
ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ
ವಿಧಾನ ಸೌಧ, ಬೆಂಗಳೂರು.
(ಮಾನ್ಯ ತಹಶಿಲ್ದಾರರು, ಸಿದ್ದಾಪುರ ಇವರ ಮೂಲಕ)
ಮಾನ್ಯರೇ,
ಅದಾಗಲೇ ಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿರುವ ರಾಜ್ಯವು ಕೋವಿಡ್ – 19 ವೈರಾಣುವಿನ ಕಾರಣದಿಂದ ಮತ್ತಷ್ಟು ಆಳವಾದ ಬಿಕ್ಕಟ್ಟಿಗೆ ತಳ್ಳಲ್ಪಟ್ಟಿದ್ದು ತಮಗೆ ತಿಳಿದ ವಿಚಾರವಾಗಿದೆ. ಈ ಆಳವಾದ ಬಿಕ್ಕಟ್ಟಿಗೆ ಸಿಲುಕಿ ನಲುಗಿದವರು ಕೃಷಿಕರು, ಕಾರ್ಮಿಕರು, ಬಡವರು, ಅದರಲ್ಲೂ ದಲಿತರು, ಮಹಿಳೆಯರು ಪ್ರಮುಖವಾಗಿದ್ದಾರೆ. ಆದರೆ ಸದರಿ ಬಿಕ್ಕಟ್ಟಿನಿಂದ ಇವರನ್ನು ಮೇಲೆತ್ತಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೈಗೊಂಡ ಕ್ರಮಗಳು ನಿರಾಶಾದಾಯಕ ಮತ್ತು ರಾಜ್ಯವನ್ನು ಆರ್ಥಿಕ ಬಿಕ್ಕಟ್ಟಿನಿಂದ ಮೇಲೆತ್ತುವ ದೂರದೃಷ್ಟಿಯಿಂದ ಕೂಡಿದವುಗಳಲ್ಲ ಎಂಬುದು ಸ್ಪಷ್ಟವಿದೆ.
ಬದಲಿಗೆ, ಶ್ರೀಮಂತರನ್ನು ಮತ್ತು ಕಾಪೆರ್Çೀರೇಟ್ ಕಂಪನಿಗಳನ್ನು ಸಂರಕ್ಷಿಸುವ ಮತ್ತು ಮಿಲಿಯಾಂತರ ಕೋಟಿ ರೂಪಾಯಿ ಸಾರ್ವಜನಿಕ ಸಂಪನ್ಮೂಲಗಳ ನೆರವನ್ನು ನೀಡಲಾಗಿದೆ. ಇದು ಮಾತ್ರವೇ ಅಲ್ಲಾ, ಜನತೆ ವೈರಾಣುವಿನ ವಿರುದ್ಧ ಸಂಘಟಿತ ಹೋರಾಟದಲ್ಲಿರುವ ಸಂದರ್ಭವನ್ನು ಬಳಸಿಕೊಂಡು ಅದರ ಮರೆಯಲ್ಲಿ, ಕೇಂದ್ರ ಮತ್ತು ತಮ್ಮ ರಾಜ್ಯ ಸರಕಾರ ಸುಗ್ರೀವಾಜ್ಞೆಗಳ ಮೂಲಕ ರೈತ ಕಾರ್ಮಿಕರ ಸುಲಿಗೆಯನ್ನು ಆಳಗೊಳಿಸಲು ಕ್ರಮವಹಿಸಿದ್ದೀರಿ, ಏಪಿಎಂಸಿಗಳ ನಿಯಂತ್ರಣದಿಂದ ಮುಕ್ತಗೊಳಿಸಿ, ಕಾಪೆರ್Çೀರೇಟ್ ಕಂಪನಿಗಳ ಲೂಟಿಗೆ ಗ್ರಾಮೀಣ ಹಾಗೂ ಗ್ರಾಹಕ ಮಾರುಕಟ್ಟೆಯನ್ನು ತೆರೆದುಕೊಟ್ಟಿದ್ದೀರಿ, ಮಾತ್ರವಲ್ಲಾ, ಸದರಿ ಕಂಪನಿಗಳ ಲೂಟಿಗೆ ರಾಜ್ಯದ ಕಾರ್ಮಿಕರ ಬದುಕನ್ನು ಮತ್ತಷ್ಠು ವ್ಯಾಪಕವಾಗಿ ತೆರೆದುಕೊಡುವ ಸುಗ್ರೀವಾಜ್ಞೆಯ ತಯಾರಿಯಲ್ಲಿದ್ದೀರಿ! ವಿದ್ಯುತ್ ರಂಗವನ್ನು ಮಾರಾಟ ಮಾಡಲು ಕ್ರಮವಹಿಸಲಾಗಿದೆ.
ಗ್ರಾಮ ಪಂಚಾಯತ್ ಗಳಿಗೆ ಆಡಳಿತ ಸಮಿತಿಗಳನ್ನು ನೇಮಕ ಮಾಡುವ ಮೂಲಕ ರಾಜಕೀಯ ಲಾಭ ಪಡೆಯಲು ಕ್ರಮವಹಿಸಿದ್ದೀರಿ. ಈ ಎಲ್ಲಾ ಜನವಿರೋಧಿ ಕ್ರಮಗಳನ್ನು ಸಿಪಿಐ(ಎಂ) ಬಲವಾಗಿ ಖಂಡಿಸುತ್ತದೆ.
ಜನತೆಯ ತಲಾ ಆದಾಯ ಹೆಚ್ಚಳಗೊಳ್ಳುವಂತಹ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ರಾಜ್ಯವನ್ನು ಹೊರ ತರುವ ನೀತಿಗಳನ್ನು ಜಾರಿಗೆ ತರಲು ಕೆಳಕಂಡ ಪ್ರಮುಖ ಹಕ್ಕೊತ್ತಾಯಗಳನ್ನು ಪರಿಗಣಿಸುವಂತೆ ಒತ್ತಾಯಿಸುತ್ತದೆ.
ಹಕ್ಕೊತ್ತಾಯಗಳು:
1) ಕಾರ್ಪೋರೇಟ್ ಕಂಪನಿಗಳ ಲೂಟಿಗೆ ನೆರವಾಗುವ ಎಪಿಎಂಸಿ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ಮಾಡಲಾದ ತಿದ್ದುಪಡಿಯನ್ನು ಕೂಡಲೇ ವಾಪಾಸು ಪಡೆಯಬೇಕು.
2) ಬಂಡವಾಳದಾರರು ಹಾಗೂ ಕಾರ್ಪೋರೇಟ್ ಕಂಪನಿಗಳಿಗೆ ಕಾರ್ಮಿಕ ಕಾಯ್ದೆಗಳಿಂದ ವಿನಾಯಿತಿ ನೀಡುವ, ಮತ್ತು ಕಾರ್ಮಿಕರ ದುಡಿಮೆಯ ಸಮಯವನ್ನು ಹನ್ನೆರಡು ಗಂಟೆಗಳಿಗೆ ವಿಸ್ತರಿಸುವ ಕಾರ್ಮಿಕ ಕಾಯ್ದೆ ತಿದ್ದುಪಡಿಗೆ ಯಾವುದೇ ರೀತಿಯಲ್ಲಿ ಕ್ರಮ ವಹಿಸಬಾರದು.
3) ವಿದ್ಯುತ್ ರಂಗದ ಖಾಸಗೀಕರಣ ಬೇಡವೇ ಬೇಡ.
4) ಗ್ರಾಮ ಪಂಚಾಯತ್ ಗಳಿಗೆ ಆಡಳಿತ ಸಮಿತಿ ಸದಸ್ಯರನ್ನು ನೇಮಕ ಮಾಡುವುದನ್ನು ಕೂಡಲೇ ತಡೆಯಬೇಕು. ಈಗ ಹಾಲಿ ಇರುವ ಚುನಾಯಿತ ಸಮಿತಿಯನ್ನು ಮುಂದೆ ಚುನಾವಣೆ ನಡೆಯುವವರೆಗೆ ಉಸ್ತುವಾರಿಯಾಗಿ ಪರಿಗಣಿಸಿ ಇಲ್ಲವೇ ಆಡಳಿತಾಧಿಕಾರಿಗಳನ್ನು ನೇಮಿಸಿ, ಚುನಾವಣೆ ನಡೆಸಲು ಅಗತ್ಯ ಪ್ರಕ್ರಿಯೆ ಹಾಗೂ ಸಿದ್ಧತೆಗಳನ್ನು ಕೋವಿಡ್- 19 ಹಾಗೂ ಲಾಕ್ ಡೌನ್ ಪರಿಸ್ಥಿತಿಯ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ನಡೆಸಬೇಕು.
5) ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ, ದಿನನಿತ್ಯದ ದುಡಿಮೆಯನ್ನು ಆದರಿಸಿದ ಎಲ್ಲಾ ಬಡವರಿಗೆ, ರೈತರು, ಕೃಷಿಕೂಲಿಕಾರರು ಹಾಗೂ ಕಾರ್ಮಿಕರಿಗೆ, ನಿರಾಶ್ರಿತರಿಗೆ, ಲಾಕ್ ಡೌನ್ ಅವಧಿಯ ಮತ್ತು ಮುಂದಿನ ಮೂರು ತಿಂಗಳಿಗೆ ಅಗತ್ಯವಾದ ಸಮಗ್ರ ಆಹಾರಧಾನ್ಯಗಳನ್ನು ಹೊಂದಿದ ಪಡಿತರ ಕಿಟ್ ಒದಗಿಸಬೇಕು. ಹಾಗೇ ಈ ಎಲ್ಲರಿಗೂ ಪ್ರತಿ ತಿಂಗಳ ತಲಾ 7,500 ರೂಗಳ ನೆರವನ್ನು ನೀಡಬೇಕು.
6) ರೈತರ ಬೆಳೆನಷ್ಠ, ನಿರುದ್ಯೋಗ, ಆರ್ಥಿಕ ಸಂಕಷ್ಠದ ಕಾರಣದಿಂದ ರೈತರ, ಗೇಣಿದಾರರ, ಮಹಿಳೆಯರ ಸಾಲಗಳನ್ನು ಮೈಕ್ರೋ ಸಂಸ್ಥೆಗಳದ್ದು ಸೇರಿದಂತೆ ಮನ್ನಾ ಮಾಡಬೇಕು ಮತ್ತು ಬೆಳೆನಷ್ಟ ಪರಿಹಾರವನ್ನು ತಲಾ ಎಕರೆಗೆ ಕನಿಷ್ಠ 10,000 ರೂ.ಗಳನ್ನು ನೀಡಬೇಕು.
7) ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕಾರ್ಮಿಕರಿಗೆ ಲಾಕ್ ಡೌನ್ ಅವಧಿಯ ಬಾಕಿ ವೇತನವನ್ನು ಸರಕಾರವೇ ಭರಿಸಬೇಕು. ಅವರೆಲ್ಲರಿಗೂ ಉದ್ಯೋಗದ ಭದ್ರತೆಯನ್ನು ಒದಗಿಸಬೇಕು.
8) ಉದ್ಯೋಗವಿಲ್ಲದ ಯುವಕ-ಯುತಿಯರಿಗೆ ಮಾಸಿಕ 10,000 ರೂಗಳ ನಿರುದ್ಯೋಗ ಭತ್ಯೆ ನೀಡಬೇಕು. ನಗರಗಳ ಬಡವರು ಸೇರಿದಂತೆ ಉದ್ಯೋಗ ಖಾತ್ರಿಯಡಿ ರಾಜ್ಯದಾದ್ಯಂತ ವ್ಯಾಪಕವಾಗಿ ಉದ್ಯೋಗವನ್ನು ಒದಗಿಸಬೇಕು.
ವಂದನೆಗಳು,
ಯಮುನಾ ಗಾಂವ್ಕರ್ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)
ಉತ್ತರ ಕನ್ನಡ ಜಿಲ್ಲಾ ಸಮಿತಿ
ಅ.P.I.(ಒ) ಸಂಪರ್ಕ: ಸಿಪಿಐ(ಎಂ) ಜಿಲ್ಲಾ ಸಮಿತಿ ಕಛೇರಿ, ಕೆಸಿ ಸರ್ಕಲ್, ದಾಂಡೇಲಿ
ದಿನಾಂಕ: 20-05-2020
