ಇಂದಿನ ಬಂಡಾಯದ ಹಿಂದಿನ ಸಂತೋಷರ ಕಾರ್ಯಾಚರಣೆಯ ಸುತ್ತಮುತ್ತ


(ಅಂದಹಾಗೆ- ಯಡಿಯೂರಪ್ಪ ಈಗಿನ ಸರ್ಕಾರಕ್ಕೆ ಅಪರಿಮಿತ ಹಣ ಸುರಿದಿದ್ದು, ಆ ಹಣ ಮಾಡಿಕೊಳ್ಳಲು ಮಗ ವಿಜೇಂದ್ರರನ್ನು ಡಿಫೆಕ್ಟೋ ಸಿ.ಎಂ. ಮಾಡಿದ್ದು, ಅನಿವಾರ್ಯತೆಗಳಿಗಾಗಿ ಕತ್ತಿ,ನಿರಾಣಿ, ಯತ್ನಾಳ್ ರಂಥವರ ಮಹತ್ವಾಕಾಂಕ್ಷೆಗೆ ನೀರೆರೆಯದಿರುವುದು ಸೇರಿದಂತೆ ಯಡಿಯೂರಪ್ಪ ಕುರ್ಚಿ ಅಲುಗಾಡಲು ಏನು ಬೇಕೋ ಅವೆಲ್ಲವನ್ನೂ ಅವರೇ ಮನಸ್ಸಾರೆ… ಎನ್ನುವುದಕ್ಕಿಂತ ಕೈಯ್ಯಾರೆ ಮಾಡಿಕೊಂಡಿದ್ದಾರೆ.

ಆದರೆ ಯಡಿಯೂರಪ್ಪನವರಂಥವರಿಂದಲೇ ಚಿಗುರಿದ ಕರ್ನಾಟಕದ ವೈದಿಕ ಕಾಕ್ಟಸ್ ಇಂದು ಯಡಿಯೂರಪ್ಪನವರನ್ನೇ ಬಲಿ ಪಡೆದು ವಿಜ್ರಂಬಿಸಹೊರಟಿರುವುದು ವೈದಿಕ ಕಪಟತನಕ್ಕೆ ಮತ್ತೊಮ್ಮೆ ದೃಷ್ಟಾಂತವಾದಂತಾಗಿದೆ. ಯಡಿಯೂರಪ್ಪ ನಿಮ್ಮ ವಿಷಯದಲ್ಲಿ ಕೂಡಾ ಜನನಾಯಕರ ಅಂತ್ಯ ಭೀಕರ ಎನಿಸಿರುವುದು ಲಾಗಾಯ್ತಿನ ದುರಂತದ ಮುಂದುವರಿಕೆ.)

ಯಡಿಯೂರಪ್ಪ ವಿರುದ್ಧ ಸಂಘದ ಕಾರ್ಯಾಚರಣೆ
ಪೌರೋಹಿತ್ಯಕ್ಕೆ ಸಿದ್ಧವಾಗಿದೆಯಾ ಹೈಕಮಾಂಡ್?

ಬಿ.ಜೆ.ಪಿ.ಯಲ್ಲಿ ಬಿರುಕು ನಿರೀಕ್ಷಿತವಾದರೂ ಕರೋನಾದ ಸಂಕಟದ ಕಾಲದಲ್ಲಿ ಯಡಿಯೂರಪ್ಪ ಹಾಸಿಕೊಂಡಿದ್ದ ನೆಲಹಾಸನ್ನೇ ಎಳೆದು 77 ರ ಹಿರಿಯ ಯಡಿಯೂರಪ್ಪನವರನ್ನು ಮೇಲೇಳದಂತೆ ಕೆಳಕ್ಕೆ ತಳ್ಳಿಬಿಡಬಹುದೆನ್ನುವ ಕಲ್ಪನೆಯನ್ನು ಸಹಾ ಮಾಡದ ಕಾಲದಲ್ಲಿ ಯಡಿಯೂರಪ್ಪ ವಿರುದ್ಧ ಬಿ.ಜೆ.ಪಿ. ಯಲ್ಲಿ ಸ್ವಜಾತಿಯವರನ್ನೇ ಎತ್ತಿಕಟ್ಟಿ ತಮಾಸೆ ನೋಡಲಾಗುತ್ತಿದೆಯಾ?
ಅಥವಾ ಯಡಿಯೂರಪ್ಪ ಕಟ್ಟಿಕೊಂಡಿದ್ದ ಕೋಟೆಯ ಕಾವಲುಗಾರರನ್ನೇ ಖರೀದಿಸಿ ವೈದಿಕ ಆಟಕ್ಕೆ ಅಖಾಡದ ನೆಲ ಸಿದ್ಧಮಾಡಲಾಗುತ್ತಿದೆಯಾ? ಎನ್ನುವ ಅನುಮಾನಗಳಿಗೆ ಎಡೆಯಾಗುವಂತೆ ಇಂದಿನ ವಿದ್ಯಮಾನಗಳು ನಡೆದಿವೆ.

ಚಿಕ್ಕೋಡಿಯ ಕತ್ತಿ ಸಹೋದರರು ಬೆಂಗಳೂರಿನಲ್ಲಿ ಶಾಸಕರಿಗೆ ಔತಣಕೂಟ ಏರ್ಪಡಿಸಿ ಹಕ್ಕು ಪ್ರದಿಪಾದನೆ ಮಾಡಿ ಲಾಭ ಪಡೆಯಲು ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ. ಈ ಕೂಟದ ಮುಖ್ಯ ವ್ಯಕ್ತಿ ವಿಜಯಪುರದ ಬಸವರಾಜ್ ಪಾಟೀಲ್ ಯತ್ನಾಳ್ ಮತ್ತು ಉಮೇಶ್ ಕತ್ತಿ ತಮಗೆ ಮಂತ್ರಿಗಳನ್ನಾಗಿಸುವುದು ಸೇರಿದಂತೆ ತಮ್ಮ ಕೆಲವು ಬೇಡಿಕೆಗಳಿಗೆ ಯಡಿಯೂರಪ್ಪ ಸ್ಪಂದಿಸದಿದ್ದರೆ ಬಂಡಾಯ ಏಳುವ ಸೂಚನೆ ಕೊಟ್ಟಿದ್ದಾರೆ.


ಈ ಯೋಜನೆ, ಸೂಚನೆ ಹಿಂದೆ ಬಿ.ಜೆ.ಪಿ. ಹೈಕಮಾಂಡ್ ಕೈವಾಡದ ಶಂಕೆಯಂತೂ ಇದ್ದೇ ಇದೆ. ಆದರೆ ಒಳಗೊಳಗೆ ಯಡಿಯೂರಪ್ಪ ವಿರುದ್ಧ ಕುದಿಯುತ್ತಿರುವ ಕತ್ತಿ ಸಹೋದರರು, ಬಸವನಗೌಡ ಪಾಟೀಲ್ ರಂಥ ಖಾಲಿಡಬ್ಬಗಳ ಶಬ್ಧ ಮಾಡಿಸಿದರೆ ಯಡಿಯೂರಪ್ಪ ಸಹಜವಾಗಿ ಹೆದರುತ್ತಾರೆ. ಆಗ ಈ ಕತ್ತಿ, ಯತ್ನಾಳ್ ರಿಗೆ ಸರ್ಕಾರದಲ್ಲಿ ಮಹತ್ವದ ಹುದ್ದೆ ಕೊಟ್ಟು ಅಂತರ್ ಚಿಶಾಚಿಯಂತೆ ಅಲೆಯುತ್ತಿರುವ ಸಂತೋಷರಂಥ ವೈದಿಕರನ್ನು ಕೂಡ್ರಿಸಿದರೆ ಆಗ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆದಂತಾಗುತ್ತದೆ ಎನ್ನುವುದು ಬಿ.ಜೆ.ಪಿ.ಯೊಳಗಿನ ಕಟ್ಟರ್ ಸಂಘಿಗಳ ಆಲೋಚನೆ!
ಈ ಆಲೋಚನೆ, ಯೋಚನೆಗಳ ಹಿನ್ನೆಲೆಯಲ್ಲಿ ತಯಾರಾಗಿರುವ ಯೋಜನೆಯಂತೆ ಇಂದು ಖಾಲಿಡಬ್ಬಿಗಳ ಸೌಂಡು ಪ್ರಾರಂಭವಾಗಿದೆ.

ಈ ಸೌಂಡುಗಳ ಹಿನ್ನೆಲೆಯಲ್ಲಿ ನಿಂತಿರುವ ಅವಕಾಶವಾದಿ ವೈದಿಕ ಸಂಘಿಗಳು ತಮ್ಮ ಆಜ್ಞಾನುಧಾರಿಗಳಾದ ಕತ್ತಿ-ಯತ್ನಾಳರನ್ನು ಮುಂದೆ ಬಿಟ್ಟು ಯಡಿಯೂರಪ್ಪನವರ ವಿರುದ್ಧ ನಿರ್ಣಾಯಕವಾದ ಆಂತರಿಕ ಸಂಘರ್ಷಕ್ಕೆ ವೀಳ್ಯ ನೀಡಿ ಆಗಿದೆ. ಈ ಬಗ್ಗೆ ಕಳೆದ ಕೆಲವು ದಿವಸಗಳಿಂದ ಒಳಗೊಳಗೆ ಶಾಂತವಾಗಿ ಪೂರ್ವಭಾವಿ ಕೆಲಸ ನಡೆಯುತಿತ್ತು. ಇಂಥದೊಂದು ವಿಚಿತ್ರ ಕಾರ್ಯಾಚರಣೆ ಬಗ್ಗೆ ಯಡಿಯೂರಪ್ಪನವರ ಬಣಕ್ಕೆ ಸೂಚನೆ ಇತ್ತಾದರೂ ದೇಶಕ್ಕೆ ದೇಶವೇ ಕರೋನಾ ರಗಳೆಯಲ್ಲಿ ಬಿದ್ದಿರುವಾಗ ದಿಢೀರ್ ಕಾರ್ಯಾಚರಣೆ ನಡೆಯುವುದು ಅಸಂಭವ ಎಂದೇ ಯಡಿಯೂರಪ್ಪ ಟೀಂ ನಿರ್ಲಕ್ಷ ಮಾಡಿತ್ತು. ಆದರೆ ಎಲ್ಲರ ನಿರೀಕ್ಷೆ ಮೀರಿ ಇಂದು ಬಸವನಗೌಡ ಪಾಟೀಲ್ ಯತ್ನಾಳ್ ಯಡಿಯೂರಪ್ಪನವರ ವಿರುದ್ಧ ಮಾತನಾಡಿದ್ದಾರೆ.ಯಡಿಯೂರಪ್ಪ ನಮ್ಮನ್ನು ಮಂತ್ರಿ ಮಾಡುವುದೇನು? ಅವರೇ ಉಳಿಯುವ ಸಾಧ್ಯತೆ ಇಲ್ಲ ಎಂದಿದ್ದಾರೆ.

ಹೀಗೆ ಬಸನಗೌಡ ಹುಂಬನಾಗಿ ಅವಿದ್ಯಾವಂತ ಸಂಘಿಗಳಂತೆ ಚೀರಿರುವುದು ಇದೇ ಮೊದಲೇನಲ್ಲ, ಆದರೆ ಈ ಗುಟುರಿನ ಹಿಂದೆ ಯತ್ನಾಳ್ ಗೆ ಕತ್ತಿ ಸಹೋದರರ ಭರ್ಜರಿ ಊಟ ಸಿಕ್ಕಿದೆ. ಉಮೇಶ್ ಕತ್ತಿ ತಮ್ಮ ಬೇಡಿಕೆಗಳ ಪಟ್ಟಿ ಹಿಡಿದು ಯಡಿಯೂರಪ್ಪನವರ ಹಿಂದೆ ಸುತ್ತುತ್ತಿರುವುದಕ್ಕೂ ಕನಿಷ್ಟ ಆರು ತಿಂಗಳ ಇತಿಹಾಸವಿದೆ. ಕತ್ತಿ ಕುಟುಂಬ ಶಾಸಕರು, ಸಂಸದರು, ಮಂತ್ರಿಗಳು ಆಗಿರಬೇಕು, ಅದಾಗದಿದ್ದರೆ ಸಮ್ಮನೆ ಕೂಡ್ರುವ ಕುಟುಂಬವಲ್ಲ ಈ ಎಲ್ಲಾ ಬೇಡಿಕೆ, ಕಾಯುವಿಕೆಗಳ ನಂತರ ಈ ಕೂಟದ ಸಂಘಟಿತ ವಿರೋಧ ಯಡಿಯೂರಪ್ಪನವರ ವಿರುದ್ಧ ತಿರುಗಿದೆ.

ಹೀಗೆ ತಮ್ಮವರೇ ಆದ ಯಡಿಯೂರಪ್ಪನವರ ವಿರುದ್ಧ ಕತ್ತಿ ಸಹೋದರರು, ಯತ್ನಾಳ್ ಮುಖಮುರಿದು ಸಮರ ಸಾರಿರುವ ಹಿಂದೆ ಬಿ.ಜೆ.ಪಿ. ಯ ಯಡಿಯೂರಪ್ಪ ವಿರೋಧಿ ಬಣ ಸಂತೋಷರ ಸಂಘವಿದೆ ಎನ್ನಲಾಗುತ್ತಿದೆ.
ತಾವೇನೂ ಮಾಡದಿದ್ದರೂ ಹೈಕಮಾಂಡ್ ಬಳಿ ತಾವೇ ಮಾಡಿದ್ದೇವೆ, ಮಾಡಿಸಿದ್ದೇವೆ ಎಂದು ವರದಿ ಒಪ್ಪಿಸುತ್ತಾ ಕುರ್ಚಿಯ ಮೇಲೆ ಕೂಡ್ರಲು ಹವಣಿಸುತ್ತಿರುವ ಸಂತೋಷ್ ಸಂಘ ಇದೇ ತಿಂಗಳು ಮೋದಿ-ಷಾ ಬಳಿ ತೆರಳಿ ಕರ್ನಾಟಕದಲ್ಲಿ ತಮ್ಮಿಂದಲೇ ಕರೋನಾ ಹೋರಾಟ ಸುವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ನಂಬಿಸಿ ಬಂದಿದೆ. ಹೀಗೆ ಯಡಿಯೂರಪ್ಪನವರ ಕೆಲಸವನ್ನೂ ಸೇರಿಸಿ ತಮ್ಮಿಂದಲೇ ಕರ್ನಾಟಕದಲ್ಲಿ ಬೆಳಗಾಗುತ್ತಿರುವುದು ಎಂದು ನಿರೂಪಿಸುತ್ತಿರುವ ವೈದಿಕ ಸಂತೋಷರ ಸಂಘ ಕರ್ನಾಟಕದಲ್ಲಿ ಬಿ.ಜೆ.ಪಿ.ಗೆ ದೊರೆತಿರುವ ಅವಕಾಶದಲ್ಲಿ ತಮ್ಮ ಪ್ರಯತ್ನವಿದೆ ಎಂದು ಬಿಂಬಿಸಿದೆ.

ಹೀಗೆ ಅನ್ಯರ ಕೆಲಸ ಸಾಧನೆಯನ್ನು ತಮ್ಮದೆಂದು ಬಿಂಬಿಸಿಕೊಂಡು ಮುಖ್ಯಮಂತ್ರಿ ಯಾಗಿದ್ದ ರಾಮಕೃಷ್ಣ ಹೆಗಡೆಯವರ ಕುಲಬಾಂಧವರಾದ ಕೆಲವು ಕರ್ಮಠರು ಸಂತೋಷರನ್ನೂ ಅಂಥದ್ದೇ ರೀತಿಯಲ್ಲಿ ಮುಖ್ಯಮಂತ್ರಿಯಾಗಿಸುವ ಪ್ರಯತ್ನದಲ್ಲಿದ್ದಾರೆ. ವ್ಯತ್ಯಾಸವೆಂದರೆ ಹಿಂದೆ ರಾಮಕೃಷ್ಣ ಹೆಗಡೆ ಇದೇ ಕೆಲಸವನ್ನು ಜಾತ್ಯಾತೀತತೆ, ಜನತಾ ಪರಿವಾರದ ಹೆಸರಲ್ಲಿ ಮಾಡಿದ್ದರು. ಈಗ ಕಾಲ ಬದಲಾಗಿದೆ. ಸಂತೋಷ ಸಂಘದ ಪ್ರಮುಖರಾಗಿ ರಾಮಕೃಷ್ಣ ಹೆಗಡೆ ಪ್ರಯೋಗಿಸಿದ್ದ ಎಲ್ಲಾ ತಂತ್ರಗಳನ್ನೂ ಸಂಘದ ವ್ಯವಸ್ಥೆಯಲ್ಲಿ ಮಾಡಿದ್ದಾರೆ. ಅಂದು ಬಂಗಾರಪ್ಪ ಶ್ರಮಿಸಿ,ಅಧಿಕಾರದಿಂದ ವಂಚಿರಾದಂತೆ ಈಗ ಯಡಿಯೂರಪ್ಪ ಎಲ್ಲಾ ಪ್ರಯತ್ನ,ಶ್ರಮಗಳಿಂದ ಕಟ್ಟಿಟ್ಟ ಗೂಡಿಗೆ ಸಂತೋಷ ಬರುವಂತಾಗಿದೆ.

ಕಾಲಬದಲಾಗಿದೆ, ವ್ಯಕ್ತಿಗಳು ಬದಲಾಗಿದ್ದಾರೆ, ಪೋಸ್ಟರ್ ಗಳು ಬದಲಾಗಿವೆ ಅಷ್ಟೆ. ಅಂದು ಬಂಗಾರಪ್ಪನವರನ್ನು ತೆರೆಮರೆಗೆ ಸರಿಸಲು ಶ್ರಮಿಸಿದ ಕಪಟ ವೈದಿಕತೆ ಇಂದು ಯಡಿಯೂರಪ್ಪನವರನ್ನು ಹೊರಗಟ್ಟಲು ಹೊಸ ನಾಟಕ ಆಡಿದೆ. ಹಿಂದೆ ಇಂಥದ್ದೇ ನಾಟಕಕ್ಕೆ ದಾಳವಾದವರೇ ಇಂದೂದಾಳವಾಗಿದ್ದಾರೆ. ಆದರೆ ಇತಿಹಾಸ ಮಾತ್ರ ಅಂದಿನ ಹೆಗಡೆ ಕಾರ್ಯಾಚರಣೆಯನ್ನು ತರಸ್ಕರಿಸಿದಂತೆಯೇ ಈಗ ಸಂತೋಷರ ಸಂಘಿ ಕಾರ್ಯಾಚರಣೆಯನ್ನು ಸಹಿಸಲ್ಲ ಆದರೆ ಬಲಿಪಶುಗಳು ಮಾತ್ರ ಹಿಂದಿನಂತೆಯೇ ಈಗಿನ ಕತ್ತಿ, ಯತ್ನಾಳ್ ಗಳು. ಇಲ್ಲಿಗೆ ಕರ್ನಾಟಕದ ಲಿಂಗಾಯತರ ವಿರೋಧಿ ವೈದಿಕ ಕಾರ್ಯಾಚರಣೆಗೆ ಸಂಘದ ಸಂತೋಷ ಕಾರಣವಾಗಿದೆ.


(old articale)

ಕೃಷಿ-ಖುಷಿ-

ವೈಜ್ಞಾನಿಕ ಮತ್ತು ಸಾಂಪ್ರದಾಯಿಕ ಕೃಷಿಯಲ್ಲಿ ಖುಷಿ ಕಾಣುತ್ತಿರುವ ಸಿದ್ಧಾಪುರದ ಯುವಕರು
ಕೃಷಿಯಲ್ಲಿ ಸಾಧನೆ ಮಾಡಬೇಕೆಂದು ಬಯಸುವ ವಿರಳ ಯುವಕರಲ್ಲಿ ತಾಲೂಕಿನ ಹೆಮಟೆಮನೆಯ ಎಚ್.ಎಲ್. ವೇಣು ಮತ್ತು ಬೇಡ್ಕಣಿಯ ಜಯಪ್ರಕಾಶ ನಾಯ್ಕ ಪ್ರಮುಖ ಯುವಕರಾಗಿದ್ದಾರೆ.
ವೇಣು ಬಿದ್ರಕಾನ ಹೆಮಟೆಮನೆಯ ಯುವಕ. ಜನಾನುರಾಗಿಯಾಗಿದ್ದ ಇವರ ತಂದೆ ಎಲ್.ಕೆ.ಹೆಗಡೆ ಅಕಾಲಿಕವಾಗಿ ಮರಣ ಹೊಂದಿದ ನಂತರ ಬಿ.ಕಾಂ. ಪದವಿ ನಂತರ ಕೃಷಿಯಲ್ಲಿ ತೊಡಗಿಕೊಂಡರು. ಆಧುನಿಕ ಕೃಷಿ, ಹೊಸಪ್ರಯೋಗ ಎನ್ನದೆ ತಮ್ಮ ತೋಟದಲ್ಲಿ ಹಿಂದಿನಿಂದ ಇದ್ದ ಕಾಫಿ,ಅಡಿಕೆ, ಕಾಳು ಮೆಣಸು ಬೆಳೆಯುತ್ತಾ,ಪಶುಸಂಗೋಪನೆಯಲ್ಲಿಯೂ ತೊಡಗಿಕೊಂಡರು.
ಪದವಿನಂತರ ಮಹಾನಗರ ಸೇರದೆ ಕುಟುಂಬದ ಜವಾಬ್ಧಾರಿ ಹೊತ್ತ ವೇಣು ಸ್ಥಳಿಯ ಸೇವಾ ಸಹಕಾರಿ ಸಂಘದ ಯುವ ಸದಸ್ಯರಾಗಿ ಸಾಂಪ್ರದಾಯಿಕ ಕೃಷಿ ಮಾಡುತ್ತಾ ಕೃಷಿಯಲ್ಲೇ ಖುಷಿ ಕಂಡಿದ್ದಾರೆ. ಇವರ ತಂದೆ ಹಿಂದೆ ಕೃಷಿಯೊಂದಿಗೆ ಸ್ಥಳಿಯ ಸಾಮಾಜಿಕ ಜವಾಬ್ಧಾರಿ ನಿರ್ವಹಿಸುತ್ತಲೇ ಧಾರವಾಡದ ಕೆ.ಎಂ.ಎಫ್. ನಿರ್ಧೇಶಕರಾಗಿದ್ದರು. ತಂದೆಯಂತೆಯೇ ಮಗ ವೇಣು ಕೂಡಾ ಕೃಷಿ, ಕೌಟುಂಬಿಕ ಜವಾಬ್ಧಾರಿ, ಸೇವಾ ಸಹಕಾರಿ ಸಂಘ ದ ಮೂಲಕ ಯುವಕರು ಹಳ್ಳಿಯಲ್ಲಿದ್ದೂ ಪೇಟೆಯಲ್ಲಿರುವವರಂತೆಯೇ ಖುಷಿಯಾಗಿ ಸಂತೃಪ್ತ ಜೀವನ ಮಾಡಬಹುದೆನ್ನುವುದಕ್ಕೆ ದೃಷ್ಟಾಂತವಾಗಿದ್ದಾರೆ.

ಜಯಪ್ರಕಾಶ ನಾಯ್ಕ- ಬೇಡ್ಕಣಿಯ ಜಯಪ್ರಕಾಶ ನಾಯ್ಕ ತಾಲೂಕಿನ ಯುವ ರೇಷ್ಮೆ ಬೆಳೆಗಾರರಾಗಿ ತಾಲೂಕಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇರುವ ಒಂದೆರಡು ಎಕರೆ ಭೂಮಿಯಲ್ಲಿ ರೇಷ್ಮೆ,ಅಡಿಕೆ,ಭತ್ತ ಬೆಳೆಯುತ್ತಿರುವ ಜಯಪ್ರಕಾಶ ಸಾಂಪ್ರದಾಯಿಕ ರೇಷ್ಮೆ ಜೊತೆಗೆ ಹೊಸ ತಳಿ ಪರಿಚಯಿಸುತ್ತಾ ತಾಲೂಕಿನ ಯುವ ಕೃಷಿಕ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ರೈತ ಕುಟುಂಬದ ಜಯಪ್ರಕಾಶ ಚಿಕ್ಕ ವಯಸ್ಸಿನಲ್ಲಿಯೇ ಕೃಷಿ-ಕೌಟುಂಬಿಕ ಜವಾಬ್ಧಾರಿ ವಹಿಸಿಕೊಂಡವರು. ರೇಷ್ಮೆಯಲ್ಲಿ ಖಾಸಗಿ ಕಂಪನಿಗಳ ಸಹಭಾಗಿತ್ವದ ಯೋಜನೆಯ ಸಿದ್ಧಾಪುರ ತಾಲೂಕಿನ ಪ್ರವರ್ತಕರು. ಕೃಷಿ- ಕುಟುಂಬಗಳ ವೈಯಕ್ತಿಕ ಜವಾಬ್ಧಾರಿಯ ಜೊತೆಗೆ ಬೇಡ್ಕಣಿ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮೀತಿ ಅಧ್ಯಕ್ಷರಾಗಿ ಕೆಲಸಮಾಡುತ್ತಾ ಶಾಲೆಯನ್ನು ಉತ್ತಮ ಶಾಲೆಯನ್ನಾಗಿಸಲು ಅಳಿಲು ಸೇವೆ ಸಲ್ಲಿಸುತಿದ್ದಾರೆ. ಕೃಷಿ,ವ್ಯಾಪಾರ, ಗ್ರಾಮದ ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮೀತಿಯ ಅಧ್ಯಕ್ಷರಾಗಿ ಆಸಕ್ತಿಯಿಂದ ಕೆಲಸಮಾಡುತ್ತಿರುವ ಇವರ ಅಭಿರುಚಿ ಆಸಕ್ತಿಗಳಿಗೆ ಅವರ ಕೃಷಿ ಸಾಧನೆ ಮತ್ತು ಶಾಲೆಯ ವಿಭಿನ್ನ ಪ್ರಯೋಗಗಳೇ ಸಾಕ್ಷಿ.
ಕೃಷಿಯನ್ನು ಆಸಕ್ತಿಯಿಂದ ಮಾಡಿದರೆ ಅದು ಬದುಕುಕೊಡಬಹುದೆಂಬುದಕ್ಕೆ ಬಿದ್ರಕಾನ ವಿ.ಎಸ್.ಎಸ್. ನಿರ್ದೇಶಕ ವೇಣು ಮತ್ತು ಬೇಡ್ಕಣಿ ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮೀತಿ ಅಧ್ಯಕ್ಷ ಜಯಪ್ರಕಾಶ ಮಾದರಿ. ಇಂಥ ಯುವಕರು ಇತರರಿಗೂ ಮಾದರಿ ಎಂದರೆ ಅತಿಶಯೋಕ್ತಿಯಲ್ಲ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *