
ಉತ್ತರಕನ್ನಡ ಜಿಲ್ಲೆಯ 6 ಸಾವಿರ ಜನರು ಸೇರಿ ಕರ್ನಾಟಕದೆಲ್ಲೆಡೆ ಕಾರಂಟೈನ್ ಆಗಿರುವ ಲಕ್ಷಾಂತರ ಜನರಲ್ಲಿ ಸಾವಿರಾರು ಜನರು ಕರೋನಾ ಕ್ಕೆ ತುತ್ತಾಗಿರುವ ಬಗ್ಗೆ ಈಗ ಶಂಕೆ ವ್ಯಕ್ತವಾಗಿದೆ.



ಮೊದಮೊದಲು ಉತ್ತರ ಕನ್ನಡ ಜಿಲ್ಲೆಗೆ ಬಂದ ಹೊರದೇಶಗಳ ಉದ್ಯೋಗಿಗಳು ಕೋವಿಡ್ ಪ್ರಾರಂಭಕ್ಕೆ ಕಾರಣವಾದರು. ನಂತರ ತಬ್ಲಿಘಿಗಳ ಓಡಾಟ,ಒಡನಾಟದಿಂದ ಕರೋನಾ ದೇಶ ಸುತ್ತತೊಡಗಿತ್ತು.
ಈಗ ಮಹಾರಾಷ್ಟ್ರ,ಗುಜರಾತ್, ಚಿನ್ನೈಗಳಿಂದ ಬಂದ ಜನರು ಉತ್ತರಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಕರೋನಾ ಹಬ್ಬಿಸುತಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ದೃಢಪಟ್ಟ ಎರಡು ಕರೋನಾ ಪಾಸಿಟಿವ್ ಪ್ರಕರಣಗಳು ಮಹಾರಾಷ್ಟ್ರದಿಂದ ಬಂದ ವ್ಯಕ್ತಿಗಳ ಪ್ರಕರಣಗಳು.
ಮಹಾರಾಷ್ಟ್ರದಿಂದ
ಶಿವಮೊಗ್ಗ ಜಿಲ್ಲೆ ಸೊರಬಾ ಕ್ಕೆ ಹೊರಟಿದ್ದ ಈ ಕುಟುಂಬವನ್ನು ಪೊಲೀಸರು ಯಲ್ಲಾಪುರದಲ್ಲಿ ತಡೆದು ಕಾರಂಟೈನ್ ಮಾಡಿದ್ದರು. ಈ ಎರಡೂ ಪ್ರಕರಣಗಳಂತೆ ಉತ್ತರಕನ್ನಡದ 6 ಸಾವಿರ ಕಾರಂಟೈನ್ ಆದ ಜನರು ಹಾಗೂ ರಾಜ್ಯದ ಲಕ್ಷಾಂತರ ಜನರಲ್ಲಿ ಕರೋನಾ ಕಾಣಿಸಿಕೊಳ್ಳುವ ಅಪಾಯದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ.
ಬಸ್ ಪ್ರಯಾಣಿಕರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡುವುದು, ಹೊರ ರಾಜ್ಯಗಳಿಂದ ಬಂದ ಜನರ ತಪಾಸಣೆ, ಕಾರಂಟೈನ್ ಕ್ರಮಗಳ ನಡುವೆ ನುಸುಳುಕೋರರು ಸುದ್ದಿಮಾಡದೆ ಗ್ರಾಮ, ನಗರ ಸೇರಿಕೊಂಡಿರುವ ಅನೇಕ ಉದಾಹರಣೆಗಳೂ ಇವೆ.
ಈ ವಿಶೇಶ ಪ್ರಕರಣಗಳ ಹಿನ್ನೆಲೆಯಲ್ಲಿ ಒಬ್ಬೊಬ್ಬ ವ್ಯಕ್ತಿ ನೂರಾರು ಜನರಿಗೆ ಕರೋನಾ ವಿಸ್ತರಿಸುವ ಅಪಾಯವಿರುವುದರಿಂದ ಸಾರ್ವಜನಿಕರು ಓಡಾಟ, ವಹಿವಾಟು ನಿಲ್ಲಿಸಿ ಮನೆಯಲ್ಲೇ ಉಳಿಯುವುದು ಮತ್ತು ಕರೋನಾ ನಿರ್ಬಂಧದ ಉಪಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಸಂಕಷ್ಟದಿಂದ ಪಾರಾಗಬೇಕಿದೆ.
ಶಿವಮೊಗ್ಗ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಕಾರಂಟೈನ್ ಶಿಕ್ಷೆ!
ಗ್ರೀನ್ ಜೋನ್ ಆಗಿದ್ದ ಶಿವಮೊಗ್ಗ ಜಿಲ್ಲೆ ಕರೋನಾ ಕಿತ್ತಳೆ ವಲಯವಾಗಿರುವುದು ಹಳೆಯ ಸುದ್ದಿ ಈಗಿನ ಹೊಸ ವರ್ತಮಾನವೆಂದರೆ…
ಶಿವಮೊಗ್ಗದ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳು ಕಾರಂಟೈನ್ ಆಗುವ ಅಪಾಯಕ್ಕೆ ಸಿಕ್ಕಿಕೊಂಡಿದ್ದಾರೆ.
ಎರಡು ದಿವಸಗಳ ಹಿಂದೆ ಕೋವಿಡ್ ದೃಢಪಟ್ಟ 15 ವರ್ಷದ ಬಾಲಕಿ ಪೋಸ್ಕೋ ಪ್ರಕರಣವೊಂದರ ಸಂತೃಸ್ತೆಯಾಗಿದ್ದಾರೆ. ಈ ಬಾಲಕಿಯನ್ನು ತನಿಖೆ ಕಾರಣಕ್ಕೆ ವಿಚಾರಣೆ ನಡೆಸಿದ ಶಿಕಾರಿಪುರದ ಇನ್ಪೆಕ್ಟರ್,ಶಿವಮೊಗ್ಗ ಎ.ಎಸ್.ಪಿ. ಹಾಗೂ ಎಸ್.ಪಿ. ಸೇರಿ ಮೂವರು ಅಧಿಕಾರಿಗಳು ಈ ಸಂತೃಸ್ತೆಯ ಸಂಪರ್ಕಕ್ಕೆ ಒಳಪಟ್ಟಿದ್ದರು.
ಈ ಸಂತೃಸ್ತೆಗೆ ಅವಳ ಹಿಂದಿನ ಟ್ರಾವೆಲ್ ಹಿಸ್ಟರಿ ಸಂಗ್ರಹಿಸಿದ್ದಾಗ ಶಿಕಾರಿಪುರದಿಂದ ಶಿವಮೊಗ್ಗ ವರೆಗೆ ಮೂವರು ಅಧಿಕಾರಿಗಳು ಈ ಸಂತೃಸ್ತೆಯ ಸಂಪರ್ಕಕ್ಕೆ ಬಂದಿದ್ದು ಇವರೆಲ್ಲರೂ ಈಗ ಕಾರಂಟೈನ್ ಆಗುವ ಶಿಕ್ಷೆಗೆ ಗುರಿಯಾದಂತಾಗಿದೆ.
