

ರಾಜ್ಯದ 1966 ರ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಅಧಿನಿಯಮದ ಕಲಂ 8 ಹಾಗೂ ಇತರ ವಿಧಿಗಳ ತಿದ್ದುಪಡಿಯ ವಿಧೇಯಕವನ್ನು ಸುಗ್ರಿವಾಜ್ಞೆ ಮೂಲಕ ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ತಿದ್ದುಪಡಿಗೆ ರಾಜ್ಯಮಟ್ಟದಿಂದ ತಾಲೂಕಾ ಮಟ್ಟದ ವರೆಗೆ ವಿರೋಧಗಳು ಪ್ರಾರಂಭವಾಗಿವೆ.

ರೈತರ ಹಿತ ನಿರ್ಲಕ್ಷಿಸಿ, ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡುವ ಈ ತಿದ್ದುಪಡಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದು ಈ ಇದ್ದುಪಡಿ ಅಧಿನಿಯಮದ ಸುಗ್ರಿವಾಜ್ಞೆ
ಜಾರಿಯಾದರೆ ರಾಜ್ಯದಾದ್ಯಂತ ಪ್ರತಿಭಟನೆ ಮಾಡುವದಾಗಿ ಎಚ್ಚರಿಸಿದ್ದಾರೆ.
ಈ ಬಗ್ಗೆ ಎ.ಪಿ.ಎಂ.ಸಿ. ಅಧಿನಿಯಮ 1966 ಕಲಂ ಎಂಟು ಹಾಗೂ ಇತರ ವಿಧಿಗಳ ತಿದ್ದುಪಡಿ ಸುಗ್ರಿವಾಜ್ಞೆ ವಿರೋಧಿಸಿ ಇಂದು ಸಿದ್ಧಾಪುರದಲ್ಲಿ ತಹಸಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಯಿತು. ಕಾರ್ಪೋರೇಟ್ ಕಂಪನಿಗಳಿಗೆ ಪೂರಕ ಮತ್ತು ರೈತರಿಗೆ ಮಾರಕವಾಗುವ ಈ ಸುಗ್ರಿವಾಜ್ಞೆ ಜಾರಿ ಮಾಡಿ ರೈತರಿಗೆ ಅನ್ಯಾಯ ಮಾಡದಂತೆ ಮುಖ್ಯಮಂತ್ರಿಗಳು ಮತ್ತು ಸರ್ಕಾರಕ್ಕೆ ಒತ್ತಾಯ ಮಾಡಲಾಯಿತು. ಈ ಮನವಿ ಅರ್ಪಣೆ ವೇಳೆ ಎ.ಪಿ.ಎಂ.ಸಿ.ಅಧ್ಯಕ್ಷ ಕೇ.ಜಿ.ನಾಗರಾಜ್, ಸದಸ್ಯ ವಾಸುದೇವ ನಾಯ್ಕ, ವಕೀಲ ಆರ್.ಎಂ. ಹೆಗಡೆ, ಅಣ್ಣಪ್ಪ ನಾಯ್ಕ, ಕೆ.ಆರ್. ವಿನಾಯಕ, ಕೆ.ಟಿ. ಹೊನ್ನೆಗುಂಡಿ,ಲೋಕೇಶ್ ನಾಯ್ಕ ಉಪಸ್ಥಿತರಿದ್ದರು.
ಸಿದ್ದಾಪುರ; ದೇಶಾದ್ಯಂತಕೊರೋನಾತನ್ನ ಭೀಕರತೆಯನ್ನು ಸೃಷ್ಟಿಸಿದ್ದು, ದೇಶದ ಲಾಕ್‍ಡೌನ್ ಪ್ರಯುಕ್ತ ಸ್ವಯಂಉದ್ಯೋಗ ನಡೆಸುವವರ ಸ್ಥಿತಿ ಚಿಂತಾಜನಕವಾಗಿದೆ.ಅದರಂತೆತಾಲೂಕಿನಲ್ಲಿ ಹೊಲಿಗೆ ವೃತ್ತಿಯನ್ನು ನಂಬಿರುವ ಟೈಲರಗಳು ಲಾಕ್‍ಡೌನ್ ನಿಂದಾಗಿಜೀವನ ನಡೆಸಲಾಗದಚಿಂತಾಜನಕ ಸ್ಥಿತಿಗೊಳಗಾಗಿದ್ದಾರೆ. ಪಟ್ಟಣದಲ್ಲಿ ಅಂಗಡಿಗಳನ್ನು ಹೊಂದಿರುವ 150ಕ್ಕೂ ಅಧಿಕ ಕುಟುಂಬಗಳುಹೊಲಿಗೆ ವೃತ್ತಿಯನ್ನೇ ನಂಬಿಕೊಂಡಿದ್ದಾರೆ.ತಾಲೂಕಿನಗ್ರಾಮೀಣ ಭಾಗದಲ್ಲಿಯೂ ಸಹ ಅನೇಕ ಕುಟುಂಬಗಳು ಹೊಲಿಗೆ ವೃತ್ತಿಯನ್ನು ಅವಲಂಬಿಸಿವೆ.ಲಾಕ್‍ಡೌನ್ ನಿಂದಉದ್ಯೊಗವಿಲ್ಲದೆಈ ಎಲ್ಲಾ ಕುಟುಂಬಗಳಜೀವನ ನಿರ್ವಹಣೆಕಷ್ಟವಾಗಿದೆ. ಹೀಗಾದರೆ ಹೊಲಿಗೆ ವೃತ್ತಿಯನ್ನು ಅವಲಂಬಿಸಿರುವ ನಾವುಗಳು ಎಲ್ಲಿ ಹೊಗಬೇಕು.ಸರಕಾರ ವಿವಿಧ ವೃತ್ತಿ ನಡೆಸುವವರಿಗೆ ಸಹಾಯಧನ ನೀಡಿದಂತೆ ನಮ್ಮ ವೃತ್ತಿ ಬಾಂಧವರಿಗೂ ಸಹಾಯ ಹಸ್ತ ನೀಡಬೇಕು. ಎನ್ನುವ ಆಗ್ರಹ ಮಾಡಲಾಗಿದೆ. ಬಿಪಿಎಲ್‍ಕಾರ್ಡುಹೊಂದಿದವರಿಗಾದರೂ ಸರ್ಕಾರ ಸಹಾಯ ಹಸ್ತ ನೀಡಬೇಕೆಂದು ಸಿದ್ದಾಪುರ ತಾಲೂಕಾಟೈಲರ್ ಅಸೋಶಿಯನ್‍ಅಧ್ಯಕ್ಷ ಹಾಗೂ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆಯ ಮೂಲಕ ಸರ್ಕಾರಕ್ಕೆ ಹಾಗೂಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದಾರೆ.
ಇದು ಕಡೇ ಎಚ್ಚರಿಕೆ ಇಲ್ಲವಾದರೆ ಕಠಿಣ ಹೋರಾಟ : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ
