

ಕಳೆದ 2 ತಿಂಗಳುಗಳಿಂದ ಬಚಾವಾಗಿದ್ದ ಸಿದ್ಧಾಪುರ ತಾಲೂಕಿನಲ್ಲಿ ಇಂದು ಮೊದಲ ಕೋವಿಡ್ 19 ಪ್ರಕರಣ ದೃಢಪಡುವ ಮೂಲಕ ಕರೋನಾ ಪೀಡಿತ ತಾಲೂಕುಗಳ ಪಟ್ಟಿಗೆ ಸಿದ್ಧಾಪುರ ಸೇರ್ಪಡೆಯಾದಂತಾಗಿದೆ.
ಇದೇ ತಿಂಗಳ 19 ರಿಂದ ಕಾವಂಚೂರು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕಾರಂಟೈನ್ ಆಗಿದ್ದ ಒಂದು ಕುಟುಂಬದ ಒಬ್ಬ ವ್ಯಕ್ತಿಯಲ್ಲಿ ಕರೋನಾ ದೃಢವಾಗುವ ಮೂಲಕ ಈ ಪ್ರಕರಣ ತಾಲೂಕಿನ ಮೊಟ್ಟ ಮೊದಲ ಕೋವಿಡ್ ಪ್ರಕರಣವಾದಂತಾಗಿದೆ.
ಇಲ್ಲಿಯ ಇಟಗಿ ಮೂಲದ ಮುಂಬೈ ಠಾಣಾದಿಂದ ಬಂದಿದ್ದ ಈ ಕುಟುಂಬವನ್ನು ಕಾರಂಟೈನ್ ಮಾಡಲಾಗಿತ್ತು. ಈ ಕೋವಿಡ್ ರೋಗಿಯನ್ನಿ ಇಂದು ಸಿದ್ಧಾಪುರದಿಂದ ಕಾರವಾರಕ್ಕೆ ಸ್ಥಳಾಂತರಿಸಲಾಗುತ್ತಿದೆ.
(ಬೇರೆ ಸುದ್ದಿ-)
ಪ್ರಾಮಾಣಿಕತೆ, ನಿಷ್ಠೆಗೆ ಬದ್ಧರಾದ ಮಧುಕೇಶ್ವರ ಹೆಗಡೆ – ಆರ್.ಎಂ. ಹೆಗಡೆ
ಪ್ರಾಮಾಣಿಕತೆ ನಿಷ್ಠೆಗೆ ಮಾನವೀಯ ಮೌಲ್ಯಗಳಿಗೆ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡಿದವರು ಮಧುಕೇಶ್ವರ ಹೆಗಡೆ ಹೂಡ್ಲಮನೆ ಅವರ ಆದರ್ಶಗಳನ್ನು ಅನುಸರಿಸುವುದರಿಂದ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಅವರು ಜನಪರ ವ್ಯಕ್ತಿತ್ವವನ್ನು ರೂಢಿಸಿಕೊಂಡವರಾಗಿದ್ದರು. ಸ್ಥಳೀಯ ಸಮಸ್ಯೆಗಳಿಗೆ ಹೆಚ್ಚು ಗಮನ ಹರಿಸಿ ಕೆಲಸ ಮಾಡಿದ ವ್ಯಕ್ತಿಯಾಗಿದ್ದು, ಸಹಕಾರ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ದುಡಿದವರಾಗಿದ್ದರು. ನಾಣಿಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಎ.ಪಿ.ಎಂ.ಸಿ. ನಿರ್ದೇಶಕರಾಗಿ, ಸಿದ್ದಾಪುರ ಟಿ.ಎಂ.ಎಸ್. ನಿರ್ದೇಶಕರಾಗಿ ಕೆಲಸ ಮಾಡಿ ಉತ್ತಮ ಸಹಕಾರಿಗಳೆಂದು ಗುರುತಿಸಲ್ಪಟ್ಟವರಾಗಿದ್ದರು ಎಂದು ಸಿದ್ದಾಪುರ ಟಿ.ಎಂ.ಎಸ್. ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ವಕೀಲರು ಹೇಳಿದರು.
ಅವರು ಶೇಲೂರು ಹೂಡ್ಲಮನೆಯಲ್ಲಿ ನಡೆದ ಮಧುಕೇಶ್ವರ ಹೆಗಡೆ ಹೂಡ್ಲಮನೆ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮಧುಕೇಶ್ವರ ಹೆಗಡೆ ಅವರ ಸಹೋದರ ನಿವೃತ್ತ ಜಿಲ್ಲಾ ನ್ಯಾಯಾಧೀಶ ಜಿ.ವಿ. ಹೆಗಡೆರವರು ಮಾತನಾಡಿ, ತಮ್ಮ ಸಹೋದರ ಮಧುಕೇಶ್ವರ ಹೆಗಡೆಯವರು ಬದುಕಿನಲ್ಲಿ ಆದರ್ಶವನ್ನು ರೂಢಿಸಿಕೊಂಡವರು, ಅಧ್ಯಾತ್ಮದಲ್ಲಿ ಸಹ ಆಸಕ್ತಿಯನ್ನು ಹೊಂದಿದವರು. ಕೃಷಿಯನ್ನು ಗೌರವದಿಂದ ನಡೆಸಿಕೊಂಡು ಬಂದ ವ್ಯಕ್ತಿ. ಅವರ ಬದುಕಿನ ಸರಳತೆ ಸಂಸ್ಕøತಿ ಪರಂಪರೆಯನ್ನು ಗೌರವಿಸಿಕೊಂಡು ಬರುವ ರೀತಿ ತಮ್ಮೆಲ್ಲರಿಗೂ ಹೆಮ್ಮೆ ತರುವಂತಹದ್ದು ಎಂದು ಹೇಳಿದರು.
ಟಿ.ಎಂ.ಎಸ್. ನಿರ್ದೇಶಕರುಗಳಾದ ಎಂ.ಆರ್. ಹೆಗಡೆ ನೈಗಾರ, ಜಿ.ಎಂ. ಭಟ್ಟ ಕಾಜಿನ್ಮನೆ, ಎಂ.ಆರ್. ಭಟ್ಟ ತಟ್ಟಿಕೈ, ಶಿರಸಿಯ ಟಿ.ಆರ್.ಸಿ. ನಿರ್ದೇಶಕ ಎಸ್.ಎನ್. ಹೆಗಡೆ ಹಾವಳಿಮನೆ, ಸಾಮಾಜಿಕ ಕಾರ್ಯಕರ್ತರಾದ ವೆಂಕಟೇಶ ಹೊಸಬಾಳೆ, ಎಸ್.ಎನ್. ಭಟ್ಟ ಭಾಗ್ವತ್ ಗಿರಗಡ್ಡೆ, ಜಿ.ಆರ್. ಹೆಗಡೆ ಹಳದೋಟ, ಉದ್ಯಮಿ ರಾಘವೇಂದ್ರ ಪಿ. ಶಾಸ್ತ್ರಿ ಬಿಳಗಿ, ಲಕ್ಷ್ಮೀನಾರಾಯಣ ಹೆಗಡೆ ಹೂಡ್ಲಮನೆ, ಅನಸೂಯಾ ಮಧುಕೇಶ್ವರ ಹೆಗಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅನುಷಾ ಹೆಗಡೆ ಸಾಲ್ಕಣಿ ಪ್ರಾರ್ಥಿಸಿದರು, ಜಿ.ಜಿ. ಹೆಗಡೆ ಬಾಳಗೋಡ ಸ್ವಾಗತಿಸಿ ನಿರೂಪಿಸಿದರು. ಲಕ್ಷ್ಮೀನಾರಾಯಣ ಮಧುಕೇಶ್ವರ ಹೆಗಡೆ ಹೂಡ್ಲಮನೆ ವಂದಿಸಿದರು.
