
ಕಳೆದ ವಾರ ಸಿದ್ಧಾಪುರದ ಮೊದಲಪ್ರಕರಣವಾಗಿ ಉತ್ತರಕನ್ನಡ ಜಿಲ್ಲೆಯ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಿಸಿದ ಪ್ರಕರಣದ ನಂತರ ಇಂದು ಒಂದೇ ದಿವಸ ಸಿದ್ಧಾಪುರದಲ್ಲಿ ಎರಡು ಜನರಲ್ಲಿ ಕರೋನಾಸೋಂಕು ದೃಢಪಟ್ಟಿವೆ.
ಸಿದ್ಧಾಪುರದ ಜಿಡ್ಡಿ ಗ್ರಾಮದ 5 ಮನೆಗಳ ಪ್ರದೇಶವನ್ನು ಕಂಟೇನ್ಮೆಂಟ್ ಮಾಡಿದ ಕರೋನಾ ಸೋಂಕಿತ 12 ದಿವಸಗಳ ಹಿಂದೆ ಮಸ್ಕತ್ ನಿಂದ ಬೆಂಗಳೂರಿಗೆ ಬಂದಿಳಿದ ವ್ಯಕ್ತಿ,
ಬೆಂಗಳೂರಿನಲ್ಲಿ10 ದಿವಸ ಕಾರಂಟೈನ್ ಆಗಿದ್ದ ವ್ಯಕ್ತಿ ಮೇ 29 ರಂದು ಬೆಂಗಳೂರಿನಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು-ಸಾಗರ ಬಸ್ ನಲ್ಲಿ ಸಾಗರಕ್ಕೆ ಬಂದು ಲಗೇಜ್ ರಿಕ್ಷಾದಲ್ಲಿ ಹುಟ್ಟೂರು ಜೋಗದ ಬಳಿಯ ಜಿಡ್ಡಿ ಸೇರಿಕೊಂಡಿದ್ದರು.
ಜಿಡ್ಡಿಯಲ್ಲಿ ಪ್ರತ್ಯೇಕವಾಗಿದ್ದ ಅವರ ಮನೆಯ ಪ್ರತ್ಯೇಕ ಕೋಣೆ, ಶೌಚ, ಸ್ನಾನಗೃಹಗಳನ್ನು ಬಳಸಿದ್ದರು. ಈ ಕೋವಿಡ್ ಸೋಕಿತನ ಸ್ವ್ಯಾಬ್ ಮಾದರಿಯನ್ನು ಬೆಂಗಳೂರಿನಲ್ಲಿ ಸಂಗ್ರಹಿಸಿದ್ದರಿಂದ ಈ ಪ್ರಕರಣ ಉತ್ತರಕನ್ನಡ ಜಿಲ್ಲೆಯ ಕೊರೋನಾ ಸೋಕಿತರ ಪಟ್ಟಿಯಲ್ಲಿಲ್ಲ. ಈ ಸೋಂಕಿತ ಬೆಂಗಳೂರು,ಅಲ್ಲಿಂದ ಸಾಗರ, ಸಾಗರದಿಂದ ಜಿಡ್ಡಿ ಇಲ್ಲೆಲ್ಲೂ ಇತರರ ನೇರ ಸಂಪರ್ಕಕ್ಕೇ ಬಂದಿರಲಿಲ್ಲ ಎನ್ನುವುದು ವಿಶೇಶ.
ಸಿದ್ಧಾಪುರದ ಕಾವಂಚೂರು ಕಾರಂಟೈನ್ ಕೇಂದ್ರದಲ್ಲಿ ಕಾರಂಟೈನ್ ಆಗಿದ್ದ 20 ವರ್ಷದ ಯುವಕನಲ್ಲಿ ಕೋವಿಡ್ ದೃಢಪಟ್ಟಿದ್ದು ಇವರು ರಾಜ್ಯದ 3210 ನೇ ಕರೋನಾ ಸೋಕಿತರಾಗಿದ್ದಾರೆ. ಇವರು ಇವರ ಅಕ್ಕ, ತಂದೆ ಹಾಗೂ ಪಕ್ಕದಮನೆಯ ವ್ಯಕ್ತಿಯೊಬ್ಬರೊಂದಿಗೆ ಮಹಾರಾಷ್ಟ್ರದ ಠಾ ಣಾದಿಂದ ಖಾಸಗಿವಾಹನದಲ್ಲಿ ಬಂದಿದ್ದರು.
24 ರಂದು ಠಾಣಾದಿಂದ ಹೊರಟಿದ್ದ ಈ ತಂಡ25 ಕ್ಕೆ ಸಿದ್ಧಾಪುರ ತಲುಪಿ ಕಾವಂಚೂರ್ ನಲ್ಲಿ ಕಾರಂಟೈನ್ ಆಗಿದ್ದರು. ಇದೇ ಕಾವಂಚೂರು ಕಾರಂಟೈನ್ ಕೇಂದ್ರಕ್ಕೆ ಮಹಾರಾಷ್ಟ್ರದಿಂದ ಬಂದಿದ್ದ ವ್ಯಕ್ತಿಗಳಲ್ಲಿ ಒಬ್ಬರಲ್ಲಿ ಹಿಂದಿನ ವಾರ ಕರೋನಾ ಸೋಂಕು ದೃಢಪಟ್ಟಿತ್ತು. ಹೀಗೆ ಸಿದ್ಧಾಪುರದಲ್ಲಿ ಮೂರು ಕಡೆ ಕಾರಂಟೈನ್ ಆಗಿರುವ ನೂರಾರು ಜನರಲ್ಲಿ ಅನೇಕರ ಸ್ವ್ಯಾಬ್ ಮಾದರಿಯ ವರದಿ ಬರಬೇಕಿದೆ.
ಇಂದು ಉತ್ತರಕನ್ನಡ ಜಿಲ್ಲೆಯಲ್ಲಿ ಸಿದ್ಧಾಪುರದ ಒಂದು ಪ್ರಕರಣ, ಕುಮಟಾದ ನಾಲ್ಕು ಪ್ರಕರಣಗಳು ಸೇರಿ ಒಟ್ಟೂ 5 ವ್ಯಕ್ತಿಗಳಲ್ಲಿ ಹಾಗೂ ಉತ್ತರಕನ್ನಡ ಪಟ್ಟಿಗೆ ಸೇರದ ಸಿದ್ಧಾಪುರ ಜಿಡ್ಡಿಯ ಪ್ರಕರಣ ಸೇರಿ ಒಟ್ಟೂ ಆರು ಜನರಲ್ಲಿ ಕೋವಿಡ್ 19 ದೃಢ ಪಟ್ಟಂತಾಗಿದೆ.
