ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಒಂದೇ ದಿನ ಬರೋಬ್ಬರಿ 21 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಎರಡೂ ಜಿಲ್ಲೆಗಳಲ್ಲಿ ಮುಂಬೈನ ಕೊರೋನಾ ಸೋಂಕು ಆತಂಕ ಸೃಷ್ಟಿಸಿದೆ.
ಬೆಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಒಂದೇ ದಿನ ಬರೋಬ್ಬರಿ 21 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಎರಡೂ ಜಿಲ್ಲೆಗಳಲ್ಲಿ ಮುಂಬೈನ ಕೊರೋನಾ ಸೋಂಕು ಆತಂಕ ಸೃಷ್ಟಿಸಿದೆ.
ದಕ್ಷಿಣ ಜಿಲ್ಲೆಯಲ್ಲಿ 11 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 11 ಮಂದಿ ಪೈಕಿ 10 ಮಂದಿ ಮುಂಬೈನಿಂದ ಆಗಮಿಸಿ ಕ್ವಾರಂಟೈನಲ್ಲಿದ್ದರು ಎಂದು ತಿಳಿದುಬಂದಿದೆ. ಮತ್ತೊಬ್ಬರು ಗುಜರಾತ್’ನಿಂದ ಮಂಗಳೂರಿಗೆ ಆಗಮಿಸಿದ ವೇಳೆ ಕೊರೋನಾ ಸೋಂಕು ಕಾಣಿಸಿದ್ದು, ಇವರೆಲ್ಲೆರನ್ನೂ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸಲಾಗಿದೆ.
ಸೋಂಕು ಪತ್ತೆಯಾದ ಎಲ್ಲರೂ ಕ್ವಾರಂಟೈನ್ನಲ್ಲಿದ್ದರು. ಇವರಲ್ಲಿ ತಲಾ ನಾಲ್ಕು ಮಂದಿ ಪುರುಷರು ಹಾಗೂ ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ. ಈ ಪೈಕಿ ಒಂದೇ ಕುಟುಂಬದ ನಾಲ್ವರಿಗೂ ಸೋಂಕು ದೃಢಪಟ್ಟಿದೆ. ಇದೂವರೆಗೆ ಜಿಲ್ಲೆಯಲ್ಲಿ ಒಟ್ಟು 81 ಕೊರೋನಾ ಸೋಂಕಿತರು ಪತ್ತೆಯಾದಂತಾಗಿದೆ. ಇವರಲ್ಲಿ 26 ಮಂದಿ ಗುಣಮುಖರಾಗಿದ್ದು, 48 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7 ಮಂದಿ ಸಾವಿಗೀಡಾಗಿದ್ದಾರೆ.
ಇನ್ನು ಉಡುಪಿ ಜಿಲ್ಲೆಯಲ್ಲಿ 9 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದ್ದು, ಎಲ್ಲವೂ ಮಹಾರಾಷ್ಟ್ರ ಮೂಲದಿಂದಲೇ ಬಂದವಾಗಿವೆ ಎಂದು ತಿಳಿದುಬಂದಿದೆ.
ಜಿಲ್ಲೆಯಲ್ಲಿ ಇದೂವರೆಗೆ ಪತ್ತೆಯಾಗ ಕೊರೋನಾ ಪ್ರಕರಣಗಳ ಸಂಖ್ಯೆ 120ಕ್ಕೆ ಏರಿಕೆಯಾಗಿದ್ದು, ಅವರಲ್ಲಿ 6 ಮಂದಿ ಪುರುಷರು, ಇಬ್ಬರು ಮಹಿಳೆಯರು ಮತ್ತು 9 ವರ್ಷದ ಬಾಲಕ ಸೇರಿದ್ದಾನೆ.
ಈ ಸೋಂಕಿತರು ಎಲ್ಲರೂ ಕ್ವಾರಂಟೈನ್ ನಲ್ಲಿದ್ದು, ಅವರನ್ನು ಕೂಡಲೇ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯ ಒಟ್ಟು 120 ಕೊರೋನಾ ಸೋಂಕಿತರಲ್ಲಿ ಮಹಾರಾಷ್ಟ್ರದಿಂದ ಬಂದವರ ಸಂಖ್ಯೆ 98 ಆಗಿದೆ. ಅವರನ್ನು ಬಿಟ್ಟರೇ ಅತಿ ಹೆಚ್ಚು ದುಬೈಯಿಂದ 13, ಕೇರಳದಿಂದ 2 ಮತ್ತು ತೆಲಂಗಾಣದಿಂದ ಒಬ್ಬರಿಗೆ ಕೊರೋನಾ ಪತ್ತೆಯಾಗಿದೆ. ಜಿಲ್ಲೆಯೊಳಗೆ 4 ಮಂದಿ ಪೊಲೀಸ್ ಸಿಬ್ಬಂದಿಗಳಿಗೆ, 1 ಜಿಲ್ಲಾಪಂಚಾಯತ್ ಸಿಬ್ಬಂದಿಗೆ ಮತ್ತು 1 ಗರ್ಭಿಣಿಗೂ ಸೋಂಕು ಪತ್ತೆಯಾಗಿದೆ.