ಉ.ಕ. ದಿಂದ ಮುಖ್ಯಮಂತ್ರಿಗಳಿಗೆ ಮನವಿ- ಪಂಚಾಯಿತಿಗಳಿಗೆ ಆಡಳಿತ ಸಮಿತಿ, ಸಂವಿಧಾನ ಆಶಯಕ್ಕೆ ಕೊಡಲಿಪೆಟ್ಟು: ಮಲ್ಲಿಕಾರ್ಜುನ ಖರ್ಗೆ

ಗ್ರಾಮ ಪಂಚಾಯತಿಗಳ ಆಡಳಿತಾವಧಿಯನ್ನು ಮುಂದಿನ ಆರು ತಿಂಗಳುಗಳ ವರೆಗೆ ವಿಸ್ತರಿಸಲು ಬೇಡಿಕೆ ಹೆಚ್ಚಿದೆ.

ಮುಂದಿನ ತಿಂಗಳು ಮುಗಿಯಲಿರುವ ಗ್ರಾ.ಪಂ. ಆಡಳಿತ ಸಮೀತಿಗಳ ಅಧಿಕಾರದ ಅವಧಿ
ಹಿನ್ನೆಲೆಯಲ್ಲಿ ಇದೇ ತಿಂಗಳು ಗ್ರಾ.ಪಂ. ಚುನಾವಣೆ ನಡೆಯಬೇಕಿತ್ತು.ಆದರೆ ಕರೋನಾ ಹಿನ್ನೆಲೆಯಲ್ಲಿ ನಡೆಯದ ಗ್ರಾ.ಪಂ. ಚುನಾವಣೆಯಿಂದಾಗಿ ಅವಧಿ ಪೂರೈಸುವ ಗ್ರಾ.ಪಂ. ಸದಸ್ಯರ ಆಡಳಿತಾವಧಿಯನ್ನು ವಿಸ್ತರಿಸುವ ಬೇಡಿಕೆ ವ್ಯಕ್ತವಾಗಿದೆ.
ರಾಜ್ಯದಾದ್ಯಂತ ಗ್ರಾ.ಪಂ. ಆಡಳಿತಾವಧಿ ವಿಸ್ತರಣೆ ಬೇಡಿಕೆ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲೂ ಗ್ರಾ.ಪಂ.ಅಧ್ಯಕ್ಷ,ಉಪಾಧ್ಯಕ್ಷರು ಹಾಗೂ ಸದಸ್ಯರ ಒಕ್ಕೂಟಗಳು ಈ ಅವಧಿ ವಿಸ್ತರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿವೆ.

ಇಂದು ಸಿದ್ಧಾಪುರದಲ್ಲಿ ತಹಸಿಲ್ಧಾರರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ನೀಡಿದ ಒಕ್ಕೂಟದ
ಪದಾಧಿಕಾರಿಗಳು ಕರೋನಾ, ಮಳೆಗಾಲಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಚುನಾಯಿತ ಸದಸ್ಯರು,ಆಡಳಿತ ಸಮೀತಿಗಳ ಅಧಿಕಾರಾವಧಿಯನ್ನು ಆರು ತಿಂಗಳು ವಿಸ್ತರಿಸಬೇಕು, ಗೌರವಧನವಿಲ್ಲದೆ ಕೂಡಾ ಈ ಅವಧಿಯಲ್ಲಿ ಸೇವೆ ಸಲ್ಲಿಸಲು ಸಿದ್ಧ ಎಂದು ಸ್ಪಸ್ಟಪಡಿಸಿದರು.

ಪಂಚಾಯಿತಿಗಳಿಗೆ ಆಡಳಿತ ಸಮಿತಿ, ಸಂವಿಧಾನ ಆಶಯಕ್ಕೆ ಕೊಡಲಿಪೆಟ್ಟು: ಮಲ್ಲಿಕಾರ್ಜುನ ಖರ್ಗೆ

(ಐದು ವರ್ಷಗಳ ಅವಧಿ ಪೂರ್ಣಗೊಳಿಸಲಿರುವ ಪಂಚಾಯತ್‌ಗಳಿಗೆ ಆಡಳಿತ ಸಮಿತಿಗಳನ್ನು ನೇಮಿಸುವ ರಾಜ್ಯ ಸರ್ಕಾರದ ನಿರ್ಧಾರ ಸಂವಿಧಾನ, ಪಂಚಾಯತ್ ಸಂಸ್ಥೆಗಳ ಆಶಯಕ್ಕೆ ಮರಣ ಗಂಟೆ, ಕೊಡಲಿಪೆಟ್ಟು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಬಲವಾಗಿ ಖಂಡಿದ್ದಾರೆ.)

ಬೆಂಗಳೂರು: ಐದು ವರ್ಷಗಳ ಅವಧಿ ಪೂರ್ಣಗೊಳಿಸಲಿರುವ ಪಂಚಾಯತ್‌ಗಳಿಗೆ ಆಡಳಿತ ಸಮಿತಿಗಳನ್ನು ನೇಮಿಸುವ ರಾಜ್ಯ ಸರ್ಕಾರದ ನಿರ್ಧಾರ ಸಂವಿಧಾನ, ಪಂಚಾಯತ್ ಸಂಸ್ಥೆಗಳ ಆಶಯಕ್ಕೆ ಮರಣ ಗಂಟೆ, ಕೊಡಲಿಪೆಟ್ಟು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಬಲವಾಗಿ ಖಂಡಿದ್ದಾರೆ.

ಈ ತೀರ್ಮಾನ ಸಂವಿಧಾನ ಮತ್ತು ಪಂಚಾಯತ್ ರಾಜ್ ಆಶಯಗಳಿಗೆ ಕೊಡಲಿಪೆಟ್ಟು ನೀಡಿದಂತಾಗಲಿದ್ದು ಇದನ್ನು ಕೂಡ ಲೇ ಕೈಬಿಡಬೇಕು ಎಂದೂ ಒತ್ತಾಯ ಮಾಡಿದ್ದಾರೆ.

ಯುಎನ್‌ಐ ಜೊತೆ ಮಾತನಾಡಿದ ಅವರು, ಆಡಳಿತ ಸಮಿತಿಗಳನ್ನು ನೇಮಿಸುವ ಮೂಲಕ ಪಕ್ಷಾತೀತವಾಗಿ ಚುನಾಯಿತರಾದ ಪಂಚಾಯತ್ ಸಂಸ್ಥೆಗಳ ಕತ್ತು ಹಿಸಲು ಸರ್ಕರ ಹೊರಟಿರುವುದು ಈ ಸಂಸ್ಥೆಗಳ ಮೂಲ ಉದ್ದೇಶ ಆಶಯಗಳಿಗೆ ಕೊಡಲಿಪೆಟ್ಟು ನೀಡಿದೆ ಎಂದು ಅವರು ಅಸಮಾಧಾನ ಹೊರಹಾಕಿದರು.

ಆಡಳಿತ ಸಮಿತಿಗಳನ್ನು ನೇಮಿಸುವ ನಿರ್ಧಾರದಿಂದ ಸರ್ಕಾರ ದೂರವಿರಬೇಕು ಎಂಉ ಒತ್ತಾಯ ಮಾಡಿದ ಅವರು, ಪಂಚಾಯತ್‌ಗಳ ಚುನಾಯಿತ ಸಂಸ್ಥೆಗಳ ಅವಧಿಯನ್ನು ಆರು ತಿಂಗಳವರೆಗೆ ವಿಸ್ತರಿಸುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.

“ಪಂಚಾಯಿತಿಗಳ ಚುನಾಯಿತ ಸಂಸ್ಥೆಗಳ ಅವಧಿಯನ್ನು ವಿಸ್ತರಣೆ ಮಾಡಿದ ಹಲವು ನಿದರ್ಶನಗಳಿವೆ ಎಂದು ಅವರು ತಿರುಗೇಟು ನೀಡಿದರು.

ರಾಜಕೀಯೇತರ ಆಧಾರದ ಮೇಲೆ ಮತ್ತು ರಾಜಕೀಯೇತರ ಪಕ್ಷದ ಚಿಹ್ನೆಗಳ ಮೇಲೆ 2015 ರಲ್ಲಿ ಪಂಚಾಯತ್ ಸಂಸ್ಥೆಗಳಿಗೆ ಚುನಾವಣೆ ನಡೆದಿರುವುದನ್ನು ನೆನಪು ಮಾಡಿಕೊಟ್ಟ ಅವರು ಆಡಳಿತ ಸಮಿತಿಗಳನ್ನು ನೇಮಿಸುವ ಮೂಲಕ, ಬಿಜೆಪಿ ಸರ್ಕಾರವು ತಮ್ಮ ಪಕ್ಷದ ಸದಸ್ಯರನ್ನು ಸೇರಿಸಿಕೊಳ್ಳುವ ಮೂಲಕ ರಾಜಕೀಯ ಬಣ್ಣ ನೀಡಲು ಹೊರಟಿದೆ ಎಂದು ದೂರಿದರು.

“ರಾಜ್ಯಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತುಗಳ ಖಾಲಿ ಸ್ಥಾನಗಳಿಗೆ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುತ್ತಿರುವ ರಾಜ್ಯ ಸರ್ಕಾರವು ಇನ್ನೊಂದು ಕಡೆ ಪಂಚಾಯತ್‌ಗಳ ಚುನಾವಣೆಯನ್ನು ಮುಂದೂಡಲು ಹೊರಟಿರುವುದು ನಿಜಕ್ಕೂ ಹಾಸ್ಯಸ್ಪದ, ಇಬ್ಬಂದಿ ದೋರಣೆಯಾಗಿದೆ ಎಂದರು.

ಆಡಳಿತ ಸಮಿತಿಗಳ ನೇಮಕಕ್ಕೆ ಸಂಬಂಧಿಸಿದ ನಿರ್ಧಾರದ ಹಿಂದೆ ರಾಜ್ಯ ಬಿಜೆಪಿ ಸರ್ಕಾರದ ಹುನ್ನಾರ, ಒಳಸಂಚು ಇದೆ ಈ ಕ್ರಮವನ್ನು ಕಾಂಗ್ರೆಸ್ ವಿರೋಧಿಸಲಿದೆ ಎಂದರು.

ಆಡಳಿತ ಸಮಿತಿಗಳಿಗೆ ಸದಸ್ಯರನ್ನು ನೇಮಕ ಮಾಡುವಾಗ ರಾಜ್ಯ ಸರ್ಕಾರವು ರೋಸ್ಟರ್ ವ್ಯವಸ್ಥೆಯನ್ನು ನಿರ್ವಹಿಸಲು ಸಾಧ್ಯವಿಲ್ಲ , “ತುಳಿತಕ್ಕೊಳಗಾದ ಸಮುದಾಯಗಳಿಗೆ ಸೇರಿದ ಮಹಿಳೆಯರು ಮತ್ತು ವ್ಯಕ್ತಿಗಳು ಸ್ಥಾನಗಳಿಂದ ಆಯ್ಕೆಯಾದ ಹಲವು ಉದಾಹರಣೆಗಳಿವೆ, ಇವುಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟು ಅನ್ಯಾಯ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.

“ರಾಜ್ಯ ಸರ್ಕಾರದ ನಿರ್ಧಾರ ಮಹಿಳಾ ವಿರೋಧಿ ಮತ್ತು ತುಳಿತಕ್ಕೊಳಗಾದ ಸಮುದಾಯದ ವಿರೋಧಿ ನೀತಿಯಾಗಿದೆ. ಅವಧಿ ಮುಗಿಯುತ್ತಿರುವ ಪಂಚಾಯತ್ ಗಳಿಗೆ ಆಡಳಿತ ಸಮಿತಿಗಳನ್ನು ನೇಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸದ್ಯ , 6000 ಕ್ಕೂ ಹೆಚ್ಚು ಪಂಚಾಯತ್ ಗಳ ಐದು ವರ್ಷಗಳ ಅವಧಿ ಶೀಘ್ರದಲ್ಲೇ ಕೊನೆಗೊಳ್ಳಲಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *