ಅಕ್ರಮ ಗಣಿಗಾರಿಕೆ; ಅಸಹಾಯಕರಾದರೆ ಅಧಿಕಾರಿಗಳು?

ಉತ್ತರಕನ್ನಡ ಜಿಲ್ಲೆಯಲ್ಲಿ ಗಣಿಗಾರಿಕೆಯನ್ನು ನಿಷೇಧಿಸಲಾಗಿದೆ.

ಶಿರಸಿ-ಸಿದ್ಧಾಪುರಗಳಲ್ಲಂತೂ ಗಣಿಗಾರಿಕೆಗೆ ಸಂಪೂರ್ಣ ನಿಷೇಧವಿದೆ. ಆದರೆ ಶಿವಮೊಗ್ಗ ಜಿಲ್ಲೆಯ ವ್ಯಕ್ತಿಯೊಬ್ಬರು ಸಿದ್ಧಾಪುರ ಮಂಡ್ಲಿಕೊಪ್ಪ, ಚೌಡಿ ಆಣೆ ಬಳಿ ಅಕ್ರಮ ಗಣಿಗಾರಿಕೆ ನಡೆಸುತಿದ್ದು ಅಧಿಕಾರಿಗಳು ಈ ಅಕ್ರಮ ಗಣಿಗಾರಿಕೆಯನ್ನು ಕಂಡೂ ಕಾಣದಂತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.


ಹಿಂದಿನ ತಿಂಗಳು ಕಠಿಣ ಲಾಕ್ಡೌನ್ ವೇಳೆ ಈ ಪ್ರದೇಶದಲ್ಲಿ ಅವ್ಯಾಹತವಾಗಿ ಗಣಿಗಾರಿಕೆ ನಡೆದಿದೆ. ನಂತರ ಸ್ಥಳಿಯ ಚೌಡಿ ಆಣೆಯ ಜನರು ಸ್ಥಳಿಯ ಆಡಳಿತಕ್ಕೆ ದೂರು ನೀಡಿ ರಸ್ತೆ ಬಂದ್ ಮಾಡಿ ಕೆಲವು ದಿವಸ ಈ ಗಣಿಗಾರಿಕೆ ನಿಲ್ಲಿಸಿದ್ದರು. ಇಂದಿನಿಂದ ಮತ್ತೆ ಪ್ರಾರಂಭವಾಗಿರುವ ಇಲ್ಲಿಯ ಗಣಿಗಾರಿಕೆ ಸ್ಥಗಿತಗೊಳಿಸಲು ಸಿದ್ಧಾಪುರ ತಹಸಿಲ್ದಾರರು ಕ್ರಶರ್ ಮಾಲಿಕರಿಗೆ ನೋಟೀಸ್ ನೀಡಿದ್ದಾರೆ. ತಾಲೂಕಾ ಆಡಳಿತ, ಜಿಲ್ಲಾಡಳಿತಗಳ ನೋಟೀಸ್,ಎಚ್ಚರಿಕೆಗಳಿಗೂ ಕ್ಯಾರೆ ಎನ್ನದ ಈ ವ್ಯವಹಾರಗಳ ಪ್ರಮುಖ ವ್ಯಕ್ತಿ ಮುಖ್ಯಮಂತ್ರಿ, ಗ್ರಾಮೀಣಾಭಿವೃದ್ಧಿ ಸಚಿವರು, ಉತ್ತರಕನ್ನಡದ ಸಂಸದ, ಶಾಸಕರ ಅನುಮತಿ, ಪರವಾನಗಿಯೊಂದಿಗೇ ಇಲ್ಲಿ ಗಣಿಗಾರಿಕೆ ಮಾಡುತ್ತೇನೆ ಎಂದು ಉತ್ತರಿಸುತಿದ್ದಾರೆ.

ಕಾನಗೋಡು ಗ್ರಾಮ ಪಂಚಾಯತ್ ನ ಗಡಿಯಲ್ಲಿರುವ ಈ 6 ಗುಂಟೆ ಮಾಲಕಿ ಜಮೀನಿನ ಜೊತೆ ಎಕರೆಗಟ್ಟಲೆ ಅರಣ್ಯ ಭೂಮಿ ಬಳಸುತ್ತಿರುವ ಈ ಪ್ರಭಾವಿ ವ್ಯಕ್ತಿ ಐಗೋಡು, ಚೌಡಿಅಣೆ, ಹಂಚಿನಚಪ್ರ ಸೇರಿದ ಕೆಲವು ಗ್ರಾಮಗಳ ಸಂಪರ್ಕ ರಸ್ತೆಯನ್ನೇ ಹಾಳು ಮಾಡಿದ್ದಾನೆ. ಈ ಬಗ್ಗೆ ವಿರೋಧ, ಪ್ರತಿಭಟನೆ ವ್ಯಕ್ತಪಡಿಸಿರುವ ಸ್ಥಳಿಯರು ಈ ಬಗ್ಗೆ ರಾಜ್ಯಪಾಲರಿಗೂ ಮನವಿ ನೀಡಿದ್ದಾರೆ. ಆದರೆ ರಾಜಕೀಯ, ರಾಜಕೀಯ ವ್ಯಕ್ತಿಗಳ ರಕ್ಷಣೆ ಪಡೆದಿರುವ ಈ ಅಕ್ರಮ ಗಣಿಗಾರಿಕೆಯ ಕುಳಗಳು ಸರ್ಕಾರಕ ಕಾನೂನು, ನಿಯಮ ಷರತ್ತುಗಳನ್ನು ಉಲ್ಲಂಘಿಸಿದರೂ ಯಾರೂ ಹೇಳುವವರು, ಕೇಳುವವರು ಇಲ್ಲ ಎನ್ನುವಂತಾಗಿದೆ.


ಸ್ಥಳಿಯ ಜನಜೀವನ, ಪರಿಸರಕ್ಕೆ ಮಾರಕವಾಗಿರುವ ಇಲ್ಲಿಯ ಅಕ್ರಮ ಗಣಿಗಾರಿಕೆ, ದಟ್ಟಡವಿಯ ನಡುವಿನ ಯಾಂತ್ರಿಕ ಚಟುವಟಿಕೆಗಳ ಬಗ್ಗೆ ಪರಿಸರ ವಾದಿಗಳೂ ಕೂಡಾ ಜಾಣ ಕುರುಡು ಪ್ರದರ್ಶಿಸುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಲಾಕ್‍ಡೌನ್, ನಿಷೇಧಾಜ್ಞೆ ನಡುವೆ ಪರಿಸರ ಲೂಟಿ
ಉಳ್ಳವರು,ಪ್ರತಿಷ್ಠಿತರಿಗೊಂದು ನ್ಯಾಯ? ಬಡಭಾರತೀಯನಿಗೊಂದು ನ್ಯಾಯ!


ಕರೋನಾ ಭಯ, ಮುನ್ನೆಚ್ಚರಿಕೆಯ ನಿಷೇಧಾಜ್ಞೆ, ಲಾಕ್ ಔಟ್ ಗಳ ನಡುವೆ ಸರ್ಕಾರಿ, ಕಾಮಗಾರಿಗಳು, ಮಳೆಗಾಲದ ನೆಪ ಒಡ್ಡಿ ರಾಜಕೀಯ ಶಿಫಾರಸ್ಸಿನನ್ವಯ
ಪರಿಸರ ವಿರೋಧಿ ಕೆಲಸಮಾಡುತ್ತಿರುವ ವಿದ್ಯಮಾನ ಬೆಳಕಿಗೆ ಬಂದಿದೆ. ಈ ಬಗ್ಗೆ ದೂರಿರುವ ಕೆಲವು ಸಮಾಜಸೇವಕರು ಸಿದ್ಧಾಪುರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ಅಕ್ರಮ ಗಣಿಗಾರಿಕೆ, ಕಲ್ಲು-ಮರಳು ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದೆ. ಈ ಅಕ್ರಮ ವ್ಯವಹಾರಗಳಿಗೆ ರಾಜಕಾರಣಿಗಳು ಮತ್ತು ಅರಣ್ಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ಜಾಣ ಮೌನದ ಸಹಕಾರವೂ ಕಾರಣ ಎನ್ನಲಾಗುತ್ತಿದೆ.


ಸಿದ್ಧಾಪುರದ ಭಾನ್ಕುಳಿಯಲ್ಲಿ ಕಳೆದ ವಾರ ಬಡ ರೈತನ ಮನೆ ಕಿತ್ತೆಸೆದ ಶಿರಸಿ-ಸಿದ್ದಾಪುರದ ಅರಣ್ಯ ಇಲಾಖೆ ಅಧಿಕಾರಿಗಳು ಪಕ್ಕದ ಭಾನ್ಕುಳಿ ಮಠದ ರಸ್ತೆಗಾಗಿ ಮರಗಳನ್ನು ಕಡಿದು ಅರಣ್ಯ ಇಲಾಖೆಯ ಕಣ್ಗಾವಲ್ಲೇ ಯಂತ್ರಗಳ ಮೂಲಕ ಮಣ್ಣು- ಮರಗಳನ್ನು ಕಿತ್ತು ಅರಣ್ಯ ಪರಿಸರ ಹಾಳುಮಾಡಿದ್ದರೂ ಅದರ ಬಗ್ಗೆ ತಲೆಕೆಸಿಕೊಳ್ಳದ ಅರಣ್ಯ ಇಲಾಖೆಯ ಪಕ್ಷಪಾತ ಏನನ್ನು ಸೂಚಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.

ಮಡ್ಲಿಕೊಪ್ಪದಲ್ಲಿ ನಿರಂತರ ಗಣಿಗಾರಿಕೆ- ಸಿದ್ಧಾಪುರ ತಾಲೂಕಿನ ನಿಡಗೋಡು ಭಾಗದ ಮಂಡ್ಲಿಕೊಪ್ಪ ಚೌವಡಿ ಆಣೆಯ ಬಳಿ ಲಾಕ್ ಔಟ್ ಸಮಯದಲ್ಲಿ ಕೂಡಾ ಗಣಿಗಾರಿಕೆ ನಡೆಯುತಿದ್ದು ಈ ಕಲ್ಲು-ಮಣ್ಣು-ಜಲ್ಲಿ ಸಾಗಾಟದಿಂದ ಸ್ಥಳಿಯರಿಗೆ ತೊಂದರೆ ಆಗುತ್ತಿರುವ ಬಗ್ಗೆ ಸ್ಥಳಿಯರು ತಹಸಿಲ್ದಾರರಿಗೆ ದೂರಿದ್ದಾರೆ.

ಜಿಲ್ಲೆಯಲ್ಲಿ ಲಾಕ್ ಔಟ್ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಕಠಿಣ ನಿಯಮಗಳನ್ನು ವಿಧಿಸಲಾಗುತ್ತಿದೆ ಆದರೆ ಮಡ್ಲಿಕೊಪ್ಪ, ಭಾನ್ಕುಳಿಭಾಗದಲ್ಲಿ ಹಾಡು ಹಗಲೇ ಗಣಿಗಾರಿಕೆ ಅರಣ್ಯ ನಾಶ, ಪರಿಸರ ನಾಶ ಆಗುತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ- ಕೈ ಕಟ್ಟಿ ಕುಳಿತುಕೊಂಡಿರುವ ಕೆಲವು ಅಧಿಕಾರಿಗಳು,ಇಲಾಖೆಗಳ ಜಾಣಮೌನ,ಮೌನ ಸಹಕಾರದ ಹಿಂದೆ ದೇಶಪ್ರೇಮ, ಹಿಂದುತ್ವದ ಸೋಗಿನ ಕಪಟ ರಾಜಕಾಣಿಗಳ ಪಾತ್ರದ ಬಗ್ಗೆ ದೂರಿರುವ ಕೆಲವರು ಉತ್ತರಕನ್ನಡ ಜಿಲ್ಲೆಯಲ್ಲಿ ಬಡವರು-ಜನಸಾಮಾನ್ಯರಿಗೊಂದು ನ್ಯಾಯ ಪ್ರಭಾವಿಗಳು, ಮಠ-ಮಂದಿರಗಳಿಗೊಂದು ನ್ಯಾಯ ಮಾಡುತ್ತಿರುವ ಜನಪ್ರತಿನಿಧಿಗಳ ಪಕ್ಷಪಾತಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಕೃಷಿ ಉತ್ಫನ್ನ ಮಾರುಕಟ್ಟೆ ವ್ಯವಹಾರ ಅಧಿನಿಯಮ ತಿದ್ದುಪಡಿ ಸುಗ್ರಿವಾಜ್ಞೆಗೆ ವಿರೋಧ ಮನವಿ ಅರ್ಪಣೆ
ರಾಜ್ಯದ 1966 ರ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಅಧಿನಿಯಮದ ಕಲಂ 8 ಹಾಗೂ ಇತರ ವಿಧಿಗಳ ತಿದ್ದುಪಡಿಯ ವಿಧೇಯಕವನ್ನು ಸುಗ್ರಿವಾಜ್ಞೆ ಮೂಲಕ ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ತಿದ್ದುಪಡಿಗೆ ರಾಜ್ಯಮಟ್ಟದಿಂದ ತಾಲೂಕಾ ಮಟ್ಟದ ವರೆಗೆ ವಿರೋಧಗಳು ಪ್ರಾರಂಭವಾಗಿವೆ. ರೈತರ ಹಿತ ನಿರ್ಲಕ್ಷಿಸಿ, ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡುವ ಈ ತಿದ್ದುಪಡಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದು ಈ ಇದ್ದುಪಡಿ ಅಧಿನಿಯಮದ ಸುಗ್ರಿವಾಜ್ಞೆ
ಜಾರಿಯಾದರೆ ರಾಜ್ಯದಾದ್ಯಂತ ಪ್ರತಿಭಟನೆ ಮಾಡುವದಾಗಿ ಎಚ್ಚರಿಸಿದ್ದಾರೆ.
ಈ ಬಗ್ಗೆ ಎ.ಪಿ.ಎಂ.ಸಿ. ಅಧಿನಿಯಮ 1966 ಕಲಂ ಎಂಟು ಹಾಗೂ ಇತರ ವಿಧಿಗಳ ತಿದ್ದುಪಡಿ ಸುಗ್ರಿವಾಜ್ಞೆ ವಿರೋಧಿಸಿ ಇಂದು ಸಿದ್ಧಾಪುರದಲ್ಲಿ ತಹಸಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಯಿತು. ಕಾರ್ಪೋರೇಟ್ ಕಂಪನಿಗಳಿಗೆ ಪೂರಕ ಮತ್ತು ರೈತರಿಗೆ ಮಾರಕವಾಗುವ ಈ ಸುಗ್ರಿವಾಜ್ಞೆ ಜಾರಿ ಮಾಡಿ ರೈತರಿಗೆ ಅನ್ಯಾಯ ಮಾಡದಂತೆ ಮುಖ್ಯಮಂತ್ರಿಗಳು ಮತ್ತು ಸರ್ಕಾರಕ್ಕೆ ಒತ್ತಾಯ ಮಾಡಲಾಯಿತು. ಈ ಮನವಿ ಅರ್ಪಣೆ ವೇಳೆ ಎ.ಪಿ.ಎಂ.ಸಿ.ಅಧ್ಯಕ್ಷ ಕೇ.ಜಿ.ನಾಗರಾಜ್, ಸದಸ್ಯ ವಾಸುದೇವ ನಾಯ್ಕ, ಅಣ್ಣಪ್ಪ ನಾಯ್ಕ, ಕೆ.ಆರ್. ವಿನಾಯಕ, ಕೆ.ಟಿ. ಹೊನ್ನೆಗುಂಡಿ,ಲೋಕೇಶ್ ನಾಯ್ಕ ಉಪಸ್ಥಿತರಿದ್ದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇನ್ನಿಲ್ಲ ಕಸ್ತೂರಿ ರಂಗನ್‌ ಕಿರಿಕಿರಿ……

ಪಶ್ಚಿಮ ಘಟ್ಟಗಳ ಕುರಿತ ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಸಂಪುಟ ಸಭೆಯಲ್ಲಿ ನಿರ್ಣಯ ಡಾ.ಕೆ ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯತಂಡದ ವರದಿಯ ಆಧಾರದ...

ಉತ್ತರ ಕನ್ನಡದ 4 ಜನ ಉತ್ತಮ ಕಂದಾಯ ಅಧಿಕಾರಿಗಳು

ಉತ್ತರ ಕನ್ನಡ ಜಿಲ್ಲೆಯ ಎರಡು ಜನ ತಹಸಿಲ್ಧಾರರು ಮತ್ತು ಇಬ್ಬರು ಗ್ರಾಮ ಆಡಳಿತಾಧಿಕಾರಿಗಳು ಸರ್ಕಾರದ ಉತ್ತಮ ಕಂದಾಯ ಅಧಿಕಾರಿಗಳಾಗಿ ಗುರುತಿಸಲ್ಪಟ್ಟಿದ್ದಾರೆ. ಶಿರಸಿ ಮತ್ತು ಸಿದ್ದಾಪುರ...

ಕನ್ನಡ ಜ್ಯೋತಿ ರಥಯಾತ್ರೆ…. ‍‍& ವಿವಾದ!

ಡಿಸೆಂಬರ್‌ ನಲ್ಲಿ ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇದೇ ತಿಂಗಳು ಹೊರಟ ಕನ್ನಡ ಜ್ಯೋತಿ ರಥಯಾತ್ರೆ ಸಿದ್ಧಾಪುರದ ಭುವನಗಿರಿಯಿಂದ ಹೊರಟು ಜಿಲ್ಲೆ...

ಬ್ರಷ್ಟಾಚಾರ ಸಾಬೀತು…. ಬಿಜೆಪಿ ಮುಖಂಡೆಗೆ ಶಿಕ್ಷೆ, ದಂಡ

ಶಿರಸಿ ಗ್ರಾಮೀಣ ಬಿಜೆಪಿ ಘಟಕದ ಅಧ್ಯಕ್ಷೆ ಹಾಗೂ ಉತ್ತರ ಕನ್ನಡ ಜಿಲ್ಲಾ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಉಷಾ ಹೆಗಡೆಯವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಕಾರವಾರದ...

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಮನವಿ, ಅನಿರ್ಧಿಷ್ಟಾವಧಿ ಮುಷ್ಕರದ ಎಚ್ಚರಿಕೆ

ಜನಸಾಮಾನ್ಯರ ಕೆಲಸ ಮಾಡುವ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳು ಸೋಮುವಾರದಿಂದ ಆಧಾರ್‌ ಸೀಡ್‌,ಲ್ಯಾಂಡ್‌ ಬೀಟ್‌, ಬಗುರ್‌ ಹುಕುಂ, ಹಕ್ಕುಪತ್ರ, ಸೇರಿದಂತೆ ಕೆಲವು ಸೇವೆಗಳನ್ನು ನೀಡದಿರಲು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *