ನಿರ್ದೇಶಕರು ಧಾರಾವಾಹಿಯನ್ನು ಅಂತ್ಯಗೊಳಿಸುವ ಮುನ್ನವೇ ಧಾರಾವಾಹಿ ಪ್ರಸಾರ ಅಂತ್ಯವಾಗುತ್ತಿದೆ. ಮಗಳು ಜಾನಕಿ ಧಾರಾವಾಹಿ ಪ್ರಸಾರವಾಗುತ್ತಿದ್ದ ಕಲರ್ಸ್ ಸೂಪರ್ ವಾಹಿನಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿದೆ.
ಕೋಟ್ಯಂತರ ವೀಕ್ಷಕರ ಮನ ಸೆಳೆದಿದ್ದ, ಗುಣಮಟ್ಟದ, ಸದಭಿರುಚಿಯ, ಕೌಟುಂಬಿಕ ಧಾರಾವಾಹಿ ಎನಿಸಿಕೊಂಡಿದ್ದ ಮಗಳು ಜಾನಕಿ ಧಾರಾವಾಹಿ ಇನ್ನು ಮುಂದೆ ಪ್ರಸಾರವಾಗುವುದಿಲ್ಲ.
ನಿರ್ದೇಶಕರು ಧಾರಾವಾಹಿಯನ್ನು ಅಂತ್ಯಗೊಳಿಸುವ ಮುನ್ನವೇ ಧಾರಾವಾಹಿ ಪ್ರಸಾರ ಅಂತ್ಯವಾಗುತ್ತಿದೆ. ಮಗಳು ಜಾನಕಿ ಧಾರಾವಾಹಿ ಪ್ರಸಾರವಾಗುತ್ತಿದ್ದ ಕಲರ್ಸ್ ಸೂಪರ್ ವಾಹಿನಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿದೆ. ಹಾಗಾಗಿ ಮಗಳು ಜಾನಕಿ ಧಾರಾವಾಹಿ ಸಹ ಸ್ಥಗಿತಗೊಳ್ಳುತ್ತಿದೆ.
‘ಸದ್ಯಕ್ಕೆ ಮಗಳು ಜಾನಕಿ ಧಾರಾವಾಹಿ ಪ್ರಸಾರವಾಗುವುದಿಲ್ಲ (ಹೊಸ ಎಪಿಸೋಡ್) ಮುಂದೆ ಏನಾಗುತ್ತದೆಯೋ ದೇವರೇ ನಿರ್ಧರಿಸಲಿದ್ದಾನೆ’ ಎಂದರು.
ಕಲರ್ಸ್ ಸೂಪರ್ ವಾಹಿನಿಯೇ ಬಂದ್ ಆಗುತ್ತಿದೆ. ಇದು ಆ ಚಾನೆಲ್‌ನ ಮ್ಯಾನೇಜ್‌ಮೆಂಟ್ ನಿರ್ಣಯ, ನಮ್ಮ ಧಾರಾವಾಹಿಗೆ ಬೇರೆ ಚಾನೆಲ್ ಕೊಡಿ ಎಂದು ನಾವು ಕೇಳಲಾಗದು. ಒಂದು ವೇಳೆ ಅವರೇನಾದರೂ ಕಲರ್ಸ್‌ನ ಬೇರೆ ಚಾನೆಲ್‌ನಲ್ಲಿ ಸ್ಲಾಟ್ ಕೊಟ್ಟರೆ ಖಂಡಿತ ಧಾರಾವಾಹಿ ಚಿತ್ರೀಕರಿಸಿ ಕೊಡುತ್ತೇವೆ ಎಂದು ನಿರ್ದೇಶಕ ಸೀತಾರಾಮ್ ಹೇಳಿದ್ದಾರೆ.