speaker speaks on discrimination- ಅಕ್ರಮ ಗಣಿಗಾರಿಕೆ, ಉಳ್ಳವರ ಅತಿಕ್ರಮಣ ಸರಿಪಡಿಸುವ ಭರವಸೆ ನೀಡಿದ ಸ್ಪೀಕರ್

ಶಿರಸಿ ಕ್ಷೇತ್ರ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಅಧಿಕಾರಿಗಳ ಪಕ್ಷಪಾತವನ್ನು ಒಪ್ಪಿಕೊಂಡ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಎಲ್ಲವನ್ನೂ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ.

ಸಿದ್ಧಾಪುರದ ಅಂಬೇಡ್ಕರ್ ಭವನದಲ್ಲಿ ಕಾರ್ಮಿಕ ಇಲಾಖೆಯ ಕಿಟ್ ಗಳನ್ನು ಫಲಾನುಭವಿಗಳಿಗೆ ವಿತರಿಸಿದ ನಂತರ ಸಮಾಜಮುಖಿಯೊಂದಿಗೆ ಮಾತನಾಡಿದ ಅವರು ಅರಣ್ಯ ಇಲಾಖೆಯ ಅಧಿಕಾರಿಗಳು ಭಾನ್ಕುಳಿ ಮಠ, ಚೌಡಿಆಣೆ ಕ್ರಶರ್ ಗಳ ವಿಚಾರದಲ್ಲಿ ಜಾಣಕುರುಡು ಪ್ರದರ್ಶಿಸಿ ಬಡವರು, ಅಸಹಾಯಕರ ಗುಡಿಸಲು ಕೀಳುತಿದ್ದಾರೆ. ಈ ಪಕ್ಷಪಾತ, ಅಂಧಾದರ್ಬಾರ್ ಬಗ್ಗೆ ಏನು ಹೇಳುತ್ತೀರಿ? ಎನ್ನುವ ಸಮಾಜಮುಖಿ ಪ್ರತಿನಿಧಿಯ ಪ್ರಶ್ನೆಗೆ ಉತ್ತರಿಸಿದ ಅವರು ಅವಗಳನ್ನೆಲ್ಲಾ ಗಮನಿಸಿದ್ದೇನೆ, ಸೂಕ್ತ ಸಮಯದಲ್ಲಿ ಸರಿಯಾದ ತಿಳುವಳಿಕೆ ನೀಡಿ ಈ ತೊಂದರೆಗಳನ್ನು ಸರಿಪಡಿಸುತ್ತೇನೆ ಎಂದರು.
ಭಾನ್ಕುಳಿಮಠದ ಒಳಗೆ, ಹೊರಗೆ ಅರಣ್ಯ ಅತಿಕ್ರಮಣವಾದ ಬಗ್ಗೆ, ಚೌಡಿಆಣೆ ಬಳಿಯ ಅಕ್ರಮ ಗಣಿಗಾರಿಕೆ ಬಗ್ಗೆ ಸೊಲ್ಲೆತ್ತದ ಅರಣ್ಯ ಅಧಿಕಾರಿಗಳು, ಜಿಲ್ಲಾಡಳಿತ

ಬೇಡ್ಕಣಿ, ಬಾನ್ಕುಳಿ ಸೇರಿದ ಅನೇಕ ಪ್ರದೇಶಗಳಲ್ಲಿ ಬಡ ಅರಣ್ಯ ಅತಿಕ್ರಮಣದಾರರ ಮನೆ ಕೆಡವಿ, ಅರಣ್ಯ ಅತಿಕ್ರಮಣ ತೆರವುಗೊಳಿಸಿದ್ದ ಬಗ್ಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು.
ಈ ಬಗ್ಗೆ ಗಮನ ಸೆಳೆದ ಸಮಾಜಮುಖಿಗೆ ಪ್ರತಿಕ್ರೀಯಿಸಿದ ಶಾಸಕ ಕಾಗೇರಿ ವಿಶ್ವೇಶ್ವರ ಹೆಗಡೆ ಈ ತಾರತಮ್ಯ, ಪಕ್ಷಪಾತದ ವ್ಯವಸ್ಥೆ ಸರಿಪಡಿಸುವ ಭರವಸೆ ನೀಡಿದರು.

ಲೋಕಲ್ ಕ್ರೈಂ ನ್ಯೂಸ್-
ಸಾವು ಗೆದ್ದ ಗೊಂಟನಾಳದ ಗುಂಡೇಟಿನ ಗಾಯಾಳು!
ಸಿದ್ಧಾಪುರ ತಾಲೂಕಿನ ಕವಲಕೊಪ್ಪಾ ಗ್ರಾಮದ ಗೊಂಟನಾಳದ ಪ್ರದೀಪ ಗೌಡ ಎನ್ನುವ ವ್ಯಕ್ತಿ
ಮೊಬೈಲ್ ಬಳಕೆಗಾಗಿ ಗ್ರಾಮದ ಬೆಟ್ಟ ಏರಿದಾಗ ಬಂದೂಕಿನ ಚರೆಗಳು ನುಗ್ಗಿ ಗಾಯಗೊಂಡ ಘಟನೆ ಗುರುವಾರ ಮುಸ್ಸಂಜೆ ನಡೆದಿದೆ. ಇದೇ ಗ್ರಾಮದ ರಾಮಾ ಕನ್ನಾ ನಾಯ್ಕ ಲೋಡ್ ಮಾಡಿಟ್ಟ ನಾಡ ಬಂದೂಕು ದಿಢೀರನೆ ಸ್ಫೋಟಿಸಿ ಈ ಅವಗಢ ನಡೆದಿದೆ. ಗಾಯಾಳು ಪ್ರದೀಪ ಗೌಡ ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತಿದ್ದು ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ಆರೋಪಿ ರಾಮಾ ಕನ್ನಾ ನಾಯ್ಕ ಮೇಲೆ ಪ್ರಕರಣ ದಾಖಲಿಸಿದ ಸ್ಥಳಿಯ ಪೊಲೀಸರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಈ ಅಚಾತುರ್ಯದ ಅವಗಡದ ಬಗ್ಗೆ ವಿಶಾದ ವ್ಯಕ್ತಪಡಿಸಿರುವ ಸ್ಥಳಿಯರು ಇಬ್ಬರೂ ಅಮಾಯಕರು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಅರಣ್ಯ ಅಧಿಕಾರಿಗಳ ವಿರುದ್ಧ ದೂರು
ಸಿದ್ಧಾಪುರ ವಲಯದ ನಿಡಗೋಡು ಅರಣ್ಯ ಸಿಬ್ಬಂದಿಗಳು ಕಿರುಕುಳ, ಮಾನಸಿಕ ಹಿಂಸೆ ನೀಡುತಿದ್ದಾರೆ ಎಂದು ಆರೋಪಿಸಿ ನಿಡಗೋಡಿನ ಮಹಿಳೆಯೊಬ್ಬರು ಎರಡು ಜನ ಕಿರಿಯ ಅರಣ್ಯ ಅಧಿಕಾರಿಗಳ ವಿರುದ್ಧ ಸಿದ್ಧಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಖಾಸಗಿ ಪ್ರದೇಶ ಮತ್ತು ಅರಣ್ಯದ ಜಾಗ ಎನ್ನುವ ದ್ವಂದ್ವದ ಹಿನ್ನೆಲೆಯಲ್ಲಿ ಪ್ರಾರಂಭವಾದ ಗ್ರಾ.ಪಂ. ಸದಸ್ಯೆ ಮತ್ತು ಅರಣ್ಯ ಇಲಾಖೆಯ ನಡುವಿನ ಜಗಳ ಪೊಲೀಸ್ ದೂರಿನಲ್ಲಿ ಅಂತ್ಯವಾಗಿದ್ದು ಈ ಬಗ್ಗೆ ಮಾಹಿತಿ ನೀಡಲು ಸ್ಥಳಿಯ ಅರಣ್ಯ ಅಧಿಕಾರಿಗಳು ಲಭ್ಯವಾಗಿಲ್ಲ. ಈ ಬಗ್ಗೆ ಪೊಲೀಸ್‍ರಿಗೆ ದೂರು ನೀಡಿದ್ದರೂ ಎಫ್.ಆಯ್. ಆರ್. ಆದ ಬಗ್ಗೆ ಪೊಲೀಸ್ ಅಧಿಕಾರಿಗಳು ಸ್ಫಸ್ಟಪಡಿಸಿಲ್ಲ.


ಭಟ್ಕಳದ ಪೊಲೀಸ್ ಪೇದೆಯನ್ನೂ ಬಿಡದ ಕರೋನಾ- ಕಫ್ರ್ಯೂ ಹಿನ್ನೆಲೆ ಬಚಾವಾದ ಉತ್ತರಕನ್ನಡದ ಮುಸ್ಲಿಂರು!
ರಾಜ್ಯ,ದೇಶ,ಉಪಖಂಡ,ಪ್ರಪಂಚದಾದ್ಯಂತ ಕೋವಿಡ್ 19 ಆರ್ಭಟ ಮುಂದುವರಿದಿದೆ. ರಾಜ್ಯದಲ್ಲಿ ಶುಕ್ರವಾರ ಅತಿಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಈ ವರೆಗಿನ ಕರೋನಾ ಇತಿಹಾಸದಲ್ಲಿ ಕರ್ನಾಟಕದಲ್ಲಿ ಇಂದು 200 ಜನರಿಗಿಂತ ಹೆಚ್ಚಿನ ಜನರಲ್ಲಿ ಕರೋನಾ ದೃಢಪಟ್ಟಿದೆ. ಉತ್ತರಕನ್ನಡ ಜಿಲ್ಲೆಯ ಒಟ್ಟೂ 66 ಪ್ರಕರಣಗಳಲ್ಲಿ ಇಂದು ಗುಣಮುಖರಾಗಿ ಮನೆಯ ದಾರಿ ಹಿಡಿದ 20 ಜನರು ಸೇರಿ ಒಟ್ಟೂ 32 ಜನರ ಕರೋನಾ ಸೋಂಕು ವಾಸಿಯಾಗಿದೆ. ಈಗ ಉತ್ತರಕನ್ನಡ ಜಿಲ್ಲೆಯಲ್ಲಿ 66 ಕರೋನಾ ಪ್ರಕರಣಗಳು ಮಾತ್ರ ಸಕ್ರೀಯವಾಗು ಉಳಿದಂತಾಗಿದೆ. ಕರೋನಾದ ಕೇಂದ್ರ ಎನಿಸಿಕೊಂಡ ಭಟ್ಕಳದಲ್ಲಿ ಪೊಲೀಸ್ ಪೇದೆಯೊಬ್ಬರಿಗೆ ಕರೋನಾ ಬಾಧಿಸಿದ ವರ್ತಮಾನ ಸುದ್ದಿಮಾಡಿದೆ.
ಈ ರಗಳೆ, ರೋಗಭೀತಿ, ಲಾಕ್ ಡೌನ್- ಕಫ್ರ್ಯೂ
ಗಳ ನಡುವೆ ವಿಶ್ವದಾದ್ಯಂತ ಮುಸ್ಲೀಂ ಬಾಂಧವರು ಪವಿತ್ರ ರಂಜಾನ್ ಆಚರಿಸುತಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ ರಂಜಾನ್ ಆಚರಣೆ ಸೋಮುವಾರ ಎನ್ನುವುದು ಪ್ರಕಟವಾಗಿದೆ. ರವಿವಾರ ರಂಜ್ಜಾನ್ ಆಚರಣೆಯ ಸಾಧ್ಯತೆ ಹಿನ್ನೆಲೆಯಲ್ಲಿ ಮೀನು-ಮಾಂಸದ ಅಂಗಡಿಗಳು ಇಂದು ರಾತ್ರಿಯವರೆಗೂ ತೆರೆದಿದ್ದವು. ರಾತ್ರಿಯ ವೇಳೆ ರಮ್ಜಾನ್ ಆಚರಣೆ ಸೋಮುವಾರ ಎಂದು ಪ್ರಕಟವಾದ ನಂತರ ರವಿವಾರದ ಕಫ್ರ್ಯೂ ನಂತರ ಸೋಮವಾರ ಎಲ್ಲಾ ಅನುಕೂಲತೆಗಳೊಂದಿಗೆ ಹಬ್ಬ ಆಚರಿಸಲು ಅನುಕೂಲವಾಗಿದೆ.
ಕರೋನಾ ಜನಾಭಿಪ್ರಾಯ ಭಾಗ-02-
20 ಲಕ್ಷ ಕೋಟಿ ಪ್ಯಾಕೇಜ್ ಏನಂತಾರೆ ಜನ-
ಇಲ್ಲಿವೆ ಜನರ ಅಭಿಪ್ರಾಯ
ಕರೋನಾ ದಿಂದ ಜರ್ಜರಿತವಾಗಿರುವ ದೇಶ ಮತ್ತು ದೇಶದ ಆರ್ಥಿಕತೆ ಉತ್ತೇಜಿಸಲು 20 ಲಕ್ಷ ಕೋಟಿ ಪ್ಯಾಕೇಜ್ ನೀಡಿರುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ಬಗ್ಗೆ ನಾಲ್ಕು ಹಂತಗಳಲ್ಲಿ ಹಣಕಾಸು ಸಚಿವರು ವಿಭಾಗ ಮಾಡಿದ ಪ್ಯಾಕೇಜ್ ವಿವರಗಳನ್ನು ನೀಡಿದ್ದಾರೆ. ಮಾಧ್ಯಮಗಳ ಪ್ರಚಾರ, ಸಚಿವರು, ಶಾಸಕರ ವಿವರಣೆಗಳ ಮಧ್ಯೆ ಕೂಡಾ ಬಹುತೇಕ ಜನಸಾಮಾನ್ಯರಿಗೆ ಈ ಪ್ಯಾಕೇಜ್ ಸರಿಯಾಗಿ ಅರ್ಥವಾಗಿಲ್ಲ ಎನ್ನುವ ವಾಸ್ತವ ಅಭಿಪ್ರಾಯ ಸಂಗ್ರಹದ ಸಮಯದಲ್ಲಿ ನಮ್ಮ ಗಮನಕ್ಕೂ ಬಂತು. ಹೆಚ್ಚಿನವರು ಈ ಪ್ಯಾಕೇಜ್ ಗುಟ್ಟುಗಳ ಬಂಡಲ್ ಎಂದು ಲೇವಡಿಮಾಡಿದರೆ ಕೆಲವರು ಇದು ಸ್ಫಷ್ಟತೆ-ಪಾರದರ್ಶಕತೆ ಇಲ್ಲದ ಮೋದಿಯವರ ಸುಳ್ಳಿನ ಮುಂದುವರಿದ ಕಂತೆ ಎಂದರು.
ಕೆಲವರು ಪಕ್ಷದ ಕಾರಣಕ್ಕೆ ನಾವು ಈ ಪ್ಯಾಕೇಜ್ ಸಮರ್ಥಿಸಿಕೊಳ್ಳಬೇಕು ಬಿಟ್ಟರೆ ಈ ಕ್ಷಣದಲ್ಲಿ ಅನುಕೂಲ, ಲಾಭ ಹಾಗಿರಲಿ ನಮಗೂ ಅರ್ಥಮಾಡಿಕೊಳ್ಳದ ಒಗಟು ಈ ಪ್ಯಾಕೇಜ್ ಎಂದು ತಮ್ಮ ಅಸಮಾಧಾನ ಹೇಳಿಕೊಂಡರು. ಕೆಲವರು ಮಾತ್ರ ಇದು ದೀರ್ಘಕಾಲಿಕ ಲಾಭದ ದೂರದ ಆಲೋಚನೆಯ ಬೃಹತ್ ಪ್ಯಾಕೇಜ್ ಎಂದು ಸಮರ್ಥಿಸಿದರು. ಈ ಪ್ಯಾಕೇಜ್, ಕೇಂದ್ರಸರ್ಕಾರದ ಕೋವಿಡ್ ನಿರ್ವಹಣಾ ವಿಧಾನ ಎಲ್ಲವೂ ಟೀಕೆಗೆ ಒಳಗಾಗಿರುವ ಈ ಸಂದರ್ಭದಲ್ಲಿ ನಮಗೆ ಸಿಕ್ಕ ಪ್ರತಿಕ್ರೀಯೆಗಳಲ್ಲಿ ಕೆಲವನ್ನು ಸಂಕ್ಷಿಪ್ತವಾಗಿ ಇಲ್ಲಿ ಪ್ರಕಟಿಸಲಾಗಿದೆ.
20 ಲಕ್ಷ ಕೋಟಿ ಜನಸಾಮಾನ್ಯ ಊಹಿಸಲಾಗದ ಬೃಹತ್ ಪ್ಯಾಕೇಜ್ ಇದು, ಇದರಲ್ಲಿ 136 ಕೋಟಿ ಭಾರತದ ಜನಸಂಖ್ಯೆಗೆ ತಲಾ 1 ಕೋಟಿ ಕೊಟ್ಟದ್ದರೆ ಜನಸಾಮಾನ್ಯ ಕೂಡಾ ಕುಬೇರನಾಗುತಿದ್ದ.- ವೀರಭದ್ರಗೌಡ ವಡಗೇರಿ
ಉಜ್ವಲ ಯೋಜನೆಯ ಗ್ಯಾಸ್ ಫಲಾನುಭವಿಗಳಿಗೆ ಮಾತ್ರ ಉಚಿತ ಅನಿಲ ಸೌಲಭ್ಯ, ಜನ್ ಧನ್ ಖಾತೆಗೆ ಮಾತ್ರ ಹಣ ಇವೆಲ್ಲಾ ಅಸಮರ್ಪಕ ಉಜ್ವಲ ಗ್ಯಾಸ್ ಫಲಾನುಭವಿಗಳು, ಜನಧನ್ ಖಾತೆದಾರರು ಮಾತ್ರ ಬಡವರೆ. ಜಾಬ್ ಕಾರ್ಡ್‍ಗಾಗಿ ಜನಧನ್ ಗಿಂತ ಮೊದಲು ಬ್ಯಾಂಕ್ ಪಾಸ್ ಬುಕ್, ಖಾತೆ ಹೊಂದಿದವರಿಗೆ ಹಣ ನೀಡದಿದ್ದರೆ ಕೇಂದ್ರದ ಯೋಜನೆಗಳು ಸರ್ಕಾರದ ಯೋಜನೆಗಳಲ್ಲ, ಪಕ್ಷದ ಜೋಜನೆಗಳು ಎಂದಾಗುತ್ತವೆ. ಕರೋನಾ ಸಂಕಷ್ಟದ ಸಮಯದಲ್ಲಿ ಕೇಂದ್ರದ ಫಲಾನುಭವಿಗಳಿಗೊಂದು, ರಾಜ್ಯದ ಯೋಜನೆಗಳ ಫಲಾನುಭವಿ ಬಡವರಿಗೊಂದು ತಾರತಮ್ಯ ಮಾಡುವ ಸರ್ಕಾರದ ನೀತಿ ಬಡವರ ವಿರೋಧಿ ಧೋರಣೆ ಎನಿಸಿಕೊಳ್ಳುತ್ತದೆ. -ವೀರಭದ್ರ ನಾಯ್ಕ ಮಳಲವಳ್ಳಿ, ರಾಜ್ಯ ರೈತ ಸಂಘದ ತಾಲೂಕಾಧ್ಯಕ್ಷ.
20 ಲಕ್ ಕೋಟಿ ಕಣ್ಣೊರೆಸುವ ತಂತ್ರ ಕೇಂದ್ರ ಸರ್ಕಾಋ ಘೋಷಣೆಯ ಸರ್ಕಾರವಾಗಿದೆಯೇ ಹೊರತು, ಅನುಷ್ಠಾನದ ಸರ್ಕಾರವಾಗಿಲ್ಲ ಬಡ ಚಾಲಕರು, ಸಣ್ಣ-ಪುಟ್ಟ ವೃತ್ತಿ ನಿರತರಿಗೆ ಅಧೀಕೃತ ಸರ್ಕಾರಿ ನೋಂದಣಿಯಿಲ್ಲದಿದ್ದರೂ ಮಾಸಿಕ ಪರಿಹಾರ ನೀಡಬೇಕು. 20 ಕೋಟಿ ಪ್ಯಾಕೇಜ್ ಕರೋನಾ ಕಾಲದ ಸುಳ್ಳು. ಈ ಪ್ಯಾಕೇಜ್ ಗಿಂತ ಹಿಂದಿನ ಘೋಷಣೆಗಳ ಅನುಷ್ಠಾನ, ಸಾಲ ಮನ್ನಾದಂಥ ವಿದಾಯಕ ಯೋಜನೆಗಳನ್ನು ಕೊಡಬೇಕಿತ್ತು. ಭೀಮಣ್ಣ ನಾಯ್ಕ, ಡಿ.ಸಿ.ಸಿ. ಅಧ್ಯಕ್ಷ
ಇದು ದೀರ್ಘ ಕಾಲಿಕ ಪರಿಣಾಮದ ಪ್ಯಾಕೇಜ್, ಇಂಥ ಬೃಹತ್ ಪ್ಯಾಕೇಜ್ ನಿಂದ ಈ ಕ್ಷಣದ ಲಾಭ ನಿರೀಕ್ಷಿಸಬಾರದು. -ನಾಗರಾಜ್ ನಾಯ್ಕ, ಜಿ.ಪಂ. ಸದಸ್ಯ.
20 ಲಕ್ ಕೋಟಿ ಪ್ಯಾಕೇಜ್ ನಿಂದ ಧೀರ್ಘ ಕಾಲಿಕ ಲಾಭ ಆಗಬಹುದು, ದಾಖಲೆ, ಗ್ಯಾರಂಟಿ ಇಲ್ಲದೆ ಹೆಚ್ಚುವರಿ ಕಡಿಮೆ ಬಡ್ಡಿದರದ ಸಾಲ, ತೆರಿಗೆ ವಿನಾಯಿತಿ, ಜಿ.ಎಸ್.ಟಿ., ತೆರಿಗೆ ಭರಣಕ್ಕೆ ಸಮಯಾವಕಾಶ ಇವುಗಳಿಂದ ಚಿಕ್ಕ ಉದ್ದಿಮೆಗಳಿಗೆ ಅನುಕೂಲವಾಗಿದೆ. -ವಿಜಯ ಪ್ರಭು, ಉದ್ಯಮಿ
20 ಲಕ್ಷ ಕೋಟಿ ಪ್ಯಾಕೇಜ್ ಸರ್ಕಾರದ ವ್ಯವಹಾರ ಚತುರತೆಗೆ ಸಾಕ್ಷಿ. ಇದು ಅಂಕಿ-ಅಂಶಗಳ ಮ್ಯಾಜಿಕ್ ಕಣ್ಣೊರೆಸುವ ತಂತ್ರ. ಇದರಿಂದ ಲಾಭ ಆಗುವ ನಿರೀಕ್ಷೆ ಇಲ್ಲ. ಜನರ ಅನಿವಾರ್ಯತೆಯ ಸಮಯದಲ್ಲಿ ಸಾಲ ಕೊಡುವ ಸ್ಕೀಮ್ ಮಾದರಿಯ ಪ್ಯಾಕೇಜ್ ನಿಂದ ಜನರು ಬಡತನ ರೇಖೆ ದಾಟಿ ಶ್ರೀಮಂತರಾಗುವ ಕೇಂದ್ರದ ಘೋಷಣೆ ಯಶಸ್ವಿಯಾದರೆ ಜನತೆ ಮೋದಿಯವರನ್ನು ದೇವರಂತೆ ಕಾಣುತ್ತಾರೆ. ಸ್ಫಷ್ಟತೆ ಇಲ್ಲದ, ಪಾರದರ್ಶಕವಲ್ಲದ ಈ ಪ್ಯಾಕೇಜ್ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುವ ಬಿ.ಜೆ.ಪಿ. ಯೋಜನೆ. -ಕೆ.ಜಿ. ನಾಗರಾಜ್, ಅಧ್ಯಕ್ಷರು ಎ.ಪಿ.ಎಂ.ಸಿ.

ಕಾರಂಟೈನ್ ನಲ್ಲಿರುವ ಅನೇಕರಲ್ಲಿ ಕೋವಿಡ್ ಶಂಕೆ, ಉತ್ತರಕನ್ನಡ-ಶಿವಮೊಗ್ಗ ಗಳಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳು
ಉತ್ತರಕನ್ನಡ ಜಿಲ್ಲೆಯ 6 ಸಾವಿರ ಜನರು ಸೇರಿ ಕರ್ನಾಟಕದೆಲ್ಲೆಡೆ ಕಾರಂಟೈನ್ ಆಗಿರುವ ಲಕ್ಷಾಂತರ ಜನರಲ್ಲಿ ಸಾವಿರಾರು ಜನರು ಕರೋನಾ ಕ್ಕೆ ತುತ್ತಾಗಿರುವ ಬಗ್ಗೆ ಈಗ ಶಂಕೆ ವ್ಯಕ್ತವಾಗಿದೆ.
ಮೊದಮೊದಲು ಉತ್ತರ ಕನ್ನಡ ಜಿಲ್ಲೆಗೆ ಬಂದ ಹೊರದೇಶಗಳ ಉದ್ಯೋಗಿಗಳು ಕೋವಿಡ್ ಪ್ರಾರಂಭಕ್ಕೆ ಕಾರಣವಾದರು. ನಂತರ ತಬ್ಲಿಘಿಗಳ ಓಡಾಟ,ಒಡನಾಟದಿಂದ ಕರೋನಾ ದೇಶ ಸುತ್ತತೊಡಗಿತ್ತು.
ಈಗ ಮಹಾರಾಷ್ಟ್ರ,ಗುಜರಾತ್, ಚಿನ್ನೈಗಳಿಂದ ಬಂದ ಜನರು ಉತ್ತರಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಕರೋನಾ ಹಬ್ಬಿಸುತಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ದೃಢಪಟ್ಟ ಎರಡು ಕರೋನಾ ಪಾಸಿಟಿವ್ ಪ್ರಕರಣಗಳು ಮಹಾರಾಷ್ಟ್ರದಿಂದ ಬಂದ ವ್ಯಕ್ತಿಗಳ ಪ್ರಕರಣಗಳು. ಮಹಾರಾಷ್ಟ್ರದಿಂದ
ಶಿವಮೊಗ್ಗ ಜಿಲ್ಲೆ ಸೊರಬಾ ಕ್ಕೆ ಹೊರಟಿದ್ದ ಈ ಕುಟುಂಬವನ್ನು ಪೊಲೀಸರು ಯಲ್ಲಾಪುರದಲ್ಲಿ ತಡೆದು ಕಾರಂಟೈನ್ ಮಾಡಿದ್ದರು. ಈ ಎರಡೂ ಪ್ರಕರಣಗಳಂತೆ ಉತ್ತರಕನ್ನಡದ 6 ಸಾವಿರ ಕಾರಂಟೈನ್ ಆದ ಜನರು ಹಾಗೂ ರಾಜ್ಯದ ಲಕ್ಷಾಂತರ ಜನರಲ್ಲಿ ಕರೋನಾ ಕಾಣಿಸಿಕೊಳ್ಳುವ ಅಪಾಯದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ.
ಬಸ್ ಪ್ರಯಾಣಿಕರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡುವುದು, ಹೊರ ರಾಜ್ಯಗಳಿಂದ ಬಂದ ಜನರ ತಪಾಸಣೆ, ಕಾರಂಟೈನ್ ಕ್ರಮಗಳ ನಡುವೆ ನುಸುಳುಕೋರರು ಸುದ್ದಿಮಾಡದೆ ಗ್ರಾಮ, ನಗರ ಸೇರಿಕೊಂಡಿರುವ ಅನೇಕ ಉದಾಹರಣೆಗಳೂ ಇವೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *