ್ನಲಾಗುತ್ತಿದೆ.
ಸಿದ್ಧಾಪುರದ ಭಾನ್ಕುಳಿಯಲ್ಲಿ ಕಳೆದ ವಾರ ಬಡ ರೈತನ ಮನೆ ಕಿತ್ತೆಸೆದ ಶಿರಸಿ-ಸಿದ್ದಾಪುರದ ಅರಣ್ಯ ಇಲಾಖೆ ಅಧಿಕಾರಿಗಳು ಪಕ್ಕದ ಭಾನ್ಕುಳಿ ಮಠದ ರಸ್ತೆಗಾಗಿ ಮರಗಳನ್ನು ಕಡಿದು ಅರಣ್ಯ ಇಲಾಖೆಯ ಕಣ್ಗಾವಲಲ್ಲೇ ಯಂತ್ರಗಳ ಮೂಲಕ ಮಣ್ಣು- ಮರಗಳನ್ನು ಕಿತ್ತು ಅರಣ್ಯ ಪರಿಸರ ಹಾಳುಮಾಡಿದ್ದರೂ ಅದರ ಬಗ್ಗೆ ತಲೆಕೆಸಿಕೊಳ್ಳದ ಅರಣ್ಯ ಇಲಾಖೆಯ ಪಕ್ಷಪಾತ ಏನನ್ನು ಸೂಚಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.

ಮಡ್ಲಿಕೊಪ್ಪದಲ್ಲಿ ನಿರಂತರ ಗಣಿಗಾರಿಕೆ-

ಸಿದ್ಧಾಪುರ ತಾಲೂಕಿನ ನಿಡಗೋಡು ಭಾಗದ ಮಂಡ್ಲಿಕೊಪ್ಪ ಚೌವಡಿ ಆಣೆಯ ಬಳಿ ಲಾಕ್ ಔಟ್ ಸಮಯದಲ್ಲಿ ಕೂಡಾ ಗಣಿಗಾರಿಕೆ ನಡೆಯುತಿದ್ದು ಈ ಕಲ್ಲು-ಮಣ್ಣು-ಜಲ್ಲಿ ಸಾಗಾಟದಿಂದ ಸ್ಥಳಿಯರಿಗೆ ತೊಂದರೆ ಆಗುತ್ತಿರುವ ಬಗ್ಗೆ ಸ್ಥಳಿಯರು ತಹಸಿಲ್ದಾರರಿಗೆ ದೂರಿದ್ದಾರೆ.

ಜಿಲ್ಲೆಯಲ್ಲಿ ಲಾಕ್ ಔಟ್ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಕಠಿಣ ನಿಯಮಗಳನ್ನು ವಿಧಿಸಲಾಗುತ್ತಿದೆ ಆದರೆ ಮಂಡ್ಲಿಕೊಪ್ಪ, ಭಾನ್ಕುಳಿಭಾಗದಲ್ಲಿ ಹಾಡು ಹಗಲೇ ಗಣಿಗಾರಿಕೆ ಅರಣ್ಯ ನಾಶ, ಪರಿಸರ ನಾಶ ಆಗುತಿದ್ದರೂ ಕಣ್ಮುಚ್ಚಿ- ಕೈ ಕಟ್ಟಿ ಕುಳಿತುಕೊಂಡಿರುವ ಕೆಲವು ಅಧಿಕಾರಿಗಳು,ಇಲಾಖೆಗಳ ಜಾಣಮೌನ,ಮೌನ ಸಹಕಾರದ ಹಿಂದೆ ದೇಶಪ್ರೇಮ, ಹಿಂದುತ್ವದ ಸೋಗಿನ ಕಪಟ ರಾಜಕಾಣಿಗಳ ಪಾತ್ರದ ಬಗ್ಗೆ ದೂರಿರುವ ಕೆಲವರು ಉತ್ತರಕನ್ನಡ ಜಿಲ್ಲೆಯಲ್ಲಿ ಬಡವರು-ಜನಸಾಮಾನ್ಯರಿಗೊಂದು ನ್ಯಾಯ ಪ್ರಭಾವಿಗಳು, ಮಠ-ಮಂದಿರಗಳಿಗೊಂದು ನ್ಯಾಯ ಮಾಡುತ್ತಿರುವ ಜನಪ್ರತಿನಿಧಿಗಳ ಪಕ್ಷಪಾತಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿರುವ ಕೆಲವು ಸಂಘಟನೆಗಳು ಉತ್ತರಕನ್ನಡದಲ್ಲಿ ನಡೆಯುತ್ತಿರುವ ಅಧಿಕಾರಸ್ಥರು,ಪಟ್ಟಭದ್ರರ ಅರಣ್ಯ ನ್ಯಾಯದ ಬಗ್ಗೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಆಪದ್ಭಾಂಧವನಾದ ಇಲಿಯಾಸ್‍ಗೆ ಜನರ ಮೆಚ್ಚುಗೆ
ಉತ್ತರ ಕನ್ನಡದಲ್ಲಿ ನಾನು ಎನ್ನುವ ಅಹಂ ಪ್ರದರ್ಶನ ತಾಂತ್ರಿಕವಾಗಿ ತಪ್ಪು ಎಂದು ಹೇಳಿದವರು ಸಾಹಿತಿ ಜಯಂತ್ ಕಾಯ್ಕಿಣಿ,
ನಾನು ಎನ್ನುವುದನ್ನು ವಿಮರ್ಶಾತ್ಮಕವಾಗಿ ಹೇಳಿದವರು ನಟ ಉಪೇಂದ್ರ ಅದೇನೇ ಇರಲಿ, ಅಹಂ ಎನ್ನುತ್ತೀರೋ? ಸ್ವಾಭಿಮಾನ, ದಾಷ್ಟ್ಯ ಎನ್ನುತ್ತೀರೋ ಆಯ್ಕೆ ನಿಮಗೆ ಬಿಟ್ಟಿದ್ದು
ಉತ್ತರಕನ್ನಡದಲ್ಲಿ ಶಾಸಕ ದಿನಕರ ಶೆಟ್ಟಿ ಆಟೋ ಚಾಲಕರಿಗೆ ತಲಾ ಒಂದು ಸಾವಿರ ಧನಸಹಾಯ ಮಾಡಿ ಮೇಲ್ಪಂಕ್ತಿ ಹಾಕುತ್ತಾರೆ. ನಂತರ ಶಿರಸಿಯ ಉಪೆಂದ್ರ ಪೈ ಆಟೋ ಚಾಲಕರಿಗೆ ದಿನಬಳಕೆಯ ವಸ್ತುಗಳ ಕಿಟ್ ನೀಡುತ್ತಾರೆ. ಇವರೊಂದಿಗೆ ಅಸಹಾಯಕರು ಬಡವರಿಗೆ
ತಮ್ಮ ದುಡಿಮೆಯನ್ನು ಹಂಚಿದ್ದೂ ಇದೆ.
ಆದರೆ ಹಿಂದುತ್ವ, ಹಿಂದೂ ಎನ್ನುವ ಕಪಟ ನಾಟಕದ ಮೂಲಕ ಕಳೆದ 25 ವರ್ಷಗಳಿಂದ ಜನಪ್ರತಿನಿಧಿಗಳಾಗಿರುವ ಉತ್ತರಕನ್ನಡ ಸಂಸದ ಅನಂತಕುಮಾರ ಹೆಗಡೆ, ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಲಾಕ್‍ಡೌನ್, ನಿಷೇಧಾಜ್ಷೆಗಳ ಸಂತೃಸ್ತರಾದ ಉತ್ತರಕನ್ನಡದ ಅಸಹಾಯಕರು, ದುರ್ಬಲರಿಗೆ ಕಿಂಚಿತ್ ವೈಯಕ್ತಿಕ ಸಹಾಯ ಮಾಡಿಲ್ಲ, ಇದು ಹಿಂದೂ, ಹಿಂದುತ್ವದ ಒಳಮರ್ಮ.
ಇದಕ್ಕೆ ಪ್ರತಿಯಾಗಿ ಸಿದ್ದಾಪುರದ ತಾ.ಪಂ. ಸದಸ್ಯ ನಾಶಿರ್ ಖಾನ್ ತನ್ನ ಕ್ಷೇತ್ರದಲ್ಲಿ ತರಕಾರಿ, ದಿನಬಳಕೆ ವಸ್ತು ವಿತರಿಸಿದ್ದಾರೆ. ಇವರೊಂದಿಗೆ ಭೀಮಣ್ಣ ನಾಯ್ಕ, ವಸಂತ ನಾಯ್ಕ,ಕೇ,ಜಿ,ನಾಯ್ಕ, ಸಾರಸ್ವತ ಸಮಾಜ, ನಾಮಧಾರಿ ಸಮಾಜಗಳು ಅವರ ಮಿತಿಯಲ್ಲಿ ಅಸಹಾಯಕರಿಗೆ ನೆರವು ನೀಡಿವೆ.
ಇವರೊಂದಿಗೆ ತಮ್ಮ ವ್ಯಾಪ್ತಿ-ಮಿತಿಯಲ್ಲಿ ಬಡ ಅಸಹಾಯಕರಿಗೆ ನೆರವಾದವರು ಉ.ಕ. ಜೆ.ಡಿ.ಎಸ್. ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಲಿಯಾಸ್ ಶೇಖ್ ಹಾಳದಕಟ್ಟಾ, ಪತ್ರಿಕೆ ವಿತರಕನಾಗಿ, ವಾಹನ ಚಾಲಕನಾಗಿ, ವಿದೇಶ, ಸ್ವದೇಶಗಳಲ್ಲಿ ದುಡಿದು ಪರಿಶ್ರಮದಿಂದ ಮೇಲೆ ಬಂದ ಇಲಿಯಾಸ್ ಶೇಖ್ ಹಾಳದಕಟ್ಟಾ ಸಿದ್ದಾಪುರದಲ್ಲಿ ಅನೇಕರಿಗೆ ಫುಡ್ ಕಿಟ್ ನೀಡಿದರು,
ಕರೋನಾ ರೋಗಿಗಳಿಗೆ ಅತಿ ಅವಶ್ಯದ ಆಮ್ಲಜನಕದ ಕಿಟ್ ಹೊತ್ತೊಯ್ದು ಕಾರವಾರದಿಂದ ಶಿವಮೊಗ್ಗ ವರೆಗೆ 8-10 ಜಿಲ್ಲೆಗಳಿಗೆ ತಲುಪಿಸಿದರು. ಈಗ ರೋಜಾ ಮಾಡುತ್ತಿರುವ ಇಲಿಯಾಸ್ ಜಿಲ್ಲಾಡಳಿತ, ತಾಲೂಕಾ ಆಡಳಿತ, ಸಾರ್ವಜನಿಕರು, ಹಿತೈಶಿಗಳು, ಸ್ನೇಹಿತರು ಯಾರೇ ಕರೆದರೂ ಅವರ ನೆರವಿಗೆ ಧಾವಿಸುವ ಇಲಿಯಾಸ್ ಜಾತಿ-ಧರ್ಮ ನೋಡುವವರಲ್ಲ. ಸಮಾಜಮುಖಿಯಾಗಿ ನೆರೆಹೊರೆಯವರು, ಅಸಹಾಯಕರು, ಅಬಲರ ನೆರವಿಗೆ ಧಾವಿಸುವ ಇಲಿಯಾಸ್ ಕರೋನಾ ಕಾರ್ಯಕರ್ತನಾಗಿ,ಕರೋನಾ ಲಾಕ್ ಔಟ್ ಸಂತೃಸ್ತರ ಆಪದ್ಭಾಂದವನಾಗಿ ಕೆಲಸ ಮಾಡಿದ್ದಾರೆ.
ಇಲಿಯಾಸರ ಪ್ರಯತ್ನ, ಪ್ರಾಮಾಣಿಕ ಸೇವೆ ಮೆಚ್ಚಿರುವ ಅನೇಕರು ಇಲಿಯಾಸ್ ನಮ್ಮ ಮನೆಮಗನಂತೆ ನಮ್ಮ ನೆರವಿಗೆ ಬರುತಿದ್ದಾರೆ ಎನ್ನುವ ಅಭಿಮಾನದ ಮಾತುಗಳನ್ನಾಡಿದ್ದಾರೆ. ಜಾತಿ,ಧರ್ಮ, ದೇವರು, ನಂಬಿಕೆ, ಆಚರಣೆಗಳ ಹೆಸರಲ್ಲಿ ಅಧಿಕಾರಹೊಂದಿ ಸ್ವಾರ್ಥ, ಕುಟಿಲ ಧರ್ಮಾಂಧತೆಗಳಿಂದ ಸಮಾಜ ವಿಘಟಿಸುವವರ ಮಧ್ಯೆ ಇಂಥವರು ಸಮಾಜಮುಖಿಗಳಾಗಿ ಪ್ರಶಂಸೆಗೆ ಅರ್ಹರಾಗುತ್ತಾರೆ. ಇವರ ಸೇವೆ, ಪ್ರಾಮಾಣಿಕ ಕೆಲಸಕ್ಕೆ ಸಮಾಜಮುಖಿ ಕೂಡಾ ಲಾಲ್ ಸಲಾಂ ಸೂಚಿಸುತ್ತದೆ.

( related) ಕಾಮ್ ಕರೋನಾ ಪೊಲೀಸ್ ಮತ್ ಮಾರೋನಾ!
ಸರ್ಕಾರಿ ನೌಕರರು ವಿಶೇಶವಾಗಿ ಆರೋಗ್ಯ,ಕಂದಾಯ ಮತ್ತು ಪೊಲೀಸ್ ಇಲಾಖೆಯ ನೌಕರರ ಮಹತ್ವ,ಪ್ರಾಮುಖ್ಯತೆ ಈಗ ಸಮಾಜದ ಗಮನಕ್ಕೆ ಬರುತ್ತಿದೆ. ಪೊಲೀಸರಿಗೆ ಅಧಿಕಾರ ಕೊಟ್ಟರೆ ಏನು ಮಾಡಬಲ್ಲರು ಎನ್ನುವುದಕ್ಕೂ ಈಗಲೇ ಸಾಕ್ಷಿಗಳೂ ಸಿಗುತ್ತಿವೆ. ಪೊಲೀಸ್ ಕ್ರೌರ್ಯ, ಮತಾಂಧರ ಮಂಗಾಟವನ್ನು ಮೀರಿಸುವಂಥದ್ದು ಎನ್ನುವ ಟೀಕೆಗಳೂ ವ್ಯಕ್ತವಾಗುತ್ತಿವೆ.
ಈ ಸಂದರ್ಭದಲ್ಲಿ ಸಮಾಜ,ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸಮಾಡುವ ಪೊಲೀಸರಲ್ಲಿ ಸ್ವಯಂ ಜಾಗೃತಿಯ ಮೂಲಕ ಮಾದರಿಯಾದ ಹೊನ್ನಾವರದ ಪಿ.ಎಸ್.ಐ. ಶಶಿಕುಮಾರ ಒಂದು ಉತ್ತಮ ಮಾದರಿಯಾಗಿದ್ದಾರೆ. ಎರಡು ಜನ ಮಕ್ಕಳು, ಕುಟುಂಬದ ಶಶಿಕುಮಾರ ಕುಟುಂಬದಿಂದ ದೂರ ಉಳಿದು ವಸತಿಗೃಹದಲ್ಲೇ ವಾಸ್ತವ್ಯಮಾಡಿ ಕುಟುಂಬವನ್ನು ದೂರದಿಂದ ನೋಡುತ್ತಾ ಕೊರೋನಾ ವಿಸ್ತರಣೆಗೆ ತಡೆ ಒಡ್ಡುತ್ತಿರುವುದು ಪೊಲೀಸರು ಅನುಸರಿಸಬಹುದಾದ ಮಾದರಿಯಾಗಿದೆ.
ಇದೇ ಮಾದರಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೂ ಅನುಸರಣಾ ಯೋಗ್ಯ. ಪೊಲೀಸರ ಪಿತ್ತ ನೆತ್ತಿಗೇರಿರುವ ವಿದ್ಯಮಾನಗಳ ನಡುವೆ ಪೊಲೀಸರಿಗೆ ಸಂಯಮ, ವಿಶ್ರಾಂತಿ, ಸಾರ್ವಜನಿಕ ವಿಶ್ವಾಸದ ಪ್ರಾಮುಖ್ಯತೆಯನ್ನು ಪೊಲೀಸ್ ಮಹಾನಿರ್ಧೇಶಕರೇ ಹೇಳಿದ ಮೇಲೂ ಪೊಲೀಸರು ಜನರನ್ನು ಹೊಡೆಯುತ್ತಿರುವುದು ಯಾರೂ ಸಮರ್ಥಿಸುವ ಕೆಲಸವಲ್ಲ.
ಶಿರಸಿ ವಿದ್ಯಾರ್ಥಿನಿಯೊಬ್ಬಳು ವಿದೇಶದಿಂದ ಭಾರತಕ್ಕೆ ಬರದೆ ದೇಶಪ್ರೇಮ ಮೆರೆದ ರೀತಿ ಭಾರತದಿಂದ ಹೊರಗಿದ್ದು, ಹೊರನಡೆದು ಕೆಲವು ಕಾಲ ಸ್ವದೇಶಕ್ಕೆ ಮರಳದಿದ್ದರೆ ನಮ್ಮ ಭಾರತ ಕರೋನಾ ಮುಕ್ತವಾಗಿರುವ ಅವಕಾಶವಿತ್ತು. ಇದು ಈಗಲೂ ಹೊರದೇಶದಲ್ಲಿರುವ ಭಾರತೀಯರಿಗೆ ಅನುಸರಣಾಯೊಗ್ಯ ಮಾದರಿಯೆ. ಇದರ ಮಧ್ಯೆ ಮನೆಮನೆಗೆ ಅಗತ್ಯ ಸಾಮಗ್ರಿ, ಆರೊಗ್ಯ ತಪಾಸಣೆ ಒದಗಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಮಾದರಿ ದೇಶಕ್ಕೆ ಸದಾ ಅನುಕರಣಾಯೊಗ್ಯ.
ಈ ಎಲ್ಲಾ ರಗಳೆಗಳ ನಡುವೆ ಭಾತರದ ಮೂಲನಿವಾಸಿಗಳ ಮಾಂಸಾಹಾರ ಪದ್ಧತಿಯನ್ನು ಲೇವಡಿಮಾಡುವ ವಿದೇಶಿ ವೈದಿಕ ವಿಕೃತಿ ವೈದಿಕ ಕರೋನಾ ವಾಗಿ ಸಮಾಜದ ಸ್ವಾಸ್ಥ್ಯ ಹಾಳುಮಾಡುತ್ತಿದೆ. ಸಸ್ಯಹಾರಿಗಳ ಅಗತ್ಯ ಪೂರೈಸಿದಂತೆ ಮಾಂಸಾಹಾರಿಗಳ ಮೀನು, ಮಾಂಸ, ಮೊಟ್ಟೆ, ಒಣಮೀನುಗಳ ಪೂರೈಕೆಗೂ ಜಿಲ್ಲಾಡಳಿತ ವ್ಯವಸ್ಥೆ ಮಾಡಬೇಕೆಂಬ ಬೇಡಿಕೆ ಉತ್ತರಕನ್ನಡ ಜಿಲ್ಲೆಯ ಬಹುಸಂಖ್ಯಾತರದ್ದಾಗಿದೆ. ಆದರೆ ಉಳ್ಳವರ ಭಟ್ಟಂಗಿತನ ಮಾಡುತ್ತಾ, ಉತ್ತರಕನ್ನಡ ಶಾಂತ-ಸುವ್ಯವಸ್ಥಿತ,ಸಂಮೃದ್ಧ ಎನ್ನುವ ಪರದೇಶಿ ವೈದಿಕ ವೈರಸ್ ಗಳು ಬೆಂಗಳೂರಿನಲ್ಲಿ ಮಾಂಸ ಖರೀದಿಸುವವರ ಮೇಲೆ ಉರಿದುಕೊಂಡಿರುವುದು ಅವರ ಭಾರತೀಯ ಮೂಲನಿವಾಸಿ ಶೂದ್ರವಿರೋಧದ ಅವಿವೇಕಕ್ಕೆ ಸಾಕ್ಷಿ.
ಕರೋನಾ ಹೆಸರಲ್ಲೂ ಮೆರೆಯುತ್ತಿರುವ ವೈದಿಕ ವಿಕೃತಿ ಉತ್ತರಕನ್ನಡ ಸೇರಿದ ಭವ್ಯಭಾರತದ ಶಾಪ, ಪಾಪ ಎನ್ನುವ ಪ್ರತಿಕ್ರೀಯೆ ವ್ಯಕ್ತವಾಗುತ್ತಿರುವುದು ಉತ್ತಮ ಬೆಳವಣಿಗೆ. ಇದೇ ವೈದಿಕ ವೈರಸ್ ಮಂತ್ರ, ಹೋಮ, ಹವನ, ಪೂಜೆಗಳ ಮೂಲಕ ಕರೋನಾ ಹೋಗಲಾಡಿಸುವ ಲಾಗಾಯ್ತಿನ ಕಪಟ ನಾಟಕ ಮಾಡುತ್ತಿರುವುದು ವೈದಿಕ ಅವಿವೇಕ, ಅನಾಚಾರ, ಬೂಟಾಟಕೆಗಳಿಗೆ ಸಾಕ್ಷಿಯಾಗಿದೆ. ಅಂದಹಾಗೆ ಈ ಸಮಾಜವಿರೋಧಿ, ಆಶಾಡಭೂತಿ ವೈದಿಕ ಕೃಪಣರ ಸಂಖ್ಯೆ ಪ್ರತಿಶತ 5 ಅಲ್ಲ ಎನ್ನುವುದು ಭಾರತದ ಸೌಂದರ್ಯ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *